Author: admin

ಭಾರತೀಯ ಹವಾಮಾನ ಇಲಾಖೆಯು ಮುಂಬರುವ ಕೆಲವು ದಿನಗಳಲ್ಲಿ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗುವ ಕುರಿತು ಮುನ್ಸೂಚನೆಯನ್ನು ನೀಡಿದೆ. ಮಾರ್ಚ್‌ 22 ರಿಂದ ಮಾರ್ಚ್‌ 24 ರವರೆಗೆ ಪಶ್ಚಿಮ ಹಿಮಾಲಯದಲ್ಲಿ ವಿರಳವಾದ ಲಘು ಮಳೆ, ಹಿಮಪಾತ ಆಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಜಮ್ಮು ಕಾಶ್ಮೀತ, ಲಡಾಖ್‌, ಗಿಲ್ಗಿಟ್‌ ಬಾಲ್ಚಿಸ್ತಾನ್‌, ಮುಜಫರಾಬಾದ್‌, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಲಘು ಮಳೆ ಅಥವ ಹಿಮಪಾತದ ಲಕ್ಷಣವಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಾಳೆ (ಮಾರ್ಚ್‌ 23) ಅರುಣಾಚಲ ಪ್ರದೇಶದಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ಸಂಭವದ ಜೊತೆಗೆ ಹಿಮಪಾತವಾಗುವ ಮುನ್ಸೂಚನೆ ಇದೆ. ಮಾ.22, 24 ರಂದು ಪಂಜಾಬ್ ‌ನಲ್ಲಿ, ಮಾ.24 ರಂದು ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಚದುರಿದ ಮಳೆ ಬೀಳಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌, ಮಣಿಪುರ, ಮಿಜೋರಾಂ, ತ್ರಿಪುರಾ, ಉಪ ಹಿಮಾಲಯನ್‌ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಂತಹ ಈಶಾನ್ಯ ಮತ್ತು ಪೂರ್ವ ಭಾರತದ…

Read More

ನವದೆಹಲಿ: ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇಡಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಅರವಿಂದ ಕೇಜ್ರಿವಾಲ್​ ರನ್ನು ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿತ್ತು. ಇಡಿ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಲವಂತದ ಕ್ರಮ ತೆಗೆದುಕೊಳ್ಳದಂತೆ ಇಡಿಗೆ ನಿರ್ದೇಶನ ನೀಡುವಂತೆ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ವಜಾ ಹಿನ್ನೆಲೆ ಕೇಜ್ರಿವಾಲ್‌ ನಿವಾಸಕ್ಕೆ ಇಡಿ ಅಧಿಕಾರಿಗಳು ಭೇಟಿ ನೀಡಿದ್ದರು. ಕೇಜ್ರಿವಾಲ್‌ರನ್ನು ನಾಳೆ ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಜಿಲ್ಲಾಧಿಕಾರಿಗಳ ಕಚೇರಿ ಸಮೀಪವಿರುವ ಶತಮಾನ ಕಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ   ಶಾಲೆಗೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ AIDSO ಜಿಲ್ಲಾ ಸಮಿತಿ ನಿಯೋಗವು ಎನ್.ಎಸ್.ಎ.ಪಿ. ವಿಭಾಗದ ಸಹ ನಿರ್ಧೇಶಕರು ಸವಿತಾರವರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಶಾಲೆಗೆ ಸರಿಯಾದ ಕಾಂಪೌಂಡ್ ಇಲ್ಲದೆ ಅನೈತಿಕ ಕೃತ್ಯಗಳ ತಾಣವಾಗಿದೆ, ಸರಿಯಾದ ಕಟ್ಟಡ ಹಾಗೂ ಮೇಲ್ಛಾವಣಿ ವ್ಯವಸ್ಥೆ ಇಲ್ಲ, ಶೌಚಾಲಯಗಳು ಒಡೆದು ಹೋಗಿವೆ. ಶಾಲಾ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಲ್ಲುಗಳು ಮತ್ತು ಕಸದ ಗುಂಡಿಗಳಿರುವುದು ಪತ್ರಿಕೆಗಳಲ್ಲಿ ವರದಿ ಆಗಿರುತ್ತದೆ. ಶೈಕ್ಷಣಿಕ ನಗರಿ ತುಮಕೂರು ನಗರದ ಹೃದಯ ಭಾಗದ ಡಿಸಿ ಕಚೇರಿ ಹತ್ತಿರದಲ್ಲೇ ಇರುವ ಶತಮಾನದ ಇತಿಹಾಸ ಬರೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಕನಿಷ್ಟ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ ಮತ್ತು ನಗರದಲ್ಲೇ ಇಂತಹ ದುಸ್ಥಿತಿಯಲ್ಲಿರುವ ಶಾಲೆಗಳು ಬಹಳಷ್ಟಿರುವುದು ಶೋಚನೀಯ ಸಂಗತಿ. ಇನ್ನು ಪತ್ರಿಕೆಯಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಈಗಾಗಲೇ ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಬೇಟಿ ಮಾಡಿರುತ್ತಾರೆ ಆದರೆ…

Read More

ಶಿವಮೊಗ್ಗ: “ಕಾಂಗ್ರೆಸ್ ಪಕ್ಷದಲ್ಲಿನ ಕುಟುಂಬ ರಾಜಕಾರಣ ಸಂಸ್ಕೃತಿ ರಾಜ್ಯ ಬಿಜೆಪಿಗೂ ತಟ್ಟಿದೆ” ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗದ ತಮ್ಮ ನಿವಾಸದಲ್ಲಿ ನಡೆದ ಗ್ರಾಮೀಣ ಭಾಗದ ಕಾರ್ಯಕರ್ತರ ಸಮಾವೇಶದಲ್ಲಿ ಹೇಳಿದರು. ಕಳೆದ ವಿಧಾನ ಸಭಾ ಚುನಾವಣೆ ವೇಳೆ ತಾವೇಕೆ ಬಂಡಾಯ ಏಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮೋದಿ ಅವರು ಒಂದು ಕುಟುಂಬದ ಹಿಡಿತದಲ್ಲಿ ಪಕ್ಷ ಇರಬಾರದು ಎನ್ನುತ್ತಿದ್ದರು. ಹೀಗಾಗಿ ವರಿಷ್ಠರು ಚುನಾವಣೆ ಸ್ಪರ್ಧಿಸುವುದು ಬೇಡ ಎಂದಾಗ ಒಪ್ಪಿಕೊಂಡಿದ್ದೆ. ಆದರೆ ಈಗ ಯಡಿಯೂರಪ್ಪ ಕುಟುಂಬ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಆಳುತ್ತಿದೆ ಎಂದು ಆರೋಪಿಸಿದರು. ಒಂದು ಕುಟುಂಬದಲ್ಲಿ ಪಕ್ಷದ ಅಧಿಕಾರ ಇರಬಾರದು ಎನ್ನುವ ಸಿದ್ದಾಂತ ಈಗ ಎಲ್ಲಿ ಹೋಯಿತು ಎಂದು ಪ್ರಶ್ನಿಸಿರುವ ಅವರು, ಕುಟುಂಬ ರಾಜಕಾರಣದ ವಿರುದ್ಧ ಹೋರಾಡಬೇಕು ಎಂಬ ಕಾರಣಕ್ಕೆ ಈಗ ಚುನಾವಣೆಗೆ ಸ್ಪರ್ಧಿಸಬೇಕಾಗಿದೆ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್‌ ಎಕ್ಸ್‌ ನಲ್ಲಿ ದ್ವೇಷದ ಪೋಸ್ಟ್‌ ಅನ್ನು ಹಂಚಿಕೊಂಡ ಮಾಜಿ ಸಚಿವ ಸಿಟಿ ರವಿ ವಿರುದ್ಧ ಚಿಕ್ಕಮಗಳೂರು ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ. ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಸಿಟಿ ರವಿ ರಾಹುಲ್ ಗಾಂಧಿ ಹೇಳಿಕೆ ಉಲ್ಲೇಖಿಸಿ ಬರೆದುಕೊಂಡಿದ್ದ ಪೋಸ್ಟ್ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ, ಎಂದು ಆರೋಪಿಸಿ ಚುನಾವಣಾ ಆಯೋಗದ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣ ಸಮಿತಿಯ ಸಹಾಯಕ ಚುನಾವಣಾಧಿಕಾರಿಯೊಬ್ಬರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇರೆಗೆ ಪೊಲೀಸರು ಸಿಟಿ ರವಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. “ಸಾಗರದ ಆಳವನ್ನಾದರೂ ಅಳೆಯಬಹುದು, ಆದರೆ ರಾಹುಲ್ ಗಾಂಧಿ ಮನಸಿನಲ್ಲಿ ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಇರುವ ದ್ವೇಷವನ್ನು ಅಳೆಯಲಾಗದು. ರಾಹುಲ್ ಗಾಂಧಿ ಅವರು, ಶಕ್ತಿ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ. ಹಿಂದೂ ಧರ್ಮದಲ್ಲಿ ಶಕ್ತಿ ಎಂಬುದಕ್ಕೆ ವಿಶೇಷ ಅರ್ಥ, ಗೌರವ ಇದೆ, ಇದರ ವಿರುದ್ಧ ಹೋರಾಟ ಮಾಡುವವರು, ಹಿಂದೂ…

Read More

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಚುನಾವಣಾ ಬಾಂಡ್ ಗಳ ಮೂಲಕ ತನ್ನ ಖಜಾನೆ ತುಂಬಿಸಿಕೊಂಡಿದೆ. ಆದರೆ ವಿಪಕ್ಷಗಳ ಬ್ಯಾಂಕ್ ಖಾತೆಗಳನ್ನ ಸೀಜ್ ಮಾಡಿದ್ದಾರೆ. ಹೀಗಾದರೇ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯಲು ಸಾಧ್ಯವೇ..? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಇಡಿ ಐಟಿ ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ಹಣವನ್ನ ಕಿತ್ತುಕೊಳ್ಳುವ ಪ್ರಯತ್ನ ಮಾಡಿತ್ತಿದೆ. ಚುನಾವಣಾ ಬಾಂಡ್ ಗಳು ಅಕ್ರಮ ಎಂದು ಸುಪ್ರೀಂ ಹೇಳಿದೆ. ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲಾಗುತ್ತದೆ. ಆದರೆ ನಮ್ಮ ಬ್ಯಾಂಕ್ ಅಕೌಂಟ್ ಗಳನ್ನ ಸೀಜ್ ಮಾಲಾಗಿದೆ ಮೋದಿ ಕಾಂಗ್ರೆಸ್ ವಿರುದ್ದ ಷಡ್ಯಂತ್ರ ನಡೆಸುತ್ತಿದ್ದಾರೆ. ನಮ್ಮ ಅಕೌಂಟ್ ನ 250 ಕೋಟಿ ಬಳಕೆ ಮಾಡಲು ಆಗುತ್ತಿಲ್ಲ. 31 ವರ್ಷಗಳ…

Read More

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೊಟ್ಟನಹಳ್ಳಿಯಲ್ಲಿ ಪತಿಯೊಬ್ಬ ಮದ್ಯ ಸೇವಿಸಲು ಹಣ ಕೊಟ್ಟಿಲ್ಲವೆಂಬ ಕಾರಣಕ್ಕೆ, ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಪತ್ನಿ ಹಾಗೂ ಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪತಿ ಬೆಂಕಿ ಹಚ್ಚುತ್ತಿದ್ದಂತಯೇ ಪತ್ನಿ ಹಾಗೂ ಮಕ್ಕಳು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಘಟನೆಯಲ್ಲಿ ಪತ್ನಿ ಆಶಾಗೆ ಗಾಯವಾಗಿದ್ದು ಸೋಲದೇವನಹಳ್ಳಿಯ ಲೀಲಾವತಿ ಆಸ್ಪತ್ರೆಯಲ್ಲಿ ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿಯಿಂದ ಮಕ್ಕಳ ಶಾಲಾ ಪುಸ್ತಕ, ಟಿವಿ, ಬಟ್ಟೆ ಸೇರಿ ಗೃಹ ಉಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ. ಪತ್ನಿ ನೀಡಿದ ದೂರಿನ ಮೇರೆಗೆ ಇದೀಗ ಕಿರಣ್ ಕುಮಾರ್(31)ನನ್ನು ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಹೈದರಾಬಾದ್‌: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳು ತನ್ನ ಪ್ರಿಯಕರನ ಜೊತೆ ಇರುವುದನ್ನು ಪ್ರತ್ಯಕ್ಷವಾಗಿ ಕಂಡ ತಾಯಿ, ಕುಪಿತಗೊಂಡು ಮಗಳನ್ನೇ ಕತ್ತು ಹಿಸುಕಿ ಕೊಂದಿದ್ದಾಳೆ. ಹೈದರಾಬಾದ್‌ ನ ಇಬ್ರಾಹಿಂಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಭಾರ್ಗವಿ (19) ಮೃತ ಮಗಳಾಗಿದ್ದರೆ, ಜಂಗಮ್ಮ ಮಗಳನ್ನೇ ಕೊಂದ ತಾಯಿಯಾಗಿದ್ದಾರೆ. ಬೆಳಗ್ಗೆ ತಾಯಿ ಜಂಗಮ್ಮ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ಮನೆಗೆ ಊಟಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಮಗಳು ತನ್ನ ಪ್ರಿಯಕರ​ನ ಜೊತೆಯಲ್ಲಿದ್ದದ್ದನ್ನು ತಾಯಿಯಾದ ಜಂಗಮ್ಮ ಕಂಡಿದ್ದಾಳೆ. ಜೊತೆ ಇದ್ದ ಆ ಹುಡುಗನನ್ನು ಬೈದು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ಇದಾದ ಬಳಿಕ, ಮಗಳಿಗೆ ಹೊಡೆದಿದ್ದಲ್ಲದೇ, ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಜಂಗಮ್ಮ ಕೊಲೆ ಮಾಡಿರುವುದನ್ನು ಸ್ವತಃ ಅವರ ಮಗ ನೋಡಿದ್ದು, ಅಮ್ಮ ಅಕ್ಕನನ್ನು ಕೊಲೆ ಮಾಡಿದ್ದನ್ನು ನಾನು ನೋಡಿದ್ದೇನೆ ಎಂದು ತಾಯಿ ಜಂಗಮ್ಮ ವಿರುದ್ಧ ಇಬ್ರಾಹಿಂಪಟ್ಟಣ ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ. ಯುವತಿಯ ಅಪ್ರಾಪ್ತ ಸಹೋದರ, ತಾನು ಕೊಲೆಯನ್ನು ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತನ್ನ…

Read More

ಚಾಮರಾಜನಗರದ ಹನೂರು ತಾಲೂಕಿನ ಕತ್ತೆಕಾಲು ಪೋಡು ಗ್ರಾಮದಲ್ಲಿ ಆನೆ ದಾಳಿಯಿಂದ ಯುವಕನೊಬ್ಬ ಮೃತಪಟ್ಟ ಧಾರುಣ ಘಟನೆ ನಡೆದಿದೆ. ಮಾದ(23) ಮೃತ ದುರ್ದೈವಿಯಾಗಿದ್ದಾನೆ. ಹಿರಿಯಂಬಲ ಗ್ರಾಮಕ್ಕೆ ಹೋಗಿ ವಾಪಸಾಗುತ್ತಿದ್ದ ಮಾದನ ಮೇಲೆ ಬಿಆರ್‌ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವಲಯದಲ್ಲಿ ಆನೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಗದಗ:  ಇತ್ತೀಚಿನ ದಿನಗಳಲ್ಲಿ ಜೀವ ಕೊಡಬೇಕಾದ ತಾಯಿಯೇ ಜೀವ ತೆಗೆಯುವ ನೀಚ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹದ್ದೇ  ಕೃತ್ಯವೊಂದು ಬೆಳಕಿಗೆ ಬಂದಿದ್ದು, ಸಾರ್ವಜನಿಕ ಶೌಚಾಲಯದಲ್ಲಿ ಹೆಣ್ಣು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಹೆತ್ತ ತಾಯಿಯೇ ತನ್ನ ನವಜಾತ ಶಿಶುವೊಂದನ್ನು ಶೌಚಾಲಯದಲ್ಲಿ ಎಸೆದು ಜಾಗ ಖಾಲಿ ಮಾಡಿದ ಅಮಾನವೀಯ ಕೃತ್ಯ ನಡೆದಿದೆ. ಗದಗದ ಬೆಟಗೇರಿಯ ಹುಯಿಲಗೋಳ ರಸ್ತೆಯ ವೆಂಕಟೇಶ್ವರ ಕಲ್ಯಾಣ ಮಂಟಪ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ ಘಟನೆ ನಡೆದಿದೆ. ರಾತ್ರಿ ಹೆರಿಗೆ ಆದ ಮೇಲೆ ಶೌಚಾಲಯದಲ್ಲೇ ಮಾಂಸದ ಮುದ್ದೆ ಸಮೇತ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾಳೆ. ನವಜಾತ ಶಿಶುವಿನ ದೇಹದ ತುಂಬೆಲ್ಲ ಇರುವೆಗಳು ಮೆತ್ತಿಕೊಂಡು ಮೃತ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ಸಾರ್ವಜನಿಕರು ಬಂದು ನೋಡಿದಾಗ ಕೃತ್ಯ ಬಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವಜಾತ ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗದಗದ ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…

Read More