ಬೆಂಗಳೂರು: ಮಾಂಸ ಹೋರಾಟಗಾರ ಪುನೀತ್ ಕೆರೆಹಳ್ಳಿ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನೆಗೆ ಆಗಮಿಸುವ ಮಾಹಿತಿ ಹಿನ್ನೆಲೆ ರಜೆಯಲ್ಲಿದ್ದರೂ ಎಸಿಪಿ ಚಂದನ್ ಕೆಲಸಕ್ಕೆ ಹಾಜರಾಗಿದ್ದು, ಪ್ರತಾಪ್ ಸಿಂಹ ಹಾಕಿದ್ದ ಸವಾಲನ್ನು ಸ್ವೀಕರಿಸಿದ್ದಾರೆ.
ಕುರಿ ಮಾಂಸವನ್ನು ನಾಯಿ ಮಾಂಸ ಅಂತ ಬಿಂಬಿಸಿ ಅಪಪ್ರಚಾರ ಮಾಡಿದ್ದ ಪುನೀತ್ ಕೆರೆಹಳ್ಳಿಯನ್ನು ಠಾಣೆಗೆ ಕರೆದೊಯ್ದು ಎಸಿಪಿ ಚಂದನ್ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂತ ಪುನೀತ್ ಕೆರೆಹಳ್ಳಿ ಆರೋಪಿಸಿದ್ದ. ಈತನಿಗೆ ಬೆಂಬಲವಾಗಿ ನಿಂತ ಪ್ರತಾಪ್ ಸಿಂಹ, ನಿಮ್ಮ ಕಚೇರಿಗೆ ಬರ್ತಾ ಇದ್ದೀನಿ ನೀವು ಇರಬೇಕು ಅಂತಾ ಎಸಿಪಿ ಚಂದನ್ ಗೆ ಚಾಲೆಂಜ್ ಹಾಕಿದ್ದರು. ಈ ಸವಾಲುನ್ನು ಸ್ವೀಕರಿಸಿದ ಚಂದನ್ ರಜೆಯಲ್ಲಿದ್ದರೂ ಕರ್ತವ್ಯಕ್ಕೆ ಹಾಜರಾಗಿದ್ದಾರಂತೆ.
ನಟ ದರ್ಶನ್ ಪ್ರಕರಣದ ನಂತರ ಎಸಿಪಿ ಚಂದನ್ ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದಾರೆ. ಇತ್ತೀಚೆಗೆ ಕುರಿ ಮಾಂಸ ಬದಲು ನಾಯಿ ಮಾಂಸ ತರಲಾಗುತ್ತಿದೆ. ಅಂತ ಪುನೀತ್ ಕೆರೆಹಳ್ಳಿ ರೈಲ್ವೆ ಸ್ಟೇಷನ್ ಬಳಿ ಹೈಡ್ರಾಮಾ ಸೃಷ್ಟಿಸಿದ್ದ. ಈ ವೇಳೆ ಬಂಧನ ಮಾಡಿದ್ದು ಎಸಿಪಿ ಚಂದನ್, ಪುನೀತ್ ನನ್ನು ನಗ್ನ ಮಾಡಿ ಹಲ್ಲೆ ಮಾಡಿದ್ದು, ಅಷ್ಟೇ ಅಲ್ಲದೆ ವಿಡಿಯೋ ಮಾಡ್ಕೊಂಡು ವೈರಲ್ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ಪುನೀತ್ ಆರೋಪಿಸಿದ್ದ. ಈ ಹಿನ್ನೆಲೆ ನಿನ್ನೆ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಪುನೀತ್ ಕೆರೆಹಳ್ಳಿಗೆ ಪ್ರತಾಪ್ ಸಿಂಹ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾಥ್ ನೀಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296