Subscribe to Updates
Get the latest creative news from FooBar about art, design and business.
- ಎಸ್ ಐಆರ್: ತುಮಕೂರಿನಲ್ಲಿ ಶೇ.100 ಅರ್ಜಿ ವಿತರಣೆ
- ಎಸ್.ಜಾನಕಿ ಅವರ ಸ್ವರ ಮಾಧುರ್ಯಕ್ಕೆ ಸೋಲದವರಿಲ್ಲ: ಮಾದಿಹಳ್ಳಿ ಉಮೇಶ್
- ಸರಗೂರು: ಜಮೀನಿಗೆ ನುಗ್ಗಿದ್ದ ಕಾಡಾನೆ ಮರಿ ಯಶಸ್ವಿ ಸೆರೆ: ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರ
- ಕುಡಿಯುವ ನೀರಿನ ಪೂರೈಕೆಗಾಗಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ | ರೈತರಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿಎಂ ಡಾ.ಜಿ.ಪರಮೇಶ್ವರ್
- ಹುಟ್ಟುಹಬ್ಬದಂದು ಹಮ್ಮಿಕೊಂಡ ಸಾಮಾಜಿಕ ಕಾರ್ಯಗಳಿಗೆ ತಡೆ: ತಿಪಟೂರು ತಾಲೂಕು ಆಡಳಿತ ವಿರುದ್ಧ ಅಶ್ವಥ್ ನಾರಾಯಣ್ ಆಕ್ರೋಶ
- ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ: ‘ದೇಶದ್ರೋಹಿ’ಗಳ ಜೊತೆ ಸೇರಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆರೋಪ
- ನೀಟ್ ಹಗರಣ: ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತುಮಕೂರಿನಲ್ಲಿ ಕಾಂಗ್ರೆಸ್ ವಕೀಲರ ಘಟಕದಿಂದ ಪ್ರತಿಭಟನೆ
- ಸಹಕಾರ ಕ್ಷೇತ್ರಗಳ ಬೆಳವಣಿಗೆಗೆ ತರಬೇತಿ ಪೂರಕ: ಕೆ.ಎನ್.ರಾಜಣ್ಣ
Author: admin
ಕೊರಟಗೆರೆ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೊರಟಗೆರೆ ಪಟ್ಟಣದ ಭೋವಿ ಕಾಲೋನಿ ವಾರ್ಡ್ ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಸಿ ಶುಭ ಕಲ್ಯಾಣ್ ತಾಲ್ಲೂಕಿನ ಬುಕ್ಕಪಟ್ಟಣ ಹಾಗೂ ಕ್ಯಾಮೇನಹಳ್ಳಿ ಮೇವು ಬ್ಯಾಂಕಿಗೆ ಭೇಟಿ ನೀಡಿ ಮೇವು ತೆಗೆದುಕೊಳ್ಳುತ್ತಿರುವ ರೈತರ ಬಳಿ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಗತ್ಯವಿದ್ದರೆ ಕೆಲವು ಹೋಬಳಿಗಳಲ್ಲಿ ಮೇವು ಬ್ಯಾಂಕ್ ತೆರೆಯುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಸಾಲ ಪಡೆದವರ ಮನೆ ಬಾಗಿಲಿಗೆ ತೆರಳಿ ಚಿತ್ರಹಿಂಸೆ ನೀಡುವಂತಿಲ್ಲ ಎಂದರು. ಶುಭ ಕಲ್ಯಾಣ್ ತಾಲ್ಲೂಕಿನಲ್ಲಿ ಅನಧಿಕೃತ ಕೋಳಿ ಫಾರಂ ಇದ್ದಲ್ಲಿ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕಿಗೆ ಯಾವುದೇ ಅಧಿಕಾರಿಗಳಾಗಲಿ ರಾಜ್ಯ ಮಟ್ಟದ ರಾಜಕೀಯ ವ್ಯಕ್ತಿಗಳಾಗಲಿ ಭೇಟಿ ನೀಡಿದಾಗ, ಕೊರಟಗೆರೆ ತಾಲೂಕು ಪತ್ರಕರ್ತರಿಗೆ ಮಾಹಿತಿ ನೀಡುವುದಿಲ್ಲ ಎಂದು ವಾರ್ತಾ ಇಲಾಖೆ ಅಧಿಕಾರಿ ವಿರುದ್ಧ ತಾಲೂಕು ಪತ್ರಕರ್ತರಿಂದ ಜಿಲ್ಲಾಧಿಕಾರಿಗೆ ದೂರು ನೀಡಲಾಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇನ್ನು ಮುಂದೆ…
ಈ ವರ್ಷದ ಬಹು ನಿರೀಕ್ಷಿತ ಮಲಯಾಳಂ ಸಿನಿಮಾಗಳಲ್ಲಿ ಒಂದಾದ ಮಮ್ಮುಟ್ಟಿ ಅಭಿನಯದ ಚಿತ್ರ ‘ಟರ್ಬೋ’ ಅದ್ದೂರಿ ಬಿಡುಗಡೆಗೆ ಸಜ್ಜಾಗುತ್ತಿದೆ. ಭಾರೀ ನಿರೀಕ್ಷೆಯ ನಡುವೆ ಇದೀಗ ಮೇ 12 ರಂದು ಚಿತ್ರದ ಟ್ರೈಲರ್ ಅನಾವರಣಗೊಂಡಿದೆ. ಆಕ್ಷನ್-ಪ್ಯಾಕ್ಟ್ ಟ್ರೈಲರ್ ಮಮ್ಮುಟ್ಟಿ ಅವರಿಗೆ ಕನ್ನಡದ ಜನಪ್ರಿಯ ನಟ ರಾಜ್ ಬಿ ಶೆಟ್ಟಿ ಅವರೊಂದಿಗೆ ಮುಖಾಮುಖಿ ಯಾಗುತ್ತಿರುವುದನ್ನು ತೋರಿಸುತ್ತದೆ. ಇನ್ನೇನು ಚಿತ್ರವು ಮೇ 23 ರಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಮಮ್ಮೂಟಿಯವರ 2022 ರ ಚಲನಚಿತ್ರ ‘ಭೀಷ್ಮ ಪರ್ವಂ ನಂತರ ಇದು ಅವರ ಮೊದಲ ಪೂರ್ಣ ಪ್ರಮಾಣದ ಮಾಸ್ ಎಂಟರ್ ಟೈನರ್ ಆಗಿದೆ. ಟ್ರೇಲರ್ ಕುರಿತು ಹೇಳುವುದಾದರೆ, ‘ಟರ್ಬೊ” ಒಂದು ಆಕ್ಷನ್ ಕಾಮಿಡಿಯಾಗಿದ್ದು, ಇದು ಅನೇಕ ಹೈ-ಆಕ್ಷನ್ ಸೀಕ್ವೆನ್ಸ್ ಗಳನ್ನು ಹೊಂದಿದೆ. ಮೇ 12 ರಂದು, ಮಮ್ಮುಟ್ಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಟೈಲರ್‌ನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ‘ಪುಲಿಮುರುಗನ್’ ನಿರ್ದೇಶಕ ವೈಶಾಖ್ ‘ಟರ್ಬೋ’ ಚಿತ್ರಕ್ಕಾಗಿ ಮಮ್ಮುಟ್ಟಿ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದ ಕಥೆಯನ್ನು ‘ಅಂಜಮ್ ಪತಿರಾ’…
ಮುಂಬೈ: ಭಾರತದ ವಾಣಿಜ್ಯ ರಾಜಧಾನಿಯಲ್ಲಿ ಸೋಮವಾರ ಭಾರಿ ಗಾಳೀಗೆ ಜಾಹೀರಾತು ಫಲಕ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೂರ್ವ ಮುಂಬೈನ ಪೆಟ್ರೋಲ್ ಬಂಕ್ ಬಳಿ ಅಳವಡಿಸಿದ್ದ ಫಲಕ ಕುಸಿದು ಬಿದ್ದಾಗ 12 ಮಂದಿ ಅದರ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟರು. ಅವಶೇಷಗಳಡಿ ಸಿಕ್ಕಿಹಾಕಿಕೊಂಡವರಿಗಾಗಿ ರಕ್ಷಣಾ ತಜ್ಞರು ಶೋಧಕಾರ್ಯ ಮುಂದುವರಿಸಿದ್ದಾರೆ. ಎಂಟು ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಯ ಇನ್ಸ್ಪೆಕ್ಟರ್ ಗೌರವ್ ಚೌಹಾಣ್ ಹೇಳಿದ್ದಾರೆ. ನಾಲ್ಕು ದೇಹಗಳು ಇನ್ನೂ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿವೆ ಎಂದು ವಿವರಿಸಿದ್ದಾರೆ. ಅವರ ಮೃತದೇಹಗಳು ಪತ್ತೆಯಾಗಿವೆ. ಆದರೆ ಪೆಟ್ರೋಲ್ ಪಂಪ್ ಹಾಗೂ ಅಪಾಯಕಾರಿ ಸನ್ನಿವೇಶ ಇರುವುದರಿಂದ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಇಗೋ ಮೀಡಿಯಾ ಮಾಲೀಕ ಭವೇಶ್ ಭಿಂಡೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಜಾಹೀರಾತು ಫಲಕವನ್ನು ಅನುಮತಿ ಇಲ್ಲದೇ ಅಕ್ರಮವಾಗಿ ಅಳವಡಿಸಲಾಗಿತ್ತು ಎಂದು ಹೇಳಲಾಗಿದೆ. ಮುಂಬೈ ಹಾಗೂ ಮೆಟ್ರೋಪಾಲಿಟನ್…
ವಿಜಯವಾಡ: ತೆನಾಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ವೈಎಸ್ಆರ್ ಸಿಪಿ ಶಾಸಕ ಅಣ್ಣಬಟೂನಿ ಶಿವಕುಮಾರ್, ಮತದಾರರ ಸರದಿ ಸಾಲಿನಲ್ಲಿ ರಂಪಾಟ ನಡೆಸಿ, ವ್ಯಕ್ತಿಯೊಬ್ಬರ ಕೆನ್ನೆಗೆ ಹೊಡೆದು ವಾಪಾಸು ಪೆಟ್ಟು ತಿಂದ ಸ್ವಾರಸ್ಯಕರ ಪ್ರಸಂಗಕ್ಕೆ ಸೋಮವಾರ ನಡೆದ ಮತದಾನ ಸಾಕ್ಷಿಯಾಯಿತು. ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ ಶಿವಕುಮಾರ್ ಸರದಿಯನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದರು. ಇದಕ್ಕೆ ಗೊಟ್ಟುಮುಕ್ಕಲ ಸುಧಾಕರ್ ಎಂಬ ಮತದಾರರೊಬ್ಬರು ಆಕ್ಷೇಪಿಸಿದರು. ಆಕ್ಷೇಪಿಸಿದ ಮತದಾರನ ಕೆನ್ನೆಗೆ ಶಾಸಕರು ಹೊಡೆದಾಗ ಪ್ರತಿಯಾಗಿ ಸುಧಾಕರ್ ಕೂಡಾ ತಿರುಗೇಟು ನೀಡಿದರು. ಘಟನೆ ಅಷ್ಟಕ್ಕೇ ಮುಗಿಯದೇ ಶಿವಕುಮಾರ್ ಬೆಂಬಲಿಗರು ಆ ಬಳಿಕ ಸುಧಾಕರ್ ಮೇಲೆ ಹಲ್ಲೆ ನಡೆಸಿದರು. ಸುಧಾಕರ್ ಅವರ ಎಡಕಣ್ಣಿಗೆ ಗಾಯಗಳಾಗಿವೆ. ಈ ಸಂಘರ್ಷದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ತೆನಾಲಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನನ್ನು ನಿಂದಿಸಿದ್ದಕ್ಕಾಗಿ ಸುಧಾಕರ್ ಗೆ ಹೊಡೆದದ್ದಾಗಿ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. “ಸರದಿಯಲ್ಲಿದ್ದ ವ್ಯಕ್ತಿ ಮದ್ಯಪಾನ ಮಾಡಿದ್ದ. ನನ್ನನ್ನು ಹಾಗೂ ಪತ್ನಿಯನ್ನು ನಿಂದಿಸಿದ. ಕಮ್ಮಾ ಸಮುದಾಯಕ್ಕೆ ಸೇರಿದ್ದರೂ ಹಿಂದುಳಿದವರು, ಎಸ್ಸಿ,…
ಬಿರ್ಬೂಮ್: ಲೋಕಸಭೆ ಚುನಾವಣೆಗೆ ಸೋಮವಾರ ನಡೆದ ನಾಲ್ಕನೇ ಹಂತದ ಮತದಾನದ ಸಂದರ್ಭ ಪಶ್ಚಿಮಬಂಗಾಳದ ಹಲವು ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ದುರ್ಗಾಪುರದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿರ್ಬೂಮ್‌ನಲ್ಲಿ ಮತಗಟ್ಟೆಯ ಹೊರಗಿದ್ದ ತಮ್ಮ ಸ್ಟಾಲ್ ಅನ್ನು ಆಡಳಿತಾರೂಢ ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಟಿಎಂಸಿ ನಾಯಕ ರಾಮ್ ಪ್ರಸಾದ್ ಹಲ್ದಾರ್, ‘‘ಬೆಳಗ್ಗೆ 6 ಗಂಟೆಗೆ ಈ (ಬಿಜೆಪಿ) ಜನರು ಕೇಂದ್ರದ ಪಡೆಗಳೊಂದಿಗೆ ಆಗಮಿಸಿದರು ಹಾಗೂ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರು. ನಾವು ಇದರ ವಿರುದ್ಧ ಪ್ರತಿಭಟನೆ ನಡೆಸಿದೆವು. ಮತದಾರರು ಕೂಡ ಪ್ರತಿಭಟನೆ ನಡೆಸಿದರು. ಅವರು ಹೊರಗಿನಿಂದ ಮತದಾನದ ಏಜೆಂಟರನ್ನು ಕರೆ ತರಲು ಪ್ರಯತ್ನಿಸಿದರು. ಕೇಂದ್ರ ಪಡೆಗಳು ಜನರಿಗೆ ಬೆದರಿಕೆ ಒಡ್ಡಿದವು ಹಾಗೂ ಅವರ ಮೇಲೆ ಪ್ರಭಾವ ಬೀರಿದವು. ಜನರು ಇದನ್ನು ವಿರೋಧಿಸಿದರು’’ ಎಂದಿದ್ದಾರೆ. ಬಿಜೆಪಿ ಶಾಸಕ ಲಕ್ಷ್ಮಣ್ ಗೌರಿ, ದುರ್ಗಾಪುರದ ಶಾಲೆಯಲ್ಲಿರುವ ಮತಗಟ್ಟೆಯಿಂದ ನಮ್ಮ ಮತದಾನದ ಏಜೆಂಟ್ ನನ್ನು ಹೊರಗೆ ಹಾಕಲಾಯಿತು…
ಬೆಂಗಳೂರು: ಸಿಲಿಕಾನ್ ಸಿಟಿಗೆ ಮಳೆಯ ಎಂಟ್ರಿಯೇನೋ ಆಗಿದೆ. ಆದ್ರೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಬೆಂದ ಕಾವಲಿಯಂತಿದ್ದ ವಾತವರಣ ತರಕಾರಿ ಬೆಲೆಯನ್ನ ಮತ್ತಷ್ಟು ದುಪ್ಪಟ್ಟು ಮಾಡ್ಬಿಟ್ಟಿದೆ. ಸೊಪ್ಪು, ತರಕಾರಿ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಮದುವೆ ಸೀಸನ್ ನಿಂದಾಗಿ ಬೇಡಿಕೆ ಹೆಚ್ಚಿದೆ, ಕಳೆದ ವಾರದಿಂದಲೇ ಬೆಲೆ ಏರಿ ಕೆಜಿ 100ರೂ ನಂತೆ ಮಾರಾಟವಾಗ್ತಿದೆ ಬೀನ್ಸ್, ಹಸಿಮೆಣಸು, ಹಿರೇಕಾಯಿ ನಿಂಬೆ ಹಣ್ಣು. ಇತ್ತ, ಬಿಸಿ ಎಫೆಕ್ಟ್ ಹೂವಿನ ಮೇಲೂ ಬಿದ್ದಿದ್ದು, ಉದುರಿ ಬೀಳ್ತಿದೆ. ಇಳುವರಿ ಕಡಿಮೆಯಾಗಿದೆ. ಹೀಗಾಗಿ ಹೂವಿನ ರೇಟ್ ಕೂಡ ದುಪ್ಪಟ್ಟಾಗಿದೆ. ಕಳೆದ ತಿಂಗಳು ಕೆಜಿಗೆ 30 ರೂಪಾಯಿ ಇರುವ ತರಕಾರಿ, ಈ ತಿಂಗಳು 60 ರೂಪಾಯಿ ಆಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಸಬ್ಬಸಿಗೆ ಸೊಪ್ಪು ಪ್ರತಿ ಕಟ್ಟಿಗೆ 20ರೂಪಾಯಿ ಆಗಿದೆ. ಕೊತ್ತಂಬರಿ ಸೊಪ್ಪು 15ರಿಂದ 20 ರೂಪಾಯಿ ಆದ್ರೆ, ಮೆಂತ್ಯೆ ಸೊಪ್ಪು ಪ್ರತಿ ಕಟ್ಟಿಗೆ 10 ರಿಂದ 20 ರೂಪಾಯಿ ಆಗಿದೆ. ಪುದೀನಾ ಮತ್ತು ಪಾಲಕ್ ಸೊಪ್ಪು 10ಕ್ಕೆ ಏರಿದ್ದು…
ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು, ಲಾರಿ ಪಲ್ಟಿಯಾಗಿ, ಲಾರಿ ಚಾಲಕನಿಗೆ ಗಂಭೀರ ಗಾಯವಾಗಿರೋ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿ ನಡೆದಿದೆ. ಲಾರಿ ಸಂಪೂರ್ಣ ಜಖಂ ಗೊಂಡಿದೆ. ವಾಟರ್ ಬಾಟಲ್ ತುಂಬಿಕೊಂಡು ಮೈಸೂರು ಕಡೆಗೆ ತೆರಳುವಾಗ ಘಟನೆ ನಡೆದಿದೆ. ಗಾಯಗೊಂಡಿದ್ದ ಚಾಲಕನಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಅಹ್ಮದಾಬಾದ್: ಭಾರತೀಯ ಕ್ರಿಕೆಟ್ ತಂಡದ ನೂತನ ಟಿ20 ವಿಶ್ವಕಪ್ ಜರ್ಸಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಕಾರ್ಯದರ್ಶಿ ಜಯ ಶಾ ಮತ್ತು ತಂಡದ ನಾಯಕ ರೋಹಿತ್ ಶರ್ಮ ಸೋಮವಾರ ಜಂಟಿಯಾಗಿ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಪ್ರದರ್ಶಿಸಿದ್ದಾರೆ. ‘ಇದು ನಮ್ಮ ತಂಡವನ್ನು ಹೊಸ ಬಣ್ಙಗಳಲ್ಲಿ ಸ್ವಾಗತಿಸುವ ಸಮಯ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಾಕಿದ ವೀಡಿಯೊವೊಂದರಲ್ಲಿ ಬಿಸಿಸಿಐ ಹೇಳಿದೆ. ಪ್ರಖರ ಬಣ್ಣಗಳಿಂದ ಕೂಡಿದ ಜರ್ಸಿಯನ್ನು ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಜಯ ಶಾ ಮತ್ತು ರೋಹಿತ್ ಶರ್ಮ ಅನಾವರಣಗೊಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ‘ನಮ್ಮ ಗೌರವ ಕಾರ್ಯದರ್ಶಿ ಜಯ ಶಾ, ನಾಯಕ ರೋಹಿತ್ ಶರ್ಮ ಮತ್ತು ಅಧಿಕೃತ ಕಿಟ್ ಭಾಗೀದಾರ ಅಡಿಡಸ್ ಜೊತೆಗೆ ನೂತನ ಟಿ20ಐ ಟೀಮ್ ಇಂಡಿಯಾ ಜರ್ಸಿಯನ್ನು ಸಾದರಪಡಿಸುತ್ತಿದ್ದೇವೆ’ ಎಂದು ಬಿಸಿಸಿಐ ಬರೆದಿದೆ. ಜರ್ಸಿಯ ಅನಾವರಣವು ಮೇ 6ರಂದು ನಡೆದಿತ್ತು. ರೋಹಿತ್ ಶರ್ಮ, ಆಲ್ರೌಂಡರ್ ರವೀಂದ್ರ ಜಡೇಜ ಮತ್ತು ಹಿರಿಯ ಸ್ಪಿನ್ನರ್ ಕುಲದೀಪ್ ಯಾದವ್ ರನ್ನು…
ಹೋಟೆಲ್ ನ ರೂಮಿನಲ್ಲಿ ತನ್ನ ಇಬ್ಬರು ಪ್ರೇಮಿಗಳೊಂದಿಗೆ ಸರಸವಾಡುತ್ತಿದ್ದ ಪತ್ನಿ, ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ನಡೆದಿದೆ. ತನ್ನ ಹೆಂಡತಿಯ ಚಟುವಟಿಕೆಗಳ ಬಗ್ಗೆ ಅನುಮಾನ ಹೊಂದಿದ್ದ ವೈದ್ಯ, ಗುರುವಾರ ರಾತ್ರಿ ಹೋಟೆಲ್ ಕೊಠಡಿಗೆ ನುಗ್ಗಿದ್ದರು. ಇಬ್ಬರು ಪುರುಷರ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯನ್ನು ಹಿಡಿದಿದ್ದರು. ಇದರಿಂದ ಕುಪಿತರಾದ ವೈದ್ಯನ ಕುಟುಂಬದವರು ಹಾಗೂ ಇಬ್ಬರು ವ್ಯಕ್ತಿಗಳ ನಡುವೆ ಮಾರಾಮಾರಿ ನಡೆದಿದೆ. ಮಹಿಳೆ ಹಾಗೂ ಆಕೆಯ ಇಬ್ಬರು ಗೆಳೆಯರ ಮೇಲೆ ವೈದ್ಯನ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವೈದ್ಯ ಹಾಗೂ ಆತನ ಪತ್ನಿ, ಜೊತೆಗಿದ್ದ ಇಬ್ಬರು ಪುರುಷರನ್ನೂ ಬಂಧಿಸಿದ್ದಾರೆ. ಈ ವೇಳೆ ತನ್ನ ಹೆಂಡತಿ ಇಬ್ಬರು ಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದಾನೆ. ಏನಿದು ಘಟನೆ?: ಪೊಲೀಸರ ಪ್ರಕಾರ, ದಂಪತಿ ಕೌಟುಂಬಿಕ ಕಲಹದಿಂದಾಗಿ…
ಅಬುಧಾಬಿ: ಅಬುಧಾಬಿಯನ್ನು ಪ್ರಮುಖ ವಿವಾಹದ ತಾಣವಾಗಿ (ಡೆಸ್ಟಿನೇಷನ್ ವೆಡ್ಡಿಂಗ್) ರೂಪಿಸಲು, ಅಬುಧಾಬಿ ಕನ್ವೆನ್ಷನ್ ಆ್ಯಂಡ್ ಎಕ್ಸಿಬಿಷನ್ ಬ್ಯೂರೊ(ಎಡಿಸಿಇಬಿ) ಎಮಿರೇಟ್ಸ್ ನಾದ್ಯಂತ ವಿವಾಹಗಳನ್ನು ಆಯೋಜಿಸುವ ಭಾರತೀಯ ಪ್ರಜೆಗಳಿಗೆ ವೀಸಾ ಬೆಂಬಲವನ್ನು ವಿಸ್ತರಿಸುವ ಉಪಕ್ರಮವನ್ನು ಘೋಷಿಸಿದೆ. ಅಬುಧಾಬಿಯನ್ನು ಪ್ರಮುಖ ವಿವಾಹದ ತಾಣವಾಗಿ ರೂಪಿಸುವ ಉದ್ದೇಶದ ಉಪಕ್ರಮ ಇದಾಗಿದೆ ಎಂದು ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಭಾಗವಾಗಿರುವ ಎಡಿಸಿಇಬಿ ಹೇಳಿದೆ. 2030ರ ವೇಳೆಗೆ ಅಬುಧಾಬಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು 39.3 ದಶಲಕ್ಷಕ್ಕೆ ಹೆಚ್ಚಿಸುವ ಪ್ರವಾಸೋದ್ಯಮ ಯೋಜನೆಗೆ ನೂತನ ವೀಸಾ ಉಪಕ್ರಮ ಪೂರಕವಾಗಲಿದೆ ಎಂದು ಹೇಳಿಕೆ ತಿಳಿಸಿದೆ. 2030ರ ಕಾರ್ಯತಂತ್ರದ ಪ್ರಕಾರ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಜಿಡಿಪಿಗೆ ಡೆಸ್ಟಿನೇಷನ್ ವೆಡ್ಡಿಂಗ್ ವಲಯದ ಕೊಡುಗೆಯನ್ನು 90 ಶತಕೋಟಿ ಧಿರ್ಹಮ್‍ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296