Author: admin

ಪ್ರಧಾನಿ ನರೆಂದ್ರ ಮೋದಿ ಪಾಟ್ನಾದಲ್ಲಿ ಚುನಾವಣಾ ಪ್ರಚಾರದ ಎರಡನೇ ದಿನವಾದ ಇಂದು (ಮೇ 13) ಗುರುದ್ವಾರ ಪಾಟ್ನಾ ಸಾಹಿಬ್‍ ಗೆ ಭೇಟಿ ನೀಡಿ ಗುರುದ್ವಾರದಲ್ಲಿ ಭಕ್ತರಿಗೆ ಪ್ರಸಾದ ಬಡಿಸಿದ್ದಾರೆ. ಸಾಂಪ್ರದಾಯಿಕ ಕುರ್ತಾ, ಕೇಸರಿ ಸಿಖ್ ಪೇಟ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ವಿಶೇಷ ಪ್ರಸಾದ ಬಡಿಸಿದ್ದಾರೆ. ನಂತರ ಗುರುದ್ವಾರದಲ್ಲಿ `ಕರಃ ಪ್ರಸಾದ’ವನ್ನು ತೆಗೆದುಕೊಂಡರು. ಈ ವೇಳೆ ಡಿಜಿಟಲ್ ಪಾವತಿ ವಿಧಾನ ಬಳಸಿ ಹಣ ಸಂದಾಯ ಮಾಡಿದರು. ಇಂದು (ಮೆ.13) ಹಾಜಿಪುರ, ಮುಜಾಫರ್‍ಪುರ ಮತ್ತು ಸರನ್‍ ನಲ್ಲಿ ಎನ್‍ ಡಿಎ ಅಭ್ಯರ್ಥಿಗಳ ಪರ ಚುನಾವಣಾ ರ‍್ಯಾಲಿ ನಡೆಸಿ ಮೋದಿ ಮಾತನಾಡಲಿದ್ದಾರೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ತಖತ್ ನಿರ್ಮಿಸಿದ. ಹತ್ತನೇ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಅವರು 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಅವರು ಆನಂದಪುರ ಸಾಹಿಬ್‍ ಗೆ ತೆರಳುವ ಮೊದಲು ಕೆಲವು…

Read More

ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಇತಿಹಾಸ ನಿರ್ಮಿಸಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮ್ಯಾಸೆಚೂಟ್ಸ್‍ ನ 62 ವರ್ಷದ ರಿಚರ್ಡ್ ಸ್ಲೇಮನ್ ಅವರು ಕೆಲ ದಿನಗಳ ಹಿಂದೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಇದೀಗ ಅವರು ಕೊನೆಯುಸಿರೆಳೆದಿದ್ದಾರೆ. ಮ್ಯಾಸೆಚೂಟ್ಸ್‍ ನ ನಿಧನಕ್ಕೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿರುವುದು ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.  ರಿಕ್ ಸ್ಲೇಮನ್ ಅವರ ಹಠಾತ್ ಮರಣದ ಬಗ್ಗೆ ಮಾಸ್ ಜನರಲ್ ಟ್ರಾನ್ಸ್‍ಪ್ಲಾಂಟ್ ತಂಡವು ತೀವ್ರವಾಗಿ ದುಃಖಿತವಾಗಿದೆ. ಇದು ಅವರ ಇತ್ತೀಚಿನ ಕಸಿ ಫಲಿತಾಂಶವಾಗಿದೆ ಎಂದು ನಮಗೆ ಯಾವುದೇ ಸೂಚನೆ ಇಲ್ಲ ಎಂದು ಮ್ಯಾಸಚೂಸೆಟ್ಸ ಜನರಲ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ರಿಚರ್ಡ್ ಸ್ಲೇಮನ್ ಮ್ಯಾಸಚೂಸೆಟ್ಸ್‍ ನ ವೇಮೌತ್‍ನ ನಿವಾಸಿಯಾಗಿದ್ದು ಹಂದಿ ಮೂತ್ರಪಿಂಡ ಕಸಿ ಮಾಡುವ ಮೊದಲು ಅವರು ಟೈಪ್ 2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವ ಸುದೀರ್ಘ ಇತಿಹಾಸವನ್ನು ಹೊಂದಿದ್ದರು. ಅದೇ ಮ್ಯಾಸಚೂಸೆಟ್ಸ ಜನರಲ್ ಹಾಸ್ಪಿಟಲ್ ತಂಡವು ಡಿಸೆಂಬರ್ 2018 ರಲ್ಲಿ ಮಾನವ ಮೂತ್ರಪಿಂಡ ಕಸಿ ಮಾಡುವ…

Read More

ಸೋಶಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್ ​​ನಲ್ಲಿ ಹೃದಯ ವಿದ್ರಾವಕ ವಿಡಿಯೋವೊಂದು ಹರಿದಾಡುತ್ತಿದೆ. ಮನೆಯಲ್ಲಿ ತಾಯಿಯೊಬ್ರು ತನ್ನ ಮಗಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ನೋಡಿದವರ ಮನಸು ಕದಡದೇ ಇರದು. ಅತ್ಯಂತ ಕ್ರೂರವಾಗಿ ಮಹಿಳೆ ಮಗುವಿನ ಮೇಲೆ ತನ್ನ ವರ್ತನೆ ತೋರಿದ್ದಾಳೆ. ಗುಜರಾತ್​ ಮೂಲದ ತಾಯಿಯೊಬ್ಬರು ಮನೆಯಲ್ಲಿ ಅಡುಗೆ ಮಾಡುವಾಗ ಮಗು ಏನೋ ಕೀಟಲೆ ಮಾಡಿದೆ. ಇಷ್ಟಕ್ಕೆ ಸುಮ್ಮನಾಗದ ತಾಯಿ ಮಗಳನ್ನು ಚಪಾತಿ ಎತ್ತಿ ಹಾಕುವ ಸೌಟ್​ನಿಂದ ಮನಬಂದಂತೆ ಥಳಿಸಿದ್ದಾಳೆ. ಬಾಲಕಿಯ ಕತ್ತು ಅನ್ನು ಜೋರಾಗಿ ಹಿಸುಕಿ ಮೇಲೆ ಕುಳಿತ್ತಿದ್ದಾಳೆ. ತನ್ನ ಶಕ್ತಿ ಎಷ್ಟಿದಿಯೋ ಅಷ್ಟನ್ನು ಮಗುವಿನ ಮೇಲೆ ಪ್ರಯೋಗಿಸಿದ್ದಾಳೆ. ಮಗುವಿನ ಬಟ್ಟೆ ಹಿಡಿದು ಮೇಲೆ ಎತ್ತಿ ಎಳೆದಾಡಿದ್ದಾಳೆ. ನೆಲಕ್ಕೆ ಹಾಕಿ ಹೊಡೆದಿದ್ದಾಳೆ. ಈ ವೇಳೆ ತಾಯಿಯಿಂದ ಮಗುವಿಗೆ ನರಕ ಸದೃಶ್ಯವಾಗಿದ್ದು ಕಿರುಚಾಡಿದೆ. ಪ್ರಾಣ ಉಳಿದರೆ ಸಾಕು ಎನ್ನುವಂತೆ ಮಗು ಭಯದಲ್ಲಿ ಒದ್ದಾಡಿದೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ವಿಡಿಯೋ…

Read More

ಮಂಡ್ಯ: ಸರ್ಕಾರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಂಕಷವಾಗಿ ತನಿಖೆ ನಡೆಸಬೇಕು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಲಂಕಷವಾಗಿ ತನಿಖೆ ನಡೆಸಬೇಕು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಅನುಭವಿಸಲೇಬೇಕು. ಸರ್ಕಾರ ಈಗಾಗಲೇ ಎಲ್ಲೋ ಒಂದು ಕಡೆ ಎಡವಿದೆ. ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡದೇ ವಿಡಿಯೋ ಹರಿಬಿಟ್ಟಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕಿತ್ತು. ಈಗ ಸಂತ್ರಸ್ಥ ಮಹಿಳೆಯರಿಗೆ ಪೊಲೀಸರಿಂದ ತೊಂದರೆಯಾಗುತ್ತಿದೆ.  ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಲ್ಲಿ ಸೂಕ್ತ ತನಿಖೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಪೆನ್ ಡ್ರೈವ್ ಹಂಚಿಕೆ ಹೆಚ್​ ಡಿಕೆ ಕೈವಾಡ ಇದೆ ಎಂಬ ಸಚಿವ ಚಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತವಾದ ಮಂತ್ರಿಯಾಗಿ ಚಲುವಣ್ಣ ಕೆಲಸ ಮಾಡ್ತಿದ್ದಾರೆ. ಈ ರೀತಿ ಅಪಪ್ರಚಾರ, ಆರೋಪ ಮಾಡ್ಕೊಂಡು ಹೋಗುವುದು ಸೂಕ್ತ ಅಲ್ಲ. ಎಸ್ ​ಐಟಿ ಮೇಲೆ ನಂಬಿಕೆ…

Read More

ಸತತ 5 ಗೆಲುವಿನ ಹಿಂದಿರುವ ಗುಟ್ಟನ್ನು ಆರ್‌ ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್ ಬಿಚ್ಚಿಟ್ಟಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ 5 ಗೆಲುವು ದಾಖಲಿಸುವ ಮೂಲಕ ಪ್ಲೇ–ಆಫ್ಸ್‌ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ಇದು ಅದ್ಭುತ ಗೆಲುವು. ಈ ಸಲುವಾಗಿ ನಾವು ಅಮೋಘ ಆಟವಾಡಬೇಕಿತ್ತು. ಇದು ಕೇವಲ ಆತ್ಮವಿಶ್ವಾಸವಷ್ಟೆ. ಟೂರ್ನಿಯ ಮೊದಲಾರ್ಧದಲ್ಲಿ ನಾವು ಹೋರಾಡುತ್ತಿದ್ದೆವು. ಮೊದಲ 5-6 ಪಂದ್ಯಗಳಲ್ಲಿ ನಮ್ಮಿಂದ ಹೆಚ್ಚು ವಿಕೆಟ್‌ ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಈಗ ಮೂರಕ್ಕೂ ಹೆಚ್ಚು ಬಾರಿ ಎದುರಾಳಿ ತಂಡಗಳನ್ನು ಆಲ್‌ ಔಟ್‌ ಮಾಡಿದ್ದೇವೆ,” ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ ವೇಳೆ ಫಾಫ್‌ ಡು ಪ್ಲೆಸಿಸ್‌ ಆರ್‌ ಸಿಬಿ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ 47 ರನ್‌ ಗಳಿಂದ ಗೆದ್ದ ಆರ್‌ ಸಿಬಿ, ಈಗ ಅಂಕಪಟ್ಟಿಯಲ್ಲಿ ಒಟ್ಟು 12 ಅಂಕಗಳನ್ನು ಕಲೆಹಾಕಿದೆ. ಆರ್‌…

Read More

ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಕಗ್ಗಲಿಪುರದಲ್ಲಿ ಘಟನೆ ನಡೆದಿದ್ದು ಚೇತನ್ ಚಂದ್ರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವತ್ತು ಒಂದು ಕೆಟ್ಟ ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡೆ. ನನ್ನ ಗಾಡಿ ಅಡ್ಡ ಹಾಕಿ ಹೊಡೆದರು. ಚೆನ್ನಾಗಿ ಕುಡಿದು ನನ್ನ ಗಾಡಿ ಅಡ್ಡ ಹಾಕಿದ್ದಾರೆ. ಏನಿಲ್ಲ ಅಂದರೂ 20 ಜನರು ಸೇರಿಕೊಂಡು ನನಗೆ ಹೊಡೆದಿದ್ದಾರೆ. ಅದರ ವಿಡಿಯೋ ಇದೆ. ಮೂಗು ಮುರಿದು ಹಾಕಿದ್ದಾರೆ. ಕಗ್ಗಲಿಪುರ ಪೊಲೀಸ್​ ಠಾಣೆ ಪಕ್ಕದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಈಗ ಮತ್ತೆ ಬಂದು ಕಾರು ಒಡೆದು ಹಾಕಿದ್ದಾರೆ. ತುಂಬ ಕೆಟ್ಟ ಜನರು’ ಎಂದು ಚೇತನ್​ ಚಂದ್ರ ಹೇಳಿದ್ದಾರೆ. ಈ ಬಗ್ಗೆ ಚೇತನ್ ಚಂದ್ರ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಘಟನೆ ನಡೆದಿದ್ದು, ಈ ಬಗ್ಗೆ ನಟ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಚೇತನ್ ಚಂದ್ರ ಅವರನ್ನು ಬೈಕ್‍ ನಲ್ಲಿ…

Read More

ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಶೇಂಗಾ ಉತ್ಪಾದಿಸುವ ದೇಶವಾಗಿದೆ. ಮುಂಗಾರು ಹಂಗಾಮಿನ ಆರಂಭದ ನಂತರ ಖಾರಿಫ್ ಬೆಳೆಗಳ ಬಿತ್ತನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. ಈ ಋತುವಿನಲ್ಲಿ ಅನೇಕ ರೈತರು ಶೇಂಗಾ ಬೇಸಾಯವನ್ನೂ ಮಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಇದನ್ನು ಬಾದಾಮಿ ಎಂದೂ ಕರೆಯುತ್ತಾರೆ.  ಶೇಂಗಾ ಕೃಷಿ ರೈತರಲ್ಲಿ ಜನಪ್ರಿಯವಾಗುತ್ತಿದೆ.  ಪ್ರಮುಖ ಖಾರಿಫ್ ಬೆಳೆ ಎಂದು ಕರೆಯಲ್ಪಡುವ ಶೇಂಗಾವನ್ನು ‘ಬಡವರ ಬಾದಾಮಿ’ ಎಂದೂ ಕರೆಯಲಾಗುತ್ತದೆ. ಶೇಂಗಾ ಬೆಳೆಯುವ ರೈತರು ಕೆಲವೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾರೆ. ನಾಲ್ಕು ತಿಂಗಳಲ್ಲಿ ಬದಲಾಗಲಿದೆ ರೈತರ ಭವಿಷ್ಯ. ಬೇಸಾಯವನ್ನು ಅರ್ಥಮಾಡಿಕೊಂಡ ಜನರ ಪ್ರಕಾರ, ಶೇಂಗಾ ಬೆಳೆಯುವ ಬಡ ರೈತರ ಭವಿಷ್ಯ 4 ತಿಂಗಳಲ್ಲಿ ಬದಲಾಗಬಹುದು. ಆದಾಗ್ಯೂ, ನೆಲಗಡಲೆ ಕೃಷಿಯು ಸರಿಯಾದ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಶೇಂಗಾ ಬೆಳೆಯುವ ರೈತರು ಖಾರಿಫ್ ಋತುವಿನಲ್ಲಿ ಬಿತ್ತನೆ ಸಮಯ, ಮಣ್ಣಿನಲ್ಲಿ ಗೊಬ್ಬರದ ಅವಶ್ಯಕತೆ, ನೀರಾವರಿ ಮತ್ತು ಕೀಟ ನಿರ್ವಹಣೆಯಂತಹ ಕೆಲವು ಪ್ರಮುಖ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ರಾಜ್ಯಗಳಲ್ಲಿ ಶೇಂಗಾ…

Read More

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಗ್ರೂಪ್​ ಡಿ ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 11,307 ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ. ಇಲಾಖೆಯ ಹೆಸರು: BBMP ಹುದ್ದೆಯ ಹೆಸರು: ಪೌರಕಾರ್ಮಿಕರು ಸ್ಥಳ: ಬೆಂಗಳೂರು (ಕರ್ನಾಟಕ) ಖಾಲಿ ಇರುವ ಹುದ್ದೆಗಳು: 11,307 ಅಧಿಸೂಚನೆ ಹೊರಡಿಸಿದ ದಿನಾಂಕ: 15-04-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-11-2024 ಅರ್ಜಿ ಸಲ್ಲಿಸುವ ವಿಧಾನ: ಆನ್​ ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು ಶೈಕಣಿಕ ಅರ್ಹತೆ: ಬಿಬಿಎಂಪಿ ನಿಯಮಾವಳಿಯನ್ನು ಹೊಂದಿದೆ. ಹುದ್ದೆಗಳವಿವರ ಮತ್ತುವಿದ್ಯಾರ್ಹತೆ: ಸ್ಥಳೀಯ ವೃಂದದ-ಹುದ್ದೆಗಳು, ಕಲ್ಯಾಣ ಕರ್ನಾಟಕ (KK)-905 ಮತ್ತು ಉಳಿಕೆ ಮೂಲ ವೃಂದ (RPC)-10,402 ಹುದ್ದೆಗಳಿವೆ. ಈ ಹುದ್ದೆಗೆ ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಅಗತ್ಯವಿಲ್ಲ. ಕನ್ನಡ ಮಾತನಾಡಲು ತಿಳಿದಿರುವವರು ಅರ್ಜಿ ಸಲ್ಲಿಸಬಹುದು. ವಯೋಮಿತಿ: ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ. ಅಭ್ಯರ್ಥಿಗಳು ಭಾರತೀಯ ನಾಗರೀಕರಾಗಿರಬೇಕು. ಬಿಬಿಎಂಪಿ ಯಲ್ಲಿ ನೇರ ಪಾವತಿ / ಕ್ಷೇಮಾಭಿವೃದ್ಧಿ / ದಿನಗೂಲಿ ಆಧಾರದಲ್ಲಿ ಎರಡು ವರ್ಷ ಕಡಿಮೆ…

Read More

ದಿನದಿಂದ ದಿನಕ್ಕೆ ಏರುತ್ತಿದ್ದ ಬಿಸಿಲಿನ ತಾಪಮಾನಕ್ಕೆ ಜನ ರೋಸಿ ಹೋಗಿದ್ದರು. ಈ ಬಿರುಬಿಸಿಲಿನ ಶಾಖಕ್ಕೆ ಜನ ಹೈರಾಣಾಗಿರಬೇಕಾದ್ರೇನೇ ವರುಣ ಎರಡು ದಿನಗಳ ಗ್ಯಾಪ್ ನಂತ್ರ ಮತ್ತೆ ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ ಶುರುವಾಗಿದೆ. ರಾಜ್ಯಲ್ಲೂ ಮಳೆರಾಯನ ಅಬ್ಬರ ಕಮ್ಮಿ ಏನ್​ ಇಲ್ಲ. ರಾಜ್ಯದಲ್ಲಿ ಎಲ್ಲೆಲ್ಲಿ ಏನೇನು ಆಗಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಬೆಂಗಳೂರು: ಎರಡು ದಿನಗಳ ಗ್ಯಾಪ್ ನಂತರ ಮತ್ತೆ ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರ ಶುರುವಾಗಿದೆ. ಟೌನ್ ಹಾಲ್, ವಿಲ್ಸನ್ ಗಾರ್ಡನ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನ ಹೊರ ವಲಯದಲ್ಲೂ ಕೂಡ ಭಾರೀ ಮಳೆಯಾಗಿದೆ. ಪದ್ಮನಾಭನಗರ ಸುತ್ತ-ಮುತ್ತ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಜೆಪಿನಗರ, ನೈಸ್ ರಸ್ತೆ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಗಿಡಗಂಟಿಗಳು ನೆಲಸಮವಾಗಿವೆ. ರಾಜ್ಯದ 13 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಜನ ಎಚ್ಚರದಿಂದ ಇರುವಂತೆ ತಿಳಿಸಿದೆ. ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ…

Read More

ಕಲ್ಯಾಣ ಮಂಟಪ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ನಟಿ ಮೋಹಿನಿ ಶ್ರೀನಿವಾಸನ್‌. ಈಕೆ ಮೂಲತಃ ತಮಿಳಿನವರಾದರೂ, ಕನ್ನಡತಿಯಂತೆ ನಮ್ಮೊಂದಿಗೆ ಬೆರೆತು ಹೋಗಿದ್ದರು. ಅಲ್ಲದೇ ಕನ್ನಡದಲ್ಲಿ ಜ್ವಾಲಾ, ಸಿಡಿದೆದ್ದ ಪಾಂಡವರು, ಗಡಿಬಿಡಿ ಅಳಿಯ, ರೌಡಿ, ಲಾಲಿ, ನಿಶ್ಯಬ್ಧ ಸಿನಿಮಾಗಳಲ್ಲೂ ನಟಿಸಿದ ಮೋಹಿನಿ, ಉತ್ತಮ ನಟಿಯಾಗಿ ಹೊರಹೊಮ್ಮಿದರು. ಜೊತೆಗೆ ದಕ್ಷಿಣ ಭಾರತದ ಇನ್ನುಳಿದ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ಮೋಹಿನಿ ಸಕ್ರಿಯರಾಗಿ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದರು. ಈ ಸಿನಿಮಾ ನಡುವೆ 2006ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ 2011ರಲ್ಲಿ ಮಲಯಾಳಂನಲ್ಲಿ ಬಂದ ಕಲೆಕ್ಟರ್‌ ಚಿತ್ರವೇ ಅಂತಿಮ ಚಿತ್ರ ಆಗಿದ್ದು, ಅದಾದ ಮೇಲೆ ಮೋಹಿನಿ ಸಿನಿಮಾರಂಗದಿಂದ ದೂರ ಉಳಿದರು. ಈ ನಿರ್ಧಾರದ ಹಿಂದಿನ ಸತ್ಯವನ್ನು ತಮಿಳಿನ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಮೋಹಿನಿ ಕ್ರಿಸ್ಟೀನಾ. ಹೌದು, ಮತಾಂತರವಾಗದಿದ್ದರೆ, ನಾನು ಬದುಕುತ್ತಲಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ ಎಂದು ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ನಾನೇಕೆ ಬದುಕಬೇಕು? ಈ ಜೀವನ ಏಕೆ ಬೇಕು ಎಂಬ…

Read More