Author: admin

ವಿಶ್ವಸಂಸ್ಥೆಯ ಸುರಕ್ಷೆ ಮತ್ತು ಭದ್ರತಾ ಇಲಾಖೆ (ಯುಎನ್ ಡಿಎಸ್ಎಸ್) ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ನಿವೃತ್ತ ಕರ್ನಲ್ ವೈಭವ್ ಅನಿಲ್ ಕಾಳೆ (46) ಯುದ್ಧಪೀಡಿತ ಗಾಝಾದಲ್ಲಿ ನಿಧನರಾಗಿದ್ದಾರೆ. ಮೃತ ಕಾಳೆಯವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಎಲ್ಲರೂ ಪುಣೆಯಲ್ಲಿ ವಾಸವಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ವಿಶ್ವಸಂಸ್ಥೆಯ ಇಲಾಖೆಗೆ ಸೇರಿದ್ದರು. ರಫ್ಹಾ ಪಟ್ಟಣದ ಯೂರೋಪಿಯನ್ ಆಸ್ಪತ್ರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಖಾನ್ ಯೂನಿಸ್ ನಲ್ಲಿ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆದಿದ್ದು ಈ ವೇಳೆ ಕೊನೆಯುಸಿರೆಳೆದಿದ್ದಾರೆ. ಯುನ್ ಡಿಎಸ್ಎಸ್ ನ ಮತ್ತೊಬ್ಬ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ವಾಹನ ಎಂದು ಸ್ಪಷ್ಟವಾಗಿ ಫಲಕವಿದ್ದರೂ, ಅದರ ಮೇಲೆ ದಾಳಿ ನಡೆಸಿದ್ದು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷದ ಅಕ್ಟೋಬರ್ 7ರಂದು ಆರಂಭವಾದ ಹಮಾಸ್-ಇಸ್ರೇಲ್ ಸಂಘರ್ಷದಿಂದ ಮೃತಪಟ್ಟ ಜಾಗತಿಕ ಸಂಸ್ಥೆಯ ಮೊಟ್ಟಮೊದಲ ಅಂತರಾಷ್ಟ್ರೀಯ ಯೋಧನ ಸಾವು ಇದಾಗಿದೆ. ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್, ಈ…

Read More

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ಭಾರತಕ್ಕೆ ಆಗಮಿಸುವುದನ್ನೇ ಪೊಲೀಸರು ಕಾದು ಕುಳಿತಿದ್ದಾರೆ. ನಿನ್ನೆ ಮಧ್ಯಾಹ್ನ 12.20 ಕ್ಕೆ ಅಲ್ಲಿಂದ ವಿಮಾನವೊಂದರಿಂದ ಬೆಂಗಳೂರು ಬರಬೇಕಿತ್ತು, ಅವರು ಟಿಕೆಟ್ ತೆಗೆದುಕೊಂಡ ಬಗ್ಗೆ ನಗರದ ಪೊಲೀಸರಿಗೆ ಖಚಿತ ಮಾಹಿತಿ ಇತ್ತು. ಆದರೆ ಕೊನೆಕ್ಷಣದಲ್ಲಿ ಅವರು ಆ ವಿಮಾನ ಹತ್ತದೆ ಅಲ್ಲೇ ಉಳಿದುಬಿಟ್ಟಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಿ ಅವರು ಹೊರಬರುತ್ತಿದ್ದಂತೆಯೇ ದಸ್ತಗಿರಿ ಮಾಡಬೇಕೆಂದು ಕಾಯುತ್ತಿದ್ದ ಪೊಲೀಸರಿಗೆ ನಿರಾಶೆ ಎದುರಾಯಿತು. ಅವರು ವಾಪಸ್ಸು ಬರಲಿರುವ ಬಗ್ಗೆ ದಟ್ಟ ವದಂತಿಗಳು ಹರಡಿದ್ದು ಸುಳ್ಳಲ್ಲ. ಅವರು ಜರ್ಮನಿಯಲ್ಲಿರುವುದು ಖಚಿತವಾಗಿದೆ. ಆದರೆ, ಇಂಟರ್ ಪೋಲ್ ಏನು ಮಾಡುತ್ತಿದೆ ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯ ಸರ್ಕಾರ ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ ಎಂದು 10-12 ದಿನಗಳಿಂದ ಹೇಳುತ್ತಿದೆ. ಕುಖ್ಯಾತ ಅಪರಾಧಿಗಳನ್ನು ಕ್ಷಣಾರ್ಧದಲ್ಲಿ ಟ್ರೇಸ್ ಮಾಡಿ ವಶಕ್ಕೆ ಪಡೆಯುವ ಇಂಟರ್ ಪೋಲ್ ಅಧಿಕಾರಿಗಳಿಗೆ ಭಾರತದ ಒಬ್ಬ…

Read More

ಸರ್ಕಾರಿ ಜಾಗದ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು ರಾತ್ರೋ ರಾತ್ರಿ 50 ಮಂದಿಯ ಮೇಲೆ ದೂರು ದಾಖಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರ್ಕಾರಿ ಜಾಗ ವಿವಾದ ರಾತ್ರಿಯಿಡೀ ವಿಕೋಪಕ್ಕೆ ತಿರುಗಿತ್ತು. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನ ಪಡಿಸಲು ಯತ್ನಿಸಿದ್ರು. ಘಟನೆ ಸಂಬಂಧ 50 ಮಂದಿಯ ಮೇಲೆ ದೂರು ದಾಖಲಾಗಿದೆ. ಸರ್ಕಾರಿ ಜಾಗದಲ್ಲಿ ದೇವಾಲಯ ಕಟ್ಟಲು ಲಂಬಾಣಿ ಜನಾಂಗದವರು ಜಾಗಕ್ಕೆ ತಂತಿ ಬೇಲಿ ಹಾಕಿದ್ದರು. ಇದನ್ನು ವಿರೋಧಿಸಿ ಸಮುದಾಯ ಭವನ ಕಟ್ಟಲು ಇನ್ನೊಂದು ಸಮುದಾಯ ಪಟ್ಟು ಹಿಡಿದಿತ್ತು. ಈ ಗಲಾಟೆ ನಡುವೆಯೇ ಗ್ರಾಮದ ಕೆಲವರು ತಂತಿ ಬೇಲಿ ಕಿತ್ತು ಬಿಸಾಕಿದ್ದರು. ಹೀಗೆ ಎರಡೂ ಸಮುದಾಯದವರ ನಡುವೆ ಗಲಾಟೆ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ದೇವಾಲಯದಲ್ಲಿ ಹುಂಡಿ ಒಡೆದಾಗ ಸಿಕ್ಕ ಹತ್ತಾರು ಪತ್ರಗಳ ಪೈಕಿ, ಒಂದು ಪತ್ರದಲ್ಲಿ ಮಹಿಳೆಯೋರ್ವರು ಬರೆದ ಡೆತ್ ನೋಟ್ ಸಿಕ್ಕಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ, ಈ ಘಟನೆ ಮೈಸೂರಿನ ಶ್ರೀಕಂಠೇಶ್ವರ ದೇಗುಲದಲ್ಲಿ ಪತ್ತೆಯಾಗಿದೆ. “ಹೇ ಭಗವಂತ! ಮಿತಿ ಮೀರಿದ ಸಾಲದಿಂದ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿದ್ದೇನೆ. ಸಣ್ಣ ಪುಟ್ಟ ವಿಷ ಯಕ್ಕೂ ಗಂಡ ಜಗಳವಾಡುತ್ತಾರೆ. ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ಶನಿದೇವ ನನ್ನ ಸಾವಿಗೆ ಯಾರೂ ಕಾರಣರಲ್ಲ…’ ಇಂಥದೊಂದು ಪತ್ರ ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಹುಂಡಿ ಎಣಿಕೆಯ ವೇಳೆ ಬೆಳಕಿಗೆ ಬಂದಿದೆ. ವಿಪರೀತ ಸಾಲ, ಬಡ್ಡಿ, ಬ್ಯಾಂಕಿನ ಸಾಲ ಕಟ್ಟಲಾಗುತ್ತಿಲ್ಲ. ಸಾಲದ್ದಕ್ಕೆ ನನ್ನೆಲ್ಲಾ ಒಡವೆಯನ್ನು ಗಿರವಿ ಇಟ್ಟಿರುವೆ. ನನ್ನ ಬಳಿ ಹಣ ಇಲ್ಲದ್ದಕ್ಕೆ ಗಂಡ ಸಣ್ಣ ವಿಚಾರಕ್ಕೂ ಜಗಳವಾಡುತ್ತಾರೆ. ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದೆ, ಅದೂ ಆಗಲಿಲ್ಲ. ನಿತ್ಯವೂ ನೋವು ಅನುಭವಿಸುತ್ತಿರುವೆ. ನಿತ್ಯವೂ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತೆ. ನನಗೆ ಈ ಜೀವನ ಬೇಡ ಎಂದು ತೀರ್ಮಾನಿಸಿದ್ದೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಹಲವು ಭಕ್ತರು…

Read More

ಬಾಲಿವುಡ್​ ಖ್ಯಾತ​ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಶಮಿತಾ ಶೆಟ್ಟಿ ಅವರು ತಮ್ಮ ಇನ್ ​ಸ್ಟಾಗ್ರಾಮ್​ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವೀಡಿಯೋದಲ್ಲಿ ನಟಿ ಶಮಿತಾ ಶೆಟ್ಟಿ ಅವರು ಎಂಡೊಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಅದಕ್ಕಾಗಿ ಸೂಕ್ತವಾದ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಎಲ್ಲಾ ಮಹಿಳೆಯರಿಗೂ ಈ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಸಲಹೆ ನೀಡಿದ್ದಾರೆ. ಆಸ್ಪತ್ರೆಯ ಹಾಸಿಗೆಯಲ್ಲಿ ಕುಳಿತು ವೀಡಿಯೊ ಶೇರ್‌ ಮಾಡಿಕೊಂಡಿದ್ದಾರೆ. ಶಮಿತಾ ಮಾತನಾಡಿ ಮಹಿಳೆಯರೇ, ದಯವಿಟ್ಟು ಎಂಡೊಮೆಟ್ರಿಯೊಸಿಸ್ ಬಗ್ಗೆ ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ ನಿಂದ ಬಳಲುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ರೋಗದ ಬಗ್ಗೆ ತಿಳಿದಿಲ್ಲ ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳಲು ಸಹಾಯ ಮಾಡಿದ ನನ್ನ ವೈದ್ಯರಾದ ಗೈನಾಕ್ ಡಾ ನೀತಾ ವಾರ್ಟಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ನಾನು ಧನ್ಯವಾದ ಎಂದಿದ್ದಾರೆ. ಈಗ ನಾನು ಈ ರೋಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಿದ್ದೇನೆ…

Read More

ನವ ವಿವಾಹಿತ ಜೋಡಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ. ಮನೋಜಕುಮಾರ ಪೋಳ(30), ರಾಖಿ(23) ಮೃತ ದುರ್ದೈವಿಗಳು ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಕುಟುಂಬದ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಎನ್ನಲಾಗಿದೆ. ತಡರಾತ್ರಿ ಮನೆಯಲ್ಲಿ ದಂಪತಿಗಳು ಇಬ್ಬರು ಮಾತ್ರ ಇದ್ದು, ಈ ವೇಳೆಯೇ ನವ ಜೋಡಿ ಆತ್ಮಹತ್ಯೆಗೆ ಶರಣಾಗಿದೆ ಎನ್ನಲಾಗಿದೆ. ಇಬ್ಬರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮನೋಜಕುಮಾರ ತಾಯಿ ಭಾರತಿ ಮಗಳ ಊರಿಗೆ ಹೋಗಿದ್ದು, ಇಂದು ಬೆಳಗ್ಗೆ ಮನೆಯವರು ಮನೆಗೆ ವಾಪಸ್ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ. ಆದರೆ ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಪೊಲೀಸರ ತನಿಖೆ ಬಳಿಕ ಸತ್ಯಾಂಶ ತಿಳಿದು ಬರಬೇಕಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ಬೆಂಗಳೂರು: ಕಳೆದ 20 ವರ್ಷಗಳಿಂದ ಮನೆಗಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಕಳ್ಳನನ್ನು ಸಿಸಿಬಿ ಸಂಘಟಿತ ಅಪರಾಧ ದಳ ಸೆರೆ ಹಿಡಿದಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕಾಶ್‌ ಅಲಿಯಾಸ್‌ ಬಾಲಾಜಿ (44) ಬಂಧಿತ ಎಂದು ಗುರುತಿಸಲಾಗಿದ್ದು, ನಿವೃತ್ತ ಹೆಡ್ ಕಾನ್ಸ್ಟೇಬಲ್ ಒಬ್ಬರ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದ ಈತ ಹಿಂದೆಗೂ ಜೈಲುವಾಸ ಅನುಭವಿಸಿದ್ದ ಎನ್ನಲಾಗಿದೆ. ಇತ್ತೀಚೆಗೆ ಬಂಡೆಪಾಳ್ಯ ವ್ಯಾಪ್ತಿಯ ಮನೆಯೊಂದರಲ್ಲಿ ನಕಲಿ ಕೀ ಬಳಸಿ ಚಿನ್ನಾಭರಣ ದೋಚಿದ್ದ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆಯಾಗಿತ್ತು. ಹಲವು ಆಯಾಮಗಳಲ್ಲಿ ತನಿಖೆ ನಡೆಸಿದಾಗ ರಾಜಧಾನಿಯ ಮೋಸ್ಟ್‌ ವಾಂಟೆಡ್‌ ಮನೆಗಳ್ಳ ಪ್ರಕಾಶನ ಕೈವಾಡವಿರುವುದು ಗೊತ್ತಾಗಿತ್ತು. ಹೀಗಾಗಿ, ತಲೆಮರೆಸಿಕೊಂಡಿದ್ದ ಪ್ರಕಾಶನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಗರದಲ್ಲಿ ಆರು ಮನೆಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿ ದೋಚಿದ್ದ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಜೈಲಿಂದ ಬಿಡುಗಡೆಯಾಗಿದ್ದ ಪ್ರಕಾಧಿಶ್‌, ಆರು ಮನೆ ದೋಚುವಲ್ಲಿ ಸಫಲನಾಗಿದ್ದ. ಕದ್ದ ಆಭರಣಗಳನ್ನು ಅಡವಿಟ್ಟು ಮೋಜು ಮಸ್ತಿ, ದುಶ್ಚಟಗಳಿಗೆ…

Read More

ವಿಜಯಪುರ: ಮುಂಗಾರು ವೈಫಲ್ಯ ಹಾಗೂ ಮಳೆ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಿಸಿದ್ದು, ಜಿಲ್ಲೆಯ ಬೆಳೆಹಾನಿಯಾದ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಹಣ ಜಮೆ ಮಾಡಲಾಗುತ್ತಿದ್ದು, ಜಿಲ್ಲೆಯ 2,50,063 ರೈತರಿಗೆ ₹360.10 ಕೋಟಿ ಹಣವನ್ನು ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾಗಿರುವ ಕುರಿತು https://parihara.karnataka.gov.in/service92/ ಜಾಲತಾಣದಿಂದ ಪರಿಶೀಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ. ಸಹಾಯವಾಣಿ: ಜಿಲ್ಲಾಧಿಕಾರಿಗಳ ಕಚೇರಿ ವಿಜಯಪುರ 08352- 221261 ಹಾಗೂ ಟೋಲ್ ಫ್ರೀ ಸಂಖ್ಯೆ 1077, ಉಪ ವಿಭಾಗಾಧಿಕಾರಿಗಳು ವಿಜಯಪುರ 083521- 295286, ಉಪವಿಭಾಗಾಧಿಕಾರಿಗಳು ಇಂಡಿ 08359- 225003, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ವಿಜಯಪುರ 08352- 250244 ಸಂಪರ್ಕಿಸಬಹುದಾಗಿದೆ. ಜೊತೆಗೆ ವಿಜಯಪುರ ತಹಶೀಲ್ದಾರ್ ಮೊ. 08352- 355731, ಬಬಲೇಶ್ವರ ತಹಶೀಲ್ದಾರ ಮೊ.8310504205, 9686073390, ತಿಕೋಟಾ ತಹಶೀಲ್ದಾರ್ ಮೊ.87624 80811, 94805 32696,…

Read More

ಬೆಂಗಳೂರು: ಎಸ್ಐಟಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರವಾಗಿ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಐಟಿ ನಡೆಸುವ ಪಿನ್ ಟು ಪಿನ್ ತನಿಖೆಯ ಮಾಹಿತಿ ಕಾಂಗ್ರೆಸ್ ಗೆ ಹೋಗ್ತಿದೆ. ಅದಕ್ಕಾಗಿಯೇ ಬಿಜೆಪಿ ಕಡೆ ತಿರುಗಿಸ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕಾದರೆ ಸಿಬಿಐಗೆ ತನಿಖೆ ವಹಿಸಲಿ ಎಂದು ಆಗ್ರಹಿಸಿದರು. ಹಾಸನದಲ್ಲಿ ಹಲವು ಕಡೆ ಎಸ್ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್ ನವ್ರಿಗೆ ತಮ್ಮ ಮೇಲೆ ಬಂದ ಆಪಾದನೆಯಿಂದ ಇರಿಸುಮುರಿಸು ಆಗಿದೆ. ಎಸ್ಐಟಿ ಅಧಿಕಾರಿಗಳು ಪಕ್ಷಪಾತಿ ಧೋರಣೆ ತೋರಿಸ್ತಿದ್ದಾರೆ. ಇದರ ಹಿಂದೆ ದೊಡ್ಡ ತಿಮಿಂಗಿಲ ಇದೆ ಅಂತ ಹೆಚ್ಡಿಕೆ ಆರೋಪ ಮಾಡಿದ್ದಾರೆ. ಎಲ್ಲೋ ಒಂದು ಕಡೆ ಇದನ್ನು ಬಿಜೆಪಿ ಕಡೆ ತಿರುಗಿಸಲು ಸಂಚು ನಡೆದಿದೆ ಎಂದರು. ಒಕ್ಕಲಿಗ ಸಮುದಾಯ ತಮ್ಮ ವಿರುದ್ಧ ತಿರುಗಿ ಬೀಳುವ ಭೀತಿಯಿಂದ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ ಆರೋಪ ಮಾಡ್ತಿದೆ. ಪೆನ್ಡ್ರೈವ್ ಹಂಚಿದವರೇ ಕಾಂಗ್ರೆಸ್ ನವ್ರು, ಇದರಲ್ಲಿ ಎರಡು ಮಾತಿಲ್ಲ. ಈಗ…

Read More

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಶುಭ ಹಾರೈಸಿದರು. “ನನ್ನ ಆತ್ಮೀಯ ಸ್ನೇಹಿತ ಮತ್ತು ಸಹೋದ್ಯೋಗಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಸಮರ್ಪಣೆ, ಕೌಶಲ್ಯಗಳು ಮತ್ತು ನಮ್ಮ ಅಚಲವಾದ ಬದ್ಧತೆ ಯಾವಾಗಲೂ ಎದ್ದು ಕಾಣುತ್ತದೆ. ನೀವು ಅದೇ ಉತ್ಸಾಹ ಮತ್ತು ಶಕ್ತಿಯೊಂದಿಗೆ ಮುನ್ನಡೆಸುವುದನ್ನು ಮುಂದುವರಿಸಲಿ. ನಿಮಗೆ ಯಶಸ್ಸು ಮತ್ತು ಸಂತೋಷದಿಂದ ತುಂಬಿದ ವರ್ಷವನ್ನು ಹಾರೈಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರು ಡಿಕೆಶಿ ಹೆಗಲ ಮೇಲೆ ಕೈ ಹಾಕಿರುವ ಫೋಟೋವನ್ನು ಅಪ್ಲೋಡ್‌ ಮಾಡಿ ಶುಭಾಶಯ ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More