nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜು.25: ಕೆಂಪೇಗೌಡ ಜಯಂತಿ, ಪ್ರತಿಭಾ ಪುರಸ್ಕಾರ

    July 20, 2026

    ಮೊರಾರ್ಜಿ ವಸತಿ ಶಾಲೆಯಲ್ಲಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್

    July 20, 2026

    ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    July 19, 2026
    Facebook Twitter Instagram
    ಟ್ರೆಂಡಿಂಗ್
    • ಜು.25: ಕೆಂಪೇಗೌಡ ಜಯಂತಿ, ಪ್ರತಿಭಾ ಪುರಸ್ಕಾರ
    • ಮೊರಾರ್ಜಿ ವಸತಿ ಶಾಲೆಯಲ್ಲಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್
    • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
    • ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ
    • ವಲಸೆಗೆ ಬ್ರೇಕ್; ‘ವಿಬಿ–ಜಿ ರಾಮ್-ಜಿ’ ಯೋಜನೆಯಿಂದ ಗ್ರಾಮದಲ್ಲೇ ಉದ್ಯೋಗದ ಭರವಸೆ
    • ಬರಗಾಲಕ್ಕೆ ಹೆದರಿ ವಲಸೆ ಹೋಗಬೇಡಿ: ನಿಮ್ಮೂರಲ್ಲೇ ‘ವಿಬಿ–ಜಿ ರಾಮ್ ಜಿ’ ಕೆಲಸ ಮಾಡಿ: ಡಿಸಿ ಶಿಲ್ಪಾ ಶರ್ಮಾ
    • ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ
    • ಬದುಕು ಉಜ್ವಲವಾಗಲು ಶಿಕ್ಷಣವೇ ಮುಖ್ಯ ಅಸ್ತ್ರ: ಶಾಸಕ ಕೆ.ಎನ್‌. ರಾಜಣ್ಣ ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಡವರ ಹಸಿವು ನೀಗಿಸುತ್ತಿರುವ ಕೊರಟಗೆರೆಯ ‘ದತ್ತು ಹೋಟೆಲ್’: ಕೇವಲ 40 ರೂಪಾಯಿಗೆ ಸೌದೆ ಒಲೆಯ ರುಚಿಕರ ಊಟ–ತಿಂಡಿ!
    ಕೊರಟಗೆರೆ July 19, 2026

    ಬಡವರ ಹಸಿವು ನೀಗಿಸುತ್ತಿರುವ ಕೊರಟಗೆರೆಯ ‘ದತ್ತು ಹೋಟೆಲ್’: ಕೇವಲ 40 ರೂಪಾಯಿಗೆ ಸೌದೆ ಒಲೆಯ ರುಚಿಕರ ಊಟ–ತಿಂಡಿ!

    By adminJuly 19, 2026No Comments2 Mins Read
    dattu hotel
    • ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ: ಇಂದಿನ ದುಬಾರಿ ದಿನಗಳಲ್ಲಿ ಹೋಟೆಲ್‌ ನಲ್ಲಿ ಒಂದು ಹೊತ್ತು ಹೊಟ್ಟೆತುಂಬಾ ಊಟ ಮಾಡಬೇಕಾದರೆ ಜೇಬಿನಲ್ಲಿ ನೂರಾರು ರೂಪಾಯಿ ಇರಬೇಕು. ಆದರೆ ಕೊರಟಗೆರೆ ಪಟ್ಟಣದಲ್ಲಿರುವ ಒಂದು ಹೋಟೆಲ್ ಮಾತ್ರ ಕಳೆದ 35–40 ವರ್ಷಗಳಿಂದ ಬಡವರ, ಮಧ್ಯಮ ವರ್ಗದವರ ಹಾಗೂ ವಿದ್ಯಾರ್ಥಿಗಳ ಹಸಿವನ್ನು ಅತ್ಯಂತ ಕಡಿಮೆ ಬೆಲೆಗೆ ನೀಗಿಸುತ್ತಾ ‘ಬಡವರ ಹೋಟೆಲ್’ ಎಂದೇ ಪ್ರಸಿದ್ಧಿ ಪಡೆದಿದೆ.

    ಅದೇ ಕೊರಟಗೆರೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಮುಖ್ಯರಸ್ತೆಯ ಪಕ್ಕದಲ್ಲಿರುವ ‘ಶ್ರೀ ದುರ್ಗಾಪರಮೇಶ್ವರಿ ಸಸ್ಯಹಾರಿ ಹೋಟೆಲ್’. ಇದನ್ನು ಸ್ಥಳೀಯರು ಪ್ರೀತಿಯಿಂದ ‘ದತ್ತು ಹೋಟೆಲ್’ ಎಂದೇ ಕರೆಯುತ್ತಾರೆ.

    ಕೊರಟಗೆರೆಯ ಜನರ ಮನಗೆದ್ದ ಕುಟುಂಬ:

    ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಈ ಕುಟುಂಬ ಕೊರಟಗೆರೆಗೆ ಬಂದು ಸುಮಾರು 35-40 ವರ್ಷಗಳಾಗಿವೆ. ಮೊದಲು ದತ್ತು ಅವರ ತಂದೆಯವರಾದ ನಾಗಭೂಷಣ್ ರವರು ಈ ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದರು. ತದನಂತರ ಅವರ ಮಗ ದತ್ತಾತ್ರೇಯ (ದತ್ತು) ರವರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ತಂದೆಯ ಹಾದಿಯಲ್ಲೇ ಹೋಟೆಲ್ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

    ಸೌದೆ ಒಲೆಯ ಅಡುಗೆಯೇ ಇಲ್ಲಿನ ಸ್ಪೆಷಾಲಿಟಿ!

    ಈ ಹೋಟೆಲ್‌ನ ಮತ್ತೊಂದು ವಿಶೇಷವೆಂದರೆ ಇಲ್ಲಿ ಇಂದಿಗೂ ಎಲ್‌ ಪಿಜಿ ಗ್ಯಾಸ್ ಬಳಸದೆ ಕೇವಲ ಸೌದೆ ಒಲೆಯನ್ನೇ ಅವಲಂಬಿಸಿ ಅಡುಗೆ ಮಾಡಲಾಗುತ್ತದೆ. ಸೌದೆ ಒಲೆಯಲ್ಲಿ ತಯಾರಾಗುವ ತಿಂಡಿ ಹಾಗೂ ಊಟ ಅತ್ಯಂತ ರುಚಿಕರವಾಗಿದ್ದು, ದೂರದ ಊರುಗಳಿಂದ ಬರುವ ಪ್ರಯಾಣಿಕರು ಇಲ್ಲಿನ ಸ್ವಾದಕ್ಕೆ ಮನಸೋತಿದ್ದಾರೆ. ಪ್ರತಿದಿನ ಬೆಳಗಿನ ಜಾವ 4 ಗಂಟೆಗೆ ಆರಂಭವಾಗುವ ಹೋಟೆಲ್ ವ್ಯವಹಾರ, ರಾತ್ರಿ 8:30 ರವರೆಗೆ ನಿರಂತರವಾಗಿ ನಡೆದುಕೊಂಡು ಹೋಗುತ್ತದೆ. ಹೋಟೆಲ್‌ ನಲ್ಲಿ ಸದ್ಯ 5 ರಿಂದ 6 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

    ಇಲ್ಲಿ ಬೆಳಗಿನ ಸಮಯದಲ್ಲಿ ಟೀ, ಕಾಫಿ, ಇಡ್ಲಿ, ಚಟ್ನಿ, ಸಾಗು, ಪೂರಿ, ಬೋಂಡಾ, ಚಿತ್ರಾನ್ನ ಸಿಗುತ್ತದೆ. ಇದರೊಂದಿಗೆ ಪುಳಿಯೋಗರೆ, ಟೊಮೆಟೊಬಾತ್, ಪಲಾವ್ ಹಾಗೂ ಮೆಂತ್ಯಬಾತ್ ಸರದಿಯ ಮೇಲೆ ಲಭ್ಯವಿರುತ್ತವೆ. ಇನ್ನು ಮಧ್ಯಾಹ್ನದ ವೇಳೆ ಅನ್ನ–ಸಾಂಬಾರು, ಮೊಸರನ್ನ ದೊರೆಯುತ್ತದೆ.

    ತಿಂಡಿ: ಒಂದು ಇಡ್ಲಿ, ಒಂದು ಬೋಂಡಾ ಹಾಗೂ ಅರ್ಧ ಪ್ಲೇಟ್ ರೈಸ್‌ ಗೆ ಕೇವಲ 40 ರೂ.

    ಮಧ್ಯಾಹ್ನದ ಊಟ: ಅರ್ಧ ಮೊಸರನ್ನ, ಅರ್ಧ ಅನ್ನ–ಸಾಂಬಾರು, ಒಂದು ಹಪ್ಪಳ, ಉಪ್ಪಿನಕಾಯಿ ಹಾಗೂ ಒಂದು ಲೋಟ ಮಜ್ಜಿಗೆಗೆ ಕೇವಲ 40 ರೂ. ಮಾತ್ರ ಪಡೆಯಲಾಗುತ್ತದೆ.

    ಹೋಟೆಲ್ ವ್ಯವಹಾರದ ಜೊತೆಗೆ ದತ್ತು ಅವರು ಹೈನುಗಾರಿಕೆಯನ್ನೂ ನಂಬಿಕೊಂಡಿದ್ದು, ಎಮ್ಮೆ, ಹಸು, ಕರು ಸೇರಿ ಒಟ್ಟು 10 ಜಾನುವಾರುಗಳನ್ನು ಸಾಕಿದ್ದಾರೆ. ಇವುಗಳ ಮೇವಿಗಾಗಿ ವರ್ಷಕ್ಕೆ 1 ಲಕ್ಷದಿಂದ 1.20 ಲಕ್ಷ ರೂಪಾಯಿವರೆಗೂ ಖರ್ಚು ಮಾಡುತ್ತಾರೆ.

    ವಿದ್ಯಾರ್ಥಿಗಳಿಗೆ ರಿಯಾಯಿತಿ:

    ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಬೆಳಗಿನ ತಿಂಡಿ ಸಮಯದಲ್ಲಿ ತಮ್ಮ ಬಾಕ್ಸ್ (ಊಟದ ಡಬ್ಬಿ) ತಂದುಕೊಟ್ಟರೆ ಸಾಕು, ಅದಕ್ಕೆ ಪ್ರೀತಿಯಿಂದ ತಿಂಡಿ ಹಾಕಿ ಕೊಡಲಾಗುತ್ತದೆ. ವಿಶೇಷವೆಂದರೆ, ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ಕೊಟ್ಟ ಹಣವನ್ನಷ್ಟೇ ದತ್ತು ಸ್ವೀಕರಿಸುತ್ತಾರೆಯೇ ವಿನಃ ಇಷ್ಟೇ ಹಣ ಕೊಡಿ ಎಂದು ಎಂದೂ ಪಟ್ಟು ಹಿಡಿದವರಲ್ಲ.

    — ರಂಗಶಾಮಯ್ಯ, ಕೊರಟಗೆರೆ ಪಟ್ಟಣ


    ವೃದ್ಧರಿಗೆ, ಅಸಹಾಯಕರಿಗೆ ಉಚಿತ ಊಟ

    ವಯೋವೃದ್ಧರು, ಅಸಹಾಯಕರು ಹಾಗೂ ಬುದ್ಧಿಮಾಂದ್ಯರು ಯಾರೇ ಆಗಲಿ ಹೋಟೆಲ್‌ ನ ಎದುರುಗಡೆ ಬಂದು ನಿಂತರೆ ಸಾಕು, ದತ್ತು ಅವರು ತಕ್ಷಣವೇ ಅವರಿಗೆ ತಿಂಡಿ, ಊಟ ಅಥವಾ ಕಾಫಿ–ಟೀ ನೀಡಿ ಸತ್ಕರಿಸುತ್ತಾರೆ. ಅವರಿಂದ ಒಂದು ರೂಪಾಯಿ ಹಣವನ್ನೂ ಪಡೆಯುವುದಿಲ್ಲ. ಅಲ್ಲದೆ ಪಕ್ಕದಲ್ಲೇ ಇರುವ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಿಂಡಿ ನೀಡುವುದರ ಜೊತೆಗೆ ಕುಡಿಯಲು ಬಿಸಿ ನೀರನ್ನು ಕಾಯಿಸಿಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

    — ಮಂಜುನಾಥ್ ಕೆ.ಆರ್, ಕೊರಟಗೆರೆ ಟೌನ್

    ಲಾಭಾಂಶದ ಬೆನ್ನಟ್ಟುವ ಇಂದಿನ ಜಗತ್ತಿನಲ್ಲಿ, ವ್ಯಾಪಾರದ ಜೊತೆಗೆ ಸೇವಾ ಮನೋಭಾವನೆಯನ್ನು ಉಳಿಸಿಕೊಂಡು ಬಂದಿರುವ ಕೊರಟಗೆರೆಯ ದತ್ತು ಹೋಟೆಲ್ ನಿಜಕ್ಕೂ ಶ್ಲಾಘನೀಯ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ತ್ಯಾಜ್ಯವಲ್ಲ ಕರಟ, ರೈತರಿಗೆ ಬಂಪರ್ ಹಣ! ಕೊಬ್ಬರಿ ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಬೆಳೆಗಾರರ ಮೊಗದಲ್ಲಿ ಮಂದಹಾಸ

    July 19, 2026

    ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ : ಹಳೆಯ ವಿದ್ಯಾರ್ಥಿನಿ ಕಾರ್ಯಕ್ಕೆ ಮೆಚ್ಚುಗೆ

    July 19, 2026

    ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು

    July 17, 2026

    Leave A Reply Cancel Reply

    Our Picks

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಚಿಕ್ಕನಾಯಕನಹಳ್ಳಿ

    ಜು.25: ಕೆಂಪೇಗೌಡ ಜಯಂತಿ, ಪ್ರತಿಭಾ ಪುರಸ್ಕಾರ

    July 20, 2026

    ಚಿಕ್ಕನಾಯಕನಹಳ್ಳಿ: ಆಡಳಿತ, ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ನಾಡಪ್ರಭು ಕೆಂಪೇಗೌಡ ಪತ್ತಿನ ಸಹಕಾರ ಸಂಘದ ವತಿಯಿಂದ 517ನೇ ಕೆಂಪೇಗೌಡ ಜಯಂತಿ…

    ಮೊರಾರ್ಜಿ ವಸತಿ ಶಾಲೆಯಲ್ಲಿ ಸೌಲಭ್ಯಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್

    July 20, 2026

    ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    July 19, 2026

    ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ

    July 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.