nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ

    October 8, 2026

    ಐಟಿ, ಇಡಿಯಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ, ಎಚ್ಚರಿಕೆಯಿಂದಿರಿ ಎಂದು ಸಿಎಂ ಹೇಳಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ

    October 8, 2026

    ನನ್ನ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ಯತ್ನ, ಇದರ ಪಿತಾಮಹ ಯಾರು ಅಂತ ಗೊತ್ತು: ಸಿಎಂ ಡಿ.ಕೆ.ಶಿವಕುಮಾರ್

    October 8, 2026
    Facebook Twitter Instagram
    ಟ್ರೆಂಡಿಂಗ್
    • ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ
    • ಐಟಿ, ಇಡಿಯಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ, ಎಚ್ಚರಿಕೆಯಿಂದಿರಿ ಎಂದು ಸಿಎಂ ಹೇಳಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ
    • ನನ್ನ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ಯತ್ನ, ಇದರ ಪಿತಾಮಹ ಯಾರು ಅಂತ ಗೊತ್ತು: ಸಿಎಂ ಡಿ.ಕೆ.ಶಿವಕುಮಾರ್
    • ತುಮಕೂರು: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ
    • 1582ರ ಅಕ್ಟೋಬರ್ ನಲ್ಲಿ  ಕ್ಯಾಲೆಂಡರ್ ನಲ್ಲಿ 10 ದಿನ ಕಣ್ಮರೆಯಾಗಿತ್ತು! | ಹಾಗಿದ್ರೆ ಆ 10 ದಿನ ಜನರು ಬದುಕಿರಲಿಲ್ಲವೇ? ಅಂದು ಏನಾಗಿತ್ತು?
    • ಮಲಗಿದರೆ ಸಿಗುತ್ತೆ ₹12 ಲಕ್ಷ!  ಏನಿದು ಅಚ್ಚರಿಯ ಸಂಗತಿ!
    • ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್‌ ಗೆ  ವೈದ್ಯಕೀಯ ಉಪಕರಣಗಳ ಹಸ್ತಾಂತರ
    • ಹಳೆಯ ಆತ್ಮವೇ? ಹೊಸ ಆತ್ಮವೇ? ವ್ಯಕ್ತಿಯ ಗುಣಗಳಿಂದ ಆತ್ಮದ ಪಯಣ ಗುರುತಿಸಬಹುದೇ?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ
    ಜಿಲ್ಲಾ ಸುದ್ದಿ August 13, 2026

    ಸರಗೂರು: ತಳಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ – ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಕರೆ

    By adminAugust 13, 2026No Comments2 Mins Read
    bjp.jpg

    ಸರಗೂರು: “ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಅಧಿಕಾರದ ಕುರ್ಚಿಯಲ್ಲ; ಬದಲಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬಲಪಡಿಸುವ ಹೊಣೆಗಾರಿಕೆಯಾಗಿದೆ,” ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಎನ್. ಸುಬ್ಬಣ್ಣ ಹೇಳಿದರು.

    ಪಟ್ಟಣದ ಜೆಎಸ್ ಎಸ್ ಶಿವರಾತ್ರಿ ಶಿವಾನುಭವ ಮಂಟಪದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬಿಜೆಪಿ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎನ್. ಸುಬ್ಬಣ್ಣ, “ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಈಗಾಗಲೇ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಆದ್ದರಿಂದ ಕಾರ್ಯಕರ್ತರು ಯಾವುದೇ ರೀತಿಯ ಗೊಂದಲ ಅಥವಾ ಆತಂಕಕ್ಕೆ ಒಳಗಾಗಬೇಕಿಲ್ಲ. ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದು, ಇದು ವ್ಯಕ್ತಿ ಆಧಾರಿತ ಮತವಲ್ಲ; ಪಕ್ಷದ ಚಿಹ್ನೆ ಮತ್ತು ಸಿದ್ಧಾಂತದ ಮೇಲಿನ ವಿಶ್ವಾಸವಾಗಿದೆ ಎಂದರು.

    ಎಚ್.ಡಿ. ಕೋಟೆಯಲ್ಲಿ ಎರಡನೇ ಸ್ಥಾನ ಬಂದಿರುವುದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಬಿ–ಫಾರಂ ದೊರೆಯುವುದು ಖಚಿತ. ಮೈತ್ರಿ ಪಕ್ಷದವರು ತಮಗೆ ಟಿಕೆಟ್ ಸಿಗುತ್ತದೆ ಎಂಬಂತೆ ಹಬ್ಬಿಸುತ್ತಿರುವ ಊಹಾಪೋಹಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು,” ಎಂದು ಸ್ಪಷ್ಟಪಡಿಸಿದರು.

    ಸಾಮಾನ್ಯ ಕಾರ್ಯಕರ್ತರನ್ನು ಎಂದಿಗೂ ಕಡೆಗಣಿಸದೆ ಅವರ ಮನೆಗಳಿಗೆ ತೆರಳಿ ಕಷ್ಟ-ಸುಖ ಆಲಿಸಬೇಕು. ತಾಲೂಕು ಕಚೇರಿ, ಬಿಇಒ ಕಚೇರಿ, ಪೊಲೀಸ್ ಠಾಣೆ ಹಾಗೂ ಆರೋಗ್ಯ ಸೇವೆ ಸೇರಿದಂತೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸದಾ ನೆರವಿಗೆ ನಿಲ್ಲಬೇಕು. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಗ ಮಾತ್ರ ಪಕ್ಷದ ಮೇಲೆ ನಂಬಿಕೆ ಹೆಚ್ಚುತ್ತದೆ ಎಂದು ಸುಬ್ಬಣ್ಣ ತಿಳಿಸಿದರು.

    ನೂತನ ಮಂಡಲ ಅಧ್ಯಕ್ಷ ಸಿ.ಕೆ. ಗಿರೀಶ್ ಅವರ ಅನುಭವವನ್ನು ಶ್ಲಾಘಿಸಿದ ಅವರು, “ಗಿರೀಶ್ ಪಕ್ಷದಲ್ಲಿ ಹೊಸಬರಲ್ಲ. ಹಿಂದೆ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರಾಗಿ ಹಾಗೂ ತಾಲೂಕು ಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ,” ಎಂದು ಶುಭ ಹಾರೈಸಿದರು.

    ಪದಗ್ರಹಣ ಸ್ವೀಕರಿಸಿ ಮಾತನಾಡಿದ ನೂತನ ಮಂಡಲ ಅಧ್ಯಕ್ಷ ಸಿ.ಕೆ. ಗಿರೀಶ್, “ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. ಗ್ರಾಮೀಣ ಮಟ್ಟದಿಂದಲೇ ಸಂಘಟನೆಯನ್ನು ಬಲಪಡಿಸಿ ಪ್ರತಿಯೊಬ್ಬ ಕಾರ್ಯಕರ್ತನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
    ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಹಾವೀರ ಸರ್ಕಲ್ ಬಳಿಯ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಜೆಎಸ್ಎಸ್ ಮಂಟಪದವರೆಗೆ ಅದ್ದೂರಿ ಬೈಕ್ ರ್ಯಾಲಿ ನಡೆಸಲಾಯಿತು.

    ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಎಚ್.ಸಿ. ಲಕ್ಷ್ಮಣ್, ಮಾಜಿ ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುನಂದರಾಜ್, ಮಾಜಿ ಮಂಡಲ ಅಧ್ಯಕ್ಷ ಗುರುಸ್ವಾಮಿ ಮಾತನಾಡಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಯುವ ಮೋರ್ಚಾ ಅಧ್ಯಕ್ಷ ನವೀನ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ನವೀನ್ ಕುಮಾರ್, ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಸೈಯದ್ ಅಕ್ರಮ್ ಪಾಷಾ, ಮಹಾಸಭಾ ಅಧ್ಯಕ್ಷ ನಟರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮಹದೇವ್, ಜಿ.ಪಂ. ಮಾಜಿ ಸದಸ್ಯ ವೆಂಕಟಸ್ವಾಮಿ, ಎಚ್.ಡಿ. ಕೋಟೆ ಮಂಡಲ ಅಧ್ಯಕ್ಷ ವೆಂಕಟೇಶ್, ಪಪಂ ಉಪಾಧ್ಯಕ್ಷ ಶಿವಕುಮಾರ್, ಪಪಂ ಸದಸ್ಯರಾದ ಉಮಾ ರಾಮಚಂದ್ರ, ದಿವ್ಯಾ ಹಾಗೂ ಸ್ಥಳೀಯ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

     

    admin
    • Website

    Related Posts

    ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್‌ ಗೆ  ವೈದ್ಯಕೀಯ ಉಪಕರಣಗಳ ಹಸ್ತಾಂತರ

    October 8, 2026

    ಹಾಸನ: ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ — ಕೊಲೆ ಶಂಕೆ, ಪ್ರಕರಣ ದಾಖಲು

    October 7, 2026

    ಮಾಳಗೂರು ಡೈರಿಯಲ್ಲಿ ಹಾಲಿನ ತೂಕದಲ್ಲಿ ಮೋಸ ಆರೋಪ: ರೊಚ್ಚಿಗೆದ್ದ ಹಾಲು ಉತ್ಪಾದಕರಿಂದ ಪ್ರತಿಭಟನೆ

    October 7, 2026

    Leave A Reply Cancel Reply

    Our Picks

    ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ

    October 8, 2026

    50 ಪೈಸೆ ನಾಣ್ಯ ಇನ್ನೂ ಮಾನ್ಯವೇ? RBI ನಿಯಮ ತಿಳಿದರೆ ಅಚ್ಚರಿಯಾಗುತ್ತೆ!

    October 6, 2026

    35 ವರ್ಷಗಳ ಬಳಿಕ ಮರಳಿ ಕುಟುಂಬ ಸೇರಿದ ಮಹಿಳೆ: ಪತ್ತೆಗೆ ಸುಳಿವು ನೀಡಿದ ಕೈಯಲ್ಲಿದ್ದ ಹಚ್ಚೆ!

    October 6, 2026

    SBI ಗ್ರಾಹಕರಿಗೆ ಹೊಸ ರೂಲ್ಸ್; ATMನಲ್ಲಿ ಹಣ ತೆಗೆಯುವ ಮುನ್ನ ಈ ನಿಯಮ ತಿಳಿಯಿರಿ!

    October 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಹಿರಿಯ ನಟ ನಾನಾ ಪಾಟೇಕರ್ ನಿಧನ: ಪ್ರಧಾನಿ ಮೋದಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರಿಂದ ಸಂತಾಪ

    October 8, 2026

    ಪಣಜಿ/ಮುಂಬೈ: ಭಾರತೀಯ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ಬಹುಭಾಷಾ ನಟ ನಾನಾ ಪಾಟೇಕರ್ (75) ಅವರು ಗೋವಾದ ಪಣಜಿಯಲ್ಲಿರುವ ತಮ್ಮ…

    ಐಟಿ, ಇಡಿಯಿಂದ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ, ಎಚ್ಚರಿಕೆಯಿಂದಿರಿ ಎಂದು ಸಿಎಂ ಹೇಳಿದ್ದಾರೆ: ಸಚಿವ ಪ್ರಿಯಾಂಕ್ ಖರ್ಗೆ

    October 8, 2026

    ನನ್ನ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ಯತ್ನ, ಇದರ ಪಿತಾಮಹ ಯಾರು ಅಂತ ಗೊತ್ತು: ಸಿಎಂ ಡಿ.ಕೆ.ಶಿವಕುಮಾರ್

    October 8, 2026

    ತುಮಕೂರು: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನಕ್ಕೆ ಆನ್‌ ಲೈನ್ ಅರ್ಜಿ ಆಹ್ವಾನ

    October 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.