Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಎಚ್. ಡಿ. ಕೋಟೆ: ವಿಧಾನಸಭಾ ಕ್ಷೇತ್ರವು ಚಾಮರಾಜನಗರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಕ್ಷೇತ್ರದಲ್ಲಿ ಒಟ್ಟು 282 ಮತಗಟ್ಟೆಗಳಿವೆ ಎಂದು ಸಹಾಯಕ ಚುನಾವಣಾಧಿಕಾರಿ ಕುಮುದಾ ತಿಳಿಸಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಚ್.ಡಿ.ಕೋಟೆಯಲ್ಲಿ ಒಟ್ಟು 2 ಲಕ್ಷದ 27ಸಾವಿರದ 921 ಮತದಾರರಿದ್ದು, 1ಲಕ್ಷದ 13 ಸಾವಿರದ 769 ಪುರುಷರು, 1ಲಕ್ಷ 14 ಸಾವಿರದ 140 ಮಹಿಳೆಯರು , 3,433 ವಿಶೇಷ ಚೇತನರು ಹಾಗೂ 85 ವರ್ಷಕ್ಕೆ ಮೇಲ್ಪಟ್ಟವರು 3713 ಮತದಾರರಿದ್ದಾರೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಯಲು ಮೂರು ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಮತ್ತೆ ಹೊಸ ಮತದಾರರನ್ನ ಹಾಗೂ ಕಳೆದ ಸಾಲಿಗಿಂತಲೂ ಹೆಚ್ಚಿನ ಮತದಾನಕ್ಕಾಗಿ Ekhon ರೀತಿಯ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ವಿಶೇಷವಾಗಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ ಶ್ರೀನಿವಾಸ್, ಪೋಲಿಸ್ ಉಪ ನಿರೀಕ್ಷಕ ಶಬೀರ್ ಹುಸೇನ್ ಹಾಜರಿದ್ದರು. ವರದಿ: ಮಲಾರ ಮಹದೇವಸ್ವಾಮಿ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ಪಾವಗಡ: ವದನಕಲ್ಲು ಗ್ರಾಮದಲ್ಲಿ ಪಾವಗಡ ಮತ್ತು ಚಳ್ಳಕೆರೆ ರಸ್ತೆಯಲ್ಲಿರುವ ನೆಲೆಸಿರುವಂತಹ ಇತಿಹಾಸ ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ಸಾಯಂಕಾಲ 4:30 ಗಂಟೆಗೆ ದೇವಸ್ಥಾನದ ಎದುರು ಹೂವಿನಿಂದ ಅಲಂಕರಿಸಿದ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು ನಂತರ ರಥವನ್ನು ಎಳೆಯಲಾಯಿತು. ಭಕ್ತರು ರಥದ ಮೇಲೆ ಬಾಳೆ ಹಣ್ಣು, ಮಡಕ್ಕಿ ಎಸೆದು ತಮ್ಮ ಹರಕೆ ತೀರಿಸಿಕೊಂಡರು. ದೇವಾಲಯದಿಂದ ಸ್ವಲ್ಪ ದೂರದವರೆಗೂ ರಥವನ್ನು ಎಳೆಯಲಾಯಿತು. ಆಂಧ್ರಪ್ರದೇಶ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸಿಕೊಂಡರು. ದೇವಸ್ಥಾನಕ್ಕೆ ಬಂದಿರುವಂತ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಮಜ್ಜಿಗೆ ಪಾನಕ, ಹೆಸರುಬೇಳೆ, ಪ್ರಸಾದ ವಿತರಣೆ ಮಾಡಲಾಯಿತು. ಇದೇ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರಪ್ಪ ಅವರು ತಿಪ್ಪೇರುದ್ರ ಸ್ವಾಮಿಗೆ ಸುಮಾರುಮುಕ್ಕಾಲು ಕೆ.ಜಿ. ಬೆಳ್ಳಿ ಕಿರೀಟವನ್ನು ಅರ್ಪಿಸಿದರು. ಇದೇ ವೇಳೆ ಚುನಾವಣಾ ಸ್ವೀಪ್ ಸಮಿತಿ, ತಾಲೂಕು ಪಂಚಾಯಿತಿ, ತಾಲೂಕು ಆಡಳಿತದ ವತಿಯಿಂದ ಮತದಾರರ…
ಮಧುಗಿರಿ: ತಾಲೂಕಿನ ಜಿಡಿಪಾಳ್ಯ ಮಜರೆ ಆರ್.ಗೊಲ್ಲಹಳ್ಳಿಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ನಡೆಸುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಜಪ್ತಿ ಮಾಡಬೇಕು ಎಂದು ಒತ್ತಾಯಿಸಿ, ಕಾಳಜಿ ಫೌಂಡೇಶನ್ ವತಿಯಿಂದ ತಹಶೀಲ್ದಾರ್ ಸಿಬ್ಗತ್ ಉಲ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾಲೂಕಿನ ಮಿಡಿಗೇಶಿ ಹೋಬಳಿಯ ಜಿಡಿಪಾಳ್ಯ ಮಜರೆ ಆರ್.ಗೊಲ್ಲಹಳ್ಳಿಯ ಖಾತ ನಂಬರ್ – 11 ಸರ್ವೇ ನಂಬರ್ 29/19 ರಲ್ಲಿ 30 ಗುಂಟೆ ಜಮೀನಿದ್ದು, ಸದರಿ ಜಮೀನು ವ್ಯವಸಾಯಕ್ಕೆ ಯೋಗ್ಯವಾಗಿದ್ದು, ಯಾವುದೇ ಭೂ ಪರಿವರ್ತನೆ ಆಗಿಲ್ಲದಿದ್ದರೂ ಸಹ ಅಧಿಕಾರಿಗಳು ವಾಣಿಜ್ಯ ಭೂ ಪ್ರದೇಶ ಎಂದು ವರದಿ ನೀಡಿ ತರಾತುರಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಕೂಲ ಮಾಡಿಕೊಟ್ಟಿರುತ್ತಾರೆ ಹಾಗೂ ಗಡಿ ಭಾಗವಾಗಿರುವುದರಿಂದ ಆಂಧ್ರ ಜನರು ಮದ್ಯ ಸೇವನೆಗಾಗಿ ಈ ಸ್ಥಳಕ್ಕೆ ಬಂದು ಅನೇಕ ಗಲಭೆಗಳನ್ನು ನಡೆಸುವ ಸಂಭವವಿದ್ದು, ಇದಕ್ಕೆ ಕಾರಣರಾದ ಸಂಬಂಧಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಭೂ ಪರಿವರ್ತನೆ ಆಗದೆ ವ್ಯವಸಾಯಕ್ಕೆ ಯೋಗ್ಯವಿರುವ ಜಮೀನನ್ನು ವಾಣಿಜ್ಯಕ್ಕೆ ನೀಡಿರುವ ಜಮೀನು ಮಾಲೀಕರ…
ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ 2.30 ಲಕ್ಷ ಸಾವಿರ ಕೋಟಿ ಹಣ ಬರ ಪರಿಹಾರಕ್ಕೆ ನೀಡಿದೆ. ಆದರೂ ಕಾಂಗ್ರೆಸ್ ಹಣ ನೀಡಿಲ್ಲವೆಂದು ವ್ಯವಸ್ಥಿತವಾಗಿ ಸುಳ್ಳು ಹೇಳುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರ 2.30 ಲಕ್ಷ ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ರಾಜ್ಯಕ್ಕೆ ಹಣಕಾಸು ಆಯೋಗ ಯಾವುದೇ ಶಿಫಾರಸು ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತರ ನೀಡಿದ್ದಾರೆ. ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಿ 5 ತಿಂಗಳ ಕಳೆದರೂ ಕೇಂದ್ರ ಇನ್ನೂ ಬಿಡುಗಡೆ ಮಾಡಿಲ್ಲ. ಬರ ಪರಿಹಾರ ಸುಪ್ರೀಂ ಕೋರ್ಟ್ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು…
ತುಮಕೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಇಡೀ ದೇಶದ ರೈತರ ಸಾಲಮನ್ನಾ ಮಾಡುವುದಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ತಿಳಿಸಿದ ಗೃಹ ಸಚಿವ ಪರಮೇಶ್ವರ್, ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಇಡೀ ದೇಶದ ರೈತರ ಸಾಲಮನ್ನಾ, ರೈತರ ರಕ್ಷಣೆ ಖಾಯ್ದೆ ಹೊಸ ಕಾನೂನು ರಚನೆ ಮತ್ತು ಕೃಷಿ ಕ್ಷೇತ್ರಕ್ಕೆ ಜಿಎಸ್‌ಟಿ ಹಾಕಲ್ಲ ಎಂದು ತಿಳಿಸಿದ್ದಾರೆ. ಯುವಕರಿಗೆ ಕೌಶಲ್ಯ ಅಭಿವೃದ್ಧಿ ಟ್ರೈನಿಂಗ್ ಜೊತೆಗೆ 1 ಲಕ್ಷ ರೂ. ಬೆಂಬಲ. ಮಹಾಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ 1 ಲಕ್ಷ ರೂ. ಖಾತೆಗೆ ಹಾಕಲಾಗುತ್ತದೆ. ಜೊತೆಗೆ ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಒಬ್ಬ ಕುಸಿದು ಬಿದ್ದು ಮೃತಪಟ್ಟಿದ್ದಾನೆ, ಅಲ್ಲದೇ ಮತ್ತೊಂದು ಪರೀಕ್ಷೆ ಕೇಂದ್ರದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಅಸ್ವಸ್ಥಗೊಂಡಿರುವ ಘಟನೆ ತುರುವೇಕೆರೆ ಪಟ್ಟಣದಲ್ಲಿ ಇರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಮೋಹನ್ ಕುಮಾರ್ 16 ಮೃತ ವಿದ್ಯಾರ್ಥಿಯಾಗಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ರೋಹಿತ್ ಎಂಬಾತ ಅಸ್ವಸ್ಥಗೊಂಡಿದ್ದಾನೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಚಿಕ್ಕರಾಪುರ ನಿವಾಸಿ ಮೋಹನ್ ಕುಮಾರ್ ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ಗೇಟ್ ಕಂಚಿರಾಯ ನಿವಾಸ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಸೋಮವಾರ ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆಯ ಸರಸ್ವತಿ ಬಾಲಿಕಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವೆ ವೇಳೆ ಅಶ್ವಸ್ಥಗೊಂಡಿದ್ದ. ತಕ್ಷಣವೇ ತುರುವೇಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಆಂಬುಲೆನ್ಸ್ ನಲ್ಲಿಯೇ ಮೃತಪಟ್ಟಿದ್ದಾನೆ. ಮೋಹನ್ ಕುಮಾರ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಪರೀಕ್ಷೆಗೆ ಸುಮಾರು ಒಂದು ಗಂಟೆಗಳವರೆಗೆ ಉತ್ತರ ಪತ್ರಿಕೆ ಬರೆದಿದ್ದ.…
ಅಯೋಧ್ಯೆ ರಾಮಮಂದಿರಕ್ಕಾಗಿ ರಾಮಲಲ್ಲಾ ವಿಗ್ರಹವನ್ನು ರಚಿಸಿದ ಶಿಲ್ಪಿ ಅರುಣ್ ಯೋಗಿರಾಜ್ ‘ಬಾಲ ರಾಮನʼ ದೇವರ ಶಿಲ್ಪ ಕೆತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅರುಣ್ ಯೋಗಿರಾಜ್ ಹಂಚಿಕೊಂಡಿದ್ದಾರೆ. ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ತಾವು ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ʻಚಿಕ್ಕ ರಾಮಲಲ್ಲಾ ಮೂರ್ತಿ’ಯನ್ನು ಕೆತ್ತಿರುವುದಾಗಿ ಹಂಚಿಕೊಂಡಿದ್ದಾರೆ. “ರಾಮ ಲಲ್ಲಾನ ಮುಖ್ಯ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ ನಾನು ಅಯೋಧ್ಯೆಯಲ್ಲಿ ನನ್ನ ಬಿಡುವಿನ ವೇಳೆಯಲ್ಲಿ ಮತ್ತೊಂದು ಸಣ್ಣ ರಾಮ್ ಲಲ್ಲಾ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿದ್ದೇನೆ” ಎಂದು ಯೋಗಿರಾಜ್ ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ. ಈ ಸಣ್ಣ ವಿಗ್ರಹವು ಮೂಲ ವಿಗ್ರಹದ ಕಪ್ಪು ಕಲ್ಲಿಗಿಂತ ಭಿನ್ನವಾದ, ತುಸು ಬಿಳುಪಾದ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ. ಆದರೆ ʼಬಾಲಕ ರಾಮ’ನ ಶಿಲ್ಪದ ಪಡಿಯಚ್ಚಿನಂತಿದೆ. ಮೂಲ ಮೂರ್ತಿಯ ಎಲ್ಲ ಲಕ್ಷಣಗಳು ಇದರಲ್ಲೂ ಇವೆ. ಆದರೆ ಇದನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದು ಎನ್ನಲಾಗಿದೆ. ಕಳೆದ ತಿಂಗಳು ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಎಂಟು ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ಇರಿಸಲಾಗಿರುವ…
ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) 2014ರಿಂದ 2022ರವರೆಗೆ ಸುಮಾರು 133.54 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿವೆ ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್ ವಂತ್ ಸಿಂಗ್ ಪನ್ನುನ್ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪಿಸಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ವೀಡಿಯೊದಲ್ಲಿ, ಪನ್ನುನ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರ್ಥಿಕ ನೆರವಿನ ಬದಲಾಗಿ ,ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ನನ್ನು ಬಿಡುಗಡೆ ಮಾಡಲು ಪ್ರಸ್ತಾಪಿಸಿದ್ದಾಗಿ ಎಂದು ಹೇಳಿದ್ದಾನೆ. ಭುಲ್ಲರ್ 1993 ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಈ ಬಾಂಬ್ ದಾಳಿಯ ಪರಿಣಾಮವಾಗಿ ಒಂಬತ್ತು ಸಾವುಗಳು ಮತ್ತು 31 ಮಂದಿ ಗಾಯಗೊಂಡಿದ್ದರು. ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಈ ಹಿಂದೆ ಭಾರತದ ವಿರುದ್ಧ ಬೆದರಿಕೆಗಳನ್ನು ಹಾಕಿದ್ದಾನೆ, ಅದರಲ್ಲೂ ಸಂಸತ್ತಿಗೆ ಬಾಂಬ್ ಬೆದರಿಕೆಯನ್ನು ಹಾಕಿದ್ದ. ಅದೃಷ್ಟವಶಾತ್, ಈ ಬೆದರಿಕೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಪ್ರಸ್ತುತ ದೆಹಲಿ ಅಬಕಾರಿ ನೀತಿ “ಹಗರಣ” ದಲ್ಲಿ ಕೇಜ್ರೀವಾಲ್ ಬಂಧನದ ನಂತರ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಬಂಧನದಿಂದ…
ಬೆಂಗಳೂರು , ಮುಂಬೈಯಂತಹ ಮಹಾನಗರಗಳಲ್ಲಿ ಟ್ರಾಫಿಕ್ ಜಾಂನದ್ದೇ ಕಿರಿ ಕಿರಿ.. ಸುಸ್ತಾಗಿ ಹೋಗುವಷ್ಟು ಟ್ರಾಫಿಕ್, ಅದರ ಜತೆಗೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ.. ಹೀಗಾಗಿ ಇಂತಹ ನಗರಗಳಲ್ಲಿ ಓಡಾಡುವುದನ್ನೇ ಜನ ನಿರಾಕರಿಸುತ್ತಾರೆ. ಹೀಗೆ ಇದೀಗ ಜೀವನವೇ ಒಂದು ಒತ್ತಡವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಕೆಲಸದ ಒತ್ತಡ ಇರುವ ಉದ್ಯೋಗಿ ಆಫೀಸು ಕ್ಯಾಬಿನಲ್ಲಿ, ಅಥವಾ ಹೋಟೆಲ್ ಇನ್ನಿತರ ಸ್ಥಳಗಳಲ್ಲಿ ಕುಳಿತು ಕೆಲಸ ಮಾಡುವವರನ್ನು ಕಾಣಬಹುದು. ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ಇಂತಹ ದೃಶ್ಯ ಕಾಣಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಸ್ಕೂಟರಿನಲ್ಲಿ ಪ್ರಯಾಣಿಸುತ್ತಾ ತನ್ನ ತೊಡೆಯ ಮೇಲೆ ಲ್ಯಾಪ್ಟಾಪ್ ಇರಿಸುತ್ತಾ ಆಫೀಸು ಕೆಲಸ ಮಾಡುತ್ತಾ ಹೋಗುತ್ತಿದ್ದಾನೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಬೆಂಗಳೂರಿನಲ್ಲಿ ನಡೆದ ದೃಶ್ಯ ಎಂದು ವೈರಲ್ ಆಗುತ್ತಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳಲಿಲ್ಲ. ಅದರಲ್ಲೂ ಟ್ರೋಲ್ ಪೇಜ್ ಗಳು ಇದು ಬೆಂಗಳೂರಿನಲ್ಲಿ ನಡೆದ ಕತೆ ಎನ್ನುತ್ತಾ ಟ್ರೋಲ್ ಮಾಡುತ್ತಿದೆ. ಅಚ್ಚರಿ ಸಂಗತಿ ಎಂದರೆ ಸ್ಕೂಟಿ ಅಥವಾ ಬೈಕ್ ನಲ್ಲಿ ಮೊಬೈಲ್…
ಆಟೋ ಪಾರ್ಕಿಂಗ್ ವಿಚಾರವಾಗಿ ಬೆಂಗಳೂರಿನ ಬನಶಂಕರಿಯ ಪ್ರಗತಿಪರ ಬಡಾವಣೆಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಸೈಯದ್ ತಾಹ, ತಾಹ ತಂದೆ ಕರೀಮ್ ಹಾಗು ಅಫ್ರೀದ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 143, 148 , 358 ಅಡಿ ಎಫ್ಐಆರ್ ದಾಖಲಾಗಿದೆ. ಘಟನೆಯಲ್ಲಿ ಬೇರೆಯವರ ಪಾತ್ರದ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮತ್ತೊಂದೆಡೆ ಮನೆ ಮೇಲೆ ಹಾರಿಸಲಾಗಿರುವ ಭಗವಾಧ್ವಜದ ಕಾರಣಕ್ಕೆ ಹಲ್ಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸಣ್ಣ ರಸ್ತೆಯ ಏರಿಯಾದ ಅಕ್ಕಪಕ್ಕದ ನಿವಾಸಿಗಳಾದ ಸುಕುಮಾರ್ ಹಾಗೂ ಸೈಯದ್ ತಾಹ ಎಂಬವರು ಆಟೋ ಪಾರ್ಕಿಂಗ್ ವಿಚಾರಕ್ಕೆ ಜಗಳವಾಡಿಕೊಂಡಿದ್ದರು. ಸುಕುಮಾರ್ ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿಕೊಂಡಿದ್ದರು. ಸೈಯದ್ ತಾಹ ಮನೆಯ ಮುಂದೆ ಆತನ ಸಂಬಂಧಿ ಆಟೋ ನಿಲ್ಲಿಸಿದ್ದ. ವೇಗವಾಗಿ ಬಂದು ಆಟೋ ನಿಲ್ಲಿಸಿದ್ದಕ್ಕೆ ತಾಹ ಸಂಬಂಧಿಯನ್ನು ಪಕ್ಕದ ಮನೆ ನಿವಾಸಿ ಸುಕುಮಾರ್ ಹಾಗೂ ಕುಟುಂಬಸ್ಥರು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು…