Author: admin

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಯಾಗಿದ್ದು, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದು ಕಾಯ್ದೆಯ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರವು 300 ಜನರಿಗೆ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರ ಭಾಗವಾಗಿಯೇ 14 ಜನರಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಗಿದೆ. ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿದ್ದು, ಅವರೀಗ ಸಂತಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಹಿಡಿದಿರುವ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಹೀಗೆ, ಪಾಕಿಸ್ತಾನದಲ್ಲಿ ಬಹುಸಂಖ್ಯಾತರಿಂದ ಸಂಕಷ್ಟ ಅನುಭವಿಸಿ, ಭಾರತಕ್ಕೆ ಬಂದು…

Read More

ರಿಯಲ್​ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುವ ಜೊತೆಗೆ ಆ್ಯಕ್ಷನ್​​ ಕಟ್​ ಹೇಳಿದ್ದ ‘A’ ಸಿನಿಮಾ  ಮೇ 17ರಂದು ರೀ ರಿಲೀಸ್ ಆಗುತ್ತಿದೆ. 1998ರ ಫೆಬ್ರವರಿ 12ರಂದು ಕರ್ನಾಟಕದಾದ್ಯಂತ ಚಿತ್ರಮಂದಿರ ಪ್ರವೇಶಿಸಿದ್ದ A ಸಿನಿಮಾ ಕಿಚ್ಚು ಹಚ್ಚಿತ್ತು. ಚಿತ್ರ ರೀ ರಿಲೀಸ್ ಆಗುತ್ತಿರುವ ಸಂದರ್ಭದಲ್ಲಿ ಚಿತ್ರದ ಬಗ್ಗೆ ಚಿತ್ರದ ನಟಿ, ಪಾತ್ರ, ಚಾಂದಿನಿ ಇದೀಗ ಅಭಿಪ್ರಾಯ ಹಂಚಿಕೊಂಡಿದ್ದು, ಉಪೇಂದ್ರ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಜೀವನವನ್ನೇ ಬದಲಿಸಿದ ಸಿನಿಮಾ ಅದು. ಅದರಿಂದ ನನಗೆ ಸಿಕ್ಕಿದ್ದು ಎರಡು ವಿಚಾರಗಳು. ಒಂದು ಕನ್ನಡ ಜನರ ಪ್ರೀತಿ, ಮತ್ತೊಂದು ಆ ಸಿನಿಮಾದ ಫೇಮಸ್ ಡೈಲಾಗ್ “GOD IS GREAT” ನಂತೆ ಸಿಕ್ಕ ಆಶೀರ್ವಾದ ಎಂದು ಅವರು ಹೇಳಿದ್ದಾರೆ. ನಾನಿಂದಿಗೂ A ಚಾಂದಿನಿ ರೀತಿಯೇ ಇದ್ದೇನೆ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ ‘A’  ಎಂದು ಅವರು ಹೇಳಿದ್ದಾರೆ. ಅಲ್ಲದೇ  ಉಪೇಂದ್ರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳಿಲ್ಲ ಎಂದಿದ್ದಾರೆ. ಅಂದಿಗೂ ಇಂದಿಗೂ ಉಪೇಂದ್ರ ನನ್ನ ಮೆಚ್ಚಿನ…

Read More

ಮೈಸೂರು: ಪ್ರಜ್ವಲ್ ರೇವಣ್ಣ ಕೇಸ್ ಗೆ ಸಂಬಂಧ ಪಟ್ಟಂತೆ ಭ್ರಷ್ಟರ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಸವಾಲು ಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಬಳಿ ಇರುವ ಪೆನ್ ಡ್ರೈವ್ ನಲ್ಲಿ ಎಲ್ಲಾ ಮಾಹಿತಿಗಳು ಇವೆ. ಭ್ರಷ್ಟರ ಬಗ್ಗೆ ಮಾಹಿತಿ ನೀಡಲು ನಾನು ಸಿದ್ಧ, ನಾನು ಸಾಕ್ಷಿ ಸಮೇತ ನಿಮಗೆ ನೀಡಿದರೆ ನೀವು ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ. ನಿಮಗೆ ಧೈರ್ಯ ಇದೆಯಾ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ದಾಖಲೆ ಸಮೇತವಾಗಿ ಹಲವಾರು ರಾಜಕಾರಣಿಗಳ ಕಳ್ಳಾಟವನ್ನು ನೀಡಿದರು ಯಾಕೆ ಅದರ ಬಗ್ಗೆ ವಿಚಾರಣೆ ನಡೆಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇರುವವರೆಗೆ ಈ ವ್ಯವಸ್ಥೆ ಸರಿ ಮಾಡಲು ಸಾದ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ಈಗಾಗಲೇ ವಕೀಲ ದೇವರಾಜೇ ಗೌಡರನ್ನು ಬಂಧಿಸಿದ್ದಾರೆ. ಅವರಿಂದ ಯಾವ ಉತ್ತರ ಬಯಸುತ್ತಿದ್ದೀರಾ. ಪೆನ್ ಡ್ರೈವ್ ಗೆ ಸಂಬಂಧ ಪಟ್ಟಂತೆ ವಿಚಾರಣೆ ಮಾಡುತ್ತಿದ್ದರೋ ಅಥವಾ ಅತ್ಯಾಚಾರ ವಿಚಾರವಾಗಿ…

Read More

ಬೆಂಗಳೂರು: ಮನೆಯ ಶೌಚಾಲಯದಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಭುಧ್ಯಾ(21) ಸಾವನ್ನಪ್ಪಿರುವ ಯುವತಿಯಾಗಿದ್ದಾಳೆ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಭುಧ್ಯಾ ಮೃತದೇಹ ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬುಧವಾರ ಸಂಜೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಅಸಹಜ ಸಾವು ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಹಾಸನ: ಜಿಲ್ಲೆಯ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಬಾಲಕರು ನೀರುಪಾಲಾಗಿದ್ದಾರೆ. ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೀವನ್ (13), ಸಾತ್ವಿಕ್ (11), ವಿಶ್ವ (12), ಪೃಥ್ವಿ (12) ಮೃತ ದುರ್ದೈವಿಗಳಾಗಿದ್ದಾರೆ. ಮೃತ ಮಕ್ಕಳು ಮುತ್ತಿಗೆ ಗ್ರಾಮದವರು ಎಂದು ತಿಳಿದು ಬಂದಿದೆ. ಶಾಲೆಗೆ ರಜೆ ಇರುವುದರಿಂದ ಐವರು ಗೆಳೆಯರು ಈಜಲು ಹೊಳೆಗೆ ಹೋಗಿದ್ದರು. ಹೊಳೆಗೆ ಇಳಿದಾಗ ನೀರಿನಿಂದ ಹೊರಬರಲು ಆಗದೆ ನಾಲ್ವರು ನೀರುಪಾಲಾಗಿದ್ದಾರೆ. ಮತ್ತೊರ್ವ ಬದುಕುಳಿದಿದ್ದಾನೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನೀರಲ್ಲಿ ಕೊಚ್ಚಿ ಹೋಗಿರುವ ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಶೋಧಕಾರ್ಯ ಮುಂದುವರಿದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಕೊರಟಗೆರೆ: ರಾಜ್ಯಪಾಲರ ಲೆಟರ್ ರೈಟ್ ಹಾಗೂ ಸಹಿಯನ್ನೇ ಫೋರ್ಜರಿ ಮಾಡಿ ಮುಗ್ಧ ಜನರಿಗೆ ವಂಚನೆ ಮಾಡುತ್ತಿದ್ದ ಖತರ್ನಾಕ್ ಕಳ್ಳ ಈಗ ಪೊಲೀಸರ ಅಥಿತಿಯಾಗಿದ್ದಾನೆ. RBI ಗವರ್ನರ್ ಸೀಲ್ ಮತ್ತು ಸಹಿ ಬಳಸಿ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹರಸಾಹಸ ಪಡುತ್ತಿದ್ದ ಈ ಖತರ್ನಾಕ್ ಕಳ್ಳನು ಗೃಹಸಚಿವ ಡಾ.ಜಿ. ಪರಮೇಶ್ವರ ಜೊತೆಯಲ್ಲಿ ಇರುವ ಪೋಟೋ ದುರ್ಬಳಕೆ ಮಾಡಿ ವಂಚನೆ ಮಾಡುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನ ಕೆಂಗೇರಿ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ 14ಪ್ರಕರಣ ದಾಖಲಾಗಿವೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ಒಂದರಲ್ಲಿಯೇ ವಿವಿಧ ದೂರುಗಳ ಅನ್ವಯ ಸುಮಾರು 13 ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಬೆಂಗಳೂರು ಮೂಲದ ಕೆಲವು ದೊಡ್ಡ ದೊಡ್ಡ ಅಧಿಕಾರಿಗಳ ಸಹಿಯನ್ನೇ ಫೋರ್ಜರಿ ಮಾಡುತ್ತಿದ್ದ ಖತರ್ನಾಕ್ ಭೂಪನಾಗಿರುವ ಈ ಝುಬೇರ್ ಎನ್ನುವಾತ. ಗೃಹ ಸಚಿವರ ಆಪ್ತ, ಪಿ ಎ, ಎಂದು ಹೇಳಿಕೊಂಡು ಅಮಾಯಕರಿಗೆ 8 ಕೋಟಿಗೂ ಅಧಿಕ ಹಣ ವಂಚನೆ ಮಾಡುತ್ತಿದ್ದ. ಈ ಆರೋಪಿಯು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರ…

Read More

ಪಾವಗಡ:  ವಿದ್ಯುತ್ ಶಾಕ್ ನಿಂದಾಗಿ ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ಪಾವಗಡ ಪಟ್ಟಣದ ವೇಣುಗೋಪಾಲ ದೇವಸ್ಥಾನದ ರಸ್ತೆ ಸಮೀಪದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ನಡೆದಿದೆ. ಪಾರ್ಸಿಲಾಲ್ ಎನ್ನುವ ವ್ಯಕ್ತಿ ರಾಜಸ್ಥಾನದ ಮೂಲದವರಾಗಿದ್ದು ಕಳೆದ 13 ವರ್ಷಗಳಿಂದ ಪಾವಗಡದಲ್ಲಿ ಸ್ವೀಟ್ ಅಂಗಡಿಯನ್ನು ತೆರೆದು ಜೀವನವನ್ನು ನಡೆಸುತ್ತಿದ್ದರು. ಪ್ರತಿನಿತ್ಯದಂತೆ ಇಂದು ಸಹ ತನ್ನ ಸ್ವೀಟ್ ಗಾಡಿಯಲ್ಲಿರುವ ಬ್ಯಾಟರಿಗೆ ಚಾರ್ಜ್ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಮೃತ ಪಾರ್ಸಿಲಾಲ್ ಅವರಿಗೆ ಹೆಂಡತಿ ಮತ್ತು ಮೂರು ಜನ ಮಕ್ಕಳಿದ್ದು, ಇವರ ಅಂತ್ಯಕ್ರಿಯೆಗಳು ಪಾವಗಡದಲ್ಲೇ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಸದ್ಯ ಈ ಘಟನೆ ಸಂಬಂಧಪಟ್ಟು ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ನಂದೀಶ್ ನಾಯ್ಕ ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಬೈಕ್‌ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್‌ಐ ಸಾವನ್ನಪ್ಪಿರುವ ಘಟನೆ ತಾಲೂಕಿನ ಅಲಪ್ಪನಗುಡ್ಡೆ ಸಮೀಪ ನಡೆದಿದೆ. ಮೃತ ಎಎಸ್‌ಐ ಯನ್ನು ಬಿ. ವೆಂಕಟೇಶ್‌ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಕೆಲಸದ ನಿಮಿತ್ತ ತಮ್ಮ ಬೈಕ್‌ ನಲ್ಲಿ ಎಡೆಯೂರಿಗೆ ಹೋಗಿ ಹಿಂತಿರುಗುತ್ತಿದ್ದ ಸಂದರ್ಭ ದುರ್ಘಟನ ನಡೆದಿದೆ ನಡೆದಿದೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ಮಹಿಳೆಯೊಬ್ಬಳು ನವಜಾತ ಶಿಶುವನ್ನು ಚರಂಡಿಗೆ ಎಸೆದು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮಹಿಳೆಯು ಮೃತಪಟ್ಟ ನವಜಾತ ಶಿಶುವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ, ಚರಂಡಿಗೆ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಇತ್ತ ಶಿಶುವನ್ನು ಗಮನಿಸಿದ ಗ್ರಾಮಸ್ಥರು ಚರಂಡಿಯಿಂದ ಗಂಡು ಮಗುವನ್ನು ಮೇಲಕ್ಕೆತ್ತಿದ್ದಾರೆ. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಮಹಿಳೆಯ ವಿರುದ್ಧ ಕ್ರಮಕ್ಕೆ, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮುದ್ದೇಬಿಹಾಳ ಪೊಲೀಸರು ತಾಯಿಗಾಗಿ ಶೋಧ ನಡೆಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ, ಕೊರೊನಾ ಕಾಲದಲ್ಲಿ ಪತಿಯನ್ನೂ ಕಳೆದುಕೊಂಡಿರುವ ಮುಸ್ಲಿಂ ಮಹಿಳೆಗೆ ಕೆಲವು ಮುಸ್ಲಿಂ ಹುಡುಗರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮಹಿಳೆಯ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೂ ದುಷ್ಕರ್ಮಿಗಳು ಕಿರುಕುಳ ನೀಡಿದ್ದು, ಹಲ್ಲೆ ನಡೆಸಿದ್ದಾರೆ. ದೂರು ನೀಡಿದರೂ ಪೊಲೀಸರು ಕ್ಯಾರೇ ಎಂದಿಲ್ಲ ಎಂದು ಆರೋಪಿಸಿದ್ದಾರೆ. ಗದಗ ಬೆಟಗೇರಿಯ ಆಶ್ರಯ ಕಾಲೋನಿ ನಿವಾಸಿಯಾದ ಸೈನಜಾ ಬೇಗಂ ಎಂಬಾಕೆ ಕಿರುಕುಳಕ್ಕೆ ಒಳಗಾದ ಮಹಿಳೆ ಎನ್ನಲಾಗಿದೆ. ನಾಲ್ಕು ಜನ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಸೈನಜಾ ಬೇಗಂ, ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಕೊರೊನಾದಿಂದ ಪತಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಲಿಯಾಕತ್, ಅಲ್ತಾಫ್, ಸೈಯದ್ ಸೇರಿದಂತೆ ಹಲವರು ಈಕೆಗೆ ಕಿರುಕುಳ ನೀಡುತ್ತಿದ್ದು, ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದಿದ್ದು, ಸೈನಾಜ್ ನ ಮಗ ಸದ್ದಾಂನ ಮೇಲೆ ಲಿಯಾಕತ್ ಗ್ಯಾಂಗ್ ತೀವ್ರವಾಗಿ ಹಲ್ಲೆ ಮಾಡಿದೆ. “ನಮಗೆ ಸೂಕ್ತವಾದ ರಕ್ಷಣೆ ನೀಡಬೇಕುʼʼ ಎಂದು ಮಹಿಳೆ ಒತ್ತಾಯಿಸಿದ್ದಾರೆ. ತಾಯಿ, ಮಕ್ಕಳ ‌ಮೇಲೆ ಹಲ್ಲೆ ಮಾಡಿ…

Read More