nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮನೆ, ನಿವೇಶನಗಳಿಗೆ ಅಧಿಕೃತ ಆಸ್ತಿ ಹಕ್ಕು: ಸಾರ್ವಜನಿಕರು ‘ಭೂ ಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು ಪಡೆಯಲು ಇಒ ಕಿರಣ ಪಾಟೀಲ್ ಕರೆ

    November 22, 2026

    ವಿದ್ಯುತ್ ಅವಘಡಕ್ಕೆ ರೈತನ ತೋಟವೇ ಬಲಿ; 60ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗಾಹುತಿ!

    November 22, 2026

    ಗ್ರಾಮಠಾಣಾ ಆಸ್ತಿಗಳಿಗೆ ಇ–ಸ್ವತ್ತು ಖಾತಾ ಮಾಡಿಸಿಕೊಳ್ಳಿ: ಶಿವಕುಮಾರ ಘಾಟೆ

    November 22, 2026
    Facebook Twitter Instagram
    ಟ್ರೆಂಡಿಂಗ್
    • ಮನೆ, ನಿವೇಶನಗಳಿಗೆ ಅಧಿಕೃತ ಆಸ್ತಿ ಹಕ್ಕು: ಸಾರ್ವಜನಿಕರು ‘ಭೂ ಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು ಪಡೆಯಲು ಇಒ ಕಿರಣ ಪಾಟೀಲ್ ಕರೆ
    • ವಿದ್ಯುತ್ ಅವಘಡಕ್ಕೆ ರೈತನ ತೋಟವೇ ಬಲಿ; 60ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗಾಹುತಿ!
    • ಗ್ರಾಮಠಾಣಾ ಆಸ್ತಿಗಳಿಗೆ ಇ–ಸ್ವತ್ತು ಖಾತಾ ಮಾಡಿಸಿಕೊಳ್ಳಿ: ಶಿವಕುಮಾರ ಘಾಟೆ
    • ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 
    • ನ್ಯಾಯಕ್ಕಾಗಿ ತಹಶೀಲ್ದಾರ್ ಕಚೇರಿ ಮುಂದೆ ರಾತ್ರಿ ಕಳೆದ ನಾಗರಾಜಪ್ಪನಿಗೆ ದಾಖಲೆಗಳ ಶಾಕ್! | ತಹಶೀಲ್ದಾರ್ ನಂದಿನಿ ದಾಖಲೆಗಳ ಸಮೇತ ಸ್ಪಷ್ಟನೆ
    • ವಿಶೇಷ ಸಂಪಾದಕೀಯ: ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಡ ಹೊರಗುತ್ತಿಗೆ ನೌಕರರ ಬಲಿ! ಆಹಾರ ನಿಗಮದ ಅಮಾನವೀಯ ಸುತ್ತೋಲೆ
    • ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?
    • ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 33 ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವಿದ್ಯುತ್ ಅವಘಡಕ್ಕೆ ರೈತನ ತೋಟವೇ ಬಲಿ; 60ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗಾಹುತಿ!
    ಪಾವಗಡ November 22, 2026

    ವಿದ್ಯುತ್ ಅವಘಡಕ್ಕೆ ರೈತನ ತೋಟವೇ ಬಲಿ; 60ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗಾಹುತಿ!

    By Ganesh TumkuruNovember 22, 2026No Comments2 Mins Read
    fire

    ಪಾವಗಡ : ತಾಲ್ಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಮಜರೆ ಹನುಮಸಾಗರ ಗ್ರಾಮದ ಸಮೀಪ ಶನಿವಾರ ಮಧ್ಯಾಹ್ನ ಸುಮಾರು 1.30ರ ವೇಳೆಯಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ರೈತನ ತೋಟಕ್ಕೆ ಬೆಂಕಿ ತಗುಲಿ, 60ಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಹಲವು ಬೆಲೆಬಾಳುವ ಮರಗಿಡಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

    ತೋಟದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗದ ಡಬಲ್ ಪೋಲ್ ಸ್ಟ್ರಕ್ಚರ್‌ ನಲ್ಲಿರುವ ಜಿಒಎಸ್ (GOS) ಸ್ವಿಚ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದೇ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆಗೆ ತೋಟದಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ತೆಂಗಿನ ಮರಗಳು, ಹಲಸು, ಶ್ರೀಗಂಧ, ಮಹಾಗಣಿ ಸೇರಿದಂತೆ ಹಲವು ಮರಗಿಡಗಳು ಸುಟ್ಟು ನಾಶವಾಗಿವೆ. ಅಲ್ಲದೆ, ನೀರಾವರಿಗೆ ಅಳವಡಿಸಿದ್ದ ಲ್ಯಾಟರಲ್ ಪೈಪ್ ಕೂಡ ಬೆಂಕಿಗೆ ಆಹುತಿಯಾಗಿದ್ದು, ರೈತ ಚಿಕ್ಕರಂಗಪ್ಪ ಅವರಿಗೆ ಅಪಾರ ಆರ್ಥಿಕ ನಷ್ಟ ಸಂಭವಿಸಿದೆ.

    ಈ ಕುರಿತು ಮಾತನಾಡಿದ ರೈತ ಚಿಕ್ಕರಂಗಪ್ಪ, ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ ತೆಂಗಿನ ಮರಗಳು ಹಾಗೂ ಬೆಲೆಬಾಳುವ ಗಿಡಮರಗಳು ವಿದ್ಯುತ್ ಅವಘಡದಿಂದ ನಾಶವಾಗಿವೆ. ತೋಟದ ಪಕ್ಕದಲ್ಲೇ ವಿದ್ಯುತ್ ಮಾರ್ಗ ಹಾದುಹೋಗಿರುವುದರಿಂದ ಇಂತಹ ಅನಾಹುತ ಸಂಭವಿಸಿದೆ. ಈಗಾಗಲೇ ಬೆಳೆಸಿದ್ದ ಮರಗಿಡಗಳ ನಷ್ಟದ ಜೊತೆಗೆ ನೀರಾವರಿ ಪೈಪ್ ಕೂಡ ಸುಟ್ಟುಹೋಗಿದ್ದು, ಜೀವನಾಧಾರವಾಗಿದ್ದ ತೋಟಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ನೋವು ತೋಡಿಕೊಂಡರು.

    ಅಧಿಕಾರಿಗಳಿಗೆ ರೈತನ ಆಗ್ರಹ:

    ಬೆಸ್ಕಾಂ ಇಲಾಖೆಯ ಜೆ.ಇ. ಚೌಡಪ್ಪ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತೋಟದ ಪಕ್ಕದಲ್ಲಿರುವ ಅಪಾಯಕಾರಿ ವಿದ್ಯುತ್ ಮಾರ್ಗವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಬೆಂಕಿಯಿಂದ ನಾಶವಾಗಿರುವ ಮರಗಿಡಗಳು ಹಾಗೂ ಲ್ಯಾಟರಲ್ ಪೈಪ್‌ ಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ವಿದ್ಯುತ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಚಿಕ್ಕರಂಗಪ್ಪ ಒತ್ತಾಯಿಸಿದ್ದಾರೆ.

    ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಇಂತಹ ಅವಘಡ ಸಂಭವಿಸಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ನಷ್ಟ ಅನುಭವಿಸಿರುವ ರೈತನಿಗೆ ನ್ಯಾಯಯುತ ಪರಿಹಾರ ಒದಗಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಸಿಜೇರಿಯನ್ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವು | ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ

    November 20, 2026

    ಶಿಕ್ಷಕರ ಸೇವೆಗೆ ಕೃತಜ್ಞತೆಯ ನಮನ; ಕುರುಬರಹಳ್ಳಿಯಲ್ಲಿ ಅದ್ಧೂರಿ ಗುರುವಂದನಾ ಸಂಭ್ರಮ, ಗುರುಗಳಿಗೆ ಗೌರವ ಸಮರ್ಪಣೆ

    November 17, 2026

    ನವೆಂಬರ್ 15: ಮಧುಗಿರಿಯ ಸಿದ್ದಾಪುರದಲ್ಲಿ ಮಹಿಳೆಯರಿಂದ ‘ಸಂಕ್ಷಿಪ್ತ ಮಹಾಭಾರತ’ ಪೌರಾಣಿಕ ನಾಟಕ ಪ್ರದರ್ಶನ

    November 12, 2026

    Leave A Reply Cancel Reply

    Our Picks

    ಬ್ಯಾಂಕ್‌ ನಿಂದ ಗ್ರಾಹಕನಿಗೆ ₹40.30 ಲಕ್ಷ ಪರಿಹಾರ! ಏನಿದು ಪ್ರಕರಣ ?

    November 21, 2026

    ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ 5 ಲಕ್ಷ ವರ್ಷಗಳ ಹಿಂದಿನ ಪಳೆಯುಳಿಕೆ ಪತ್ತೆ! ಏನದು ?

    November 20, 2026

    ಐಐಟಿಎಫ್ 2026ರಲ್ಲಿ EPFO ಲಾಂಜ್ ಮತ್ತು ESIC ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ

    November 16, 2026

    ರಾಮಾಯಣದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದು ಯಾರು? ರಾವಣನ ಕೈಗೆ ಸಿಕ್ಕಿದ್ದು ಹೇಗೆ? ಪುರಾಣ ಮತ್ತು ವಿಜ್ಞಾನ ಹೇಳುವುದೇನು?

    November 15, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮನೆ, ನಿವೇಶನಗಳಿಗೆ ಅಧಿಕೃತ ಆಸ್ತಿ ಹಕ್ಕು: ಸಾರ್ವಜನಿಕರು ‘ಭೂ ಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು ಪಡೆಯಲು ಇಒ ಕಿರಣ ಪಾಟೀಲ್ ಕರೆ

    November 22, 2026

    ಔರಾದ್ (ಬೀದರ್): ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ತಮ್ಮ ಮನೆ ಹಾಗೂ ನಿವೇಶನಗಳ ಆಸ್ತಿ ಹಕ್ಕಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ…

    ವಿದ್ಯುತ್ ಅವಘಡಕ್ಕೆ ರೈತನ ತೋಟವೇ ಬಲಿ; 60ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗಾಹುತಿ!

    November 22, 2026

    ಗ್ರಾಮಠಾಣಾ ಆಸ್ತಿಗಳಿಗೆ ಇ–ಸ್ವತ್ತು ಖಾತಾ ಮಾಡಿಸಿಕೊಳ್ಳಿ: ಶಿವಕುಮಾರ ಘಾಟೆ

    November 22, 2026

    ವಿಲ್ ಇಲ್ಲ, ವಾರಸುದಾರರೂ ಇಲ್ಲ ಎಂದರೆ ಆಸ್ತಿ ಯಾರ ಪಾಲಾಗುತ್ತದೆ? 

    November 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.