ಮಧುಗಿರಿ: ಬುಡುಬುಡಿಕೆ ವೇಷದಲ್ಲಿ ಬಂದು ವಂಚಿಸಿ ಬಂಗಾರದ ಒಡವೆಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಮುಖ್ಯ ಪೇದೆ ವೆಂಕಟೇಶ್ ಪೇದೆಗಳಾದ ಮೋಹನ್, ರಂಗರಾಜು, ಪ್ರತಾಪ್ ಕುಮಾರ್, ವಿಜಯ್, ರಜಿತ್ ಭಾಗವಹಿಸಿದ್ದರು.
ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಮಂಜಯ್ಯ ಹಾಗೂ ಕೃಷ್ಣ ಎಂಬುವವರನ್ನು ಬಂಧಿಸಿದ್ದು ಎರಡು ಪ್ರತ್ಯೇಕ ಪ್ರಕರಣಗಳಲ್ಲಿನ ಒಟ್ಟು 40 ಗ್ರಾಂ. ಚಿನ್ನಾಭರಣವನ್ನು ಇವರಿಂದ ವಶ ಪಡಿಸಿಕೊಂಡಿದ್ದಾರೆ.
ಇತ್ತೀಚಿಗೆ ಕೆಲವರು ಬುಡುಬುಡಿಕೆ ವೇಷದಲ್ಲಿ ಬಂದು ಟೆಂಟ್ ಗಳನ್ನು ಹಾಕಿಕೊಂಡು ಅಮಾಯಕ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ನಿಮ್ಮ ಕಷ್ಟಗಳನ್ನು ದೂರ ಮಾಡುತ್ತೇವೆಂದು ನಂಬಿಸಿ ನಿಮ್ಮಲ್ಲಿರುವ ಬಂಗಾರವನ್ನು ಪೂಜೆ ಮಾಡಿಕೊಡುತ್ತೇವೆಂದು ಯಾಮಾರಿಸಿ ವಂಚಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿದೆ.
ಇಂತಹ ಯಾವುದೇ ಆಸೆ ಅಮಿಶಗಳಿಗೆ ಬಲಿಯಾಗದೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಇಂತಹ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪಿಎಸ್ ಐ ಎಂ.ಎಸ್.ಚಂದ್ರಶೇಖರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
