ಪಾವಗಡ: ತಾಲ್ಲೂಕಿನಲ್ಲಿ ದೀ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಅಂತರ್ಜಲ ಚೇತನ ಯೋಜನೆಯಿಂದ ಪಾವಗಡ ತಾಲ್ಲೂಕಿನ ಇ.ಓ ಶಿವರಾಜಯ್ಯ. ಎ. ಡಿ ರಂಗನಾಥ್ ಹಾಗೂ ಕರ್ನಾಟಕ ರಾಜ್ಯ ಸಂಯೋಜಕರಾದ ಕೃಷ್ಣ ನಾಯಕ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಕೃಷ್ಣಾನಾಯಕ್ , ನಮ್ಮ ತಾಲ್ಲೂಕಿನಲ್ಲಿ 70 ವರ್ಷಗಳಿಂದ ಸುಮಾರು 50 ಬಾರಿ ಬರಗಾಲ ಬಂದಿದ್ದರಿಂದ ದೀ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ನಮ್ಮ ಪಾವಗಡ ತಾಲೂಕನ್ನು ಪ್ರಥಮ ಭಾರಿಗೆ ಆಯ್ಕೆ ಮಾಡಿಕೊಂಡಿದೆ. ಅಂತರ್ಜಲ ಚೇತನ ಯೋಜನೆಯಿಂದ ಹಳ್ಳಗಳಲ್ಲಿ ಬೋರ್ಡರ್ ಚೆಕ್ ಮತ್ತು ರಿಚಾರ್ಜ್ ವೆಲ್ ಕಾಮಗಾರಿಗಳನ್ನು 2021ನೇ ಸಾಲಿನಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಪಂಚಾಯಿತಿಯಲ್ಲಿ ಸುಮಾರು 20ರಿಂದ 35 ಕಾಮಗಾರಿಗಳನ್ನು ಪೂರ್ಣಗೊಳಿಸಿದಾರೆ ಎಂದರು.
ಈ ಕಾಮಗಾರಿಗಳಿಂದ ರೈತರ ಕೊಳೆವೆ ಬಾವಿಗಳು 80% (ಪರ್ಸೆಂಟ್ ) ಸೀಪೆಜ್ ಅಥವಾ ರಿಚಾರ್ಜ್ ಆಗಿವೆ ಮತ್ತು ಅಂತರ್ಜಲ ಮಟ್ಟ ಹೆಚ್ಚಾಗಿದೆ ಇದರಿಂದ ರೈತರರಿಗೆ ಅನುಕೂಲವಾಗಿದೆ. ಅದೇ ರೀತಿ ಈ ವರ್ಷದಲ್ಲಿ ಒಂದು ಗ್ರಾಮ ಪಂಚಾಯಿತಿಗೆ ಸುಮಾರು 20 ಕಾಮಗಾರಿಗಳಿಗೆ ಅನುಮತಿಕೊಟ್ಟಿದ್ದಾರೆ. ಈ ವರ್ಷವೂ ನರೇಗಾ ಯೋಜನೆ ಅಡಿಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ದುಡಿಯಲು ಅನುಮತಿ ಕೊಟ್ಟಿದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನೆ ಅಧಿಕಾರಿ ಮಲ್ಲಿಕಾರ್ಜುನಯ್ಯ G. ಜಿಲ್ಲಾ ಸಂಯೋಜಕರು ಆದಂತಹ ಕೀರ್ತಿ ನಾಯಕ್, ಹೋಬಳಿ ಸಂಯೋಜಕರುಗಳಾದ ನಾಗರಾಜು ಸ್ವಾಮಿ ಮತ್ತು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, SDMC ಅಧ್ಯಕ್ಷ ರಾಮಪ್ಪ ಸಿ.ಕೆ.ಪುರ. ಹನುಮಂತರಾಯಪ್ಪ ಸಿ.ಕೆ.ಪುರ. ಸಂಸ್ಥೆ ಎಲ್ಲ ಸಂಯೋಜಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ದೇವರಹಟ್ಟಿ ನಾಗರಾಜ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5