ಅಫ್ಶಿನ್ ಇಸ್ಮಾಯಿಲ್ ಘದರ್ಜಾಡೆ ಅವರು ವಿಶ್ವದ ಅತ್ಯಂತ ಕುಳ್ಳ ವ್ಯಕ್ತಿ ಎಂದು ಹೆಸರಿಸಿದ್ದಾರೆ. ಅವರು ಇರಾನ್ ಮೂಲದವರು. 20 ವರ್ಷದ ಅಫ್ಶ್ 65.24 ಸೆಂ.ಮೀ ಎತ್ತರ ಮತ್ತು 6 ಕೆ.ಜಿ ತೂಕವಿದೆ. ದುಬೈನಲ್ಲಿ, ಗಿನ್ನೆಸ್ ವಿಶ್ವ ದಾಖಲೆಗಳ ಮುಖ್ಯ ಸಂಪಾದಕ ಕ್ರೇಗ್ ಗ್ಲೆಂಡಾ ಅವರು ಅಫ್ಶಿನ್ ಗೆ ವಿಶ್ವದ ಅತ್ಯಂತ ಚಿಕ್ಕ ಮಾನವನ ಗಿನ್ನೆಸ್ ವಿಶ್ವ ದಾಖಲೆಯನ್ನು ಘೋಷಿಸಿದರು.
ಅಫ್ಶಿನ್ ಕೊಲಂಬಿಯಾದ ಎಡ್ವರ್ಡ್ ನಿನೊ ಹೆರ್ನಾಂಡೆಜ್ ಅವರನ್ನು ಹಿಂದಿಕ್ಕಿ ಈ ದಾಖಲೆ ಬರೆದಿದ್ದಾರೆ. ಎಡ್ವರ್ಡ್ 72.1 ಸೆಂ ಎತ್ತರವಿತ್ತು. ಅಫ್ಶಿನ್ ಇಸ್ಮಾಯಿಲ್ ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದ ಬಿಜಾನ್ ಕೌಂಟಿಯ ಹಳ್ಳಿಯಲ್ಲಿ ಜನಿಸಿದರು.
ಅಫ್ಶಿನ್‌ಗೆ ಯಾವಾಗಲೂ ಇನ್ನೊಬ್ಬರ ಸಹಾಯ ಬೇಕು. ಹೀಗಾಗಿ ಅಫ್ಶ್ ಶಾಲೆಗೆ ಹೋಗಲಾಗಲಿಲ್ಲ ಎಂದು ತಂದೆ ಇಸ್ಮಾಯಿಲ್ ಹೇಳಿದ್ದಾರೆ. ಈ ಪುಟ್ಟ ಮನುಷ್ಯ ಕಟ್ಟಾ ಫುಟ್ಬಾಲ್ ಅಭಿಮಾನಿ. ಮೆಸ್ಸಿ ಅವರ ನೆಚ್ಚಿನ ಆಟಗಾರ. ಮೆಸ್ಸಿ ನಂತರ ರೊನಾಲ್ಡೊ ನನ್ನ ನೆಚ್ಚಿನ ಆಟಗಾರ ಎಂದಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy