ತುಮಕೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿ ಮುಗುಳೂರು ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳ ವೋಲ್ವೇಜ್ ಸ್ಥಿತಿ ಉತ್ತಮಪಡಿಸಲು ಮತ್ತು ಭವಿಷ್ಯದಲ್ಲಿ ವಿದ್ಯುತ್ ಹೊರೆ ಸರಿದೂಗಿಸುವ ಸಲುವಾಗಿ ಮುಗುಳೂರು ಗ್ರಾಮದಲ್ಲಿ ಉದ್ದೇಶಿತ 2×20ಎಂ.ವಿ.ಎ, 110/11ಕೆವಿ ವಿದ್ಯುತ್ ಉಪಸ್ಥಾವರ ಮತ್ತು ಹಾಲಿ ಇರುವ 110ಕೆವಿ ಕೆ.ಬಿ.ಕ್ರಾಸ್–ಮಾಯಸಂದ್ರ ಮಾರ್ಗದಿಂದ ಉದ್ದೇಶಿತ ಉಪಸ್ಥಾವರದವರೆಗೆ 4.270ಕಿಮೀ ಉದ್ದದ 110ಕೆವಿ ಲಿಲೋ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.
ಈ ಕಾಮಗಾರಿಯು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿ ಕೆ.ವಲಿಗೇರಹಳ್ಳಿ ಗ್ರಾಮದ ಸರ್ವೆ 6, ಬೊಮ್ಮನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 116, 110, 88, 98, 97, 96, 95, 22, 77, 76, 75, 74, 30, 22, 29, 31, 169, ಮುಗುಳೂರು ಗ್ರಾಮದ ಸರ್ವೆ ಸಂಖ್ಯೆ 215, 220, 214, 212, 211, 193, 192, 191, 201, 199, 190ರಲ್ಲಿ ಹಾದು ಹೋಗುತ್ತದೆ.
ಈ ಯೋಜನೆಯ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗಾಗಿ ಸಲ್ಲಿಸಬೇಕಾಗಿ ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


