ತುಮಕೂರು: ಜಿಲ್ಲೆಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸುವವರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್), ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜುಲೈ 22ರಂದು ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರವನ್ನು ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಬಳಿಯಿರುವ ಸಿಡಾಕ್ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸ ಬಯಸುವ ಆಸಕ್ತರಿಗೆ ಉದ್ಯಮಶೀಲತೆ ಪ್ರೇರಣೆ, ಸ್ವಂತ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು/ಪ್ರೋತ್ಸಾಹ, ಯೋಜನೆಗಳ ಆಯ್ಕೆ ಹಾಗೂ ಇತರೆ ಕೈಗಾರಿಕಾ ವಿಷಯಗಳ ಕುರಿತು ಮತ್ತು ಮುಂದೆ ಕೈಗೊಳ್ಳಲಾಗುವ ಉದ್ಯಮಶೀಲತಾಭಿವೃದ್ಧಿ ತರಬೇತಿ ಬಗ್ಗೆ ಮಾಹಿತಿ ನೀಡಲಾಗುವುದು.
ಸ್ವಂತ ಉದ್ಯಮ ಸ್ಥಾಪಿಸಲು ಆಸಕ್ತಿ ಇರುವ ತುಮಕೂರು ಜಿಲ್ಲೆಯ ವಿದ್ಯಾವಂತ ಯುವಕ/ಯುವತಿಯರು ಹಾಗೂ ನಿರುದ್ಯೋಗಿಗಳು ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದಾಗಿದೆ. ಕನಿಷ್ಠ 18 ವರ್ಷ ಮೇಲ್ಪಟ್ಟ ಹಾಗೂ ಕನಿಷ್ಠ 10ನೇ ತರಗತಿ ವ್ಯಾಸಂಗ ಮಾಡಿರುವ ಆಸಕ್ತರು ಜುಲೈ 20ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಿಡಾಕ್ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ಕೈಗಾರಿಕಾ ಎಸ್ಟೇಟ್, ರಿಸರ್ವ್ ಪೊಲೀಸ್ ಮೈದಾನದ ಎದುರು, ಎಸ್.ಐ.ಟಿ., ತುಮಕೂರು ಅಥವಾ ದೂರವಾಣಿ ಸಂಖ್ಯೆ 7022746755 / 7760145784ನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


