ತುಮಕೂರು: ಜೂನ್ 30 ರಿಂದ ಆರಂಭಗೊಂಡಿರುವ ಜಿಲ್ಲೆಯ ಮತದಾರರಿಗೆ ಎಸ್ ಐಆರ್ ಅರ್ಜಿ ವಿತರಣೆ ಪ್ರಕ್ರಿಯೆ ಭಾಗವಾಗಿ ಮಂಗಳವಾರ ಅಂತ್ಯದ ವೇಳೆಗೆ ಒಟ್ಟು 19,39,324 ಮಂದಿ ಎಸ್ ಐಆರ್ ಅರ್ಜಿ ವಿತರಣೆ ಮಾಡಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಗಳಾದ ಡಿಸಿ ಶುಭಕಲ್ಯಾಣ್ ಮಾಹಿತಿ ನೀಡಿದ್ದಾರೆ.
ಈ ಪೈಕಿ 1,09,891 ಮತದಾರರ ಎಸ್ ಐಆರ್ ಅರ್ಜಿ ಡಿಜಿಟೈಸೇಷನ್ ಆಗಿದ್ದು, 3,297 (0.14%) ಮಂದಿ ಮತದಾರರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 1162 ಮಂದಿ ಮತದಾರರು ಪವತಿ, ಸ್ಥಳಾಂತರದ ಕಾರಣಕ್ಕೆ ಬಿಎಲ್ಒಗಳಿಗೆ ಲಭ್ಯವಾಗಿಲ್ಲ.
ಇದರಲ್ಲಿ 714 ಮಂದಿ ಮರಣವನ್ನಪ್ಪಿದ್ದವರು, 329 ಮಂದಿ ಶಾಶ್ವತ ಸ್ಥಳಾಂತರಗೊಂಡುವರು. 90 ಮಂದಿ ಆಗಲೇ ನೊಂದಾವಣೆ ಮಾಡಿರುವವರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


