Author: admin

ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದ ನೇತಾರರಾಗಿದ್ದು, ಈ ವಿಚಾರವನ್ನು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳುವ ಕಾಲ ಇದಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ, ಜಾತಿ ವಿಚಾರವನ್ನು ಬಿಜೆಪಿಯವರಾದ ನಾವೇ ಮುಚ್ಚಿಡುತ್ತಿದ್ದೇವೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಾವು ಸತ್ಯ ಸಂಗತಿಯನ್ನು ಧೈರ್ಯವಾಗಿ ಹೇಳಬೇಕು. ಆದರೆ ಸಿದ್ದರಾಮಯ್ಯ ಅವರಂತಹವರು ನಾವೇ ಹಿಂದುಳಿದ ವರ್ಗದ ಚಾಂಪಿಯನ್ ಎಂದು ಹೇಳುತ್ತಿದ್ದಾರೆ. ಆದರೆ ನಾವು ಹೇಳುತ್ತಿಲ್ಲ ಎಂದರು. ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದಿಂದ ಜೆಪಿ ನಗರದ ಆರ್.ವಿ.ಡೆಂಟಲ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಬೃಹತ್ ಸಾಮಾಜಿಕ ಸಮ್ಮೇಳನ ನಡೆಯಿತು. ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಶಾಸಕರಾದ ಸಿ. ಕೆ. ರಾಮಮೂರ್ತಿ, ರವಿ ಸುಬ್ರಮಣ್ಯ, ಗೋಪಿನಾಥ್ ರೆಡ್ಡಿ, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಶೇಖ‌ರ್, ಹಿಂದುಳಿದ ಸಮುದಾಯದ…

Read More

ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋನ್ ಮಾಹಿತಿಗಾಗಿ ಜಾರಿ ನಿರ್ದೇಶನಾಲಯವು ಆಪಲ್ ಕಂಪನಿಯನ್ನು ಸಂಪರ್ಕಿಸಿದೆ. ಅರವಿಂದ್ ಕೇಜ್ರಿವಾಲ್ ಫೋನ್‌ ನ ಪಾಸ್‌  ವರ್ಡ್ ನೀಡಲು ನಿರಾಕರಿಸಿದ ನಂತರ, ಇಡಿ ಫೋನ್ ವಿವರಗಳಿಗಾಗಿ ಆಪಲ್ ಅನ್ನು ಸಂಪರ್ಕಿಸಿತು. ದೆಹಲಿ ಮುಖ್ಯಮಂತ್ರಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪವನ್ನು ಇಡಿ ಪುನರುಚ್ಚರಿಸಿದೆ. ಆದರೆ ಇಡಿ ಬಿಜೆಪಿಗೆ ಮಾಹಿತಿ ಸೋರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷವೂ ಆರೋಪಿಸಿದೆ. ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಕೇಜ್ರಿವಾಲ್ ವಿರುದ್ಧ ಯಾವುದೇ ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಇನ್ನೂ ಕಂಡುಕೊಂಡಿಲ್ಲ ಎಂದು ವರದಿಯಾಗಿದೆ. ಬಂಧನದ ನಂತರ ಕೇಜ್ರಿವಾಲ್ ತಮ್ಮ ಐಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಅದನ್ನು ಆನ್ ಮಾಡಿಲ್ಲ ಅಥವಾ ಪಾಸ್‌ವರ್ಡ್ ಹಂಚಿಕೊಂಡಿಲ್ಲ ಎಂದು ಇಡಿ ಆರೋಪಿಸಿದೆ. ಬಂಧನದ ವೇಳೆ ಇಡಿ ಕೇಜ್ರಿವಾಲ್ ಅವರ ನಿವಾಸದಿಂದ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು 70,000 ರೂ. ವಶಪಡಿಸಿಕೊಂಡರು.…

Read More

ತುಮಕೂರು:  ಶ್ರೀ ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವವು ಏಪ್ರಿಲ್ ಒಂದರಂದು ಸಿದ್ದಗಂಗಾ ಮಠದ ಆವರಣದಲ್ಲಿ ನಡೆಯಲಿದ್ದು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಹಿನ್ನೆಲೆಯಲ್ಲಿ  ಯಾವುದೇ ರಾಜಕಾರಣಿಗಳಿಗೆ ವೇದಿಕೆ ಮೇಲೆ ಮಾತನಾಡಲು ಅವಕಾಶವಿರುವುದಿಲ್ಲ, ಬದಲಾಗಿ ಅವರು ಗದ್ದುಗೆ ದರ್ಶನ ಮಾಡಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಂತೆ ಭಾಗವಹಿಸಬಹುದು ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಇಂದು ಸಿದ್ದಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು  ಕಾರ್ಯಕ್ರಮವನ್ನು ಪತಂಜಲಿ ಯೋಗ ಪೀಠದ ರಾಮದೇವ್ ಜಿ ಉದ್ಘಾಟಿಸಲಿದ್ದಾರೆ. ಮೈಸೂರಿನ ಶ್ರೀ ಸುತ್ತೂರು ವೀರ ಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ವಹಿಸುವರು ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೇಶ್ವರ ಮಹಾ ಸಂಸ್ಥಾನದ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಜಿ ಧಾರವಾಡದ ಮುರುಗಮಠ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿ. ಗದಗದ ಶ್ರೀ ವೀರೇಶ್ವರ ಪುಣ್ಯಶ್ರಮದ ಅಧ್ಯಕ್ಷರಾದ ಕಲ್ಲಯ್ಯ ಅಜ್ಜ ನವರು, ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿರುವ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ ಎಂದು…

Read More

ಪಾವಗಡ: ನನ್ನ ಮೇಲೆ ಸುಖಾ ಸುಮ್ಮನೆ ಮಾಡಿರುವ ಸುಳ್ಳು ಆರೋಪ ಮಾಡಲಾಗಿದೆ ಎಂದು ಪಾವಗಡ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಅಸಹನೆ ಹೊರಹಾಕಿದರು. ಪಾವಗಡ ಪಟ್ಟಣದಲ್ಲಿ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚಿಗೆ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶಂಕರಪ್ಪ ಅವರು ನನ್ನ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿದ್ದಾರೆ. ವಸೂಲಿ ದಂಧೆಗಿಳಿದಿದ್ದೀನಿ  ಇಲಾಖಾಧಿಕಾರಿಗಳಿಗೆ ಹಣ ಬೇಡಿಕೆಯಿಟ್ಟು ಬದುಕುತ್ತಿದ್ದೀನಿ ಎಂಬ ಹೇಳಿಕೆ ನೀಡಿದ್ದಾರೆ. ಇದು ತುಂಬಾ ಬೇಸರ ತಂದಿದೆ ಎಂದರು. ಇಂತಹ ಸತ್ಯವಲ್ಲದ ವಿಚಾರಗಳನ್ನು ಪ್ರಚಾರ ಮಾಡಿ ನನ್ನ ತೇಜೋವಧೆ ಮಾಡುತ್ತಿರುವುದು  ಕೆಟ್ಟ ಸಂಸ್ಕೃತಿ. ಇದು ಇಂದಿಗೆ ಕೊನೆಯಾಗಬೇಕು ಇಲ್ಲವಾದರೆ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಅವರು ಎಚ್ಚರಿಸಿದರು. ಸಾಮಾಜಿಕವಾಗಿ ರೈತ ಜನಪರವಾಗಿ ಹೋರಾಟ ಮಾಡುತ್ತ ಬಂದವನು ನಾನು. ಅಂತಹ ಮಾಹಿತಿಯಿದ್ದರೆ ನೇರವಾಗಿ ಬಹಿರಂಗಪಡಿಸಲಿ, ಮೊದಲು ರೈತ ಸಂಘದ ನೀತಿ ನಿಯಮ ಸಿದ್ದಾಂತ ಅರಿತು ನಡಿ ಎಂದು ಗುಡುಗಿದರು.  ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಿದ್ದರು. ವರದಿ: ನಂದೀಶ್…

Read More

ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೇರ್ ಸ್ಟ್ರೈಟ್ನಿಂಗ್ ಟ್ರೀಟ್‌ ಮೆಂಟ್ ತೆಗೆದುಕೊಳ್ಳುತ್ತಿದ್ದ ಮಹಿಳೆಯೊಬ್ಬರು ಕಿಡ್ನಿ ಹಾನಿಗೊಳಗಾಗಿದ್ದಾರೆ. ವರದಿಯ ಪ್ರಕಾರ, ಮಹಿಳೆಯು ಸುಮಾರು ಮೂರು ವರ್ಷಗಳ ಅವಧಿಯಲ್ಲಿ ತನ್ನ ಕೂದಲನ್ನು ಸ್ಟ್ರೈಟ್ನಿಂಗ್‌ ಗಾಗಿ ಆಗಾಗ್ಗೆ ಸಲೂನ್‌ ಗಳಿಗೆ ಭೇಟಿ ನೀಡುತ್ತಿದ್ದಳು, ಆ ಸಮಯದಲ್ಲಿ ಆಕೆಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ಅನಂತರ ಮಹಿಳೆಗೆ ಕಿಡ್ನಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಕೂದಲು ನೇರಗೊಳಿಸಲು ಬಳಸುವ ಕೆಲವು ಉತ್ಪನ್ನಗಳು ಆರ್ಗಾನ್ ಹಾನಿಯಂತಹ ಗಂಭೀರ ಸಮಸ್ಯೆಗಳ ಅಪಾಯವನ್ನು ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ವೈದ್ಯಕೀಯ ವರದಿಯಲ್ಲಿ ತಿಳಿಸಿದ್ದಾರೆ. ಮಹಿಳೆಗೆ 26 ವರ್ಷ ವಯಸ್ಸಾಗಿದ್ದು, ಕೂದಲ ಚಿಕಿತ್ಸೆಗಾಗಿ ಆಕೆ ಜೂನ್ 2020 ಮತ್ತು ಜುಲೈ 2022 ರ ನಡುವೆ ಹಲವಾರು ಬಾರಿ ಸಲೂನ್‌ ಗೆ ಭೇಟಿ ನೀಡುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಗೆ ಮೊದಲಿನ ಆರೋಗ್ಯ ಸಮಸ್ಯೆಗಳಿರಲಿಲ್ಲ, ಆದರೆ ಪ್ರತಿ ಬಾರಿ ಚಿಕಿತ್ಸೆ ಪಡೆದಾಗಲೂ ಆಕೆಗೆ ವಾಂತಿ, ಭೇದಿ, ಜ್ವರ…

Read More

ತುಮಕೂರು: ಒಕ್ಕಲಿಗ ಸಮುದಾಯ ಈ ಚುನಾವಣೆಯಲ್ಲಿ  ನನ್ನೊಂದಿಗೆ ಇರಲಿದ್ದು, ನನ್ನ ಕೈ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಶ್ವಾಸ ವ್ಯಕ್ತಡಿಸಿದ್ದಾರೆ. ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಪ್ರಮುಖನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ಮೇಲೆಯೂ ಬಿಜೆಪಿಯೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ಕಾರ್ಯಕರ್ತರು ಸೋಮಣ್ಣ ಗೆಲುವಿಗೆ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು. ಕುಮಾರಸ್ವಾಮಿ ಅವರು ಮಗನನ್ನು  ನಿಲ್ಲಿಸಿ ಏನೆಲ್ಲ ಆಟ ಆಡಿದರೂ ಎನ್ನುವುದು ನನಗೆ ಗೊತ್ತಿದೆ. ನಾನೇನು ಸೀಟು ಕೇಳಿದ್ದೇನೆಯೇ? ಮೈಸೂರಿನಲ್ಲಿ ಸೀಟು ಬೇಕು ಅಂತ ಸಿದ್ದರಾಮಯ್ಯ  ಮೂಲಕ ನನ್ನನ್ನು ನಿಲ್ಲುವಂತೆ ಮಾಡಿ ಮುದ್ದಹನುಮೇಗೌಡರನ್ನು ಬಲಿ ಹಾಕಿದರು ಎಂದು ಸ್ಮರಿಸಿದರು. ಇದೊಂದು ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಬೇಕು. ಸಿದ್ದರಾಮಯ್ಯ ಮಾಡಿದ ಹಲವು ತಪ್ಪುಗಳಿಂದಾಗಿ ಪಕ್ಷವು ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಕಾಲ ಸಮೀಪಿಸುತ್ತಿದೆ 7ನೇ ತಾರೀಖಿನವರೆಗೂ ನಾನು ಎಲ್ಲಾ ಕ್ಷೇತ್ರಗಳಿಗೂ ಹೋಗಿ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿದರು. ವಿ.ಸೋಮಣ್ಣ ಮಾತನಾಡಿ, ನಾನು ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರೇ ಮೂಲಕ…

Read More

ಪಾವಗಡ:  ಪೆಟ್ಟಿಗೆ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಗಲ್ ಹೋಬಳಿ ಮಂಗಳವಾಡದ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ. ನಾಗರಾಜು ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಈ ವೇಳೆ ಪಕ್ಕದಲ್ಲಿದ್ದ ಐದಾರು ಅಂಗಡಿಗಳಿಗೂ ಬೆಂಕಿ ಹರಡಿದ್ದು, ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳಕ್ಕೆ ಪಾವಗಡ ತಾಲೂಕಿನ ಅರಸಿಕೆರೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ  ಅರಸೀಕೆರೆ ಪೊಲೀಸರು  ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಂಕಿನ ನಂದಿಸುವ ಕಾರ್ಯಾಚರಣೆ ವೇಳೆ ಠಾಣಾಧಿಕಾರಿ ಎಸ್.ಆರ್.ಪಾಟೀಲ್, ಪ್ರಮುಖ ಅಗ್ನಿಶಾಮಕರಾದ ರಾಜಣ್ಣ, ಶಶಿಧರ್, ಸಿಬ್ಬಂದಿ ವೀರಣ್ಣ, ಲತೀಷ್, ವಿನೋದ್, ರವಿಚಂದ್ರನ್, ಸೇರಿದಂತೆ ಸ್ಥಳೀಯ ನಾಗರಿಕರು ಇದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ಕೊರಟಗೆರೆ: ಮತ ಚಲಾಯಿಸುವುದು ಕೇವಲ ನಿಮ್ಮ ಹಕ್ಕು ಮಾತ್ರವಲ್ಲ. ಅದು ದೇಶಕಟ್ಟುವ ನಿಟ್ಟಿನಲ್ಲಿ ಕರ್ತವ್ಯ ಕೂಡ ಆಗಿದೆ. ಜಗತ್ತಿನಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡ ದೊಡ್ಡ ದೇಶ ನಮ್ಮದು ಎಂದು ತಾ.ಪಂ. ಇ ಓ ಅಪೂರ್ವ ತಿಳಿಸಿದರು. ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ತಾಲೂಕು ಸ್ವೀಪ್ ಸಮಿತಿ, ಯೂತ್ ಫಾರ್ ಸೇವಾ ಸಂಸ್ಥೆ ಹಾಗೂ ಬೂದಗವಿ, ತುಂಬಾಡಿ, ತೋವಿನಕೆರೆ ಗ್ರಾ.ಪಂ. ಸಹಯೋಗದೊಂದಿಗೆ ಬೂದಗವಿ ಗ್ರಾಮ ಸೇರಿದಂತೆ ಸಿದ್ಧರಬೆಟ್ಟದ ಅರಣ್ಯ ಪ್ರದೇಶದಲ್ಲಿ ಸ್ವಚ್ಚತಾ ಅಭಿಯಾನದ ಮೂಲಕ ಏರ್ಪಡಿಸಲಾದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು. ಈ ಬಾರಿ ಶೇ.100ರಷ್ಟು ಮತದಾನಕ್ಕೆ ಮುಂದಾಗಬೇಕಿದೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ, ಅಭಿವೃದ್ಧಿಗಾಗಿ ಪೂರಕವಾಗಿ ಚುನಾವಣೆಗಳು ಅತಿ ಮಹತ್ತರ ಪಾತ್ರ ವಹಿಸುತ್ತವೆ. ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬರು ಮತದಾನ ಮಾಡಿದಾಗ ಮಾತ್ರ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ಏ.26 ರಂದು…

Read More

ಬಿಜೆಪಿಯ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿರುವ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಿಂದ ಪಕ್ಷೇತರವಾಗಿ ಸ್ಪರ್ಧಿಸೋದು ಫಿಕ್ಸ್ ಆಗಿದೆ. ಬ್ರಹ್ಮ ಬಂದರೂ ನಿರ್ಧಾರ ಬದಲಿಸಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಈಶ್ವರಪ್ಪ ಸ್ಪರ್ಧೆ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಅವರನ್ನು ಮೋದಿ ಮತ್ತು ಶಾ ಅವರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೇ? ಎಂಬ ವಿಚಾರ ಮುನ್ನಲೆಗೆ ಬಂದಿದೆ. ಈ ಬಗ್ಗೆ ಈಶ್ವರಪ್ಪನವರು ಕೂಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಇದೀಗ ತಮ್ಮ ಸ್ಪರ್ಧೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದು ತಾವು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಗೂ ಇಷ್ಟ ಇರಬಹುದು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ನನ್ನ ಸ್ಪರ್ಧೆ ಮೋದಿ ಮತ್ತು ಅಮಿತ್ ಶಾಗೆ ಇಷ್ಟವಿಲ್ಲವೆಂದಾದರೆ ನನ್ನನ್ನು ಯಾಕೆ ಪಕ್ಷದಿಂದ ಈವರೆಗೆ ತೆಗೆದು ಹಾಕಿಲ್ಲ? ಗೊತ್ತಿಲ್ಲ, ‘ಮೋದಿ, ಅಮಿತ್ ಶಾ ಹೇಳಿದರೆ ಈಶ್ವರಪ್ಪ ಹಿಂದೆ ಸರಿಯಬಹುದು’ ಎಂದು…

Read More

ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಎಪ್ರಿಲ್‌ 26 ಹಾಗೂ 2 ನೇ ಹಂತದ ಮತದಾನ ಮೇ.7 ರಂದು ನಡೆಯಲಿದೆ. ಈ ದಿನ ಎಲ್ಲಾ ರಾಜ್ಯ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಎಲ್ಲಾ ವ್ಯವಹಾರಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ. ಎಲ್ಲಾ ರಾಜ್ಯ ಸರಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಸೇರಿ 26.04.2024 ಮತ್ತು ದಿನಾಂಕ 07-05-2024 ರಂದು ನಡೆಯುವ ಚುನಾವಣೆಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಆಯಾ ಚುನಾವಾಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ರಜೆ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡಾ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸದರಿ…

Read More