ತುಮಕೂರು: ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯು ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್ ಛೇರ್ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು 18 ವರ್ಷ ಮೇಲ್ಪಟ್ಟವರಾಗಿರಬೇಕು. ಈಗಾಗಲೇ ಇಲಾಖೆ ಅಥವಾ ಸರ್ಕಾರದ ಯಾವುದೇ ಇತರೆ ಮೂಲಗಳಿಂದ ಯಂತ್ರಚಾಲಿತ ವಾಹನ ಮತ್ತು ಬ್ಯಾಟರಿ ಚಾಲಿತ ವೀಲ್‌ಛೇರ್ ಪಡೆದಿರುವವರು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿಯೊಂದಿಗೆ ಕನಿಷ್ಠ 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿರುವ ಬಗ್ಗೆ ಮತ್ತು ವಾರ್ಷಿಕ ಆದಾಯ 2ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಬಗ್ಗೆ ತಹಸೀಲ್ದಾರ್ ಧೃಢೀಕೃತ ಪ್ರಮಾಣ ಪತ್ರ, ಶೇ.75 ಮತ್ತು ಅದಕ್ಕಿಂತ ಹೆಚ್ಚಿಗೆ ವಿಕಲತೆ ಹೊಂದಿರುವ ಬಗ್ಗೆ ವಿಶಿಷ್ಟ ಗುರುತಿನ ಚೀಟಿ(ಯು.ಡಿ.ಐ.ಡಿ)ಯನ್ನು ಲಗತ್ತಿಸಿ ಸಲ್ಲಿಸಬೇಕು.
ಆಸಕ್ತ ದೈಹಿಕ ವಿಕಲಚೇತನರು ಗ್ರಾಮ ಒನ್, ಕರ್ನಾಟಕ ಒನ್, ತುಮಕೂರು ಒನ್ ಮತ್ತು ಸಿ.ಎಸ್.ಸಿ ಕೇಂದ್ರಗಳಲ್ಲಿ ಸೇವಾ ಸಿಂಧು https://suvidha.karnataka.gov.in ತಂತ್ರಾಂಶದಡಿ ಆನ್ ಲೈನ್ ಮೂಲಕ ಜನವರಿ 21ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಯನ್ನು ಇಲಾಖೆಯ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 0816–2005053/ 2270029 ಅಥವಾ ಆಯಾ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಪಡೆಯಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪ ಎಂ. ದೊಡ್ಡಮನಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx