nammatumakuru

    Subscribe to Updates

    Get the latest creative news from FooBar about art, design and business.

    What's Hot

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026
    Facebook Twitter Instagram
    ಟ್ರೆಂಡಿಂಗ್
    • 2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
    • ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ
    • ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ
    • ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ
    • ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹೊಸದಾಗಿ ಪ್ರಜಾ ಸೇವಾ ಇಲಾಖೆ ಸೃಜನೆ: ಡಿಸಿಎಂ ಡಾ.ಜಿ. ಪರಮೇಶ್ವರ
    • ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026: ತುಮಕೂರು ನಗರದಲ್ಲಿ ಎಸ್ ಐಆರ್ ನೋಟೀಸ್ ವಿಚಾರಣೆ ಆರಂಭ
    • ಸೋಮಾರಿ ಅಧಿಕಾರಿಗಳನ್ನು ಬದಲಿಸದಿದ್ದರೆ ಸರ್ಕಾರದ ಯಾವ ಅಭಿಯಾನ ಬಂದು ಏನು ಪ್ರಯೋಜನ?
    • ಶೀಘ್ರದಲ್ಲೇ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ: ಡಿಸಿಎಂ ಡಾ.ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಡಾವಣೆಯೋ.. ಕುಡುಕರ ಬಯಲಾಟವೋ?: ಕಸದ ಗಾಡಿಯಲ್ಲೇ ಎಣ್ಣೆ ಬಾಟಲಿಗಳ ಸಾಗಾಟ, ಪೊಲೀಸರೇ ಎಲ್ಲಿದ್ದೀರಿ?
    ಜಿಲ್ಲಾ ಸುದ್ದಿ August 28, 2026

    ಬಡಾವಣೆಯೋ.. ಕುಡುಕರ ಬಯಲಾಟವೋ?: ಕಸದ ಗಾಡಿಯಲ್ಲೇ ಎಣ್ಣೆ ಬಾಟಲಿಗಳ ಸಾಗಾಟ, ಪೊಲೀಸರೇ ಎಲ್ಲಿದ್ದೀರಿ?

    By Ganesh TumkuruAugust 28, 2026No Comments2 Mins Read
    holenarasipura

    ಹೊಳೆನರಸೀಪುರ: ಇದು ಜನ ವಾಸಿಸುವ ಬಡಾವಣೆಯೋ ಅಥವಾ ಪುಂಡ–ಪೋಕರಿಗಳ ಅಘೋಷಿತ ‘ಓಪನ್ ಬಾರ್’ ಎಂಬ ಅನುಮಾನ ಪಟ್ಟಣದ 17ನೇ ವಾರ್ಡ್‌ನ ಅನ್ವರ್ ಪಾಷ ಲೇಔಟ್ (ಕೋಡಂಗಿ ಕೊಪ್ಪಲು) ನಿವಾಸಿಗಳನ್ನು ತೀವ್ರವಾಗಿ ಕಾಡುತ್ತಿದೆ. ಒಂದೆಡೆ ಸತ್ತ ಪ್ರಾಣಿಗಳ ದುರ್ನಾತ, ಇನ್ನೊಂದೆಡೆ ಕುಡುಕರ ಅಟ್ಟಹಾಸ – ಇವೆಲ್ಲದರ ನಡುವೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ರಸ್ತೆಯಲ್ಲೇ ಎಣ್ಣೆ ಪಾರ್ಟಿ, ಬೆದರಿದ ನಿವಾಸಿಗಳು

    ಸೂರ್ಯ ಮುಳುಗುತ್ತಿದ್ದಂತೆ ಈ ಬಡಾವಣೆಯ ಬೀದಿಗಳು ಹಾಗೂ ಖಾಲಿ ನಿವೇಶನಗಳು ಮದ್ಯಪ್ರಿಯರ ಸಾಮ್ರಾಜ್ಯವಾಗಿ ಬದಲಾಗುತ್ತಿವೆ. ಗುಂಪು ಗುಂಪಾಗಿ ಕುಳಿತು ಮದ್ಯಪಾನ ಮಾಡುವುದು ಮತ್ತು ಕುಡಿದ ಅಮಲಿನಲ್ಲಿ ರಸ್ತೆಯಲ್ಲೇ ಹುಚ್ಚೆದ್ದು ಕುಣಿಯುವುದು ಇಲ್ಲಿ ನಿತ್ಯದ ಕಾಯಕವಾಗಿದೆ.

    ಕುಡಿತದ ಮತ್ತಿನಲ್ಲಿ ನಡೆಯುವ ಗಲಾಟೆಗಳು ಹಾಗೂ ಹಾರಾಡುವ ಅಶ್ಲೀಲ ಶಬ್ದಗಳಿಂದಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಬೆಚ್ಚಿಬೀಳುವಂತಹ ಭೀಕರ ವಾತಾವರಣ ನಿರ್ಮಾಣವಾಗಿದೆ.

    ಕಸದ ಗಾಡಿಯಲ್ಲೇ ಎಣ್ಣೆ ಬಾಟಲಿಗಳ ಸಾಗಾಟ!

    ಬಡಾವಣೆಯಲ್ಲಿ ನಡೆಯುತ್ತಿರುವ ಈ ರಂಪಾಟಕ್ಕೆ ಪುರಸಭೆಯ ಸ್ವಚ್ಛತಾ ವಾಹನವೇ ಜೀವಂತ ಸಾಕ್ಷಿಯಾಗಿದೆ. ಪುರಸಭೆಯ ಕಸದ ವಾಹನಗಳು ಪ್ರತಿನಿತ್ಯ ಬಡಾವಣೆಗೆ ಬಂದಾಗ, ಮನೆಗಳ ಕಸಕ್ಕಿಂತ ಹೆಚ್ಚಾಗಿ ಪುಂಡರು ಕುಡಿದು ಬಿಸಾಡಿದ ನೂರಾರು ಮದ್ಯದ ಬಾಟಲಿಗಳನ್ನೇ ಎತ್ತಿಕೊಂಡು ಹೋಗುವ ದಯನೀಯ ಸ್ಥಿತಿ ಇದೆ. ಇಷ್ಟಾದರೂ ಪುರಸಭೆಯ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಈ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕನಿಷ್ಠ ಸೌಜನ್ಯ ತೋರುತ್ತಿಲ್ಲ.

    ಬಡಾವಣೆಯಲ್ಲಿರುವ ಖಾಲಿ ಸೈಟುಗಳು ಕೇವಲ ಕುಡುಕರ ಅಡ್ಡೆಯಷ್ಟೇ ಅಲ್ಲದೆ, ಸತ್ತ ಪ್ರಾಣಿಗಳನ್ನು ಎಸೆಯುವ ಡಂಪಿಂಗ್ ಯಾರ್ಡ್ ಆಗಿ ಬದಲಾಗಿವೆ. ಸತ್ತ ನಾಯಿಗಳು ಹಾಗೂ ಇತರ ಪ್ರಾಣಿಗಳ ಕಳೇಬರಗಳನ್ನು ಇಲ್ಲಿ ತಂದು ಅವೈಜ್ಞಾನಿಕವಾಗಿ ಹೂಳಲಾಗುತ್ತಿದ್ದು, ಇಡೀ ಪ್ರದೇಶ ಗಬ್ಬು ನಾರುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಕಣ್ಣೆದುರಲ್ಲೇ ಇದ್ದರೂ ಪುರಸಭೆಯ ಆರೋಗ್ಯಾಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

    “ಪುರಸಭೆ ಹಾಗೂ ಪೊಲೀಸ್ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಅನ್ವರ್ ಪಾಷ ಲೇಔಟ್‌ನಲ್ಲಿ ಸ್ವಚ್ಛತೆ ಕಾಪಾಡಬೇಕು. ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿ ಕಾಂಪೌಂಡ್ ಹಾಕಿಸಬೇಕು ಮತ್ತು ಪುಂಡರ ಹಾವಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಪೊಲೀಸ್ ಗಸ್ತು ನಿಯೋಜಿಸಬೇಕು. ತಪ್ಪಿದ್ದಲ್ಲಿ ಬಡಾವಣೆಯ ನಿವಾಸಿಗಳೊಂದಿಗೆ ಪುರಸಭೆ ಹಾಗೂ ಪೊಲೀಸ್ ಠಾಣೆಯ ಎದುರು ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

    ನೈಟ್ ಬೀಟ್ ಇಲ್ಲ:

    ಬಡಾವಣೆಯಲ್ಲಿ ಇಷ್ಟೆಲ್ಲಾ ಅರಾಜಕತೆ ತಾಂಡವವಾಡುತ್ತಿದ್ದರೂ, ಪೊಲೀಸ್ ಇಲಾಖೆಯ ರಾತ್ರಿ ಗಸ್ತು (ನೈಟ್ ಬೀಟ್) ಈ ಪ್ರದೇಶದತ್ತ ಸುಳಿಯುತ್ತಲೇ ಇಲ್ಲ. ಪೊಲೀಸರು ಕೇವಲ ಠಾಣೆಗಷ್ಟೇ ಸೀಮಿತರಾಗಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

    ವರದಿ: ಮಂಜು ಶ್ರವಣೂರು, ಹೊಳೆನರಸೀಪುರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಸಂತಪೂರ ಗ್ರಾಮದಲ್ಲಿ ‘ಪ್ರಜಾ ಸೇವಾ’ ಕಾರ್ಯಕ್ರಮ: ಕಾಲೇಜು ಸ್ಥಾಪನೆ ಹಾಗೂ ಸ್ತ್ರೀರೋಗ ತಜ್ಞರ ನೇಮಕಕ್ಕೆ ಮನವಿ

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ತುಮಕೂರು: ಪತ್ನಿಯನ್ನು ಮಾಡಿದ ಗಂಡನಿಗೆ ನಗರದ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು…

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026

    ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ

    September 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.