ಬಿಜೆಪಿಯ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿರುವ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಿಂದ ಪಕ್ಷೇತರವಾಗಿ ಸ್ಪರ್ಧಿಸೋದು ಫಿಕ್ಸ್ ಆಗಿದೆ. ಬ್ರಹ್ಮ ಬಂದರೂ ನಿರ್ಧಾರ ಬದಲಿಸಲ್ಲ ಎಂದಿದ್ದಾರೆ.
ಈ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಈಶ್ವರಪ್ಪ ಸ್ಪರ್ಧೆ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಅವರನ್ನು ಮೋದಿ ಮತ್ತು ಶಾ ಅವರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೇ? ಎಂಬ ವಿಚಾರ ಮುನ್ನಲೆಗೆ ಬಂದಿದೆ. ಈ ಬಗ್ಗೆ ಈಶ್ವರಪ್ಪನವರು ಕೂಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಇದೀಗ ತಮ್ಮ ಸ್ಪರ್ಧೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದು ತಾವು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಗೂ ಇಷ್ಟ ಇರಬಹುದು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ನನ್ನ ಸ್ಪರ್ಧೆ ಮೋದಿ ಮತ್ತು ಅಮಿತ್ ಶಾಗೆ ಇಷ್ಟವಿಲ್ಲವೆಂದಾದರೆ ನನ್ನನ್ನು ಯಾಕೆ ಪಕ್ಷದಿಂದ ಈವರೆಗೆ ತೆಗೆದು ಹಾಕಿಲ್ಲ? ಗೊತ್ತಿಲ್ಲ, ‘ಮೋದಿ, ಅಮಿತ್ ಶಾ ಹೇಳಿದರೆ ಈಶ್ವರಪ್ಪ ಹಿಂದೆ ಸರಿಯಬಹುದು’ ಎಂದು ಅವರು (ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಉದ್ದೇಶಿಸಿ) ಹೇಳುತ್ತಿದ್ದಾರೆ. ಆದರೆ ಯಾರೂ ಇದುವರೆಗೂ ಕರೆ ಮಾಡಿಲ್ಲ. ನನ್ನ ಸ್ಪರ್ಧೆ ಮೋದಿ, ಅಮಿತ್ ಶಾ ಅವರಿಗೂ ಒಪ್ಪಿಗೆ ಇರಬಹುದು. ಯಾಕೆಂದರೆ, ಅಪ್ಪ ಮಕ್ಕಳ ಕೈಯಿಂದ ಪಕ್ಷ ಬಿಡಿಸಬೇಕು ಎಂಬ ಉದ್ದೇಶ ಅವರದ್ದು ಇರಬಹುದು. ಮೋದಿ, ಅಮಿತ್ ಶಾ ಅವರೇ ಈಶ್ವರಪ್ಪ ಅವರನ್ನು ನಿಲ್ಲಿಸಿರಬಹುದು ಎಂಬ ಅಭಿಪ್ರಾಯ ಜನರದ್ದಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296