Author: admin

ಇತ್ತೀಚಿನ ದಿನಗಳಲ್ಲಿ ಕಲಬೆರಕೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿಯೊಂದರಲ್ಲೂ ಮೋಸ, ವಂಚನೆ, ಕಲಬೆರಕೆ ಆಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಇದೀಗ ವಿಷಪೂರಿತ ರಾಸಾಯನಿಕ ಮಿಶ್ರಿತ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿದ್ದು ಗ್ರಾಹಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಪುರಸಭೆ ಮತ್ತು ಆಹಾರ ಸುರಕ್ಷತೆ ಗುಣಮಟ್ಟ ತಪಾಸಣೆ ಜಂಟಿ ಅಧಿಕಾರಿಗಳು ಸಂತೆ ವ್ಯಾಪಾರಿಗಳು ಮತ್ತು ರಸ್ತೆ ಬದಿ ಹಣ್ಣು ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಕೃತಕವಾಗಿ ಹಣ್ಣು ಮಾಡಿದ ರಾಸಾಯನಿಕ ಹಣ್ಣುಗಳ ರಾಶಿಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಾರಾಟಗಾರರಿಗೆ ಸೂಕ್ತ ಎಚ್ಚರಿಕೆಯನ್ನೂ ನೀಡಿದ್ದಾರೆ. ವ್ಯಾಪಾರಸ್ಥರು ತಾವು ಖರೀದಿ ಮಾಡುವ ಮೊದಲು ಕೃತಕವಾಗಿ ಹಣ್ಣಾಗುವ ರಾಸಾಯನಿಕವನ್ನು ಬಳಕೆ ಮಾಡಲಾಗಿದೆಯೇ ಎಂದು ಪರೀಕ್ಷೆ ಮಾಡಬೇಕು. ಬಳಿಕ ಅದನ್ನು ತಂದು ಗ್ರಾಹಕರಿಗೆ ತಂದು ನೀಡಬೇಕು ಎಂದು ಅಧಿಕಾರಿಗಳು ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ಐಪಿಎಲ್‌ 2024ರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್, ಇಂದು ತವರು ನೆಲ ಈಡನ್ ಗಾರ್ಡನ್‌ ನಲ್ಲಿ ನಡೆದ 60ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಅಧಿಕೃತವಾಗಿ ಪ್ಲೇಆಫ್ ​ಗೆ ಎಂಟ್ರಿಕೊಟ್ಟಿದೆ. ಮಳೆ ಪೀಡಿತ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್‌ ಗೆ ಗೆಲ್ಲಲು 158 ರನ್‌ಗಳ ಗುರಿಯನ್ನು ನೀಡಿದೆ. ಮಳೆಯಿಂದಾಗಿ ಪಂದ್ಯ ಎರಡು ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡಿದ್ದು, ಓವರ್‌ ಗಳನ್ನು ಮೊಟಕುಗೊಳಿಸಲಾಯಿತು. ಪಂದ್ಯವನ್ನು ತಲಾ 16 ಓವರ್‌ ಆಡಿಸಲು ನಿರ್ಧರಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ‌ಗಳಲ್ಲಿ ಏಳು ವಿಕೆಟ್‌ ಗೆ 157 ರನ್ ಗಳಿಸಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ಮುಂಬೈ ಪರ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ತಲಾ ಎರಡು ವಿಕೆಟ್ ಪಡೆದರು. ನಮ್ಮತುಮಕೂರಿನ…

Read More

ಬೆಂಗಳೂರು: ಮನೆ ಕಾಣಲ್ಲ ಅಂತ ಹೆಮ್ಮರವಾಗಿ ಬೆಳೆದಿದ್ದ ಹುಣಸೆ ಮರಕ್ಕೆ ಕಿಡಿಗೇಡಿಗಳು ವಿಷವಿಟ್ಟ ಘಟನೆ ಮಲ್ಲೇಶ್ವರಂನಲ್ಲಿ ಜರುಗಿದೆ. ಮರದ ಬುಡ ತೂತು ಮಾಡಿ ಮನೆ ಮಾಲೀಕ ವಿಷವಿಟ್ಟಿದ್ದಾನೆ. ಆಸಿಡ್ ಇಂಜೆಕ್ಷನ್ ನೀಡಿ ಮರಗಳ ಮಾರಣ ಹೋಮಕ್ಕೆ ಸಂಚು ನಡೆಸಿದ್ದು, ಕೆಲವರು ನಿವೇಶನ, ಮನೆಗಳಿಗೆ ತೊಂದರೆ ಎಂದು ಮರಗಳಿಗೆ ಕೊಳ್ಳಿ ಇಡಲಾಗಿದೆ. ಈ ಬಗ್ಗೆ ವೃಕ್ಷ ವೈದ್ಯ ವಿಜಯ್ ನಿಶಾಂತ್ ಬೇಸರ ಹೊರ ಹಾಕಿದರು. ದಯವಿಟ್ಟು ಯಾರೂ ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದರು. ನಗರದಲ್ಲಿ 40° ಬಿಸಿಲು ದಾಖಲಾಗ್ತಿದೆ. ಮರಗಳು ತುಂಬಾ ಅವಶ್ಯಕತೆ ಇದೆ. ಮನೆ ಕಾಣಲ್ಲ ಎಂದು ಮರಗಳಿಗೆ ವಿಷ ಹಾಕೋದು ಕಾನೂನು ಬಾಹಿರ. ಮರಕ್ಕೆ ಮಾರಕ ಕೆಲಸ ಮಾಡಿದ್ರೆ ನಿಮ್ಮ‌ ಮೇಲೆ ಕೇಸ್ ಕೂಡ ದಾಖಲಾಗುತ್ತೆ ಎಂದು ವೃಕ್ಷ ವೈದ್ಯ ವಿಜಯ್ ನಿಶಾಂತ್ ಎಚ್ಚರಿಕೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296…

Read More

ತಿಪಟೂರು: ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಪ್ಪೆತೋಪು ಬಡವಾಣೆಯಲ್ಲಿ ಪಾಪಿ ತಂದೆಯಿಂದಲೇ ಮಗಳ ಮೇಲೆ ಪೈಶಾಚಿಕ ಕೃತ್ಯವೊಂದು ನಡೆದಿದೆ. ಹೆತ್ತ ಮಗಳ‌ ಮೇಲೆಯೇ ಕಾಮುಕ ತಂದೆಯು ಅತ್ಯಚಾರ ನಡೆಸಿದ್ದಾನೆ. ಈ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. 13ವರ್ಷದ ಅಪ್ರಾಪ್ತೆ ಮಗಳ ಮೇಲೆ ಆತ್ಯಾಚಾರ ನಡೆಸಿ ತಂದೆ ಪರಾರಿಯಾಗಿದ್ದಾರೆ. ಈ ಹಿಂದೆಯೂ ಒಮ್ಮೆ ಮಗಳ‌ ಮೇಲೆ ಆತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಘಟನೆ ಕುರಿತು ತಾಯಿಯಿಂದ ತಿಪಟೂರು ನಗರ ಠಾಣೆಗೆ ದೂರು ನೀಡಲಾಗಿದ್ದು, ತಾಯಿಯ ದೂರಿನ ಅನ್ವಯ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಕೊಂಡಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ತಿಪಟೂರು ‌ನಗರ ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮುಖ್ಯ ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಶಿಕ್ಷಕರಿಗೆ ತೀವ್ರ ಗಾಯಗಳಾಗಿರುವ ಘಟನೆ ಪಟ್ಟಣದ ಪಾವಗಡ ತಾಲೂಕಿನ ತುಮಕೂರು ರಸ್ತೆಯ ಕಣಿವೆನಹಳ್ಳಿ ಗೇಟ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪ ಪ್ರಾಂಶುಪಾಲರಾದ ಓ ಧನಂಜಯ್ಯ(58) ಮತ್ತು ಗೌಡೇಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀ ಕೃಷ್ಣ(49) ಮೃತರಾಗಿದ್ದಾರೆ. ತುಮಕೂರಿನಲ್ಲಿ ಶಿಕ್ಷಕರೊಬ್ಬರ ಮಗಳ ಆರತಕ್ಷತೆ ಮುಗಿಸಿ, ಮರಳಿ ಪಾವಗಡಕ್ಕೆ ಬರುವಂತಹ ಸಮಯದಲ್ಲಿ, ಪಾವಗಡ ತುಮಕೂರು ಮಾರ್ಗದ ಕಣಿವೆನಹಳ್ಳಿ ಗೇಟ್ ಬಳಿ ಇರುವ ನಯಾರ ಪೆಟ್ರೋಲ್ ಬಂಕ್ ಸಮೀಪದಲ್ಲಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಶ್ರೀ ಕೃಷ್ಣ ಮತ್ತು ಓ.ಧನಂಜಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಶಿಕ್ಷಕರಗಳಾದ ಆರ್ ಎಂ ನರಸಿಂಹ ಮತ್ತು ವೆಂಕಟಾಚಲಪತಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.…

Read More

ಧಾರಾಕಾರ ಮಳೆ ಹಾಗೂ ಪ್ರವಾಹಕ್ಕೆ ಅಫ್ಘಾನಿಸ್ತಾನ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಘಟನೆಯಲ್ಲಿ ಇದುವರೆಗೂ ಸುಮಾರು 200ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ. ರಾತ್ರಿ ಆರಂಭವಾದ ಮಳೆಗೆ ಪ್ರವಾಹ ನುಗ್ಗಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಕೊನೆಯುಸಿರೆಳೆದಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಾಗಿರುವುದಾಗಿ ವರದಿ ವಿವರಿಸಿದೆ. ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ವಿಪತ್ತು ನಿರ್ವಹಣಾ ಮಂಡಳಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಶೋಧ ಕಾರ್ಯ ನಡೆಯುತ್ತಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಮಳೆ, ಪ್ರವಾಹದಿಂದ ನೂರಾರು ಜನರು ಮನೆ ಕಳೆದುಕೊಂಡಿದ್ದು, ಅವರಿಗಾಗಿ ತಾತ್ಕಾಲಿಕ ಟೆಂಟ್ಸ್‌, ಬ್ಲ್ಯಾಂಕೆಟ್‌, ಆಹಾರ ಒದಗಿಸಲಾಗಿದೆ. ಧಾರಾಕಾರ ಮಳೆ, ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರವಾಹದಿಂದಾಗಿ ಹಲವಾರು ಪ್ರದೇಶಗಳಲ್ಲಿ ಭಾರೀ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ವಿಪತ್ತು ನಿರ್ವಹಣಾ ಮಂಡಳಿಯ ಪ್ರಾಂತೀಯ ನಿರ್ದೇಶಕ ಮೊಹಮ್ಮದ್‌ ಅಕ್ರಮ್‌ ಅಕ್ಬರಿ ತಿಳಿಸಿರುವುದಾಗಿ ವರದಿಯಾಗಿದೆ. ನಮ್ಮತುಮಕೂರಿನ ಕ್ಷಣ…

Read More

ಬೆಂಗಳೂರು: ನಗರದ ರಮಾಬಾಯಿ SC ST ಲೇಡಿಸ್ ಹಾಸ್ಟೆಲ್ ನಲ್ಲಿ ಬೆಳ್ಳಂಬೆಳಗ್ಗೆ ಹನಿ ನೀರು ಇಲ್ಲದೇ ಬೇಸತ್ತ ವಿದ್ಯಾರ್ಥಿನಿಯರು, ಏಕಾಏಕಿ ರಸ್ತೆಗೆ ಬಂದು ರೋಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.  ಲೇಡಿಸ್ ಹಾಸ್ಟೆಲ್ ಅವ್ಯವಸ್ಥೆಗಳ ಆಗರ ಆಗಿದೆ ಅಂತ ಬೆಂಗಳೂರು ವಿವಿ ಹಾಗೂ ವಾರ್ಡನ್ ವಿರುದ್ಧ ನಿಗಿನಿಗಿ ಕೆಂಡ ಕಾರಿದರು. ವಿವಿ ಅಧಿಕಾರಿಗಳು ಎಷ್ಟೇ ಸಮಾಧಾನ ಮಾಡಿದರೂ ರಸ್ತೆಯಿಂದ ಮೇಲೇಳಲು ವಿದ್ಯಾರ್ಥಿನಿಯರು ಸುತಾರಾಂ ಒಪ್ಪಲಿಲ್ಲ. ಕುಲಪತಿ, ಕುಲಸಚಿವ ಸ್ಥಳಕ್ಕೆ ಧಾವಿಸಬೇಕು ಅಂತ ಪಟ್ಟು ಹಿಡಿದರು. ತಾತ್ಕಾಲಿಕ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ ಬಳಿಕ ಹಾಸ್ಟೆಲ್ ನತ್ತ ತೆರಳಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಮಿತಿ ನಿರ್ದೇಶಕ ಚಂದ್ರಶೇಖರ್, ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಆಗಿ ನೀರನ್ನು ಪಂಪ್ ಮಾಡೋಕೆ ಆಗಿರಲಿಲ್ಲ. ಸದ್ಯಕ್ಕೆ ಟ್ಯಾಂಕರ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ರು. ಅಲ್ಲದೆ ಹಾಸ್ಟೆಲ್ ನಲ್ಲಿರುವ ಉಳಿದ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವುದಾಗಿ ಹೇಳಿದ್ರು. ಒಟ್ಟಾರೆ ನೀರಿನ ಸಮಸ್ಯೆ ಮಾತ್ರವಲ್ಲದೆ…

Read More

ಸಮಾಜವಾದಿ ಪಕ್ಷದವರು ಕ್ರಿಮಿನಲ್ ‌ಗಳು ಮತ್ತು ಭಯೋತ್ಪಾದಕರ ಜೊತೆ ಇದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿ, ಸಮಾಜವಾದಿ ಪಕ್ಷದ ಆಡಳಿತದಲ್ಲಿ ಅರಾಜಕತೆ ಇತ್ತು. ನಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿರಲಿಲ್ಲ, ಗೂಂಡಾಗಳ ಗುಂಪಿತ್ತು. ಆದರೆ ಈಗ ಇದು ಹೊಸ ಭಾರತ, ಹೊಸ ಉತ್ತರ ಪ್ರದೇಶವಾಗಿದೆ ಎಂದರು. ಈ ವೇಳೆ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಅವರು ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಲಿಲ್ಲ. ಆದರೆ ಅವರು ತಮ್ಮ ದುಃಖ ಮತ್ತು ದುಃಖವನ್ನು ವ್ಯಕ್ತಪಡಿಸಲು ಮುಖ್ತಾರ್ ಅನ್ಸಾರಿ ಅವರ ಮನೆಗೆ ತೆರಳಿದರು. ಸಮಾಜವಾದಿ ಪಕ್ಷದವರು ಕ್ರಿಮಿನಲ್‌ಗಳು ಮತ್ತು ಭಯೋತ್ಪಾದಕರ ಜೊತೆ ಇದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸಿಎಂ ಯೋಗಿ ಹೇಳಿದ್ದಾರೆ. ದೆಹಲಿ ಮತ್ತು ಲಕ್ನೋ ಎರಡರಲ್ಲೂ ಸರ್ಕಾರ ರಚನೆಗೆ ನೀವು ಕೊಡುಗೆ ನೀಡಿದ್ದೀರಿ. ಅದಕ್ಕಾಗಿಯೇ ಈಗ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಭಗವಾನ್ ರಾಮನು ಕುಳಿತಿದ್ದಾನೆ. ಇದು…

Read More

ಉತ್ತರ ಕೊರಿಯಾ: ಇಲ್ಲಿನ ಸರ್ವೋಚ್ಚ ನಾಯಕ ಕಿಮ್ ಜಾಂಗ್-ಉನ್ ಅವರು ಈ ಬಣ್ಣದ ಲಿಪ್‌ ಸ್ಟಿಕ್‌ ಗೆ ನಿಷೇಧವಿದೆ. ಉತ್ತರ ಕೊರಿಯಾದಲ್ಲಿ ಸುಮಾರಷ್ಟು ಪಾಲಿಸಬೇಕಾದ ಮತ್ತು ವಿಚಿತ್ರ ನಿಯಮಗಳಿವೆ. ಅದರಲ್ಲಿ ಕೆಂಪು ಬಣ್ಣದ ಲಿಪ್‌ ಸ್ಟಿಕ್‌ ಮೇಲಿನ ಬ್ಯಾನ್‌ ಕೂಡ ಒಂದು.  ಉತ್ತರ ಕೊರಿಯಾದಲ್ಲಿ ವೈಯಕ್ತಿಕ ಫ್ಯಾಷನ್ ಮತ್ತು ಸೌಂದರ್ಯದ ಆಯ್ಕೆಗಳು ಕೇವಲ ವೈಯಕ್ತಿಕ ಅಭಿವ್ಯಕ್ತಿಯ ವಿಷಯಗಳಾಗಿ ಮಾತ್ರ ಉಳಿದಿಲ್ಲ. ಇಲ್ಲಿ ಒಬ್ಬರ ವೈಯಕ್ತಿಕ ಆಯ್ಕೆಗಳನ್ನು ಸರ್ಕಾರವು ತುಂಬಾ ಬಿಗಿಯಾಗಿ ನಿಯಂತ್ರಿಸುತ್ತದೆ. ಈ ನಿಯಂತ್ರಣದಲ್ಲಿ ಅಚ್ಚರಿ ವಿಚಾರ ಎಂದರೆ ಕೆಂಪು ಲಿಪ್‌ಸ್ಟಿಕ್ ಮೇಲಿನ ನಿಷೇಧ. ಕಿಮ್ ಜಾಂಗ್-ಉನ್ ಅವರ ನಾಯಕತ್ವದಲ್ಲಿ, ಉತ್ತರ ಕೊರಿಯಾ ಮಹಿಳೆಯರು ಹೇಗೆ ಬಟ್ಟೆ ಧರಿಸುತ್ತಾರೆ ಮತ್ತು ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸುತ್ತಾರೆ ಎಂಬ ಎಲ್ಲಾ ವಿಚಾರಗಳಿಗೆ ಕೆಲ ಕಟ್ಟುನಿಟ್ಟಾದ ನಿಯಮಗಳನ್ನು ಕಾಯ್ದಿರಿಸಲಾಗಿದೆ. ಉತ್ತರ ಕೊರಿಯಾದಲ್ಲಿ ಕೆಂಪು ಲಿಪ್‌ ಸ್ಟಿಕ್‌ ಮೇಲಿನ ನಿಷೇಧವು ಕೇವಲ ಸೌಂದರ್ಯ ನಿಯಂತ್ರಣವಾಗಿರದೇ, ಇದು ದೇಶದ ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹೋರಾಟಗಳೊಂದಿಗೆ ಆಳವಾಗಿ ಸಂಬಂಧ…

Read More

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯ ನೀರೆಲ್ಲಾ ಅಪಾರ್ಟ್ಮೆಂಟ್ ಗೆ ಪ್ರವೇಶವಾಗಿದೆ. ಅನ್ನಪೂರ್ಣೇಶ್ವರಿನಗರದ ಚಂದನ ಅಪಾರ್ಟ್ಮೆಂಟ್ ಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿ ಆಗಿದೆ. ಮೂರಡಿ ನಿಂತ ಮಳೆನೀರಿನಿಂದ ಅಪಾರ್ಟ್ಮೆಂಟ್ ನಿವಾಸಿಗಳ ಪರದಾಟ ಹಿನ್ನೆಲೆ. ನೀರು ತಂಬಿ 12 ಗಂಟೆ ಬಳಿಕ ರಕ್ಷಣಾ ತಂಡ ಆಗಮಿಸಿದೆ. ಫೈರ್ ಸ್ಟೇಷನ್ ಸಿಬ್ಬಂದಿಗಳಿಂದ ತುಂಬಿದ್ದ ನೀರು ತೆರವು ಮಾಡಲಾಗಿದೆ. ಅಗ್ನಿ ಶಾಮಕದಳದ ಎಂಟು ಜನರ ಸಿಬ್ಬಂದಿಯಿಂದ ನೀರು ತೆರವು ಮಾಡಲಾಗಿದೆ. ಚಂದನ ಅಪಾರ್ಟ್ಮೆಂಟ್ ನ ಬೇಸ್ಮೆಂಟ್ ನಲ್ಲಿದ್ದ ವಾಹನಗಳು ಮುಳುಗಡೆ ಆಗಿದ್ದವು. ಮೂಡರಡಿ ನಿಂತ ಮಳೆ ನೀರಿನಿಂದ ವಾಹನಗಳು ಮುಳುಗಡೆ ಆಗಿದ್ದವು. ನೀರು ತೆರವು ಮಾಡುವಂತೆ ಬಿಬಿಎಂಪಿಗೆ ಕರೆ ಮಾಡಿದ್ರೂ ರೆಸ್ಪಾನ್ಸ್ ಮಾಡಿರಲಿಲ್ಲ. ನಾಗರಬಾವಿ ಬಳಿ ಇರುವ ಹೆಲ್ತ್ ಲೇಔಟ್ ನ ಚಂದನಾ ಅಪಾರ್ಟ್ಮೆಂಟ್ ನಡೆದಿರುವ ಘಟನೆ ಇದಾಗಿದೆ. ಕಳೆದ ಒಂದು ಗಂಟೆಯಿಂದ ಬೇಸ್ಮೆಮೆಂಟ್ ನಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…

Read More