ತುಮಕೂರು: ಚುನಾವಣಾ ವ್ಯವಸ್ಥೆ ಸುಧಾರಣೆಯಾಗದ ಹೊರತು ರಾಜಕೀಯದಲ್ಲಿ ಪ್ರಾಮಾಣಿಕರಿಗೆ ಉಳಿಯುವುದು ಅಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ತುಮಕೂರಿನ ಗ್ರಂಥಾಲಯ ಸಭಾಂಗಣದಲ್ಲಿ ಸಿ.ವೀರಣ್ಣ ಅಭಿಮಾನಿ ಬಳಗ–ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮನ್ವಯ ವೇದಿಕೆಯುಂದ ಜರುಗಿದ ಮಾಜಿ ಸಚಿವ ಸಿ.ವೀರಣ್ಣ ಅವರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನು ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿರುವುದಕ್ಕೆ ನನಗೆ ವಯಸ್ಸಾಗುತ್ತಿರುವುದು ಕಾರಣವಲ್ಲ. ಪ್ರಸ್ತುತ ಚುನಾವಣಾ ವ್ಯವಸ್ಥೆ ಅತ್ಯಂತ ಮಾರಿಯಾಗಿದ್ದು ಸರಿಯಲ್ಲ. ಕೆಪಿಸಿಸಿಆರ್ ಅವರು ಹೇಳಿದಂತೆ ಮೂಟೆಗಟ್ಟಲೆ ಹಣ ತಂದು ಚುನಾವಣೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ನಾನು 1983ರಲ್ಲಿ ಮೊದಲ ಬಾರಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಚುನಾವಣಾ ಖರ್ಚಿಗೆ ಕೇವಲ 63 ಸಾವಿರ. ಅದು ಜನರು ಕೊಟ್ಟ ದುಡ್ಡು, ಪ್ರಸಕ್ತಈ ನೀತಿ ಮಾಡಲು ಸಾಧ್ಯವೇ? ವೀರಣ್ಣ ಅವರಂತಹ ಪ್ರಾಮಾಣಿಕ ಆದರ್ಶ ನೇತಾರರಿಗೆ ಗೌರವ ಸಲ್ಲಬೇಕಾದರೆ ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ಆಯೋಗ ಹಣಕಾಸಿನ ಮಿತಿಯಲ್ಲಿ ಚುನಾವಣೆ ನಡೆಸಬೇಕು. ಹತ್ತು ದಿನದೊಳಗೆ ಚುನಾವಣೆ ಪ್ರಚಾರ ಮುಗಿದುಕೊಳ್ಳಲು ನಿಯಮ ಜಾರಿಗೆಳಬೇಕು. ಈ ಸುಧಾರಣೆಗಳು ರಾಜಕಾರಣಿಗಳು, ಜನರು ಜಂಟಿ ಹೋರಾಟ ಮಾಡಬೇಕು ಎಂದು ಕರೆಕೊಟ್ಟರು.
ಮೀಸಲು ಹೆಚ್ಚಳ ಸೇರಿದಂತೆ ಸಾಮಾಜಿಕ ನ್ಯಾಯಪರವಾದ ಧ್ವನಿಗೆ ನೀವು ಲೋಕಸಭೆಗೆ ಸ್ಪರ್ಧಿಸಬೇಕು ಎಂದು ವೇದಿಕೆಯಲ್ಲಿ ಮಂಡಿಸಿದ ಸಚಿವ ಸಿದ್ದರಾಮಯ್ಯ, ಉಗ್ರಪ್ಪ ಸೇರಿದಂತೆ ಅನೇಕ ಸಭಿಕರು ಸಮಾರಂಭದಲ್ಲಿ ಸಿದ್ದರಾಮಯ್ಯರನ್ನು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ನನಗೆ ಸಂಸದ ಸ್ಥಾನದ ಆಫರ್ ಬಂದಿತ್ತು. ಆದರೆ ಅದನ್ನು ನಾನು ತಿರಸ್ಕರಿಸಿದೆ. 1991ರಲ್ಲಿ ಕೊಪ್ಪಳದಲ್ಲಿ ಅದಕ್ಕೂ ಮುನ್ನ ಮೈಸೂರಿನಲ್ಲಿ ಲೋಕಸಭೆಯಲ್ಲಿ ಸ್ಪರ್ಧಿಸಿ ಸೋತಿದ್ದೆ. ಅಂದಿನಿಂದ ಲೋಕಸಭೆಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದೆ. ಈಗಲೂ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಕಾಗಿಲ್ಲ ಎಂದು ನಿರ್ಧರಿಸಿದ್ದೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದು ಪುನರುಚ್ಚರಿಸಿದರು.
ವೀರಣ್ಣ ಅವರು ಮಂತ್ರಿಯಾಗಿದ್ದಾಗ, ಉಪ ಸಭಾಧ್ಯಕ್ಷರಾಗಿದ್ದಾಗ ಯಾವತ್ತೂ ಜಬರದ್ರಿ ಯಿಂದ ವರ್ತಿಸುತ್ತಿರಲಿಲ್ಲ. ಸದನ ತಪ್ಪದೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸಿದ್ದರಾಮಣ್ಣ ಸೇರಿದಂತೆ 16 ಮಿನಿ ಸಚಿವರನ್ನು ರಾಮಕೃಷ್ಣ ಹೆಗಡೆ ಅವರು ಸಂಪುಟದಿಂದ ಕೈ ಬಿಟ್ಟ ಸಂದರ್ಭದಲ್ಲೂ ವೀರಣ್ಣ ಅವರು ಸಣ್ಣ ಉಳಿತಾಯ ಇಲಾಖೆಯ ಸಚಿವರಾಗಿ ಮಾಡಿದ ಸಾಧನೆ ಕಾಯ್ದು ಮುಂದುವರೆಸಿದರು. ಉಪಸಭಾಧ್ಯಕ್ಷರಾಗಿದ್ದಾಗ ಮುತ್ಸದ್ದಿ ನಡೆ ಪ್ರದರ್ಶಿಸಿದರು.
ಬಿಸಿಐ ಎಸ್ಸಿ ಒಬಿಸಿ ವರ್ಗಗಳ ಮೀಸಲು ಪ್ರಮಾಣ ಶೇ.56ಕ್ಕೆ ಏರಿಕೆಯಾಗಬೇಕಾದರೆ ಸಂವಿಧಾನದ 9ನೇ ಪೆಡೋಲ್ ಗೆ ಸೇರಿಸಿಕೊಳ್ಳಲು ಉಗ್ರಪ್ಪ ಅವರ ಒತ್ತಾಯಕ್ಕೆ ನನ್ನ ಸಹಾಯವಿದೆ. ಹೋರಾಟ ಚೆಯಲಿಸುತ್ತಿದ್ದೆನೋ ವೇಳೆ ವೀರಣ್ಣ ಅವರನ್ನು ಸದನದಲ್ಲಿರುವಂತೆ ಉಗ್ರಪ್ಪ ಮರುವಳೆಗೆ ಸಾಕ್ಷಿಯಾದ ಸ್ವಾರಸ್ಯಕರ ಸಂಗತಿಯನ್ನು ಸಿದ್ದರಾಮಯ್ಯ ಅವರು ನೆನಪಿಸಿಕೊಂಡರು.
ಉಪಮುಖ್ಯಮಂತ್ರಿ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರು ಮಾತನಾಡಿ, ನಾನು ವೀರಣ್ಣನವರೊಂದಿಗೆ ರಾಜಕಾರಣ ಮಾಡದವನಲ್ಲ. ಆದರೆ ನಾನು ವಿದೇಶದಿಂದ ಬಂದಾಗ ನಮ್ಮ ತಂದೆಯವರು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ನನಗೆ ಆಗ ರಾಜಕೀಯದ ಗಂಧ ಗಾಳಿಯೂ ಗೊತ್ತಿರಲಿಲ್ಲ. ಆ ಸಮಯದಲ್ಲಿ ವೀರಣ್ಣನವರು ಸಣ್ಣ ಉಳಿತಾಯ ಸಚಿವರು ಆಗಿದ್ದರು. ಒಬ್ಬ ಮಂತ್ರಿಯಾಗಿ ಗಾಂಧಿನಗರದಲ್ಲಿ ಸಾಮಾನ್ಯರಂತೆ ಒಂದು ಶೆಡ್ನಲ್ಲಿ ವಾಸಿಸುತ್ತಿದ್ದರು. ಅತಿಥಿಗಳು ಬಂದರೆ ಒಳಗೆ ಕುಳಿತುಕೊಳ್ಳುವ ಜಾಗ ಇರಲಿಲ್ಲ. ಕುರ್ಚಿ ತರಿಸಿ ಹೊರಗೆ ಕೂರಿಸಿಕೊಂಡು ಮಾತನಾಡುತ್ತಿದ್ದರು. ಮಂತ್ರಿಗಳು ಅಂದರೆ ಏನೇನೋ ಕಲ್ಪನೆ ಇತ್ತು. ಆದರೆ ಅವರನ್ನು ನನಗೆ ನೋಡಿ ಆಶ್ಚರ್ಯವಾಯಿತು. ಅಷ್ಟು ಸರಳತೆಯಿಂದಿದ್ದಂತಹ ವ್ಯಕ್ತಿ, ಇವತ್ತಿನ ಯುವಪೀಳಿಗೆಗೆ ಯಾವ ರೀತಿಯ ಆಲೋಚನೆ ಮಾಡಿದೆಂಬುದನ್ನು ನಾವೆಲ್ಲರೂ ಅರಿಯುವುದು ಮುಖ್ಯ ಎಂದರು.
ಸಿದ್ದರಾಮಯ್ಯನವರು ಇಡೀ ದೇಶ ಬದಲಾಗುತ್ತೇನೆ ಎಂದು ಹಂಬಲಿಸಿಲ್ಲ. ಸಮುದಾಯಗಳಿಗೆ ಏನು ಮಾಡಬಹುದು ಎಂದು ಯೋಚಿಸಿದರು. ದೇವರಾಜ ಅರಸು ಅವರು ಧ್ವನಿ ಇಲ್ಲದವಳಿಗೆ ಧ್ವನಿಸಿದರು. ಮುತಲ ಸಮುದಾಯಕ್ಕೆ ಶಕ್ತಿ ಕೊಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದರು. ಎಂಟು ವರ್ಷ ಮುನ್ನು ಮಂತ್ರಿಗಳಾಗಿ ಕೆಲಸ ಮಾಡಿದನು. ನಾನು ಕೂಡ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜೊತೆಗೆ ಕೆಲಸ ಮಾಡಿದೆ. ಯಾವತ್ತೂ ಕೂಡ ನಮ್ಮ ಸುರ ಮಧ್ಯೆ ವ್ಯತ್ಯಾಸಗಳು ಬರಲಿಲ್ಲ. ನಾವಿಬ್ಬರೂ ಒಂದೇ ರೀತಿಯ ಯೋಜನೆ, ಚಿಂತನೆಗಳನ್ನು ಇಟ್ಟು ಕೊಂಡವರು. ವಿಭಿನ್ನವಾದ ಚಿಂತನೆಗಳನ್ನು ಮಾಡಿದ್ದರೆ ಸಹಕಾರ ನೀಡಲು ಆಗುತ್ತಿರಲಿಲ್ಲ ಎಂದರು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ವೀರಣ್ಣ ಅವರು ವಕೀಲಿಕೆ ಆರಂಭದಲ್ಲಿ ತಮಗೆ ಮಾರ್ಗದರ್ಶನ ಮಾಡಿದ್ದರೆಂಬುದನ್ನು, ಕಕ್ಷಿದಾರರ ಬಳಿ ದುಡ್ಡುಕೇಳಬೇಡ ಎಂದು ಹೇಳಿದ ಅವರ ಸಲಹೆಯನ್ನು ನಾನು ವಕೀಲ ವೃತ್ತಿ ಮಾಡಿದ್ದ 6 ವರ್ಷಗಳ ಕಾಲವೂ ಪಾಲಿಸಿದ್ದೆ ಎಂದು ಸ್ಮರಿಸಿದರು. ಮಾಜಿ ಸಂಸದ ಜಿ.ಎಸ್.ಬಸವರಾಜ್ ಅವರು ತಮ್ಮ ಹಾಗೂ ವೀರಣ್ಣ ಅವರ ಒಡನಾಟವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ, ಶಾಸಕರಾದ ಡಾ. ಶ್ರೀನಿವಾಸ್, ಅಶೋಕ್ ಪಟ್ಟಣ್, ಮಾಜಿ ಸಚಿವರಾದ ಶಿವಣ್ಣ, ಮಾಜಿ ಎಂಎಲ್ಸಿ ಡಾ. ಎಂ.ಆರ್. ಹುಲಿನಾಯ್ಕರ್, ಮಾಜಿ ಎಂಎಲ್ಸಿ ಡಾ.ಎಂ.ಆರ್.ಹುಲಿನಾಯ್ಕರ್, ಜಿಪಂ ಮಾಜಿ ಸದಸ್ಯ ಎನ್.ಮೂರ್ತಿ, ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ನರಸಿಂಹಯ್ಯ, ಉಪಾಧ್ಯಕ್ಷ ಎಚ್.ಸಿ.ಹನುಮಂತಯ್ಯ, ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಶಾಂತಲಾ ರಾಜಣ್ಣ, ಮಂಜುಳಾ ಉಗ್ರಪ್ಪ ಹಾಗೂ ವೀರಣ್ಣ ಕುಟುಂಬವರ್ಗದವರು, ಬಿಎಂಟಿಸಿ ಉಪಾಧ್ಯಕ್ಷ ನಿಖೀತ್ ರಾಜ್ಮೌರ್ಯ, ಗೆಳೆಯರ ಬಳಗದ ಗೋವಿಂದರಾಜು ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
