ತುಮಕೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದ ನೋಂದಾಯಿತ ಜೈನ ಬಸದಿಗಳ ಅರ್ಚಕರು, ಬೌದ್ಧ ವಿಹಾರಗಳ ಧಮ್ಮಚಾರಿ ಮತ್ತು ಸಿಖ್ ಗುರುದ್ವಾರಗಳ ಗ್ರಂಥಿಗಳಿಗೆ ಮಾಸಿಕ ಗೌರವಧನ ನೀಡಲು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ನೋಂದಾಯಿತ ಬಸದಿ, ವಿಹಾರ ಮತ್ತು ಗುರುದ್ವಾರಗಳ ಅರ್ಚಕರು, ಧಮ್ಮ ಚಾರಿಗಳು ಮತ್ತು ಗ್ರಂಥಿಗಳನ್ನು ಆಯಾ ಸಂಸ್ಥೆಯ ಆಡಳಿತ ಮಂಡಳಿಯು ಆಯ್ಕೆ ಮಾಡಿರಬೇಕು. ಅರ್ಚಕರು ಜೈನ, ಧಮ್ಮ ಚಾರಿಗಳು ಬೌದ್ಧ ಮತ್ತು ಗ್ರಂಥಿಗಳು ಸಿಖ್ ಧರ್ಮಕ್ಕೆ ಸೇರಿದವರಾಗಿದ್ದು, ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ಕನಿಷ್ಠ 18 ವರ್ಷ ವಯಸ್ಸಿನವರಾಗಿದ್ದು, ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಕುಟುಂಬದ ಆದಾಯವು 5 ಲಕ್ಷ ರೂ.ಗಳನ್ನು ಮೀರಿರಬಾರದು. ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಆಗಿರುವುದನ್ನು ಹಾಗೂ ಫೋಟೊ ಐಡಿ ಮ್ಯಾಪಿಂಗ್ ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಯೋಜನೆಯ ಅರ್ಹತಾ ಶರತ್ತುಗಳು ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ.
ಆಸಕ್ತ ಅರ್ಚಕರು, ಧಮ್ಮ ಚಾರಿಗಳು ಮತ್ತು ಗ್ರಂಥಿಗಳು ತಮ್ಮ ಭೌತಿಕ (ಲಿಖಿತ) ಅರ್ಜಿಯನ್ನು ಇಲಾಖೆಯ ಜಿಲ್ಲಾ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
