nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!

    July 12, 2026

    723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ

    July 12, 2026

    ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ

    July 12, 2026
    Facebook Twitter Instagram
    ಟ್ರೆಂಡಿಂಗ್
    • ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!
    • 723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ
    • ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ
    • ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ
    • ಚೆಂಪುಗಾನಹಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಮಾರಮ್ಮನ ಜಾತ್ರೆ: ಮನೆ ಮನೆ ಬಳಿ ಪೆಂಡಾಲ್, ಭರ್ಜರಿ ಬಾಡೂಟ!
    • ಔರಾದ್: ಕೂಲಿ ಕಾರ್ಮಿಕರಿಗೆ ‘ವಿಬಿ–ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ
    • 9ರೂ. 50 ಪೈಸೆಗೋಸ್ಕರ ಕಾನೂನು ಕ್ರಮ: ಬ್ಯಾಂಕ್ ಮ್ಯಾನೇಜರ್ ಯಡವಟ್ಟಿಗೆ ರೈತ ಕಂಗಾಲು
    • ಕೊರಟಗೆರೆ: ಬುಗುರಿ ಆಟವಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅಡವಿ ಚಿತ್ರದ ಲಿರಿಕಲ್ ಹಾಡು ಬಿಡುಗಡೆ ಮಾಡಿದ ಸ್ಟಾರ್ ನಿರ್ದೇಶಕ ಪ. ರಂಜಿತ್
    ರಾಜ್ಯ ಸುದ್ದಿ December 29, 2023

    ಅಡವಿ ಚಿತ್ರದ ಲಿರಿಕಲ್ ಹಾಡು ಬಿಡುಗಡೆ ಮಾಡಿದ ಸ್ಟಾರ್ ನಿರ್ದೇಶಕ ಪ. ರಂಜಿತ್

    By adminDecember 29, 2023No Comments4 Mins Read
    adavi

    ಕಾಡಿನ ಸಂರಕ್ಷಣೆ, ಸಂವಿಧಾನದ ಅರಿವು, ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಹಾಗೂ ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ಸವಿಸ್ತಾರವಾಗಿ ತೆರೆದಿಡುವ ಕಥಾ ಸಾರಾಂಶವನ್ನು ಹೊಂದಿರುವ ಅಡವಿ ಚಿತ್ರದ ಲಿರಿಕಲ್ ಸಾಂಗ್ ಅನ್ನು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಾಲ, ಕಬಾಲಿ ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಈಗ ದೇಶಾದ್ಯಂತ ಭಾರಿ ಕುತೂಹಲದಿಂದ ನಿರೀಕ್ಷಿಸುತ್ತಿರುವ ತಂಗಲಾನ್ ಚಿತ್ರವನ್ನು ನಿರ್ದೇಶಿಸಿರುವ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ಪ. ರಂಜಿತ್ ಅವರು ಬಿಡುಗಡೆ ಮಾಡಿದ್ದಾರೆ.

    ಹಿರಿಯ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ವಿ. ಮನೋಹರ್ ಸಾಹಿತ್ಯ ನೀಡಿರುವ ಖ್ಯಾತ ಗಾಯಕ ನವೀನ್ ಸಜ್ಜು ಹಾಡಿರುವ ಸಿಂಗಾರ ಸಿಂಗಾರ ತ್ವಾಟ ಎಂಬ ಲಿರಿಕಲ್ ವಿಡಿಯೋ ಹಾಡನ್ನು ಕೆಜಿಎಫ್ ಮುನಿಸಿಪಲ್ ಗ್ರೌಂಡ್ ನಲ್ಲಿ ಬಿಡುಗಡೆ ಮಾಡಿದರು. ಈ ಹಾಡು ವಿ. ಮನೋಹರ್ ಅವರ ಲೇಖನಿಯಿಂದ ಮೂಡಿ ಬಂದಿರುವ 2500 ನೇ ರಚನೆ ಎಂಬುದು ವಿಶೇಷ.

    ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಾರಂಜೀತ್ ಮಾತನಾಡಿ ಅಡವಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಈ ನೆಲದ ಮಣ್ಣಿನ ಮಕ್ಕಳ ಕಥೆಯೊಂದಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಬಿಂಬಿಸಿದ್ದು ಚೆನ್ನಾಗಿ ಮೂಡಿ ಬಂದಿದೆ. ಇಂತಹ ಮತ್ತಷ್ಟು ಚಿತ್ರಗಳು ಬರಲಿ ನಿರ್ದೇಶಕ ಟೈಗರ್ ನಾಗ್, ಟೈಲರ್ ಮತ್ತು ಹಾಡಿನಲ್ಲಿ ಕುತೂಹಲ ಮೂಡಿಸಿದ್ದಾರೆ, ಸಿನಿಮಾ ಬಿಡುಗಡೆಗೆ ಮತ್ತೆ ಕರ್ನಾಟಕಕ್ಕೆ ಬರ್ತೇನೆ ಚಿತ್ರತಂಡದೊಟ್ಟಿಗೆ ಸಿನಿಮಾ ನೋಡ್ತೀನಿ  ಯಶಸ್ಸು ಸಿಗಲಿ  ಚಿತ್ರತಂಡಕ್ಕೆ ಎಂದು ಶುಭ ಹಾರೈಸಿದರು.

    ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಟೈಗರ್ ನಾಗ್ ಚಿತ್ರಕಥೆ ಬರೆದ ನಿರ್ದೇಶಿಸಿ ನಿರ್ಮಾಣ ಮಾಡಿರುವ ಕಾದಂಬರಿ ಆಧಾರಿತ ಅಡವಿ ಚಿತ್ರಕ್ಕೆ ಮಂಜು ಮಹಾದೇವ್, ಸಂಗೀತ ನಿರ್ದೇಶನ ಮಾಡಿದ್ದಾರೆ.

    ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷಗಳನ್ನು ಹುಟ್ಟುಹಾಕಿರುವ ಅಡವಿ ಚಿತ್ರದ ನಿರ್ಮಾಪಕ ಟೈಗರ್ ನಾಗ್ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಸಿಬಿಐಗೆ ದೂರು ನೀಡಿದ್ದರು. ಬಳಿಕ ಸಿಬಿಐ ಅಧಿಕಾರಿಗಳು ಬೀಸಿದ ಬಲೆಗೆ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದರು. ದಶಕಗಳಿಂದ ನಿರ್ಮಾಪಕರನ್ನು ಕಿತ್ತು ತಿನ್ನುತಿದ್ದ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಹಲವು ನಿರ್ಮಾಪಕ ನಿರ್ದೇಶಕರಿಂದ ಪ್ರಶಂಸೆ ಪಡೆದಿದ್ದಾರೆ.

    ಕನ್ನಡದಲ್ಲಿ ಧ್ವನಿ ಇಲ್ಲದವರ ಕುರಿತ ಸಿನಿಮಾಗಳು ಇತ್ತೀಚಿಗೆ ಸದ್ದು ಮಾಡತೊಡಗಿವೆ. ಬಡವರ ಬವಣೆಗಳನ್ನು ಸಾಕಷ್ಟು  ಚಿತ್ರಗಳು ಬಿಂಬಿಸಿವೆ. ಅಂತಹ ಚಿತ್ರಗಳ ಸಾಲಿನಲ್ಲಿ ಮತ್ತಷ್ಟು ವಿಭಿನ್ನವಾಗಿ ನಿಲ್ಲುತ್ತದೆ ಆಡವಿ.

    ಅರಣ್ಯವೇ ಸರ್ವಸ್ವ ಎಂದು ನಂಬಿರುವ ಕಾಡಿನ ಮೂಲ ನಿವಾಸಿಗಳ ಜೀವನ. ತಮ್ಮ ಸ್ವಚ್ಛಂದ ಬದುಕಿಗಾಗಿ ಹೋರಾಟದ ಕಥೆಯೇ ಈ ಚಿತ್ರದ ಮುಖ್ಯ ಸಾರಾಂಶ. ತಳ ಸಮುದಾಯದ ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆದಿಡುವ ಪ್ರಯತ್ನ ಚಿತ್ರದಲ್ಲಿದೆ.

    ಅನಾದಿ ಕಾಲದಿಂದಲೂ ಕಾಡಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಸಾಮಾಜಿಕ ಜೀವನ ಅರಣ್ಯ ಸಂಸ್ಕೃತಿ ಆಚರಣೆ ಆರ್ಥಿಕತೆ ಇವುಗಳ ಮೇಲೆ ಆಳುವ ನಾಗರಿಕ ವರ್ಗಗಳ  ದಬ್ಬಾಳಿಕೆ ಮತ್ತು ಸಂಘರ್ಷವನ್ನು ಪರಿಣಾಮಕಾರಿಯಾಗಿ ತೋರಿಸುತ್ತಿದೆ.  ಜೊತೆಗೆ ಅರಣ್ಯದಲ್ಲಿ  ತಮ್ಮ ವಸತಿ, ಶಿಕ್ಷಣ ಮತ್ತು ಆರೋಗ್ಯದ ಹಕ್ಕುಗಳ ಬಗ್ಗೆ  ದನಿ ಎತ್ತಲು ಅಗದ ಅಸಹಾಯಕ ಸ್ಥಿತಿಯಲ್ಲಿರುವ ಕಾಡು ವಾಸಿಗಳ ಸ್ಥಿತಿಯ ಬಗ್ಗೆ ಗಮನ ಸೆಳೆದಿದ್ದು ಸ್ಯಾಂಡಲ್ ವುಡ್ ನಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ನಿರೀಕ್ಷೆ ಗಳಿದ್ದು    ಬಿಡುಗಡೆಗೂ ಮುನ್ನವೇ ಬಾರೀ ಸದ್ದು ಮಾಡಿದ್ದು ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ.

    ಅಡವಿ ಚಿತ್ರದ ಸ್ಕ್ರಿಪ್ಟ್ ಏನು..?:

    ಅರಣ್ಯವೇ ಸರ್ವಸ್ವ ಎಂದು ನಂಬಿರುವ ದ್ರಾವಿಡ ಬಡಜನರ ಜೀವನವೇ ಚಿತ್ರದ ನಿಜ ಜೀವನ “ಚಿತ್ರದ ಮುಖ್ಯ ಸಾರಾಂಶ ಶೋಷಿತ ವರ್ಗದ ಕಥೆಯನ್ನು ಆಧರಿಸಿದೆ” ಕೆಳ ಸಮುದಾಯದ ನೋವು ಪ್ರಮುಖ ಪಾತ್ರ ವಹಿಸುತ್ತದೆ.  ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆಯುವ ಪ್ರಯತ್ನ ಕಥೆಯಲ್ಲಿದೆ.

    ಅನಾದಿ ಕಾಲದಿಂದಲೂ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನರ ಸಾಮಾಜಿಕ ಜೀವನ, ಅರಣ್ಯ ಸಂಸ್ಕೃತಿ, ಆಚರಣೆ, ಆರ್ಥಿಕತೆ ಮತ್ತು ಸಂಘರ್ಷ ಮತ್ತು ಆಳುವ ನಾಗರಿಕ ವರ್ಗಗಳ ವಿರುದ್ಧದ ಸಂಘರ್ಷವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ ಮತ್ತು ಅರಣ್ಯದ ಭೂಮಿ, ವಸತಿ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಯನ್ನು.  ಜನರನ್ನು ಗಂಭೀರವಾಗಿ ಚಿತ್ರೀಕರಿಸಲಾಗಿದೆ.

    ಕಲೆಯನ್ನು ದೇವರಂತೆ ತೆಗೆದುಕೊಂಡು ಸದಾ ಹೋರಾಟದ ಹಾದಿಯಲ್ಲಿ ದಿನ ಕಳೆಯುತ್ತಿರುವ ಟೈಗರ್ ನಾಗ್ ಈ ಚಿತ್ರದ ನಿರ್ದೇಶಕ ನಿರ್ಮಾಪಕರಾಗಿದ್ದು, ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ನಲ್ಲಿ ಮೊದಲ ಸಿನಿಮಾ ಮುಗಿಸಿದ ಖುಷಿಯಲ್ಲಿದ್ದಾರೆ ಟೈಗರ್ ನಾಗ್ ಮತ್ತವರ ತಂಡ.  ಅಡವಿ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ.  ಚಿತ್ರತಂಡ ಬಿಡುಗಡೆಗೆ ಸಿದ್ಧತೆ ನಡೆಸಿದೆ.

    ಅಡವಿ ಚಿತ್ರಕ್ಕಾಗಿ ಸಿದ್ದರಬೆಟ್ಟ ಅರಣ್ಯದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲಿನಲ್ಲಿ ಚಿತ್ರೀಕರಣ ನಡೆದಿದೆ.  ಹಿರಿಯ ಕಲಾ ನಿರ್ದೇಶಕ ಬಾಬುಖಾನ್ ಕಲಾ ನಿರ್ದೇಶನವಿದೆ.  ಸಿದ್ದರಬೆಟ್ಟದಲ್ಲಿ ಗುಡಿಸಲ ಹಟ್ಟಿಯ ಸೆಟ್ ಹಾಗೂ ಪೊಲೀಸ್ ಠಾಣೆ, ನ್ಯಾಯಾಲಯದ ಸೆಟ್ ನಿರ್ಮಿಸಲು ಕಲಾ ಸಹಾಯಕರ ತಂಡ ಹಗಲಿರುಳು ಶ್ರಮಿಸಿ ಅದ್ಧೂರಿಯಾಗಿ ಚಿತ್ರೀಕರಣ ಮುಗಿಸಿದೆ.

    ಅಡವಿಯ ಶೂಟಿಂಗ್ ಎಲ್ಲೆಲ್ಲಿ ನಡೆದಿದೆ..!

    ಅಡವಿ ಚಿತ್ರವನ್ನು ಕರ್ನಾಟಕದ ಮೊದಲ ದಲಿತ ದೊರೆ ಕುರಂಗರಾಯ  ಐತಿಹಾಸಿಕ ಸಿದ್ದರಬೆಟ್ಟ, ಸಿದ್ಧಸಾಧು ಸಂತರ ತಾಣವಾದ ಸಂಜೀವಿನಿ ಕ್ಷೇತ್ರ, ಸೂರ್ಯ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆ ಮುಂತಾದ ಪ್ರಕೃತಿ ಸೌಂದರ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

    ಈ ಸಂದರ್ಭದಲ್ಲಿ  ಪ್ರಗತಿಪರ ಚಿಂತಕ ಸಂಪತ್ ಸುಬ್ಬಯ್ಯ. ಕರ್ನಾಟಕ ಬೌದ್ಧ ಮಹಾಸಭಾದ ರಾಜ್ಯಾದ್ಯಕ್ಷ ಹ. ರ ಮಹೇಶ್ ಬೌದ್ಧ, ಪಾಲಾರ್ ಚಿತ್ರದ ನಿರ್ದೇಶಕ ಜೀವಾ ನವೀನ್ , ನಾಯಕ ನಟ ಮೋಹನ್ ಮೌರ್ಯ. ಬಾಲ ನಟ ಮಾಸ್ಟರ್ ಚಿರು ಶ್ರೀ ನಾಗ್, ನಾಯಕಿಯರಾದ ಶಿಲ್ಪ, ಆರುಂಧತಿ ಲಾಲ್, ಖಳನಟ ಅರ್ಜುನ್ ಪಾಳ್ಳೇಗಾರ್, ಟೈಗರ್ ನಾಗ್, ಸಹನಿರ್ದೇಶಕ ಕೆ. ಮಂಜು ಕೋಟೆಕೆರೆ , ಹಾಜರಿದ್ದರು.

    ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮಾನಾಯಕ್   ಉಗ್ರಂ ದೇವು. ರವಿಕುಮಾರ್ ಸನ, ಅನಂತರಾಜು, ವಕೀಲ ಜಗದೀಶ್ ಮಹಾದೇವ್, ಹ. ರ. ಮಹೇಶ್, ವಾಲೆ ಚಂದ್ರಣ್ಣ, ಮಂಜೀವ, ವೃಶ್ಚಿಕ ಶಿಲ್ಪಾ ಟೈಗರ್ ನಾಗ್, ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ಆನಂದ್, ಪತ್ರಕರ್ತರಾದ  ಶಿವಾನಂದ್ , ನವೀನ್, ಅರುಣ್, ಸಿದ್ದರಾಜು, ಕೆ.ಆರ್. ಓಬಳರಾಜು, ಕುಣಿಗಲ್ ರಮೇಶ್, ಮಂಜುಳಾ ರಾಜಕುಮಾರ್, ನಾಗಮಣಿ, ಬೇಬಿ ಸಿಂಚನಾ,  ಮುಂತಾದವರು ನಟಿಸಿದ್ದಾರೆ.

    ಚಿತ್ರಕ್ಕೆ ವಿಪಿನ್ ವಿ ರಾಜ್ ಅವರ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಕೆ ಮಂಜು ಕೋಟೆಕೆರೆ ಟೈಗರ್ ನಾಗ್ ಸಂಭಾಷಣೆ, ಕೆ.ಮಂಜು ಕೋಟೆಕೆರೆ, ನಿರ್ಮಾಣ ನಿರ್ವಹಣೆ ವಿಜಯಕುಮಾರ್ ಎ ವಿ, ಸಹ ನಿರ್ದೇಶನವಿದೆ. ಬಾಬು ಖಾನ್ ಕಲಾ ನಿರ್ದೇಶನವಿದೆ.


    Provided by
    Provided by
    admin
    • Website

    Related Posts

    723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ

    July 12, 2026

    ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ

    July 12, 2026

    ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ

    July 12, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಆರೋಗ್ಯ

    ಮಗು ಪಡೆಯಲು ಪ್ಲ್ಯಾನ್ ಮಾಡ್ತಿದ್ದೀರಾ? ಹಾಗಾದ್ರೆ ದಂಪತಿಗಳು ಈ ಒಂದು ಹವ್ಯಾಸ ರೂಢಿಸಿಕೊಳ್ಳಿ!

    July 12, 2026

    ನವದೆಹಲಿ: ಸಾಮಾನ್ಯವಾಗಿ ದಂಪತಿಗಳು ಮಗುವಿಗಾಗಿ ಪ್ರಯತ್ನಿಸುತ್ತಿರುವಾಗ (Trying for a baby) ಅವರ ಸಂಪೂರ್ಣ ಗಮನ ಒತ್ತಡ ಕಡಿಮೆ ಮಾಡಿಕೊಳ್ಳುವುದು,…

    723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಇಎ

    July 12, 2026

    ಬೆಳಗಾವಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ — ಇಬ್ಬರು ಕಾರ್ಮಿಕರು ದುರ್ಮರಣ

    July 12, 2026

    ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗಾಯಕಿ ಎಸ್.ಜಾನಕಿ ಅಂತ್ಯಕ್ರಿಯೆ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ

    July 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.