ತುಮಕೂರು: 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ವಚನಗಳು ಇಂದಿಗೂ ಪ್ರಸ್ತುತ, ಎಲ್ಲರೂ ಬಸವಣ್ಣನವರ ವಚನಗಳನ್ನು ಕಲಿಯಬೇಕು ಅದರ ಅರ್ಥ ತಾತ್ಪರ್ಯಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸಬೇಕು, ಧರ್ಮದ ಹಾದಿಯಲ್ಲಿ ಎಲ್ಲರೂ ನಡೆದಾಗ ಜೀವನ ಸಾರ್ಥಕವಾಗುತ್ತದೆ, ಮಕ್ಕಳಿಗೆ ಆಸ್ತಿ ಮಾಡುವ ತವಕದಲ್ಲಿ ಇಂದಿನ ತಂದೆ-ತಾಯಿಯರು ಇದ್ದಾರೆ ಅವರಿಗೆ ಆಸ್ತಿಗಿಂತ ಉತ್ತಮ ವಿದ್ಯೆ, ಸಂಸ್ಕಾರ ನೀಡುವ ಅಗತ್ಯವಿದೆ ಎಂದು ಶರಣ ಎಂ.ಜಿ.ಸಿದ್ಧರಾಮಯ್ಯ ಅವರು ತಿಳಿಸಿದರು.
ನಗರದ 31ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ ಆರ್.ಎಸ್.ವೀರಭದ್ರೇವರ ಮನೆಯಲ್ಲಿ ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ) ವತಿಯಿಂದ ಮನೆ-ಮನೆಗಳ ಧಾರ್ಮಿಕ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಶರಣರ ತತ್ವಗಳು ಮತ್ತು ವಚನಗಳ ಬಗ್ಗೆ ಮಾತನಾಡಿದ ಅವರು, ಗುರು-ಹಿರಿಯರಿಗೆ ಗೌರವ ನೀಡಬೇಕು, ವಚನಗಳಲ್ಲಿ ಇದನ್ನು ಅಣ್ಣ ಬಸವಣ್ಣನವರು ವಚನಗಳ ಮೂಲಕ ಬರೆದಿರುವುದು, ಭೂತ—ಭವಿಷ್ಯ–ವರ್ತಮಾನ ಕಾಲವನ್ನು, ಅನ್ನದಾಸೋಹವನ್ನು ನೀಡಿದ್ದು ಬಸವಣ್ಣ, ಮೊದಲ ಪಾರ್ಲಿಮೆಂಟ್ ಅನುಭವ ಮಂಟಪ, ಮಹಿಳೆಯರಿಗೆ ಸಮಾನಹಕ್ಕು ಸಮಾನ ಗೌರವ, ಸಮಾಜಕ್ಕೆ ಅಗತ್ಯವಾದ ಎಲ್ಲವನ್ನೂ ನೀಡಿತ್ತು ಬಸವಣ್ಣನವರು ಎಂದು ತಿಳಿಸಿದರು.
ರುದ್ರಮೂರ್ತಿ ಎಲೆರಾಮಪುರ ರವರು ಮಾತನಾಡಿ, ಶಿವಶರಣರಿಗೆ ಇಷ್ಟಲಿಂಗವನ್ನು ನೀಡಿ ಪಂಚಾಕ್ಷರಿ ಮಂತ್ರವೇ ಶ್ರೇಷ್ಠ ಎಂದು ತಿಳಿಸಿದವರು ಬಸವಣ್ಣನವರು, ವಿಭೂತಿ, ಲಿಂಗಧಾರಣೆ, ರುದ್ರಾಕ್ಷಿ, ಅಷ್ಟಾವರಣ ಬಗ್ಗೆ ತಿಳಿಸುತ್ತಾ ಮಹಿಳೆಯರ ಹಕ್ಕು ಮತ್ತು ಕಾನೂನುಗಳನ್ನು ಅಂದೇ ರೂಪಿಸಿದರು. ಬಸವಣ್ಣನವರು ಕಾಯಕವೇ ಕೈಲಾಸ ಎಲ್ಲಾ ಕೆಲಸಗಳು ಶ್ರೇಷ್ಠ, ಮಾನವೀಯತೆ ಮುಖ್ಯ, ಶಿವನ ಸ್ಮರಣೆ ಮುಖ್ಯ, ದುಡಿದು ತಿನ್ನುವವನು ಶ್ರೇಷ್ಠ ಎಂದು ಸಾರಿದರು ಎಂದರು.
ಮನೆಮನೆಗಳಲ್ಲಿ ಶಿವಗೋಷೋ ಮಾಡುತ್ತಿರುವುದು ಸಂತೋಷದ ವಿಚಾರ, ಎಲೆರಾಮಪುರ ರುದ್ರಮೂರ್ತಿರವರ ನೇತೃತ್ವದಲ್ಲಿ ಇದು ನಡೆಯುತ್ತಿದ್ದು ಸ್ಪರ್ಧಾಯುಗದಲ್ಲಿರುವ ಇಂದಿನ ಯುವಪೀಳಿಗೆಗೆ ಧರ್ಮ ಸಂಸ್ಕಾರವನ್ನು ನೀಡುವ ಅಗತ್ಯತೆ ಇದೆ, ಅಷ್ಟಾವರಣ, ಲಿಂಗ-ಜಂಗಮ, ವಿಭೂತಿ, ರುದ್ರಾಕ್ಷಿ ಇತ್ಯಾದಿಗಳ ಬಗ್ಗೆ ಯುವಕರಿಗೆ ತಿಳಿಸಬೇಕು ಅವರಿಗೆ ಉತ್ತಮ ಸಂಸ್ಕಾರ ನೀಡಿದರೆ ಬಲಿಷ್ಠ ಸಮಾಜವನ್ನು ಕಟ್ಟಬಹುದು.
— ಎಸ್.ಆರ್.ಶಿವಶಂಕರ್, ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಸಾವಿರಾರು ವಚನಗಳನ್ನು ಬರೆದು ನಮಗೆ ನೀಡಿದ್ದಾರೆ ಅವುಗಳ ಅಧ್ಯಯನ, ತಿಳುವಳಿಕೆ ಇಂದು ಬಹಳ ಮುಖ್ಯ ಮುಂದಿನ ಪೀಳಿಗೆಗೆ ವಚನಗಳ ಸಾರವನ್ನು ತಿಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಆರ್.ಮಂಜುಳಾ, ಆರ್.ಎಸ್.ವೀರಭದ್ರೇವರು, ಹೆಚ್.ಎಂ.ಟಿ.ಕುಮಾರಸ್ವಾಮಿ, ಸೌಭಾಗ್ಯ, ಪ್ರೇಮಾರಾಧ್ಯ, ಮಂಜಣ್ಣ, ಶಾಂತರಾಜು, ಮೋಹನ್ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
