Subscribe to Updates
Get the latest creative news from FooBar about art, design and business.
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
- ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
Author: admin
ಮೈಸೂರು: ಕಾರು-ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿ ನಡೆದಿದೆ. ಹೆಬ್ಬಾಳು ಬಡಾವಣೆ ನಿವಾಸಿ ರಾಧಾ(34) ಮೃತ ದುರ್ದೈವಿಯಾಗಿದ್ದಾರೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಬೆಂಗಳೂರು ಹೊರವಲಯದ ಚಂದಾಪುರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ ಮೃತದೇಹ ವಸತಿ ನಿಲಯದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಚಂದಾಪುರ ಸಮೀಪದ ಹೀಲಲಿಗೆ ಬಳಿಯಿರುವ ಬಿಸಿಇಟಿ ಎಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ವಿದ್ಯಾರ್ಥಿನಿ ಹರ್ಷಿತಾ(18) ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಹೀಲಲಿಗೆಯಲ್ಲಿನ ಕಾಲೇಜ್ ಅಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು. ವರದಿಗಳ ಪ್ರಕಾರ ಇಂದು ಪಕ್ಕದ ಕೋಣೆಯ ಪ್ರಗತಿ ಎಂಬ ವಿದ್ಯಾರ್ಥಿನಿ ಹರ್ಷಿತಾ ಇದ್ದ ಕೋಣೆಯನ್ನು ಸಾಕಷ್ಟು ಬಾರಿ ಬಡಿದಿದ್ದಳು. ಆ ಕಡೆಯಿಂದ ಉತ್ತರ ಬರದಿದ್ದಾಗ ಅನುಮಾನಗೊಂಡು ಸ್ಟೂಲ್ ಹತ್ತಿ ಕಿಟಕಿಯಿಂದ ಇಣುಕಿ ನೋಡಿದ್ದಾಳೆ. ಈ ವೇಳೆ ಹರ್ಷಿತಾ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ಕಾಲೇಜು ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಡಳಿತ ಮಂಡಳಿ ಸಾಕಷ್ಟು ದಿನಗಳಿಂದ ಹರ್ಷಿತಾಳಿಗೆ ಕಿರುಕುಳ ನೀಡುತ್ತಿತ್ತು. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹರ್ಷಿತಾ ಸಹಪಾಠಿಗಳು ಆರೋಪಿಸಿದ್ದಾರೆ.…
ರಾಮನಗರ: ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಮೃತ ಮಕ್ಕಳನ್ನು ಶಾಬಾಜ್ (14) ಸುಲ್ತಾನ್ (13) ರಿಹಾನ್ ಖಾನ್ (16) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ರಾಮನಗರ ಟೌನ್ ನ ಸುಲ್ತಾನ್ ನಗರದವರಾಗಿದ್ದಾರೆ. ಎಂಟು ಬಾಲಕರು ನಮಾಜ್ ಮುಗಿಸಿ ಈಜಲು ಹೋಗಿದ್ದು, ಈ ಪೈಕಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಗಳನ್ನು ಹೊರತೆಗೆದಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಸಸ್ಯ ಸಂಪತ್ತಿನಿಂದ ಕಂಗೊಳಿಸುವ ಕೊಡಗಿನ ಸಿರಿಯನ್ನೇ ಮರ ಕಳ್ಳರು ಹಗಲು ದರೋಡೆ ಮಾಡಿದ್ದಾರೆ. ತಲಕಾವೇರಿ ಅಭಯಾರಣ್ಯದ ವಿರಾಜಪೇಟೆ ವಲಯದ ಮುಂಡ್ರೋಡು ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದ್ದು ಪರಿಸರ ಪ್ರೇಮಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮರಗಳ ಮಾರಣ ಹೋಮ ನಡೆಯುತ್ತಿದ್ದರೂ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನುವ ಗಂಭೀರ ಆರೋಪಗಳು ಕೂಡ ಕೇಳಿ ಬಂದಿದೆ. ಈ ಬಗ್ಗೆ ಸ್ವತಃ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ ನೀಡಿದ್ದಾರೆ. ಎಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಮರ ಕಡಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ ನೀಡಿದ್ದಾರೆ. 239 ಮರಗಳನ್ನು ಕಡಿದ ವಿಚಾರವಾಗಿ ಏಪ್ರಿಲ್ 30 ರಂದು ಮೂವರ ವಿರುದ್ಧ ಮುಂಡ್ರೋಟು ರೇಂಜ್ ಫಾರೆಸ್ಟ್ ಆಫೀಸರ್ ಪ್ರಕರಣ ದಾಖಲಿಸಿದ್ದರು. ಆದರೆ, ಕೊಡಗು ಏಕೀಕರಣ ರಂಗದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಭೇಟಿ…
ಭಾರತದ ಕೇಸರಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಏಕಾಏಕಿ ದರ ಏರಿಕೆಯಿಂದ ಎಲ್ಲರೂ ಅಚ್ಚರಿಗೊಂಡಿದ್ದಾರೆ. 1 ಕೆಜಿ ಭಾರತೀಯ ಕೇಸರಿ ಬೆಲೆ 4.95 ಲಕ್ಷ ರೂಪಾಯಿಗೆ ಏರಿದೆ. ಏತನ್ಮಧ್ಯೆ, ಭಾರತದ ಕೇಸರಿ ಬೆಲೆ ಏರಿಕೆಗೆ ನಿಖರವಾದ ಕಾರಣವೇನು? ಈ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿದೆ. ಇರಾನ್ ನಿಂದ ಕೇಸರಿ ಪೂರೈಕೆಯಲ್ಲಿ ಭಾರಿ ಕುಸಿತ: ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ, ಇರಾನ್ ನಿಂದ ಕೇಸರಿ ಪೂರೈಕೆಯು ತೀವ್ರವಾಗಿ ಕಡಿಮೆಯಾಗಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಸರಿ ಉತ್ಪಾದನೆಯಾಗುತ್ತದೆ. ಆದರೆ, ಈ ವರ್ಷವೂ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಭಾರತೀಯ ಕೇಸರಿ ಬೆಳೆಗಾರರು ಮತ್ತು ವ್ಯಾಪಾರಿಗಳಿಗೆ ಒಂದು ಪರಿಹಾರ: ಸಿಕ್ಕಿರುವ ಮಾಹಿತಿಯಂತೆ, ಭಾರತದ ಕೆಲವು ಪ್ರಸಿದ್ಧ ಮಸಾಲೆ ಕಂಪನಿಗಳ ಮಸಾಲೆಗಳ ಮಾರಾಟವನ್ನು ಸಿಂಗಾಪುರ ಮತ್ತು ಹಾಂಕಾಂಗ್ ನಲ್ಲಿ ನಿಷೇಧಿಸಲಾಗಿದೆ. ಆದರೆ ಕೇಸರಿ ಭಾರತೀಯ ಮಸಾಲೆಯಾಗಿದ್ದು ಅದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಪ್ರಸ್ತುತ, ಕೇಸರಿ ಬೆಲೆ 4.95 ಲಕ್ಷ ರೂ ಆಗಿದೆ. ಪಶ್ಚಿಮ ಏಷ್ಯಾದಲ್ಲಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲಪಾಳ್ಯ ಹಾಗೂ ದೊಡ್ಡಪ್ಪನಹಳ್ಳಿಯಲ್ಲಿರುವ ಕಸದ ತೊಟ್ಟಿಯನ್ನು ಕಳೆದ ಮೂರು ತಿಂಗಳಿಂದ ಸ್ವಚ್ಛಗೊಳ್ಳಿಸಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಕಸವನ್ನು ತೆಗೆದುಕೊಂಡು ಹೋಗದೇ ಸ್ವಚ್ಛತೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಲಾಗುತ್ತಿದೆ. ಇಡೀ ಗ್ರಾ.ಪಂ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನ ವಾಸಿಸುವ ಪ್ರದೇಶದಲ್ಲಿ ನೈರ್ಮಲ್ಯತೆ ಕಾಪಾಡುತ್ತಿಲ್ಲ ಎಂದು ದೂರಿದ್ದಾರೆ. ದೊಡ್ಡಪ್ಪನಹಳ್ಳಿ ಬಳಿಯೇ ವೃದ್ಧಾಶ್ರಮ ಇದ್ದು, ಆಸರೆ ಇಲ್ಲದ ಹಿರಿ ಜೀವಿಗಳು ಬದುಕುತ್ತಿರುವ ಸ್ಥಳದಲ್ಲಿ ಗಬ್ಬು ವಾಸನೆ ನಾರುತ್ತಿದ್ದು, ಸೊಳ್ಳೆ, ಕ್ರಿಮಿ ಕೀಟಗಳಿಂದ ಅವರು ದಿನ ನಿತ್ಯ ಹೇಳಿಕೊಳ್ಳುಲು ಆಗದಂತಹ ಬಾಧೆಯನ್ನು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿರುವ ಉರ್ದು ಶಾಲೆಯ ಸಮೀಪ ತೊಟ್ಟಿಯಲ್ಲಿ ಕಸ ತುಂಬಿದ್ದು, ಹತ್ತಿರದಲ್ಲಿಯೇ ಅಂಗನವಾಡಿ ಇದೆ. ಅದಕ್ಕೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ನೀರು ತರಲು ಹೋದವರು ಮೂಗು ಮಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ದಾಖಲು ಆಗಲು…
ನಮ್ಮ ಆರೋಗ್ಯದ ಗುಟ್ಟು ತಿಳಿಯಲು ನಾವು ಯಾವಾಗಲೂ ಆಸ್ಪತ್ರೆಗೆ ಹೋಗಬೇಕು ಎಂದೇನಿಲ್ಲ. ನಮ್ಮ ದೇಹದಲ್ಲಿಯೇ ಆಗುವಂತಹ ಕೆಲವೊಂದು ಬದಲಾವಣೆಗಳು ಮತ್ತು ಸೂಚನೆಗಳು ನಮಗೆ ನಮ್ಮ ಸದ್ಯದ ಆರೋಗ್ಯ ಸ್ಥಿತಿಯ ಬಗೆಗಿನ ಮಾಹಿತಿಯನ್ನು ಕೊಡುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ, ಇದ್ದಕ್ಕಿದ್ದಂತೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಅದನ್ನು ಜಾಂಡೀಸ್ ಎಂದು ಹೇಳಬಹುದು. ಮಂಡಿಗಳನ್ನು ಮಡಿಸಲು ಆಗದಿದ್ದರೆ, ಅಥವಾ ಕುಳಿತು ಮೇಲಕ್ಕೆ ಎದ್ದೇಳಲು ಆಗದಿದ್ದರೆ, ಅದನ್ನು ಕೀಲು ನೋವು ಎನ್ನಬಹುದು. ಹೀಗೆ ಹಲವಾರು ವಿಚಾರಗಳ ಮೂಲಕ ನಮ್ಮ ದೇಹದ ಆರೋಗ್ಯದ ಸ್ಥಿತಿಗತಿಯನ್ನು ನಾವು ತಿಳಿದುಕೊಳ್ಳಬಹುದು. ಹಾಗಾದರೆ ಮನುಷ್ಯ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣವನ್ನು ಗಮನಿಸಿ ಅದರಿಂದ ಆರೋಗ್ಯದ ಗುಟ್ಟು ತಿಳಿಯಬಹುದೇ ಎಂದು ನೀವು ಪ್ರಶ್ನೆ ಕೇಳಿದರೆ, ಹೌದು ಎನ್ನುತ್ತದೆ ವೈದ್ಯಲೋಕ. ಒಂದೊಂದು ಮೂತ್ರದ ಬಣ್ಣಕ್ಕೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆ ಇರಬಹುದು ಎನ್ನುವುದು ವೈದ್ಯರ ಮಾತು. ಬನ್ನಿ ಹಾಗಾದರೆ ಬೇರೆ ಮೂತ್ರದ ಬಣ್ಣಕ್ಕೆ ಅನುಗುಣವಾಗಿ ಯಾವ ಕಾಯಿಲೆಗಳು ಇರುತ್ತವೆ ಎಂಬುದನ್ನು ತಿಳಿಯೋಣ. ತಿಳಿ…
ನಮ್ಮ ಆರೋಗ್ಯದ ಗುಟ್ಟು ತಿಳಿಯಲು ನಾವು ಯಾವಾಗಲೂ ಆಸ್ಪತ್ರೆಗೆ ಹೋಗಬೇಕು ಎಂದೇನಿಲ್ಲ. ನಮ್ಮ ದೇಹದಲ್ಲಿಯೇ ಆಗುವಂತಹ ಕೆಲವೊಂದು ಬದಲಾವಣೆಗಳು ಮತ್ತು ಸೂಚನೆಗಳು ನಮಗೆ ನಮ್ಮ ಸದ್ಯದ ಆರೋಗ್ಯ ಸ್ಥಿತಿಯ ಬಗೆಗಿನ ಮಾಹಿತಿಯನ್ನು ಕೊಡುತ್ತವೆ. ಇದಕ್ಕೆ ಉದಾಹರಣೆ ಎನ್ನುವಂತೆ, ಇದ್ದಕ್ಕಿದ್ದಂತೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಅದನ್ನು ಜಾಂಡೀಸ್ ಎಂದು ಹೇಳಬಹುದು. ಮಂಡಿಗಳನ್ನು ಮಡಿಸಲು ಆಗದಿದ್ದರೆ, ಅಥವಾ ಕುಳಿತು ಮೇಲಕ್ಕೆ ಎದ್ದೇಳಲು ಆಗದಿದ್ದರೆ, ಅದನ್ನು ಕೀಲು ನೋವು ಎನ್ನಬಹುದು. ಹೀಗೆ ಹಲವಾರು ವಿಚಾರಗಳ ಮೂಲಕ ನಮ್ಮ ದೇಹದ ಆರೋಗ್ಯದ ಸ್ಥಿತಿಗತಿಯನ್ನು ನಾವು ತಿಳಿದುಕೊಳ್ಳಬಹುದು. ಹಾಗಾದರೆ ಮನುಷ್ಯ ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣವನ್ನು ಗಮನಿಸಿ ಅದರಿಂದ ಆರೋಗ್ಯದ ಗುಟ್ಟು ತಿಳಿಯಬಹುದೇ ಎಂದು ನೀವು ಪ್ರಶ್ನೆ ಕೇಳಿದರೆ, ಹೌದು ಎನ್ನುತ್ತದೆ ವೈದ್ಯಲೋಕ. ಒಂದೊಂದು ಮೂತ್ರದ ಬಣ್ಣಕ್ಕೆ ಒಂದೊಂದು ರೀತಿಯ ಆರೋಗ್ಯ ಸಮಸ್ಯೆ ಇರಬಹುದು ಎನ್ನುವುದು ವೈದ್ಯರ ಮಾತು. ಬನ್ನಿ ಹಾಗಾದರೆ ಬೇರೆ ಮೂತ್ರದ ಬಣ್ಣಕ್ಕೆ ಅನುಗುಣವಾಗಿ ಯಾವ ಕಾಯಿಲೆಗಳು ಇರುತ್ತವೆ ಎಂಬುದನ್ನು ತಿಳಿಯೋಣ. ತಿಳಿ…
ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈಜುಕೊಳದ ಬಳಕೆಗೆ ಹೇರಲಾಗಿದ್ದ ನಿಷೇಧವನ್ನು ಬೆಂಗಳೂರು ಜಲಮಂಡಳಿ ಸಡಿಲಿಸಿದೆ. ಬೆಂಗಳೂರು ನಗರದ ಅಪಾರ್ಟ್‍ಮೆಂಟ್ ಹಾಗೂ ಕ್ರೀಡಾ ಸಂಸ್ಥೆಯವರು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಈಜುಕೊಳದ ಬಳಕೆಯ ನಿಷೇಧವನ್ನು ಸಡಿಲಿಸಿದ್ದಾರೆ. ಕಡ್ಡಾಯವಾಗಿ ಈಜುಕೊಳಕ್ಕೆ ಕಾವೇರಿ ನೀರನ್ನು ಬಳಸುವಂತಿಲ್ಲ. ಈಜುಕೊಳಕ್ಕೆ ಮಳೆ ನೀರು ಅಥವಾ ಕೊಳವೆ ಬಾವಿ ಮೂಲಕ ನೀರನ್ನು ಮಾತ್ರ ಬಳಸತಕ್ಕದ್ದು. ಈಜುಕೊಳಕ್ಕೆ ನೀರನ್ನು ಶುದ್ದೀಕರಿಸುವ ಯಂತ್ರವನ್ನು ಅಳವಡಿಸಿಕೊಂಡು ನೀರನ್ನು ಮರುಬಳಕೆ ಮಾಡಬೇಕು ಎಂದಿದ್ದಾರೆ. ತಮ್ಮ ಸಮುಚ್ಚಯದಲ್ಲಿ ಕಡ್ಡಾಯವಾಗಿ ಕೊಳವೆ ಬಾವಿ ಅಕ್ಕಪಕ್ಕದಲ್ಲಿ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಿರಬೇಕು. ಎಲ್ಲ ಟ್ಯಾಪ್ ಗಳಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸಿಕೊಂಡಿರಬೇಕು ಹಾಗೂ ಕುಡಿಯುವುದನ್ನು ಹೊರತುಪಡಿಸಿ ಅನ್ಯ ಬಳಕೆಗಳಿಗೆ(ಗಾರ್ಡೆನಿಂಗ್ ಮತ್ತು ಫ್ಲಶಿಂಗ್)ಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಸಬೇಕು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಈಜುಕೊಳಕ್ಕೆ ಕಾವೇರಿ ನೀರು ಬಳಕೆ ಮಾಡುವುದು ಕಂಡುಬಂದಲ್ಲಿ ಜಲಮಂಡಳಿಯ ಕಾಯ್ದೆ…
ನ್ಯಾಷನಲ್ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ನಲ್ಲಿರುವ ತನ್ನ ಎಲ್ಲಾ ಬೋಧಕ ಮತ್ತು ಸಿಬ್ಬಂದಿ ವಸತಿಗೃಹಗಳಿಗೆ ಕೊಳವೆ ಮೂಲಕ ಅನಿಲ ಪೂರೈಸಲು ಗೇಲ್ (ಇಂಡಿಯಾ) ಲಿಮಿಟೆಡ್ ನ ಅಂಗಸಂಸ್ಥೆಯಾದ ಗೇಲ್ ಗ್ಯಾಸ್ ಲಿಮಿಟೆಡ್ (ಜಿಜಿಎಲ್) ನೊಂದಿಗೆ, ಬೃಹತ್ ದೇಶೀಯ ಪೈಪ್ಡ್ ನ್ಯಾಚುರಲ್ ಗ್ಯಾಸ್ ಒಪ್ಪಂದಕ್ಕೆ ಸಹಿ ಹಾಕಿದೆ. ಎನ್‌ಐಟಿಕೆ ಕ್ಯಾಂಪಸ್ ನಲ್ಲಿ ಗೇಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಜಿಎಂಪಿಎಲ್) ಸಿಇಒ ಸುಧೀರ್ ಕುಮಾರ್ ದೀಕ್ಷಿತ್ ಅವರ ಉಪಸ್ಥಿತಿಯಲ್ಲಿ ಸುರತ್ಕಲ್ ಎನ್‌ಐಟಿಕೆ ನಿರ್ದೇಶಕ ಪ್ರೊ.ಬಿ.ರವಿ ಮತ್ತು ಮಂಗಳೂರಿನ ಗೇಲ್ ಗ್ಯಾಸ್‌ನ ಜಿಎಂ (ಸಿಜಿಡಿ) ಪ್ರಾಜೆಕ್ಟ್ ಮತ್ತು ಮುಖ್ಯಸ್ಥ ಸಾಯಿ ಶಂಕರ್ ಬಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಸಮಾರಂಭದಲ್ಲಿ ಯೋಜನೆ ಮತ್ತು ಅಭಿವೃದ್ಧಿ ಡೀನ್ ಪ್ರೊ.ಕೆ.ವಿ.ಗಂಗಾಧರನ್, ರಿಸರ್ಚ್ ಕನ್ಸಲ್ಟೆನ್ಸಿ ಡೀನ್ ಪ್ರೊ. ಉದಯ ಭಟ್ ಕೆ, ಅಕಾಡೆಮಿಕ್ ಡೀನ್ ಪ್ರೊ.ದ್ವಾರಕೇಶ್, ಪ್ರೊ.ಶ್ರೀಕಾಂತ ಎಸ್ ರಾವ್, ಜಂಟಿ ರಿಜಿಸ್ಟ್ರಾರ್ ರಾಮ್ ಮೋಹನ್ ವೈ ಮತ್ತು ಗೇಲ್ ಗ್ಯಾಸ್‌ನ ಮಾರ್ಕೆಟಿಂಗ್ ನ ಹಿರಿಯ…