ತುಮಕೂರು: ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ವತಿಯಿಂದ ಆಗಸ್ಟ್ 7 ಮತ್ತು 8ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಲಿರುವ ತುಮಕೂರು ಜಿಲ್ಲಾ ತಂಡಕ್ಕೆ ಜುಲೈ 17 ರ (ಶುಕ್ರವಾರ) ಬೆಳಿಗ್ಗೆ 8.30 ರಿಂದ ಸಂಜೆ 4ಗಂಟೆಗೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಎ.ಎನ್. ಪ್ರಭಾಕರ್ ತಿಳಿಸಿದ್ದಾರೆ.
ಈ ಕೂಟವು 14, 16, 18, ಮತ್ತು 20ರ ವಯಸ್ಸಿನೊಳಗಿನ ಬಾಲಕ–ಬಾಲಕಿಯರಿಗಾಗಿ ಏರ್ಪಡಿಸಲಾಗಿದೆ. 14 ವರ್ಷದೊಳಗಿನ ಬಾಲಕ ಬಾಲಕಿಯರು, 17.09.2012 ಮತ್ತು 17.10.2014ರ ಒಳಗೆ ಜನಿಸಿರಬೇಕು. 16 ವರ್ಷದೊಳಗಿನವರು 17.09.2010 ಮತ್ತು 17.10.2012ರ ಒಳಗೆ ಜನಿಸಿರಬೇಕು 18 ವರ್ಷದೊಳಗಿನವರು 17.09.2008 ಮತ್ತು 17.10.2010ರ ಒಳಗೆ ಜನಿಸಿರಬೇಕು ಹಾಗೂ 20 ವರ್ಷದೊಳಗಿನವರು 17.09.2006 ಮತ್ತು 17.10.2008 ರ ಒಳಗೆ ಜನಿಸಿರಬೇಕು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಚ್ಛಿಸುವ ಕ್ರೀಡಾಪಟುಗಳು 150 ರೂ.ಗಳೊಂದಿಗೆ ಎಎಫ್ ಐ ನೀಡಿರುವ ಯುಐಡಿ ನಂಬರ್ ನೊಂದಿಗೆ ತಮ್ಮ ಜನ್ಮ ದಿನಾಂಕದ ಪತ್ರ, ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಶಿವಪ್ರಸಾದ್ ಹಾಗೂ ಜಂಟಿ ಕಾರ್ಯದರ್ಶಿ ಪಿ.ಎಸ್. ಸುರೇಶ್ ರವರಲ್ಲಿ ನೋಂದಣಿ ಮಾಡಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ವಿವರಗಳಿಗೆ ಮೊ.ಸಂ. 9964529175, 9845784801ಕ್ಕೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


