ತಿಪಟೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಮ್ಮಿಯಾಗಿದ್ದು, ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿರುವುದರಿಂದ ಪೋಷಕರು ಹಾಗೂ ಶಿಕ್ಷಕರು ಎಚ್ಚರ ವಹಿಸಬೇಕಾಗಿದೆ. ಸರ್ಕಾರಿ ಶಾಲೆಗಳ ಅಳಿವು — ಉಳಿವು ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲಿದೆ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ಕೋಟೇನಾಯಕನಹಳ್ಳಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ, ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ, ನಿಧನರಾದ ತುಮಕೂರಿನ ಹಿರಿಯ ಪತ್ರಕರ್ತ ಎಂ.ಈಶ್ವರ್ ರವರಿಗೆ ಶ್ರದ್ಧಾಂಜಲಿ ಮತ್ತು ಮೃತರ ಸ್ಮರಣಾರ್ಥ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆಯ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಬಿ.ಟಿ.ಕುಮಾರ್ ನೇತೃತ್ವದಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಈಗಾಗಲೇ ನೂರಾರು ಆರೋಗ್ಯ ಶಿಬಿರ, ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೋಟ್ ಬುಕ್ ವಿತರಣೆ, ಕ್ರೀಡೆ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ ಸಾಮಾಜಿಕಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಮೂಲಕ ತಾಲೂಕಿನಲ್ಲಿ ಯಶಸ್ವಿ ಪಯಣ ಮುಂದುವರೆಸಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಚೆನ್ನಕೇಶವ ಮಾತನಾಡಿ, ದೇಶ ಕಟ್ಟುವಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ. ಅವರು ಪಡೆದ ವಿದ್ಯಾಭ್ಯಾಸದಿಂದಲೇ ದೇಶಕ್ಕೆ ಕೀರ್ತಿ ತರುವಲ್ಲಿ ಶ್ರಮಿಸುತ್ತಿದ್ದಾರೆ. ಪ್ರತಿನಿತ್ಯ ಪತ್ರಕರ್ತರು ಒತ್ತಡದ ಮಧ್ಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಯ ಸಿಕ್ಕಾಗ ಆರೋಗ್ಯದ ಕಡೆ ಗಮನಹರಿಸಿ ಎಂದರು.
ನಿವೃತ್ತ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಮಾತನಾಡಿ, ಇಂತಹ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದಾನಿಗಳು ನೀಡುವ ಕಲಿಕಾ ಸಾಮಗ್ರಿಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬೇರೊಬ್ಬರಿಗೆ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮ ಆಯೋಜಕ ಮತ್ತು ಜಯಕರ್ನಾಟಕ ಜನಪರ ವೇದಿಕೆ ತಾ. ಅಧ್ಯಕ್ಷ ಬಿ.ಟಿ.ಕುಮಾರ್, ಜಿಲ್ಲಾ ಉಪಾಧ್ಯಕ್ಷ ಬಿ.ಬಿ.ಬಸವರಾಜು, ನಿವೃತ್ತ ಶಿಕ್ಷಕ ಎಂ.ಆರ್. ಸೋಮಶೇಖರ್, ವಿ.ಎಚ್.ಪಿ ಜಿಲ್ಲಾಧ್ಯಕ್ಷ ಬಾಲಕಾಯಿ ನಟರಾಜು, ಜೆಡಿಎಸ್ ಮುಖಂಡ ನಟೇಶ್, ಸಂಘಟನೆಯ ತಾ. ಉಪಾಧ್ಯಕ್ಷ ರೇಣುಕಮೂರ್ತಿ (ಎಸ್.ಎಲ್.ವಿ), ಹಾಲgeneric ಚಂದ್ರಶೇಖರ್, ಶ್ರೀನಿಧಿ, ನಗರಸಭಾ ಮಾಜಿ ಸದಸ್ಯ ಲೋಕನಾಥ ಸಿಂಗ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಖಜಾಂಚಿ ಕೃಷ್ಣ, ಗ್ರಾಪಂ ಮಾಜಿ ಸದಸ್ಯ ಜಗನ್ನಾಥ್, ಹಿರಿಯ ಮುಖಂಡ ಗೋವಿಂದರಾಜು, ಅಕ್ಟರ್, ಮುಖ್ಯ ಶಿಕ್ಷಕ ತಾತಯ್ಯ, ಸಹ ಶಿಕ್ಷಕ ಬಸವರಾಜು, ಎಸ್ಡಿಎಂಸಿ ಪ್ರಭಾರ ಅಧ್ಯಕ್ಷ ಉಮಾಶಂಕರ್ ಮತ್ತು ಭಗತ್ ಸಿಂಗ್, ಕ್ರಾಂತಿ ಸೇನೆ ಮದನ್ ಸೇರಿದಂತೆ ಸಹ ಶಿಕ್ಷಕರು, ಎಸ್ಡಿಎಂಸಿ ಪದಾಧಿಕಾರಿಗಳು, ಮುಖಂಡರು, ವಿದ್ಯಾರ್ಥಿಗಳು ಹಾಗೂ ಪೋಷಕರು ಇದ್ದರು.
ನೇತ್ರದಾನ – ಈಶ್ವರ್ ಕುಟುಂಬದ ಮಾನವೀಯತೆ
ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ತುಮಕೂರಿನ ಹಿರಿಯ ಪತ್ರಕರ್ತ ಈಶ್ವರ್ ನಿಧನದಲ್ಲಿ ಮೃತರ ಕುಟುಂಬ ಮಾನವೀಯತೆ ತೋರಿದೆ. ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಅವರ ಕುಟುಂಬ ವರ್ಗ ಮುಂದಾಗಿರುವುದು, ಅವರ ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


