nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ

    October 2, 2026

    ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ 0.75 ಟಿಎಂಸಿ ನೀರು ಮಂಜೂರು ಮಾಡಿಸಿದ್ದೇನೆ — ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ

    October 2, 2026

    ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ

    October 2, 2026
    Facebook Twitter Instagram
    ಟ್ರೆಂಡಿಂಗ್
    • ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ
    • ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ 0.75 ಟಿಎಂಸಿ ನೀರು ಮಂಜೂರು ಮಾಡಿಸಿದ್ದೇನೆ — ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ
    • ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ
    • ಅಧಿಕಾರಿಗಳಾದವರು ಪರಿಷತ್‌ ಗೆ ಸ್ಪರ್ಧಿಸಬಾರದೆಂದೇನಿಲ್ಲ: ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ. ಸೋಮಶೇಖರ್
    • ಚಿನ್ನದ ಕರಡಿಗೆ, ನೈಸ್ ರಸ್ತೆ ಜಮೀನು ವಿವಾದ: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಸ್ಪಷ್ಟನೆ!
    • ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿ ಪ್ರಕಟ
    • ಸಿಂಹಾದ್ರಿ ಕುಟುಂಬಕ್ಕೆ ಕೆ.ಎನ್.ಆರ್ ಸಾಂತ್ವನ: ತಾಯಿಗೆ ಉದ್ಯೋಗ, ಮನೆ ಕಟ್ಟಿಸಿಕೊಡುವ ಭರವಸೆ
    • ಚಿನ್ನದ ಕರಡಿಗೆ ಹೇಳಿಕೆ: ಅಶೋಕ್ ಖೇಣಿ ವಿರುದ್ಧ ದೂರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಧಿಕಾರಿಗಳಾದವರು ಪರಿಷತ್‌ ಗೆ ಸ್ಪರ್ಧಿಸಬಾರದೆಂದೇನಿಲ್ಲ: ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ. ಸೋಮಶೇಖರ್
    ತುಮಕೂರು October 2, 2026

    ಅಧಿಕಾರಿಗಳಾದವರು ಪರಿಷತ್‌ ಗೆ ಸ್ಪರ್ಧಿಸಬಾರದೆಂದೇನಿಲ್ಲ: ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ. ಸೋಮಶೇಖರ್

    By Ganesh TumkuruOctober 2, 2026No Comments2 Mins Read
    somashekhar

    ತುಮಕೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಅಧಿಕಾರಿಗಳಾದವರು ಸ್ಪರ್ಧಿಸಬಾರದು ಅಥವಾ ಪರಿಷತ್ತಿನ ಆಡಳಿತ ಹಿಡಿಯಬಾರದೆಂದು ಯಾವುದೇ ನಿಯಮವಿಲ್ಲ. ಸಾಹಿತ್ಯ ಹಿನ್ನೆಲೆ ಮತ್ತು ಸಂವೇದನೆ ಇರುವ ಅಧಿಕಾರಿಗಳು ಪರಿಷತ್‌ ಗೆ ಅನರ್ಹರಾಗಬೇಕಿಲ್ಲ ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಹಿತಿ ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

    ತುಮಕೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಪರಿಷತ್ ಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ಆಡಳಿತಗಾರರು ಪರಿಷತ್ತಿನ ಚುಕ್ಕಾಣಿ ಹಿಡಿದು ಭದ್ರ ಬುನಾದಿ ಹಾಕಿದ್ದರು ಎಂಬುದನ್ನು ಸ್ಮರಿಸಿದರು.

    ಮುಂದುವರಿದು ಮಾತನಾಡಿದ ಅವರು, ಖ್ಯಾತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನಾರಾಮರಾಯರು, ಡಾ. ಎಚ್.ಎಲ್. ನಾಗೇಗೌಡ, ಸಿದ್ದಯ್ಯ ಪುರಾಣಿಕರಂತಹ ಮಹನೀಯರು ವಿವಿಧ ಸಾಹಿತ್ಯ ಸಂಘ–ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ್ದು, ಅಂತಹವರ ಸಾಲಿನಲ್ಲಿ ತಾವೂ ಗುರುತಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

    ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಇಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ಜನರು ತಮ್ಮನ್ನು ‘ಸಾಂಸ್ಕೃತಿಕ ರಾಯಭಾರಿ’ಯಾಗಿ ಗುರುತಿಸಿರುವುದಾಗಿ ತಿಳಿಸಿದರು. ತಾವು ಬಾಲ್ಯದಿಂದಲೂ ಕನ್ನಡಾಭಿಮಾನಿಯಾಗಿದ್ದು, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು ಆಯ್ಕೆಯಾದ ಮೊದಲ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೆಮ್ಮೆಯಿಂದ ನುಡಿದರು. ಸಿದ್ಧಗಂಗಾ ಶ್ರೀಗಳ ಸಲಹೆಯಂತೆ ರಾಜ್ಯ ಸೇವೆಯಲ್ಲಿ ಉಳಿದು ನಾಡು–ನುಡಿಯ ಸೇವೆ ಮಾಡಿರುವುದಾಗಿ ತಿಳಿಸಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿದರೆ ಕಸಾಪವನ್ನು ಕನ್ನಡಿಗರ ಸ್ವಾಭಿಮಾನದ ಗೌರವ ಸಂಸ್ಥೆಯಾಗಿ ರೂಪಿಸುವುದರ ಜೊತೆಗೆ ಎಲ್ಲಾ ಸಾಹಿತ್ಯ ಪ್ರಕಾರಗಳ ಸಂಭ್ರಮದ ನೆಲೆಯಾಗಿ ಬೆಳೆಸುವುದಾಗಿ ಭರವಸೆ ನೀಡಿದರು.

    ಹಿರಿಯ ಕಲಾವಿದ ಡಾ. ಲಕ್ಷ್ಮಣದಾಸ್ ಮಾತನಾಡಿ, ಆಪತ್ಬಾಂಧವ ಅಧಿಕಾರಿಯಾಗಿದ್ದ ಸೋಮಶೇಖರ್ ಅವರನ್ನು ಜಿಲ್ಲೆಯ ಕಸಾಪ ಸದಸ್ಯರು ಬೆಂಬಲಿಸಬೇಕೆಂದು ಕೋರಿದರು.

    ಹಿರಿಯ ಸಾಹಿತಿ ಎಸ್.ಪಿ. ಪದಪ್ರಸಾದ್ ಅವರು ಸೋಮಶೇಖರ್ ಅವರು ಪರಿಷತ್‌ ಗೆ ಆಯ್ಕೆಯಾದರೆ ಕನ್ನಡ ಸಾಹಿತ್ಯ ನಿತ್ಯ ಸಂಭ್ರಮವಾಗಲಿದೆ ಎಂದರು.

    ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ತುಮಕೂರಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ತರಬೇತಿದಾರರಾಗಿದ್ದ ಸೋಮಶೇಖರ್ ಅವರೇ ಅಧ್ಯಕ್ಷರಾದರೆ ಕೆಲಸಗಳು ಸುಲಲಿತವಾಗಲಿವೆ ಎಂದು ಅಭಿಪ್ರಾಯಪಟ್ಟರು.

    ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್, ರಾಕ್‌ ಲೈನ್ ರವಿಕುಮಾರ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ನರಸಿಂಹರಾಜು, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ, ಕಸಾಪ ಮಾಜಿ ಗೌರವ ಕಾರ್ಯದರ್ಶಿ ಪ್ರಿ. ಟಿ.ಆರ್. ಲೀಲಾವತಿ ಹಾಗೂ ಕಂಟಲಗೇರಿ ಸಣ್ಣಯೊಣ್ಣಯ್ಯ ಮುಂತಾದವರು ಸೋಮಶೇಖರ್ ಅವರ ಕನ್ನಡಪರ ಚಿಂತನೆಗಳನ್ನು ಶ್ಲಾಘಿಸಿ, ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಘೋಷಿಸಿದರು. ಸುದ್ದಿಗೋಷ್ಠಿಯ ಬಳಿಕ ನಡೆದ ಹಿತೈಶಿಗಳ ಸಭೆಯಲ್ಲಿ ಜಿಲ್ಲೆಯ ಹಲವು ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ

    October 2, 2026

    ಚಿನ್ನದ ಕರಡಿಗೆ, ನೈಸ್ ರಸ್ತೆ ಜಮೀನು ವಿವಾದ: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಸ್ಪಷ್ಟನೆ!

    October 2, 2026

    ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣಾ ವೇಳಾಪಟ್ಟಿ ಪ್ರಕಟ

    October 1, 2026

    Leave A Reply Cancel Reply

    Our Picks

    ಇಂದಿನಿಂದ ವಾಣಿಜ್ಯ ಎಲ್‌ ಪಿಜಿ ಸಿಲಿಂಡರ್, ವಿಮಾನ ಇಂಧನ (ATF) ದರ ಏರಿಕೆ

    October 1, 2026

    ವೈನ್‌ ಶಾಪ್‌ ಗೆ ನುಗ್ಗಿ ಕಂಠಪೂರ್ತಿ ಮದ್ಯ ಕುಡಿದು ಅಲ್ಲೇ ನಿದ್ರೆಗೆ ಜಾರಿದ ಕೋತಿ!

    September 27, 2026

    ಕಾವೇರಿ ಜಲ ವಿವಾದ: CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚನೆ

    September 24, 2026

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಾಸಿಕ ಗೌರವಧನ: ಆನ್ ಲೈನ್  ಅರ್ಜಿ ಆಹ್ವಾನ

    October 2, 2026

    ತುಮಕೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದ ನೋಂದಾಯಿತ ಜೈನ ಬಸದಿಗಳ ಅರ್ಚಕರು, ಬೌದ್ಧ ವಿಹಾರಗಳ ಧಮ್ಮಚಾರಿ ಮತ್ತು ಸಿಖ್…

    ಚಿಕ್ಕನಾಯಕನಹಳ್ಳಿ: ಎತ್ತಿನಹೊಳೆ ಯೋಜನೆಯಿಂದ ತಾಲೂಕಿಗೆ 0.75 ಟಿಎಂಸಿ ನೀರು ಮಂಜೂರು ಮಾಡಿಸಿದ್ದೇನೆ — ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ

    October 2, 2026

    ಸಿಂಹಾದ್ರಿ ಹತ್ಯೆ ಪ್ರಕರಣ:  ದಲಿತ ಸಂಘಟನೆ ಮುಖಂಡರಿಂದ ಕುಟುಂಬಸ್ಥರ ಭೇಟಿ: ನ್ಯಾಯಕ್ಕಾಗಿ ಆಗ್ರಹ

    October 2, 2026

    ಅಧಿಕಾರಿಗಳಾದವರು ಪರಿಷತ್‌ ಗೆ ಸ್ಪರ್ಧಿಸಬಾರದೆಂದೇನಿಲ್ಲ: ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಸಿ. ಸೋಮಶೇಖರ್

    October 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.