nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    September 16, 2026

    ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    September 16, 2026

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026
    Facebook Twitter Instagram
    ಟ್ರೆಂಡಿಂಗ್
    • ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್
    • ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
    • ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ
    • ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
    • ಕರ್ನಾಟಕದಲ್ಲಿ ಮಳೆ ಕೊರತೆ ಎಫೆಕ್ಟ್​: ಮತ್ತೆ ಅಕ್ಕಿ ದರ ಏರಿಕೆ ಶಾಕ್
    • ಬಿಗ್‌ ಬಾಸ್ ಕನ್ನಡ 13:  ದೊಡ್ಮನೆಯಿಂದ  ಓಂ ಪ್ರಕಾಶ್‌ ರಾವ್ ಹೊರಕ್ಕೆ | ಅಸಲಿ ಕಾರಣ ಏನು?
    • ಮಳೆ ಕೊರತೆ ವಿಚಾರವನ್ನು ರಾಜಕೀಯಗೊಳಿಸಬೇಡಿ; ರೈತರ ನೆರವಿಗೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್
    • ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ದೇಶದ ಭದ್ರತೆಗೆ ಅಡಿಪಾಯ: ಡಿಸಿಎಂ ಡಾ. ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್
    ತುಮಕೂರು September 16, 2026

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    By Ganesh TumkuruSeptember 16, 2026No Comments2 Mins Read
    dr g parameshwar tumakuru

    ತುಮಕೂರು: ದೇಶದ, ಸಮಾಜದ ಬೆಳವಣಿಗೆಗೆ ನಿರ್ಮಾತೃಗಳಾಗಿ ಎಂಜಿನಿಯರ್‌ ಗಳು ಇಂಜಿನಿಯರ್‌ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಸರ್ಕಾರಗಳು ಬದಲಾಗುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

    ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ, ತುಮಕೂರು ಜಿಲ್ಲಾ ಸರ್ಕಾರಿ ಇಂಜಿನಿಯರ್‌ ಗಳ ಸಂಘದ ಉದ್ಘಾಟನೆ ಹಾಗೂ ಸಂಘದ ಲಾಂಛನ ಅನಾವರಣ ಮಾಡಿ ಮಾತನಾಡಿದರು.

    ಉತ್ತರ ಕರ್ನಾಟಕ ಭಾಗರ್ಭಿ ಮೈಸೂರು ಕರ್ನಾಟಕ ಅಭಿವೃದ್ಧಿಯಾಗಿರುವುದಕ್ಕೆ ಮೈಸೂರು ಸಂಸ್ಥಾನದ ಗಾಲಿಗೆ ಕೃಷ್ಣರಾಜ ಒಡೆಯರ್ ಹಾಗೂ ಅವರ ಆಡಳಿತದಲ್ಲಿ ಇಂಜಿನಿಯರ್, ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಅಭಿವೃದ್ಧಿ ಚಿಂತನೆ, ಅವರು ಮಾಡಿದ ಕೆಲಸ ಕಾರಣ. ವಿಶ್ವೇಶ್ವರಯ್ಯನವರು ನಾಡಿನ ಅಭಿವೃದ್ಧಿ ಆಗಬೇಕು ಎಂದುಕೊಂಡು ಕಾರ್ಯನಿರ್ವಹಿಸಿದರು, ಕಾರ್ಯ ವ್ಯಾಪ್ತಿಯಲ್ಲಿ ಸ್ವಾರ್ಥಬರಬಾರದು ಎಂಬ ತತ್ವ, ಆದರ್ಶಗಳನ್ನು ಇಟ್ಟುಕೊಂಡಿದ್ದರು. ತಮ್ಮ ಜೀವನಪೂರ್ತಿ ಅದೇ ತತ್ವಡಡಿಯಲ್ಲಿ ಕಾರ್ಯನಿರ್ವಹಿಸಿದರು ಎಂದು ನುಡಿದರು.

    ಎಲ್ಲಾ ಇಂಜಿನಿಯರ್‌ ಗಳು ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೆಲಸ ಮಾಡಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಬರಬಹುದು, ಬದಲಾಗಬಹುದು, ಆದರೆ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕಾದವರು ಇಂಜಿನಿಯರ್‌ ಗಳು, ಸರ್ಕಾರದ ಮಟ್ಟದಲ್ಲಿ ನಿಯಮ ರೂಪಿಸುವಾಗ ದೋಷ ಕಂಡುಬಂದರೆ, ಇಂಜಿನಿಯರ್‌ ಗಳು ಸಂಘಗಳು ಚರ್ಚೆ ಮಾಡಿ ಸರಿಯಾದ ಸಲಹೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು ಡಾ.ಜಿ. ಪರಮೇಶ್ವರ್ ಹೇಳಿದರು.

    ಬದಲಾಗುತ್ತಿರುವ ತಂತ್ರಜ್ಞಾನದ ಜೊತೆ ನಾವು ಪ್ರಯಾಣ ಮಾಡಬೇಕು. ಇಂದು ಎಲ್ಲಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅದರ ವೇಗಕ್ಕೆ ಹೊಂದಿಕೊಳ್ಳಬೇಕು. ತಂತ್ರಜ್ಞಾನ ಮತ್ತು ಸುಧಾರಣೆಗೆ ಆಗಬೇಕು. ಸರ್ಕಾರದಿಂದ ಎಂ. ವಿಶ್ವೇಶ್ವರಯ್ಯ ಸ್ಥಾನದ ಸಾಹಸ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದ ಡಾ. ಪರಮೇಶ್ವರ್, ಮುಂದಿನ ಮಾದಿನಿಂದ ಸರ್ಕಾರದಂದೇ ಇಂಜಿನಿಯರ್ ದಿನ ಆಚರಿಸಲಾಗುವುದು ಎಂದು ಹೇಳಿದರು.

    ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ ಎಲ್ಲಾ ಕ್ಷೇತ್ರದ ಇಂಜಿನಿಯರ್‌ ಗಳ ಪಾತ್ರ ದೊಡ್ಡದಿದೆ. ಹೊಸ ಆವಿಷ್ಕಾರ, ಮೂಲಸೌಕರ್ಯ ಒದಗಿಸುವಲ್ಲಿ ಇಂಜಿನಿಯರ್‌ ಗಳು ಕೊಡುಗೆ ನೀಡಿದ್ದಾರೆ. ಆದರೆ, ಕೆಲವು ಪರಿಸ್ಥಿತಿಯಲ್ಲಿ ಇಂಜಿನಿಯರ್‌ ಗಳು ವಿವಿಧ ರೀತಿಯ ಒತ್ತಡದಲಿ ಕೆಲಸ ಮಾಡಬೇಕಾಗಿದೆ. ಆದರೂ ಇಂಜಿನಿಯರ್‌ ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡುವ ಪ್ರಯತ್ನ ಮಾಡಿ ಎಂದು ಹೇಳಿದರು.

    ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಆಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ನಗರಾಡಳಿತದ ಆಯುಕ್ತ ಸುಧಾ, ಬಿವಿಂಟಿಸಿ ಉಪಾಧ್ಯಕ್ಷ ನಿಕಿತ್ ರಾಜ್ ಮೌರ್ಯ,  ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಸರ್ಕಾರದ ಕಾರ್ಯದರ್ಶಿಗಳ ನಿವೃತ್ತರಾಗಿರುವ ರಾಘವನ್, ಪ್ರಧಾನ ಇಂಜಿನಿಯರ್‌ಗಳಾದ ಬಿ.ಆರ್. ವೀರಭದ್ರಯ್ಯ, ಟಿ.ಎನ್. ಧನರಾಜ್, ಹೆಚ್.ಟಿ. ದಿವಾಕರ್ ನಾಯ್ಕ್, ನಿವೃತ್ತ ಮುಖ್ಯ ಇಂಜಿನಿಯರ್ ಹೆಚ್. ಶಿವಕುಮಾರ್, ಮುಖ್ಯ ಇಂಜಿನಿಯರ್ ಹೆಚ್.ಎಸ್. ಆನಂದ್, ಅಧೀಕ್ಷಕ ಇಂಜಿನಿಯರ್‌ ಗಳ ಜಿ.ಸಿ. ಜಗದೀಶ್, ಬಿ. ತಿಮ್ಮರಾಯಪ್ಪ ಭಾಗವಹಿಸಿದ್ದರು.

    ಜಿಲ್ಲಾ ಸರ್ಕಾರಿ ಇಂಜಿನಿಯರ್‌ ಗಳ ಸಂಘದ ಅಧ್ಯಕ್ಷ ಹೆಚ್.ಆರ್. ಮುರಳೀಧರ, ಉಪಾಧ್ಯಕ್ಷ ಜೆ.ರಾಜು, ಕಾರ್ಯದರ್ಶಿ ಹೆಚ್.ಎಂ.ಪುಟ್ಟಪ್ಪ, ಖಜಾಂಚಿ ಹೆಚ್.ಎಸ್. ಪ್ರಸನ್ನಕುಮಾರ್, ನಿರ್ದೇಶಕರಾದ ಅಂಜನ್, ಕೆ. ಮಂಜುಕುಮಾರ ಯಾದವ್, ಎಸ್. ಛಾಯಾಮಣಿ, ಜಿ.ಎಸ್. ರಾಧಾಕೃಷ್ಣ, ಬಿ.ಎಸ್. ಸುರೇಶ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026

    ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ

    September 16, 2026

    ದೊಡ್ಡಗೊಲ್ಲರಹಟ್ಟಿಯಲ್ಲಿ ಶುದ್ಧ ನೀರಿನ ಘಟಕ ಸ್ಥಗಿತ:  ಜನರ ಪರದಾಟ

    September 14, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಇಂಜಿನಿಯರ್‌ ಗಳು ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಿ: ವಿಶ್ವೇಶ್ವರಯ್ಯ ಜನ್ಮದಿನಾಚರಣೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್

    September 16, 2026

    ತುಮಕೂರು: ದೇಶದ, ಸಮಾಜದ ಬೆಳವಣಿಗೆಗೆ ನಿರ್ಮಾತೃಗಳಾಗಿ ಎಂಜಿನಿಯರ್‌ ಗಳು ಇಂಜಿನಿಯರ್‌ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡಬೇಕು. ಸರ್ಕಾರಗಳು ಬದಲಾಗುವ ವ್ಯವಸ್ಥೆಯನ್ನು…

    ಕುಣಿಗಲ್: ಗೊಂದಲದ ಗೂಡಾದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

    September 16, 2026

    ತುಮಕೂರು: ಸೆ.21 ರಿಂದ ಪಿಡಿಒಗಳಿಂದ ಅಸಹಕಾರ ಚಳುವಳಿ

    September 16, 2026

    ವೈಭವಪೂರ್ಣವಾಗಿ ಆಚರಿಸಲಾಗುವುದು: ದಸರಾ ಉತ್ಸವ 2026 ಲಾಂಛನ ಬಿಡುಗಡೆ ಮಾಡಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ

    September 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.