ಬೆಂಗಳೂರು: ವೈಟ್ ಫೀಲ್ಡ್ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲು ಸಿದ್ಧವಾಗಿರುವ ರಾಧಾಕೃಷ್ಣ ದೇವರ ಕಲ್ಲಿನ ವಿಗ್ರಹ ಕೆತ್ತನೆ ಕಾರ್ಯವನ್ನು ರಾಮಲಲ್ಲಾ ಕೆತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್ ಕೈಗೆತ್ತಿಗೊಂಡಿದ್ದಾರೆ.
ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ನ ನಲ್ಲೂರುಹಳ್ಳಿ ಬೋರ್ ವೇಲ್ ರಸ್ತೆಯಲ್ಲಿ ಇ ಎಲ್ ವಿ ಗ್ರೂಪ್ ವತಿಯಿಂದ ನಿರ್ಮಿಸಿರುವ ರಾಧಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಮಾತನಾಡಿದ ಅವರು. ಹೊಯ್ಸಳ ಮತ್ತು ಮೈಸೂರು ಶೈಲಿಯಲ್ಲಿ ರಾಧಕೃಷ್ಣನ ವಿಗ್ರಹ ಕೆತ್ತನೆ ಕಾರ್ಯವನ್ನು ಪ್ರಾರಂಭಿಸುವ ಮೊದಲು ಶಿಲೆ ನಿರ್ಮಾಣಕ್ಕೆ ಬೇಕಾದ ಅಳತೆ ಪಡೆಯಲು ಬಂದಿರುವುದಾಗಿ ತಿಳಿಸಿದರು.
ಅಳತೆ ಪಡೆದ ನಂತರ, ಚಿತ್ರ ರಚಿಸಿ, ವಿಗ್ರಹ ನಿರ್ಮಾಣದ ಕೆಲಸ ಪ್ರಾರಂಭ ಮಾಡಲಾಗುವುದು, ಕೃಷ್ಣ ಜನ್ಮಾಷ್ಟಮಿಗೆ ವಿಗ್ರಹದ ಬೇಡಿಕೆಯಿದ್ದು, ಬಹಳಷ್ಟು ಕೆಲಸದ ಒತ್ತಡ ಇರುವುದರಿಂದ ಆದಷ್ಟು ಬೇಗನೇ ಶಿಲೆ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿದರು.
ಇನ್ನೂ ಇ.ಎಲ್.ವಿ. ಭಾಸ್ಕರ್ ಅವರು ಮಾತನಾಡಿ ಅಯೋಧ್ಯೆಯ ರಾಮ ನಿರ್ಮಾಣದಂತಹ ಸುಂದರ ದೇವರ ಶಿಲೆ ಕೆತ್ತನೆ ಮಾಡಿದಂತೆ, ನಮ್ಮ ಭಾಗದಲ್ಲಿಯೂ ಸಹ ರಾಧಕೃಷ್ಣನ ಮೂರ್ತಿಯ ಶಿಲೆ ಕೆತ್ತನೆಯ ಕಾರ್ಯವನ್ನು ಅರುಣ್ ಯೋಗಿರಾಜ್ ಅವರ ಅಮೃತ ಹಸ್ತದಿಂದಲೇ ನಿರ್ಮಾಣವಾಗುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಎಲ್. ರಾಜೇಶ್, ಡಿ.ಪಿ.ರಾಜಣ್ಣ, ಅರುಣ್, ಚಂದ್ರಶೇಖರ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296