ಬೆಂಗಳೂರು: ರಾಜ್ಯ ಸರ್ಕಾರವು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ 10 ಪ್ರಮುಖ ಸಚಿವರಿಗೆ ಬೆಂಗಳೂರು ನಗರದಲ್ಲಿ ಅಧಿಕೃತ ಸರ್ಕಾರಿ ನಿವಾಸ (ಬಂಗಲೆ) ಹಾಗೂ 19 ನೂತನ ಸಚಿವರಿಗೆ ಅಧಿಕೃತ ಸರ್ಕಾರಿ ವಾಹನಗಳನ್ನು (ಕಾರು) ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಈ ಕುರಿತು ಅಧಿಕೃತ ಆದೇಶ ನೀಡಿದ್ದು, ಕುಮಾರ ಕೃಪಾ ಅತಿಥಿ ಗೃಹದ ವಿಶೇಷಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಬೆಂಗಳೂರಿನ ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಈ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಲಾಗಿದೆ.
ಸಚಿವರಿಗೆ ಹಂಚಿಕೆಯಾದ ಸರ್ಕಾರಿ ನಿವಾಸಗಳ ವಿವರ:
ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿಗಳು): ಸದಾಶಿವನಗರ, RMV 2ನೇ ಹಂತ, ಬೆಂಗಳೂರು
ಎನ್. ಚೆಲುವರಾಯಸ್ವಾಮಿ: ನಂ. 3, ಕುಮಾರ ಕೃಪಾ ದಕ್ಷಿಣ, ಬೆಂಗಳೂರು
ಬಿ. ಝೆಡ್. ಜಮೀರ್ ಅಹಮದ್ ಖಾನ್: ನಂ. 30, ಸ್ಯಾಂಕಿ ರಸ್ತೆ, ಬೆಂಗಳೂರು
ಶಿವರಾಜ್ ಎಸ್. ತಂಗಡಗಿ: ನಂ. ಬಿ-2, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಲಕ್ಷ್ಮಣ ಸವದಿ: ನಂ. 3, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಸಂತೋಷ್ ಲಾಡ್: ನಂ. 3, ಸದಾ ಸಚಿವರ ನಿವಾಸ, ಸ್ಯಾಂಕಿ ರಸ್ತೆ, ಬೆಂಗಳೂರು
ಪಿ. ಎಂ. ನರೇಂದ್ರ ಸ್ವಾಮಿ: ನಂ. 5, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಬೈರತಿ ಸುರೇಶ್: ನಂ. 2, ಕೇಶವ್ ರಸ್ತೆ, ಬೆಂಗಳೂರು
ಕೆ. ಎನ್. ಶಿವಲಿಂಗೇಗೌಡ: ನಂ. 1, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ಬಸವಂತಪ್ಪ: ನಂ. ಬಿ-6, ಜಯಮಹಲ್, ಜಯಮಹಲ್ ಬಡಾವಣೆ, ಬೆಂಗಳೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
