ತುಮಕೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ, ಭೂಮಾಪಕರ ಹುದ್ದೆಯಲ್ಲಿ ಖಾಲಿ ಇರುವ 560 ಹುದ್ದೆಗಳಿಗೆ ಅರ್ಜಿ ಹಾಕಲು 7-8-2026 ಅಂತಿಮ ದಿನಾಂಕವಾಗಿದ್ದು ಹಾಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯಲ್ಲಿ ಖಾಲಿ ಇರುವ 505 ಹುದ್ದೆಗಳಿಗೆ ಅರ್ಜಿಹಾಕಲು 30-07-2026 ಅಂತಿಮ ದಿನಾಂಕವಾಗಿದ್ದು, ಈ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.
ಕೃಷಿಕ್ ಸರ್ವೋದಯ ಫೌಂಡೇಶನ್ (ರಿ) ತುಮಕೂರು ಸಂಸ್ಥೆ ಮೇಲ್ಕಂಡ ಹುದ್ದೆಗಳ ಜೊತೆಗೆ ಬ್ಯಾಂಕಿಂಗ್/ಎಸ್.ಎಸ್.ಸಿ/ರೈಲ್ವೆ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ದಿನಾಂಕ 15-07-2026ರಿಂದ ನುರಿತ ಉಪನ್ಯಾಸಕರಿಂದ ಪ್ರಾರಂಭಿಸಲಿದೆ.
ಆಸಕ್ತರು ದಿನಾಂಕ 14-07-2026ರೊಳಗೆ 9449146200 ನಂಬರ್ ಗೆ ನೋಂದಾಯಿಸಿ ಕೊಳ್ಳಬಹುದೆಂದು, ತುಮಕೂರು ಶಾಖೆಯ ಕಾರ್ಯದರ್ಶಿಗಳಾದ ಹೆಚ್.ಎಸ್. ಹನುಮೇಗೌಡರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


