Author: admin

ಕಳೆದ ನಾಲ್ಕೈದು ದಿನಗಳ ಹಿಂದೆ ಕನ್ನಡದ ನಟಿ, ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದ ನಟಿ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ನಿಧನರಾದರು. ಈಗ ಇನ್ನೊಂದು ಶಾಕಿಂಗ್​ ಸುದ್ದಿ ಕೇಳಿಬಂದಿದೆ. ಪವಿತ್ರಾ ಜಯರಾಮ್​ ಜೊತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಚಂದು ಅವರು ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಪವಿತ್ರಾ ಜಯರಾಮ್​ ಜೊತೆ ಚಂದು ಆಪ್ತರಾಗಿದ್ದರು. ಪವಿತ್ರಾ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಚಂದು ಅವರು ಹೈದರಾಬಾದ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲುಗಿನ ಹಲವು ಧಾರಾವಾಹಿಗಳಲ್ಲಿ ಚಂದು ನಟಿಸುತ್ತಿದ್ದರು. ಇತ್ತೀಚೆಗೆ ಅವರು ಪವಿತ್ರಾ ಜಯರಾಮ್​ ಜೊತೆ ಬೆಂಗಳೂರಿಗೆ ಬಂದಿದ್ದರು. ಸಿನಿಮಾವೊಂದಕ್ಕೆ ಸಹಿ ಮಾಡಿದ ಬಳಿಕ ಅವರು ಪುನಃ ಹೈದರಾಬಾದ್ ​ಗೆ ಹಿಂದಿರುಗುವಾಗ ಕಾರು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಚಂದುಗೆ ಪೆಟ್ಟಾಗಿತ್ತು. ಅದನ್ನು ನೋಡಿ ಗಾಬರಿಗೊಂಡ ಪವಿತ್ರಾ ಅವರ ಉಸಿರು ನಿಂತುಹೋಗಿತ್ತು. ಆ ದುರಂತದ ನೆನಪು ಮಾಸುವುದಕ್ಕೂ ಮುನ್ನವೇ ಚಂದು ನಿಧನರಾಗಿದ್ದಾರೆ. ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ…

Read More

ಅವೈಜ್ಞಾನಿಕ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಮಳೆನೀರು ಮನೆಗಳಿಗೆ ನುಗ್ಗಿದ ಘಟನೆ ಕೊರಟಗೆರೆ ತಾಲೂಕಿನ ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೈರೇನಹಳ್ಳಿ ಗ್ರಾಮದ ಮನೆ, ಅಂಗಡಿ, ಮೆಡಿಕಲ್ಸ್ ಗಳಿಗೆ ಕೂಡ ಮಳೆ ನೀರು ನುಗ್ಗಿದೆ. ಗುತ್ತಿಗೆದಾರರು ಚರಂಡಿಯನ್ನು ನಿರ್ಮಿಸದೇ, ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಮುಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಬೈರೇನಹಳ್ಳಿಯ ರೈತಾಪಿ ವರ್ಗ ಮತ್ತು ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂ ನಷ್ಟವಾಗಿದೆ ಎನ್ನಲಾಗಿದೆ. ರಾಜ್ಯ ಹೆದ್ದಾರಿ ಗುತ್ತಿಗೆದಾರರು ಬೈರೇನಹಳ್ಳಿ ಬಸ್ ನಿಲ್ದಾಣದಲ್ಲಿ ನೂತನವಾಗಿ ಕಟ್ಟೆ ನಿರ್ಮಿಸಿದ್ದಾರೆ. ಖಾಸಗಿ ವ್ಯವಸ್ಥಾಪಕ ಕೊರಟಗೆರೆ ಕ್ಷೇತ್ರಕ್ಕೂ ರಾಜ್ಯ ಹೆದ್ದಾರಿಗೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದ್ದಾರೆ. ಸರಕಾರಿ ಅಧಿಕಾರಿಗಳು ಸ್ಥಳಕ್ಕೆ ಬರೋದಿಲ್ಲ. ಕಾಮಗಾರಿಯು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಸ್ಥಳೀಯರು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ಬಳಿ ರಾಜ್ಯಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಸಮಸ್ಯೆಯನ್ನ ಬಗೆಹರಿಸಿ ಸೂಕ್ತ ಪರಿಹಾರ ನೀಡಲು ಮುಂದಾಗುತ್ತಾರ ಎಂದು ಕಾದು ನೋಡಬೇಕಿದೆ.…

Read More

ಮಹಿಳೆಯೊಬ್ಬರು ಕೆ.ಎಸ್.ಆರ್.ಟಿ.ಸಿ ಬಸ್ ನ ತುರ್ತುನಿರ್ಗಮನ ಬಾಗಿಲ ಕಿಟಕಿಯಲ್ಲಿ ಉಗುಳಲು ಹೋಗಿ ತಲೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕಿಟಕಿಯ ಮೂಲಕ ಉಗಳಲೆಂದು ತಲೆ ಹೊರಗೆ ಹಾಕಿದ್ದಾರೆ. ಆದರೆ ದುರಾದೃಷ್ಟವಶಾತ್‌ ಮಹಿಳೆಯ ತಲೆ ಅಲ್ಲಿಯೇ ಲಾಕ್‌ ಆಗಿದೆ. ಈ ವೇಳೆ ಮಹಿಳೆ ಸಾಕಷ್ಟು ಪರದಾಟ ಅನುಭವಿಸಿದ್ದಾರೆ. ಕಿಟಕಿಯ ಸಣ್ಣ ಜಾಗ ಇದ್ದ ಕಾರಣ ಮತ್ತು ತುರ್ತು ನಿರ್ಗಮನದ ಬಾಗಿಲನ್ನು ಹೆಚ್ಚಾಗಿ ಬಳಸದ ಕಾರಣ ಅದರ ಕಿಟಕಿಯನ್ನು ಬೇಗನೆ ತೆಗೆಯಲಾಗಲಿಲ್ಲ. ಹೀಗಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿದೆ. ಈ ವೇಳೆ ಮಹಿಳೆಯ ಪರದಾಟ ಗಮನಿಸಿದ KSRTC ಬಸ್ ಚಾಲಕ ಹಾಗೂ ನಿರ್ವಾಹಕ ಬಸ್‌ ನಿಲ್ಲಿಸಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ಬಳಿಕ ಜಾಗರೂಕತೆಯಿಂದ ಮಹಿಳೆಯ ರಕ್ಷಣೆ ಮಾಡಲಾಗಿದೆ. ಮಹಿಳೆಯ ತಲೆ ಲಾಕ್‌ ಆಗಿ ಪರದಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‌ ನಲ್ಲಿ ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.…

Read More

ಕೊಳೆತ ಸ್ಥಿತಿಯಲ್ಲಿ ಹುಲಿಯೊಂದರ ಮೃತದೇಹ ಪತ್ತೆಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ವಿಭಾಗ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೃತ ಹುಲಿಯು 4 ವರ್ಷದ ಪ್ರಾಯದ್ದಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಲಿಂಗ ಗುರುತಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ. ಹುಲಿಯ ಸಾವಿನ ಬಗ್ಗೆ ಹೆಚ್ಚಿನ ವಿವರ ಸಂಗ್ರಹಿಸುವ ಸಲುವಾಗಿ ಮೃತ ಹುಲಿಯ ಅಂಗಾಂಗಳನ್ನು ಸಂಗ್ರಹಿಸಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಅರಣ್ಯ ಪ್ರದೇಶದ ಗಿಡಗಂಟಿಗಳ ಪೊದೆಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದ್ದು, ಹುಲಿಯು ವನ್ಯಜೀವಿಯ ಜೊತೆಗಿನ ಕಾದಾಟದಿಂದ ಸುಮಾರು 12ರಿಂದ 15 ದಿನಗಳ ಹಿಂದೆ ಸಾವನ್ನಪ್ಪಿರುವುದಾಗಿ ಇಲಾಖಾ ಪಶು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಇವುಗಳ ಬಗ್ಗೆ ಯಾವುದೇ ನಿಖರತೆ ದೊರೆಯದಿರುವುದರಿಂದ ಹುಲಿ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸ್ಥಳಕ್ಕೆ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರ, ಎನ್. ಬೇಗೂರು ವಲಯ ವಲಯ…

Read More

ಚೆನ್ನೈನಿಂದ ಶಸ್ತ್ರಾಸ್ತ್ರಗಳನ್ನು ಹೊತ್ತು ಇಸ್ರೇಲ್‌ ಗೆ ಸಾಗುತ್ತಿರುವ ಹಡಗಿಗೆ ಸ್ಪೇನ್‌ ದೇಶ ತನ್ನ ಕಾರ್ಟಗೆನರ ಬಂದರಿನಲ್ಲಿ ನಿಲುಗಡೆಗೆ ಅವಕಾಶ ನಿರಾಕರಿಸಿದೆ ಎಂದು ಸ್ಪೇನ್‌ ನ ವಿದೇಶ ಸಚಿವ ಜೋಸ್‌ ಮ್ಯಾನುವೆಲ್‌ ಅಲ್ಬಾರೆಸ್‌ ಮಾಹಿತಿ ನೀಡಿದ್ದಾರೆ. ʼಮರಿಯನ್ನೆ ಡೇನಿಕಾʼ ಹೆಸರಿನ ಹಡಗು ಸ್ಪೇನ್‌ ಬಂದರಿನಲ್ಲಿ ಮೇ 21ರಂದು ನಿಲುಗಡೆಗೆ ಅವಕಾಶ ಕೋರಿತ್ತು. ಗಾಝಾ ಯುದ್ಧ ಆರಂಭಗೊಂಡಂದಿನಿಂದ ಇಸ್ರೇಲ್‌ ಗೆ ಎಲ್ಲಾ ಶಸ್ತ್ರಾಸ್ತ್ರ ರಫ್ತು ನಿಷೇಧಿಸುವ ಸ್ಪೇನ್‌ ನೀತಿಯ ಅನುಸಾರ ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪೇನ್ ಸಚಿವರು ತಿಳಿಸಿದ್ದಾರೆ. ಡೆನ್ಮಾರ್ಕ್‌ ಧ್ವಜವಿರುವ ಹಡಗಿನಲ್ಲಿ 27 ಟನ್‌ ತೂಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ನ ಹೈಫಾ ಬಂದರಿಗೆ ಸಾಗಿಸಲಾಗುತ್ತಿತ್ತು. ಈ ರೀತಿ ಸ್ಪೇನ್‌ ಬಂದರಿಗೆ ಇಸ್ರೇಲ್‌ ಗೆ ಹೊರಟಿರುವ ಶಸ್ತ್ರಾಸ್ತ್ರ ಹೊತ್ತ ಹಡಗು ಆಗಮಿಸಿರುವುದು ಮೊದಲನೇ ಬಾರಿ ಇದಾಗಿದ್ದು ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಚಲಿಸುತ್ತಿದ್ದ ರೈಲಿನಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಹಲವರಿಗೆ ಹಲ್ಲೆ ಮಾಡಿದ ಘಟನೆ ಖಾನಾಪುರ ತಾಲೂಕಿನ ಲೋಂಡಾ ಬಳಿ ನಡೆದಿದೆ. ಗಾಯಾಳುಗಳ ಆರೋಗ್ಯವನ್ನು ರೈಲ್ವೆ ಡಿಐಜಿ ಶರಣಪ್ಪ ವಿಚಾರಿಸಿದ್ದಾರೆ. ಡಿಐಜಿ ಮಾತನಾಡಿ, ಐಪಿಸಿ ಸೆಕ್ಷನ್ 302, 307, 332, 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪುದುಚೇರಿ ದಾದರ್ ಎಕ್ಸ್ ​ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ. ಅನಾಮಿಕ ಪ್ರಯಾಣಿಕ ಟಿಕೆಟ್ ವಿಚಾರಕ್ಕೆ ಟಿಟಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅವರ ಸಹಾಯಕ್ಕೆ ಬಂದ ಕೋಚ್ ಹೆಲ್ಪಿಂಗ್ ಸ್ಟಾಫ್​​ ಮೇಲೆಯೂ ಹಲ್ಲೆ ಆಗಿದೆ. ಆ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರೈಲ್ವೆ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಮೃತನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆ. ದೇವರ್ಷಿ ವರ್ಮಾ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದ ಡಿಐಜಿ ಶರಣಪ್ಪ, ಹಲ್ಲೆ ಮಾಡಿದ ಆರೋಪಿ ಪತ್ತೆಗೆ ಆರ್ ​ಪಿಎಫ್, ಜಿಆರ್​ ಪಿ ಮತ್ತು ಸ್ಥಳೀಯ ಪೊಲೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ನಾಲ್ಕು ವಿಶೇಷ ತಂಡಗಳನ್ನು…

Read More

ಎಸ್‍ಎಸ್‍ಎಲ್‍ ಸಿಯಲ್ಲಿ ಶಿಕ್ಷಣ ಇಲಾಖೆ ಈ ವರ್ಷ ನೀಡಿದ 20% ಗ್ರೇಸ್ ಅಂಕಗಳಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ವಿಧಾನಸೌಧದಲ್ಲಿಂದು ಇಲಾಖಾವಾರು ಪ್ರಗತಿ ಪರಿಶೀಲನೆ ಸಭೆ ನಡೆದ ವೇಳೆ ಗ್ರೇಸ್ ಅಂಕ ಕೊಟ್ಟ ವಿಚಾರ ಚರ್ಚೆಗೆ ಬಂತು. ಈ ವೇಳೆ ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಗರಂ ಆದ ಸಿಎಂ, ಗ್ರೇಸ್ ಮಾರ್ಕ್ಸ್ ಹೆಚ್ಚಳಕ್ಕೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧ ಬಂದಿದೆ. ಗ್ರೇಸ್ ಮಾರ್ಕ್ಸ್ ಕೊಡೋದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ ಎಂದಿದ್ದಾರೆ. ಎಸ್‍ಎಸ್‍ಎಲ್‍ ಸಿಯಲ್ಲಿ (SSLC) ಗ್ರೇಸ್ ಮಾರ್ಕ್ಸ್ ಕೊಡೋದು ಅಗತ್ಯ ಇತ್ತಾ? ಪರೀಕ್ಷೆಯಲ್ಲಿ ಈ ಬಾರಿ ಕಠಿಣ ಕ್ರಮ ಕೈಗೊಂಡಿದ್ದು ಸರಿ. ಆದರೆ ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದು ಸರಿ ಇತ್ತಾ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮುಂಬರುವ ಶೈಕ್ಷಣಿಕ…

Read More

ಮುಸ್ಲಿಂ ಮಹಿಳೆಯೊಬ್ಬರು ಮದುವೆಯಾಗಿ ತ್ರಿವಳಿ ತಲಾಖ್ ಪಡೆದ ನಂತರ ಹಿಂದೂ ಧರ್ಮಕ್ಕೆ ಮತಾಂತರವಾಗಿ, ಹಿಂದೂ ಧರ್ಮದ ಯುವಕನನ್ನು ಮದುವೆಯಾದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಮದುವೆಯಲ್ಲಿ ಎಲ್ಲಾ ಹಿಂದೂ ಸಂಪ್ರದಾಯಗಳನ್ನು ಅನುಸರಿಸಲಾಗಿದೆ ಎಂದು ವರದಿ ತಿಳಿಸಿದ್ದು, ರುಬಿನಾ ಎಂಬ ಮೂಲ ಹೆಸರನ್ನು ಹೊಂದಿದ್ದ ಮಹಿಳೆ ಸಂಗಾತಿಯಿಂದ ತ್ರಿವಳಿ ತಲಾಖ್‌ ಪಡೆದ ನಂತರ ತುಂಬಾ ನೊಂದಿದ್ದಳು. ವಿಚ್ಛೇದನದ ನಂತರ ಅವಳು ತನ್ನ ಧರ್ಮವನ್ನು ಬದಲಾಯಿಸಲು ನಿರ್ಧರಿಸಿದಳು ಎನ್ನಲಾಗಿದೆ. ಮಹಿಳೆ ಈ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಸಂಗಾತಿ ಆಕೆಗೆ ತ್ರಿವಳಿ ತಲಾಖ್‌ ನೀಡಿದ್ದ. ಇದಾದ ಬಳಿಕ ಮಹಿಳೆ ತನ್ನ 2 ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಒಬ್ಬ 6 ವರ್ಷ ಮತ್ತು ಇನ್ನೊಬ್ಬಳು ಕೇವಲ 3 ವರ್ಷ ವಯಸ್ಸಿನವಳು. ರುಬಿನಾ ಹಿಂದೂ ಯುವಕನನ್ನು ಮದುವೆಗಾಗಿ ತನ್ನ ಹೆಸರನ್ನು ರುಬಿನಾದಿಂದ ಪ್ರೀತಿ ಎಂದು ಬದಲಾಯಿಸಿದಳು. ಇಬ್ಬರ ನಡುವಿನ ಸಂಬಂಧವು ಮಿಸ್ಡ್ ಕಾಲ್ ಮೂಲಕ ಪ್ರಾರಂಭವಾಯಿತು. ನಂತರ ದಂಪತಿಗಳು ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕಗೊಂಡರು. ಕೆಲವು ಸಂಭಾಷಣೆಗಳ…

Read More

ವಿಪರೀತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ ಸ್ತಂಭನದಿಂದ ಚಿಪ್ಸ್ ತಿನ್ನುತ್ತಲೇ ಸಾವನ್ನಪ್ಪಿದ ಘಟನೆ ನಡೆದಿದೆ. ನ್ಯೂಯಾರ್ಕ್ ನ ಮ್ಯಾಸಚೂಸೆಟ್ಸ್‌ ನ 14 ವರ್ಷದ ಹ್ಯಾರಿಸ್ ವೊಲೊಬಾಹ್ “ಒನ್ ಚಿಪ್ ಚಾಲೆಂಜ್” ನಲ್ಲಿ ಭಾಗವಹಿಸಿದ ನಂತರ ನಿಧನರಾಗಿದ್ದಾರೆ. ಕ್ಯಾಪ್ಸೈಸಿನ್ ಎಂಬ ಮೆಣಸಿನಕಾಯಿಯ ಸಾರವನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದ ನಂತರ ಹ್ಯಾರಿಸ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಮುಖ್ಯ ವೈದ್ಯಕೀಯ ಪರೀಕ್ಷಕರು ನಿರ್ಧರಿಸಿದ್ದಾರೆ ಎಂದು ಮೃತದೇಹ ಪರೀಕ್ಷೆ ವರದಿ ತಿಳಿಸಿದೆ. ಕ್ಯಾಲಿಫೋರ್ನಿಯಾದಲ್ಲಿ, ಈ ಚಾಲೆಂಜ್ ನಲ್ಲಿ ಭಾಗವಹಿಸಿದ ನಂತರ ಮೂವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅದೇ ಕಾರಣಕ್ಕಾಗಿ ಮಿನ್ನೇಸೋಟದಲ್ಲಿ ಏಳು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಕ್ಯಾರೊಲಿನಾ ರೀಪರ್ ಮತ್ತು ನಾಗಾ ವೈಪರ್ ಪೆಪ್ಪರ್‌ ಗಳೊಂದಿಗೆ ಉತ್ಪಾದಿಸಿದ ಚಿಪ್ ಇದಾಗಿತ್ತು ಎಂದು ವರದಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More

ಬೆಂಗಳೂರು: ವಿಧಾನಸೌಧ ಪ್ರವೇಶಕ್ಕೆ ಇನ್ಮುಂದೆ ಬೇಕಾಬಿಟ್ಟಿ ಪಾಸ್ ‌ಗಳನ್ನು ವಿತರಿಸುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ವಿಧಾನಸೌಧ ದ್ವಾರದ ಮೆಟಲ್ ಡಿಟೆಕ್ಟರ್‌, ನೂತನ ಬ್ಯಾಗೇಜ್‌ ಸ್ಕ್ಯಾನರ್‌ ಯಂತ್ರಗಳನ್ನು ಪರಿಶೀಲಿಸಿ, ಡಿಸಿಪಿ ನೇತೃತ್ವದಲ್ಲಿ ಭದ್ರತಾ ಕ್ರಮಗಳ ಪರಿಶೀಲನೆ ಹಾಗೂ ಮಾಹಿತಿಯನ್ನು ಪಡೆದರು. ನಂತರ ಮಾತನಾಡಿದ ಅವರು, ವಿಧಾನಸೌಧಕ್ಕೆ ಬರಬೇಕು ಅಂದರೆ ಇನ್ನು ಮುಂದೆ ಕ್ಯೂ ಆರ್ ಕೋಡ್ ಇರುವ ಪಾಸ್ ‌ಗಳನ್ನು ನೀಡಲಾಗುತ್ತದೆ ಎಂದರು. ವಿಧಾನಸೌಧದಲ್ಲಿ ಯಾರಾದರೂ ಮೆಟಲ್ ಸಾಧನ ತೆಗೆದುಕೊಂಡು ಹೋಗುತ್ತಿದ್ದರೆ ಈ ಬ್ಯಾಗೇಜ್ ಸ್ಕ್ಯಾನರ್‌ನಲ್ಲಿ ಪತ್ತೆಯಾಗುತ್ತದೆ. ಕಳೆದ 3 ವರ್ಷಗಳಿಂದ ಈ ಬ್ಯಾಗೇಜ್ ಸ್ಕ್ಯಾನರ್ ಹಾಳಾಗಿತ್ತು. ಈಗ ಸಿಎಂ ಹಣ ಬಿಡುಗಡೆ ಮಾಡಿದ ಮೇಲೆ ಈ ಬ್ಯಾಗೇಜ್ ಸ್ಕ್ಯಾನರ್ ಖರೀದಿಸಿದ್ದೇವೆ ಎಂದು ಹೇಳಿದರು. ವಿಧಾನಸೌಧದಲ್ಲಿ ಭದ್ರತೆಯನ್ನು ಇನ್ನೂ ಜಾಸ್ತಿ ಮಾಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ನಾವು ಹೆಚ್ಚು ಭದ್ರತೆ ಕೈಗೊಳ್ಳುತ್ತೇವೆ. ಕಳೆದ ವಿಧಾನ ಸಭೆ ಅಧಿವೇಶನ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್‌ ಗಳು ಇರಲಿಲ್ಲ. ಈಗ 2-3 ಕೋಟಿ…

Read More