ತುಮಕೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ನಾನು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಕೊಡದೆ ಕೇವಲ ಏಕ್ ವೇದಿಕೆಯಲ್ಲಿ ಮಾತನಾಡಿ ಜಾರಿಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು; ಗೃಹ ಸಚಿವರು ಕ್ಯಾಮೆರಾ ಮುಂದೆ ಮಾತನಾಡದೆ ಏಕ್ ವೇದಿಕೆಯಲ್ಲಿ ಮಾತನಾಡಿದ್ದಾರೆ. ಬೆಟ್ಟ ಅಗೆದು ಇಲಿ ಹಿಡಿದಂತೆ ಹಿಂದೆ ಬ್ಲಾಟ್‌ಡೇರ್, ನೀವು ಮಾಡುತ್ತಿರುವುದೇ ಚಿತ್ರಾನ್ನ, ಯಾರಿಗೆ ಮೃಷ್ಟಾನ್ನ ಕೊಟ್ಟಿದ್ದೀರಿ? ಪ್ರಿಯಾಂಕ್ ಖರ್ಗೆ ನನ್ನನ್ನು ಆರ್ ಎಸ್ ಎಸ್ ಬಿಜೆಪಿಯವರನ್ನು ಆಟ ಆಡಿಸಿದಂತೆ ಅಲ್ಲ, ನನ್ನ ಹತ್ತಿರ ಆಟ ಆಡೋಕೆ ಆಗಲ್ಲ. ಮಿಸ್ಟರ್ ಪ್ರಿಯಾಂಕ್ ಖರ್ಗೆ ನಾನು ಕದ್ದು ಹೋಗುವವನಲ್ಲ, ಪಲಾಯನ ಮಾಡಲ್ಲ ಎಂದು ಗುಡುಗಿದರು.
ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ ಅವರು; ರಿಸಾರ್ಟ್‌ನಲ್ಲಿ ಕುಳಿತು ಓಎಂಆರ್ ಶೀಟ್ ತಿದ್ದಿದ ಆ ಅಧಿಕಾರಿಯನ್ನು ಯಾಕೆ ದೆಹಲಿಯಿಂದ ದೇವನಹಳ್ಳಿ ರಿಸಾರ್ಟ್‌ಗೆ ಕರೆದುಕೊಂಡು ಬಂದು ಕೂರಿಸಿಕೊಂಡಿದ್ದೀರಿ. ಆಮೇಲೆ ಸಿಐಡಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದೀರಿ. 24 ಮಂದಿಗೆ ಕೆಲಸ ಕೊಟ್ಟಿದ್ದೀರಲ್ಲ, ಯಾರು ಯಾರು ಸಂಬಂಧಿಕರು ಎಂಬುದನ್ನು ಹೇಳಿ. ಸಂಬಂಧಿಕರಿಗೆ ಕೆಲಸ ಕೊಡಿಸಿದ್ದೀವಿ ಎಂದು ಹೇಳಿದ್ದೀರಿ, ಅದರ ಬಗ್ಗೆ ಇವರು ಹೇಳಬೇಕೆಲ್ಲವೇ? ನನ್ನ ಬಗ್ಗೆ ಮಾತನಾಡಬೇಕಾದರೆ ಸರಿಯಾಗಿ ಮಾಹಿತಿ ಪಡೆದು ಮಾತನಾಡಿ. ನೀವು ಗೃಹ ಸಚಿವರು ಇದ್ದೀರಿ. ನಿರುದ್ಯೋಗಿ ಯುವಕರ ಜೊತೆ ಚೆಲ್ಲಾಟ ಆಡಬೇಡಿ. ಅವರ ಹಿತವನ್ನು ಬಯಸಿ ಅಷ್ಟೇ ನಾನು ಮಾತನಾಡಿದ್ದೇನೆ. ನಿಮ್ಮ ಬಗ್ಗೆ ನನಗೆ ಯಾವ ರೀತಿಯ ಅಸೂಯೆಯೂ ಇಲ್ಲ ಎಂದು ಸಚಿವರು ಕೆಂಡ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜ್ಯೋತಿ ಗಣೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್.ಲಿಂಗಪ್ಪ ಮುಂತಾದರಾದ ಟಿ.ಆರ್.ನಾಗರಾಜ್, ಕೆ.ಟಿ.ಶಾಂತಕುಮಾರ್, ಕೃಷ್ಣಮೂರ್ತಿ ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಹಾಜರಿದ್ದರು.
ನೋಡೋಣ ಯಾರ ಗೂಟ ಇರುತ್ತೆ..?
ರಾಜ ರಾಜಕಾರಣಕ್ಕೆ ವಾಪಸ್ ಬರ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕುಮಾರಸ್ವಾಮಿ ಅವರು; ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ, ಅದು ಈಗಲ್ಲ, 2028ರ ಸಾರ್ವತ್ರಿಕ ಚುನಾವಣೆಗೆ ಬರುತ್ತೇನೆ. ವಿನೋದ್ ನಾನೇ ಮುಂದಿನ ಐದುವರೆ ವರ್ಷ ಗೂಟ ಹೊಡೆದುಕೊಂಡು ಇರುತ್ತೇನೆ ಅಂತಾರಲ್ಲ… ಆಗ ನೋಡೋಣ ಯಾರ ಗೂಟ ಇರುತ್ತೆ ಎಂದು ಟಾಂಗ್ ಕೊಟ್ಟರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
