nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗೌರಿ–ಗಣೇಶ ಮೂರ್ತಿ : ನಿಗದಿತ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಲು ಸೂಚನೆ

    September 1, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ಸಮಾಜಕ್ಕೆ ಬಸವಣ್ಣನವರ ವಚನಗಳು ದಾರಿದೀಪ: ಧಾರ್ಮಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಶರಣ ಎಂ.ಜಿ.ಸಿದ್ಧರಾಮಯ್ಯ

    September 1, 2026
    Facebook Twitter Instagram
    ಟ್ರೆಂಡಿಂಗ್
    • ಗೌರಿ–ಗಣೇಶ ಮೂರ್ತಿ : ನಿಗದಿತ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಲು ಸೂಚನೆ
    • ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ
    • ಸಮಾಜಕ್ಕೆ ಬಸವಣ್ಣನವರ ವಚನಗಳು ದಾರಿದೀಪ: ಧಾರ್ಮಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಶರಣ ಎಂ.ಜಿ.ಸಿದ್ಧರಾಮಯ್ಯ
    • ಈಚನೂರು ಕೆರೆಯ ಕಲುಷಿತ ನೀರು ಖಾಲಿ: 2 ನೇ ಹಂತದಲ್ಲಿ ತಿಪಟೂರು ಬರಪೀಡಿತ ಘೋಷಣೆ: ಶಾಸಕ ಕೆ.ಷಡಕ್ಷರಿ
    • ಕರಡಿಗಳ ಜಗಳ: ಬಂಡೆ ಮೇಲಿನಿಂದ ಬಿದ್ದ ಕರಡಿಯ ಕಾಲು ಮುರಿತ!
    • ಮನೆ ಬಾಗಿಲಿಗೆ ಆಡಳಿತ: ಸೆಪ್ಟೆಂಬರ್ 5 ರಿಂದ ರಾಜ್ಯಾದ್ಯಂತ ‘ಪ್ರಜಾಸೇವಾ ಅಭಿಯಾನ’ ಆರಂಭ
    • ರಾಮನಗರದಲ್ಲಿ ಭಾರೀ ಖೋಟಾ ನೋಟು ಜಾಲ ಪತ್ತೆ: ನಿರ್ಮಾಣ ಹಂತದ ಮನೆಯಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದ ಐವರು ವಶಕ್ಕೆ
    • ಕರಿಬೇವು ಇನ್ನು ಮುಂದೆ ಬಾಡಿಹೋಗಲ್ಲ; ಫ್ರೆಶ್ ಆಗಿ ದೀರ್ಘಕಾಲ ಇಡಲು ಸರಳ ಸಲಹೆಗಳು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈಚನೂರು ಕೆರೆಯ ಕಲುಷಿತ ನೀರು ಖಾಲಿ: 2 ನೇ ಹಂತದಲ್ಲಿ ತಿಪಟೂರು ಬರಪೀಡಿತ ಘೋಷಣೆ: ಶಾಸಕ ಕೆ.ಷಡಕ್ಷರಿ
    ತಿಪಟೂರು September 1, 2026

    ಈಚನೂರು ಕೆರೆಯ ಕಲುಷಿತ ನೀರು ಖಾಲಿ: 2 ನೇ ಹಂತದಲ್ಲಿ ತಿಪಟೂರು ಬರಪೀಡಿತ ಘೋಷಣೆ: ಶಾಸಕ ಕೆ.ಷಡಕ್ಷರಿ

    By Ganesh TumkuruSeptember 1, 2026No Comments2 Mins Read
    k shadakshari

    ತಿಪಟೂರು: ತಾಲೂಕನ್ನು ಎರಡನೇ ಹಂತದ ಪಟ್ಟಿಯಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ಅವರು ನಗರಸಭೆಯ ಶಾಸಕರ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯ ಹಳೆಯ ಕಲುಷಿತ ನೀರನ್ನು ಈ ವರ್ಷ ಸಂಪೂರ್ಣವಾಗಿ ಖಾಲಿ ಮಾಡಿದ್ದು, ಈ ವರ್ಷ ಕೆರೆಗೆ ಹೊಸದಾಗಿ ಹೇಮಾವತಿ ನೀರನ್ನು ಪಂಪ್ ಮಾಡಿ ನಗರಕ್ಕೆ ಸರಬರಾಜು ಮಾಡುತ್ತಿದ್ದೇವೆ. ಈ ವಿಚಾರವಾಗಿ ನಗರಸಭೆ ಪೌರಾಯುಕ್ತರು ಸಂಬಂಧಪಟ್ಟ ಇಲಾಖೆಯಲ್ಲಿ ನೀರಿನ ಪರೀಕ್ಷೆ ಮಾಡಿ, ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿ, ನೀರಿನ ಪರೀಕ್ಷಾ ಪ್ರಮಾಣ ಪತ್ರ ನೀಡಿದ ಮೇಲೆ ನೀರನ್ನು ಸರಬರಾಜು ಮಾಡುತ್ತಿದ್ದೇವೆ ಎಂದರು.

    ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವಾ ಅಭಿಯಾನವು ಇದೇ ತಿಂಗಳ 05 ರಂದು ಹೊನ್ನವಳ್ಳಿಯಲ್ಲಿ ಹೋಬಳಿ ಮಟ್ಟದಲ್ಲಿ ಚಾಲನೆ ನೀಡಲಾಗುವುದು. ಈ ಸೇವೆಯ ಪ್ರಮುಖ ಉದ್ದೇಶವಾದ ನಾಗರಿಕರಿಂದ ಸಮಸ್ಯೆಗಳ ಆಹವಾಲುಗಳನ್ನು ದೂರಿನ ಫಾರಂನಲ್ಲಿ ನಮೂದಿಸಿ, ಅರ್ಜಿಯನ್ನು ಸ್ವೀಕರಿಸಿ, ಪರಿಹಾರ ಒದಗಿಸಲು ತಾಲೂಕಿನ ಮೊದಲು ಹೋಬಳಿ ಮಟ್ಟ, ನಂತರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್, ತಾಪಂ ಇಒ ಸುದರ್ಶನ್, ಪೌರಾಯುಕ್ತ ವೀೇಶ್ವರ ಬಡರಗಡೆ, ಕೃಷಿ ಇಲಾಖೆಯ ಡಾ.ಪವನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಾಗೇಂದ್ರ, ಲೋಕೋಪಯೋಗಿ ಇಲಾಖೆಯ ನಟರಾಜು, ಬೆಸ್ಕಾಂ ಇಲಾಖೆ ಮನೋಹರ್, ಪಶು ಇಲಾಖೆಯ ನಂದೀಶ್, ತಾರಾಮಣಿ, ಜಲಪಾಕ್ಷಮ್ಮ ಮತ್ತು ರವಿಕುಮಾರ್ ಇದ್ದರು.

    ಕೇಂದ್ರ ಸರ್ಕಾರದ ಡ್ರಾಫ್ಟ್ ಮ್ಯಾನುಯಲ್ — 2026 ಪ್ರಕಾರ ಬರಪೀಡಿತ ತಾಲೂಕು ಎಂದು ಘೋಷಿಸಲು ಹಲವು ಟ್ರಿಗ್ಗರ್ ಪಾಯಿಂಟ್ಗಳು ಅವಶ್ಯಕತೆ ಇವೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆ ಅಗದಿರುವುದು ಮತ್ತು ಬಿತ್ತನೆಯ ಪ್ರಮಾಣ, ಬಿತ್ತಿದ ಬೆಳೆಗಳ ಸ್ಥಿತಿ, ಉಪಗ್ರಹ ಆಧಾರಿತ ಮಣ್ಣಿನ ತೇವಾಂಶದ ಮಾಹಿತಿ, ಅಂತರ್ಜಲದ ಪ್ರಮಾಣ, ಕೆರೆಕಟ್ಟೆಗಳಲ್ಲಿನ ನೀರಿನ ಪ್ರಮಾಣವನ್ನು ಪರಿಗಣಿಸಲಾಗುತ್ತದೆ. ಆ ನಿಟ್ಟಿನಲ್ಲಿ ಮೊದಲ ಪಟ್ಟಿಯಲ್ಲಿ ಬರಪೀಡಿತ ಎಂದು ಪರಿಗಣಿಸಿರುವುದಿಲ್ಲ. ಟ್ರಿಗ್ಗರ್–1 ಮತ್ತು ಟ್ರಿಗ್ಗರ್–2 ಆಧರಿಸಿ, ಗ್ರೌಂಡ್ ಟ್ರೂಟಿಂಗ್ (ಸ್ಥಳ ಸತ್ಯಪಣೆ) ಮಾಡಿ ಸದ್ಯದಲ್ಲಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ.

    — ಕೆ.ಷಡಕ್ಷರಿ, ಶಾಸಕರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತಿಪಟೂರು ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ: ರಾಜ್ಯ ಸರ್ಕಾರಕ್ಕೆ ರೈತ ಸಂಘದ ಎಚ್ಚರಿಕೆ

    August 29, 2026

    ನಾರಾಯಣ ದಾಸ್ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

    August 20, 2026

    ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಪೃಶ್ಯತೆ ಆಚರಣೆ ವಿರೋಧಿಸಿ ಛಲವಾದಿ ಮಹಾಸಭಾ ಪ್ರತಿಭಟನೆ

    August 19, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಗೌರಿ–ಗಣೇಶ ಮೂರ್ತಿ : ನಿಗದಿತ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಲು ಸೂಚನೆ

    September 1, 2026

    ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೌರಿ-ಗಣೇಶ ವಿಗ್ರಹಗಳನ್ನು ತಯಾರಿಸುವ / ಮಾರಾಟ ಮಾಡುವ ಮಾಲೀಕರು ನಿಗದಿತ ಸ್ಥಳಗಳಲ್ಲಿ ಮಾತ್ರ ಮಾರಾಟ…

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ಸಮಾಜಕ್ಕೆ ಬಸವಣ್ಣನವರ ವಚನಗಳು ದಾರಿದೀಪ: ಧಾರ್ಮಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಶರಣ ಎಂ.ಜಿ.ಸಿದ್ಧರಾಮಯ್ಯ

    September 1, 2026

    ಈಚನೂರು ಕೆರೆಯ ಕಲುಷಿತ ನೀರು ಖಾಲಿ: 2 ನೇ ಹಂತದಲ್ಲಿ ತಿಪಟೂರು ಬರಪೀಡಿತ ಘೋಷಣೆ: ಶಾಸಕ ಕೆ.ಷಡಕ್ಷರಿ

    September 1, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.