Author: admin

ತುಮಕೂರು: ಮಾಜಿ ಸಚಿವ ಮಾಧುಸ್ವಾಮಿ ಪಕ್ಷ ಬಿಡುವುದಿಲ್ಲ, ನಮ್ಮ ಜೊತೆಯಲ್ಲೇ ಇರ್ತಾರೆ. ಅಲ್ಲದೆ ಈ ಬಗ್ಗೆ ನನಗೆ ಭರವಸೆ ಕೂಡ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿರುವ ಮಾಜಿ ಶಾಸಕ ಮಸಾಲೆ ಜಯರಾಮ್ ಮನೆಯಲ್ಲಿ ಇಂದು, ಮಾಧುಸ್ವಾಮಿ ಜೊತೆ ಸುದೀರ್ಘ ಮಾತುಕತೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಮಾಧುಸ್ವಾಮಿ ಪಕ್ಷದಲ್ಲಿ ಇದ್ದರೆ ದೊಡ್ಡ ಶಕ್ತಿ ಇದ್ದಂತೆ ನಮಗೆ. ಪಕ್ಷ ಬಿಡೊಲ್ಲ ಅಂತ ಒಪ್ಪಿಕೊಂಡಿದ್ದಾರೆ. ನಾವು ಚುನಾವಣೆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳಿದರು. ಇನ್ನು ಇದೇ ಸಂದರ್ಭದಲ್ಲಿ ಹಾಜರಿದ್ದ ಮಾಧುಸ್ವಾಮಿ ಮಾತನಾಡಿ, ನಾನು ಕಾಂಗ್ರೆಸ್ ಸೇರಲು ಮುಂದಾಗಿದ್ದು ನಿಜ. ಯಾರು ಯಾರು ಸಂಪರ್ಕ ಮಾಡಿದ್ರು ಎಂದು ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ಸದ್ಯ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಹೇಳಿದರು. ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರಿಗೆ ಬೆಂಬಲ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸೋಮಣ್ಣ ಅವರಿಗೆ…

Read More

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ISRO ) ಕರ್ನಾಟಕದ ಚಲ್ಲಕೆರೆ ಏರೋನಾಟಿಕಲ್ ಟೆಸ್ಟ್ ರೇಂಜ್ ( ಎಟಿಆರ್ ) ನಿಂದ ‘ ಪುಷ್ಪಕ್ ‘ ಎಂಬ ಮರುಬಳಕೆ ಮಾಡಬಹುದಾದ, ಉಡಾವಣಾ ವಾಹನದ ( ಆರ್ ಎಲ್ ವಿ ) ಲ್ಯಾಂಡಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಇದು ರಾಮಾಯಣದಲ್ಲಿ ಹೆಸರಿಸಲಾದ ಪೌರಾಣಿಕ ಬಾಹ್ಯಾಕಾಶ ನೌಕೆಯ ಹೆಸರಿನಿಂದ ಕರೆಯಲ್ಪಟ್ಟ, ಆರ್ಎಲ್ವಿ ಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದೆ. ಬಾಹ್ಯಾಕಾಶ ಸಂಸ್ಥೆಯು 2016 ಮತ್ತು ಕಳೆದ ವರ್ಷದ ಏಪ್ರಿಲ್ನಲ್ಲಿ ಹಿಂದಿನ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದೆ. ಉಡಾವಣಾ ವಾಹನವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಸುಮಾರು 4.5 ಕಿ . ಮೀ. ಎತ್ತರಕ್ಕೆ ಕೊಂಡೊಯ್ದು, ಪೂರ್ವನಿರ್ಧರಿತ ಪಿಲ್ಬಾಕ್ಸ್ ನಿಯತಾಂಕಗಳನ್ನು ಸಾಧಿಸಿದ ನಂತರ ಬಿಡುಗಡೆ ಮಾಡಿ ಲ್ಯಾಂಡಿಂಗ್ ಮಾಡಿಸಲಾಯಿತು. ಇಸ್ರೊ ಪ್ರಕಾರ, ಈ ಕಾರ್ಯಾಚರಣೆಯು  “ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಪ್ರವೇಶವನ್ನು ಸಕ್ರಿಯಗೊಳಿಸಲು ಮತ್ತು ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕಾಗಿ ಅಗತ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ” ಬಾಹ್ಯಾಕಾಶ ಸಂಸ್ಥೆಯ…

Read More

ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ಸಾನ್ಯಾ ಅಯ್ಯರ್‌ ತಮ್ಮ ಚೊಚ್ಚಲ ಸಿನಿಮಾ ‘ಗೌರಿ’ಯ ಶೂಟಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದು, ಇದೀಗ ಡಬ್ಬಿಂಗ್ ಕೆಲಸ ಕಾರ್ಯಗಳು ಮುಗಿದಿವೆ. ಇದೀಗ ಸಮ್ಮರ್ ಹಾಲಿಡೇ ಕಳೆಯಲ್ಲಿ ತಾಯಿ ಜೊತೆ ಕೂರ್ಗಿಗೆ ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲಿ ಫೋಟೋಗೆ ಸಖತ್ ಪೋಸ್ ಕೂಡ ಕೊಟ್ಟಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ‘ಗೌರಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಕಿರುತೆರೆಯ ಪುಟ್ಟಗೌರಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದಾರೆ. ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಾನ್ಯಾ ಅಯ್ಯರ್, ಈ ಚಿತ್ರಕ್ಕಾಗಿ ಮತ್ತೊಂದು ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ಈ ಹಿಂದೆಯೂ ಸಾನ್ಯಾ ಬಿಕಿನಿ ಫೋಟೋಶೂಟ್‌ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಗೌರಿ ಚಿತ್ರಕ್ಕಾಗಿ ಹೊಸ ಲುಕ್ ನಲ್ಲಿ ಸ್ಟೈಲಿಶ್ ಗೆಟಪ್‌ ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದರು. ಸದ್ಯ ಈ ಚಿತ್ರದ…

Read More

ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೈಬರ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ಸೈಬರ್ ವಂಚಕರು ಹೇಗೆಲ್ಲಾ ವಂಚನೆ ಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಪ್ರಯೋಗ ಮಾಡಿ ಜನರನ್ನು ಯಮಾರಿಸುತ್ತಿದ್ದಾರೆ. ಇದೀಗ ನಕಲಿ ಸಂದೇಶಗಳನ್ನು ಕಳುಹಿಸಿ ಜನರ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ದಂಧೆ ನಡೆಯುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸೈಬರ್ ಖದೀಮರು ಕೂಡ ಫುಲ್ ಅಲರ್ಟ್ ಆಗಿದ್ದು, ಚುನಾವಣೆ ಹೊತ್ತಲ್ಲೇ ನಕಲಿ ಮೆಸೇಜ್‌ ಗಳ (Fake Messages) ಹಾವಳಿ ಸಹ ಹೆಚ್ಚಾಗುತ್ತಿವೆ. ಇಲ್ಲಿ ಸ್ವಲ್ಪ ಯಾಮಾರಿದ್ರೂ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬೀಳೋದು ಗ್ಯಾರಂಟಿ. ಹೌದು. ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳ ಫೋಟೋ ಬಳಸಿ ಫೇಕ್ ಮೆಸೇಜ್ ಹರಿಬಿಡಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯವರ ಕಡೆಯಿಂದ 5,000 ರೂಪಾಯಿ ಅನ್ನೋ ಫೇಕ್ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ. 5,000 ಪಡೆದಿದ್ದೀರಿ, ಇದನ್ನ ನಿಮ್ಮ ಅಕೌಂಟ್‌ ಗೆ ಹಾಕಲು ಲಿಂಕ್ ಮಾಡಿ ಎಂಬ ಸಂದೇಶ ಕಳುಹಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿದರೆ ಕೂಡಲೇ ಖಾತೆಯಿಂದ ಹಣ ಎಗರಿಸುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಈಗಾಗಲೇ…

Read More

ಎಚ್ ಡಿ ಕೋಟೆ: ಅಂಗನವಾಡಿಯ ನೀರಿನ ಸಂಪ್ ಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆಯ ಬಂಗ್ಲಿಹುಂಡಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನುಅಂತರ ಸಂತೆಯ ಬಂಗ್ಲಿ ಹುಂಡಿ ನಿವಾಸಿ ಸ್ವಾಮಿ ಮತ್ತು ಅಂಜು ದಂಪತಿಗಳ ಪುತ್ರಿ ಸನ್ನಿಧಿ (3) ಎಂದು ಗುರುತಿಸಲಾಗಿದೆ. ಅಂಗನವಾಡಿಗೆ ತೆರಳಿದ ಬಾಲಕಿ ಕತ್ತಲಾದರೂ ಮನೆಗೆ ಹಿಂದುರುಗಿ ಬಾರದ ಕಾರಣ ಗಾಬರಿಗೊಂಡ ಪೋಷಕರು ಬಾಲಕಿಗಾಗಿ ಹುಡುಕಾಟ ನಡೆಸಿದ ವೇಳೆ ಅಂಗನವಾಡಿಯ ಸಂಪ್ ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಬಾಲಕಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಅಂಗನವಾಡಿಯ ಸಿಬ್ಬಂದಿಯು ಸಂಪ್ ನ ಬಾಗಿಲನ್ನು ಬೇಜವಾಬ್ದಾರಿತನದಿಂದ ಮುಚ್ಚದೆ ತೆರೆದುಬಿಟ್ಟಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಅಂಗನವಾಡಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಶಿಕ್ಷಕಿ ಗೀತಾ, ಸಹಾಯಕಿ ನಾಗಮ್ಮ, ಮೇಲ್ವಿಚಾರಕಿ ಚಿನ್ನಮ್ಮ, CDPO, ಆಶಾರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಸರ್ಕಾರಿ ಕಟ್ಟಡದಲ್ಲಿರುವ ನೀರನ್ನು ದೇವಸ್ಥಾನ ಕಟ್ಟಲು…

Read More

ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಕಿರಾತಕನೋರ್ವ ದಲಿತರ ಬಗ್ಗೆ ಅವಾಚ್ಯವಾಗಿ ಬರೆದ ಬರಹವೊಂದು ವೈರಲ್ ಆಗುತ್ತಿದ್ದಂತೆ ದಲಿತ ಸಂಘಟನೆಗಳು, ದಲಿತ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮರ್ಯಾದಿ ಕೆಟ್ಟ ನಿಯತ್ತು ಇಲ್ಲದ ಜನ ದಲಿತರು, ನೀಲಿ ಶಾಲ್ ಹಾಕಿದ ಜನಗಳಿಗೆ ಬಿಟ್ಟಿ ಎಣ್ಣೆ ಸಿಕ್ಕರೆ ತಾಯಿಯನ್ನೇ ಮಾರುತ್ತಾರೆ’ ಎಂದು ಬರೆಯಲಾಗಿದ್ದು ಸದ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಸುದ್ದಿಯಲ್ಲಿರುವ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ, ಹಾಗೂ ಹೋರಾಟಗಾರರ ವಿರುದ್ಧ ಫೇಸ್ಬುಕ್ ನಲ್ಲಿ ಬರೆಯುವ ಬರದಲ್ಲಿ ದಲಿತರನ್ನು ಹಿಯಾಳಿಸಿ ಅವಾಚ್ಯವಾಗಿ ನಿಂದನೆ ನಡೆಸಲಾಗಿದೆ. ಪ್ರವೀಣ್ ಮದ್ದಡ್ಕ ಎಂಬಾತನ ಅಕೌಂಟ್ ನಲ್ಲಿ ಇಂತಹದೊಂದು ಬರಹ ಬರೆಯಲಾಗಿದ್ದು, ಕಾನೂನು ಹೋರಾಟಕ್ಕೆ ದಲಿತ ಸಂಘಟನೆಗಳು ಮಣೆ ಹಾಕಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ತಾಲೂಕಿನ ಕುಚ್ಚಂಗಿ ಗ್ರಾಮದ ಕೆರೆಯಲ್ಲಿ ಕಾರೊಂದರಲ್ಲಿ ಮೂವರು ವ್ಯಕ್ತಿಗಳ ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆರೆ ಸಂಪೂರ್ಣ ಬತ್ತಿ ಹೋಗಿದ್ದು ಇದರ ಮಧ್ಯ ಭಾಗದಲ್ಲಿ ಕಾರು ಕೂಡ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಫೋರೆನ್ಸಿ ತಜ್ಞರ ತಂಡ ಕೂಡ ಸ್ಥಳದಲ್ಲಿ ಮೊಕ್ಕಂ ಹೂಡಿದ್ದು ಮಾಹಿತಿ ಸಂಗ್ರಹಿಸುತ್ತಿದೆ. ಕಾರಿನ ನಂಬರ್ ಕೂಡ ಪತ್ತೆಯಾಗಿದ್ದು ಇದರ ಮೂಲಕ ಸುಟ್ಟು ಕರಕಲಾಗಿರುವ ಮೃತದೇಹಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸೂಪರ್‌ ಸ್ಟಾರ್ ಶಿವರಾಜ್‌ ಕುಮಾರ್ ಮುಂಬರುವ ಚಿತ್ರ ‘RC 16’ ಮೂಲಕ ಟಾಲಿವುಡ್‌ ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ಶಿವರಾಜ್‌ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರ್ಚ್ 20 ರಂದು ಚಿತ್ರಕ್ಕೆ ಮುಹೂರ್ತ ಪೂಜೆ ನೆರವೇರಿತು. ಈ ಸಿನಿಮಾದ ಮೂಲಕ ಶಿವಣ್ಣ, ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಜ್‌ ಕುಮಾರ್, ಬುಚ್ಚಿ ಬಾಬು ಸನಾ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ. ಬುಚಿ ಬಾಬು ಸಾನಾ ಅವರು ಚಿತ್ರದಲ್ಲಿನ ಪಾತ್ರಗಳನ್ನು ಹೇಗೆ ಪರಿಕಲ್ಪನೆ ಮಾಡಿದ್ದಾರೆ ಮತ್ತು ಅವರು ‘RC 16’ ಗಾಗಿ ನವೀನ ವಿಧಾನದೊಂದಿಗೆ ನಿರೂಪಣೆ ಮತ್ತು ದೃಶ್ಯ ಕಥೆಯನ್ನು ಹೇಗೆ ಅಭಿವೃದ್ಧಿಪಡಿಸಿದ್ದಾರೆ ಎಂಬುದರ ಬಗ್ಗೆ ಸ್ಯಾಂಡಲ್‌ ವುಡ್ ಸ್ಟಾರ್  ಶಿವಣ್ಣ ಪ್ರಭಾವಿತವಾಗಿದ್ದಾರೆ. ಸಹನಟ ರಾಮ್ ಚರಣ್‌  ಅನ್ನು ಶ್ಲಾಘಿಸಿರುವ ಶಿವಣ್ಣ, ಅವರು ಅತ್ಯುತ್ತಮ…

Read More

17ನೇ ಆವೃತ್ತಿಯ ಐಪಿಎಲ್  ಆರಂಭಕ್ಕೂ ಮುನ್ನವೇ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿ ಶಾಕಿಂಗ್ ಸುದ್ದಿ ಸಿಕ್ಕಿದ್ದು, ಸಿಎಸ್ ಕೆ ತಂಡದ ನಾಯಕತ್ವಕ್ಕೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ್ದಾರೆ. ಐಪಿಎಲ್ ಹಬ್ಬ ಪ್ರಾರಂಭವಾಗಲು ಒಂದು ದಿನ  ಬಾಕಿ ಉಳಿದಿದ್ದು, ನಾಳೆ ಚೆನ್ನೈನ ಪಿ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ. ಈ ನಡುವೆ ಸಿಎಸ್ ಕೆ ತಂಡದ ನಾಯಕ ಎಂಎಸ್ ಧೋನಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದು, ಅವರ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್​ ಗೆ ತಂಡದ ನಾಯಕತ್ವ ಜವಾಬ್ದಾರಿ ನೀಡಲಾಗಿದೆ. ಕಳೆದ ಆವೃತ್ತಿಯಲ್ಲೇ ಮಂಡಿ ನೋವಿನೊಂದಿಗೆ ಇಡೀ ಲೀಗ್ ಆಡಿದ್ದ ಧೋನಿ ತಂಡವನ್ನು ದಾಖಲೆಯ ಐದನೇ ಬಾರಿಗೆ ಚಾಂಪಿಯನ್ ಮಾಡಿದ್ದರು. ಆ ವೇಳೆಯೆ ಧೋನಿ ಐಪಿಎಲ್​ ಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಾ ಊಹಾಪೋಹಗಳನ್ನು ಸುಳ್ಳು…

Read More

ಅಫಜಲಪುರ(ಕಲಬುರಗಿ): ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಕಲು ಮಾಡಲು ಸಹಕಾರ ನೀಡಿಲ್ಲ ಎಂದು ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 20ರಂದು ಈ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದ ಬಳಿ ಹೆಡ್ ಕಾನ್ಸ್‌ಟೇಬಲ್ ಪಂಡಿತ್ ಪಾಂಡ್ರೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕೈಲಾಸ ಸಕ್ಕರಗಿ ಎಂಬಾತ ಪದೇಪದೆ ಪೊಲೀಸ್ ಸಿಬ್ಬಂದಿ ಬಳಿ ತೆರಳಿ “ನನ್ನ ತಂಗಿ ಪರೀಕ್ಷೆಗೆ ಕುಳಿತಿದ್ದಾಳೆ. ಹೀಗಾಗಿ ನನಗೆ ಒಳಗಡೆ ಹೋಗಲು ಬಿಡಿ,” ಎಂದು ಕಿರಿಕಿರಿ ಮಾಡಿದ್ದಾನೆ. ”ನೀ ಏನು ದೊಡ್ಡನೌಕರಿ ಮಾಡುತ್ತಿದ್ವಿ, ನಮಗೆ ಒಳಗಡೆ ಹೋಗಲು ಬಿಡು, ಇಲ್ಲ ಅಂದ್ರೆ ನಿನಗೆ ಬೇರೆ ಮಾಡಬೇಕಾಗುತ್ತದೆ ನೋಡು,” ಎಂದು ಧಮ್ಕಿ ಹಾಕಿದ್ದಾನೆ. ಪರೀಕ್ಷಾ ಕೇಂದ್ರದ ಒಳಕ್ಕೆ ನುಗ್ಗಲು ಯತ್ನಿಸಿದ್ದರಿಂದ ಆತನನ್ನು ಪಾಂಡ್ರೆ ತಡೆದರು. ಈ ವೇಳೆ ಕೈಲಾಸ ಸಕ್ಕರಗಿ ಹಾಗೂ ಸಮೀರ ನಡುವಿನಕೇರಿ, ಪಾಂಡ್ರೆ ಅವರಲ್ಲಿದ್ದ ಲಾಠಿಯನ್ನು ಕಸಿದುಕೊಂಡು…

Read More