ರಾಯಚೂರು: ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ರಾಯಚೂರು ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ನಡೆದಿದೆ. ಜೇಗರ್ ಕಲ್ ಮಲ್ಲಾಪೂರು ಗ್ರಾಮದ ವಿನಾಯಕ(10) ಮೃತ ಬಾಲಕನಾಗಿದ್ದಾನೆ.
ಮೃತ ಬಾಲಕ ಮಂಗಳವಾರ ಕುಟುಂಬಸ್ಥರೊಂದಿಗೆ ಈಜು ಕಲಿಯಲು ಪಕ್ಕದೂರು ಹೆಂಬೆರಾಳದ ಹಳ್ಳಕ್ಕೆ ಹೋಗಿದ್ದ. ನೀರಿನ ಆಳ ಹೆಚ್ಚಿದ್ದ ಕಡೆ ವಿನಾಯಕ ಈಜಲು ತೆರಳಿದ್ದು, ಈಜು ಬಾರದ ಹಿನ್ನೆಲೆ ಜಲ ಸಮಾಧಿಯಾಗಿದ್ದಾನೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296