Subscribe to Updates
Get the latest creative news from FooBar about art, design and business.
- ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಅವರಿಂದ ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
- ಆ.8ಕ್ಕೆ ಬೆಂಗಳೂರಿನಲ್ಲಿ ಪತ್ರಕರ್ತರ ನಾಲ್ಕನೇ ರಾಜ್ಯ ಸಮ್ಮೇಳನ: ಜಾನಸನ್ ಘೋಡೆ
- ಚಿತ್ರಕಲಾ ಶಿಕ್ಷಕರ ನೇಮಕ: ಇನ್ನೆಷ್ಟು ವಿಳಂಬ?
- ತುಮಕೂರು: ಎಸ್.ಐ.ಆರ್ ಪ್ರಕ್ರಿಯೆಗೆ ಸೂಕ್ತ ಮಾರ್ಗದರ್ಶನ ನೀಡಿ
- ತುಮಕೂರು: ಜುಲೈ 22ರಂದು ಉದ್ಯಮಶೀಲತೆ ತಿಳುವಳಿಕೆ ಶಿಬಿರ
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮೀನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಕ್ರಮ: ಶಾಸಕ ಸಿ.ಬಿ.ಸುರೇಶ್ ಬಾಬು
- ಕೊರಟಗೆರೆ: ವಿಷಪೂರಿತ ಆಹಾರ ಸೇವನೆ: 59 ಕುರಿಗಳ ಸಾವು
- ತುಮಕೂರು: ಜು.18 ರಿಂದ 26ರವರೆಗೆ ಗಮಕ ಹಬ್ಬ
Author: admin
ಬೆಂಗಳೂರು: ಫುಡ್ ಡೆಲಿವರಿ ಬಾಯ್ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದೆ. ಡೆಲಿವರಿ ಬಾಯ್ ಬಿ.ಆಕಾಶ್ ಆರೋಪಿಯಾಗಿದ್ದಾನೆ. ಡೆಲಿವರಿ ಬಾಯ್ ಆಕಾಶ್ ಬಿ ಎಂಬುವಾತ ಕುಡಿಯಲು ನೀರು ಕೇಳಿ ಮನೆಗೆ ನುಗ್ಗಿ ಯುವತಿಯ ಕೈಹಿಡಿದು ಎಳೆದಾಡಿ ದೌರ್ಜನ್ಯ ಎಸಗಿದ್ದಾನೆ. ಇಲ್ಲಿನ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಡೆಲಿವರಿ ಬಾಯ್ ಬಿ.ಆಕಾಶ್ ವಿರುದ್ಧ ದೂರು ದಾಖಲಾಗಿದೆ. ನೀರು ಕುಡಿಯುವ ನೆಪದಲ್ಲಿ ಮನೆ ಒಳಗಡೆ ಎಂಟ್ರಿ ಕೊಟ್ಟಿದ್ದಾನೆ. ಆಕೆ ನೀರು ತರಲು ಒಳಗೆ ಹೋದಾಗ ತಾನೂ ಹಿಂಬಾಲಿಸಿ ಹೋಗಿದ್ದಾನೆ. ನಂತರ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ, ಅನುಚಿತವಾಗಿ ವರ್ತಿಸಿದ್ದಾನೆ. ಘಟನೆ ಸಂಬಂಧ ಯುವತಿ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಐಪಿಸಿ ಸೆಕ್ಷನ್ 354-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕೊಡಗಾನೂರು ಕ್ರಾಸ್ ಬಳಿ ಸಾರಿಗೆ ಬಸ್ ಏಕಾಏಕಿ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 20 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಜೇಂದ್ರಗಡದಿಂದ ಗದಗ ಕಡೆಗೆ ಬಸ್ ಹೊರಟಿತ್ತು. ಇದೇ ವೇಳೆ ಗದಗನಿಂದ ಬರುತ್ತಿದ್ದ ಮತ್ತೊಂದು ಬಸ್ ಗೆ ದಾರಿ ಬಿಡುವಾಗ ಆಯತಪ್ಪಿ ಕಂದಕಕ್ಕೆ ಬಿದ್ದಿದೆ. ಬಸ್ ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನೈಸರ್ಗಿಕವಾಗಿ ದೊರೆಯುವ ಕಬ್ಬಿನ ಹಾಲು ಎಂದರೆ ಅನೇಕರಿಗೆ ಬಲು ಇಷ್ಟ. ಪಟ್ಟಣ ಅಥವಾ ನಗರಗಳಿಗೆ ಹೋದಾಗ ತಪ್ಪದೆ ಕುಡಿದು ಬರುತ್ತಾರೆ. ಆದರೂ ಕೂಡ ಕೆಲವರು ಕಬ್ಬಿನ ಹಾಲು ಕುಡಿಯಬಾರದೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಯಾವ ಕೆಮಿಕಲ್ ಗಳಿಲ್ಲದೆ ನಾಲಗೆಗೆ ರುಚಿ ನೀಡೋ ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್ ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ದೇಹವನ್ನು ತಂಪಾಗಿಸುತ್ತದೆ. ದೇಹದಲ್ಲಿ ನೀರಿನಂಶವನ್ನು ಕಾಪಾಡುವುದರೊಂದಿಗೆ ಅನೇಕ ಪ್ರಯೋಜನಗಳನ್ನು ಉಂಟುಮಾಡುತ್ತದೆ. ಆದರೂ ಕೂಡ ಇಂಥವರು ಕಬ್ಬಿನ ಹಾಲು ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ !! ಹಾಗಿದ್ರೆ ಯಾರು ಹೆಚ್ಚಾಗಿ ಕಬ್ಬಿನ ಹಾಲು ಕುಡಿಯಬಾರದು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್. ನಿದ್ರಾಹೀನತೆಯ ಸಮಸ್ಯೆ ಹೊಂದಿರುವವರು: ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ನೀವು ಕಬ್ಬಿನ ರಸವನ್ನು ಕುಡಿಯಬಾರದು. ಇದರಲ್ಲಿರುವ ಪೋಲಿಕೋಸನಾಲ್ ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಬೊಜ್ಜು ಸಮಸ್ಯೆ ಇರುವವರು: ಸ್ಥೂಲಕಾಯತೆಯಿಂದ ಬಳಲುತ್ತಿರುವವರು ಕಬ್ಬಿನ ರಸವನ್ನು ಸೇವಿಸಬಾರದು. ಇದು ಹೆಚ್ಚಿನ ಕ್ಯಾಲೋರಿ…
ಮಂಡ್ಯ ಕ್ಷೇತ್ರಕ್ಕೆ ಜೆಡಿಎಸ್ ಪಟ್ಟು ಹಿನ್ನೆಲೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ಹರಡಿದ ಹಿನ್ನೆಲೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅಂಬರೀಶ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿಗೆ ವಾಪಸ್ ಆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದೆ ಸುಮಲತಾ ಅಂಬರೀಶ್, ನನ್ನ ರಾಜಕೀಯ ಏನಿದ್ರೂ ಮಂಡ್ಯದಲ್ಲಿ ಮಾತ್ರ. ನಾನು ಏನೇ ರಾಜಕೀಯ ಮಾಡಿದ್ರೂ ಅದು ಮಂಡ್ಯದಲ್ಲಿ ಮಾತ್ರ. ಇದನ್ನೇ ವರಿಷ್ಠರಿಗೆ ಹೇಳಿ ಬಂದಿದ್ದೇನೆ. ವರಿಷ್ಠರಿಂದ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ. ನೀವು ಬಿಜೆಪಿಯಲ್ಲೇ ಇರಬೇಕು ಎಂದಿದ್ದಾರೆ ಎಂದರು. ಬೆಂಗಳೂರು ಉತ್ತರಕ್ಕೆ ನಾನು ಹೋಗಿಲ್ಲ ಇನ್ನೂ ಚಿಕ್ಕಬಳ್ಳಾಪುರಕ್ಕೆ ಹೋಗ್ತೀನಾ..? ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡಲ್ಲ. ಮಂಡ್ಯ ಬಿಟ್ಟು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಏಕೆ ಹೋಗಬೇಕು ಎಂದು ಸುಮಲತಾ ಅಂಬರೀಶ್ ಪ್ರಶ್ನಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಏಪ್ರಿಲ್ 19 ಮತ್ತು ಏಪ್ರಿಲ್ 26 ರಂದು ನಿಗದಿಯಾಗಿದ್ದ ಚುನಾವಣಾ ದಿನಾಂಕವನ್ನು ಬದಲಾಯಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮುಸ್ಲಿಂ ಸಂಘಟನೆಗಳು ಮನವಿ ಮಾಡಿವೆ ಎನ್ನಲಾಗಿದೆ. ಮೊದಲ ಮತ್ತು ಎರಡನೇ ಹಂತದ ಚುನಾವಣೆ ದಿನವಾಗಿರುವ ಏ.19 ಮತ್ತು ಏ.26 ಶುಕ್ರವಾರ ಬರುತ್ತದೆ. ಇಸ್ಲಾಮಿಕ್ ಸಮುದಾಯವರು ಶುಕ್ರವಾರದಂದು ಪ್ರಾರ್ಥನೆಗಾಗಿ ಮಸೀದಿಗಳಿಗೆ ಹೋಗುತ್ತಾರೆ. ಶುಕ್ರವಾರ ನಡೆಯುವ ಮತದಾನವು ಮತದಾರರಿಗೆ ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಅನಾನುಕೂಲವಾಗಲಿದೆ. ಹೀಗಾಗಿ ಈ ಎರಡು ದಿನಾಂಕವನ್ನು ಬದಲಾವಣೆ ಮಾಡಬೇಕೆಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜೊತೆ ರಾಜ್ಯದ ರಾಜ್ಯದ ಉಲಾಮಾ ಒಕ್ಕೂಟವೂ ಮನವಿ ಮಾಡಿದೆ. ಚುನಾವಣಾ ದಿನಾಂಕ ಬದಲಾವಣೆಗೆ ಮುಸ್ಲಿಂ ಸಂಘಟನೆಗಳ ಮನವಿ ವಿಚಾರದ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ನಮಗೆ ಮನವಿ ಮಾಡಿದರೆ ನಾವು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ. ಬದಲಾವಣೆ ಮಾಡಲು ಸಾಧ್ಯತೆ ಇದೆಯಾ ಎಂಬುದನ್ನು ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ಒಬ್ಬ ವ್ಯಕ್ತಿಯು ತನ್ನ ಒಂದು ವರ್ಷದ ಮಗುವನ್ನು ಆಕಸ್ಮಿಕವಾಗಿ ಮಡಿಲಿನಿಂದ ಬೀಳಿಸಿದ ಪರಿಣಾಮ ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಛತ್ತೀಸ್ ಗಡದ ರಾಯ್ ಪುರದ ಜನಪ್ರಿಯ ಮಾಲ್ ನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ರಾತ್ರಿ 7:30 ರಿಂದ 8 ಗಂಟೆಯ ನಡುವೆ ನಡೆದಿದೆ ಎಂದು ವರದಿ ತಿಳಿಸಿದೆ. ಕುಟುಂಬವೊಂದು ಸಿಟಿ ಸೆಂಟರ್ ಮಾಲ್ ಗೆ ಭೇಟಿ ನೀಡಲು ಹೋಗಿದೆ. ಇದೇ ವೇಳೆ ವ್ಯಕ್ತಿಯೋರ್ವರು ತನ್ನ ಒಂದು ವರ್ಷದ ಮಗುವನ್ನು ಮಡಿಲಲ್ಲಿಟ್ಟುಕೊಂಡು ಮೂರನೇ ಮಹಡಿಯಲ್ಲಿ ಎಸ್ಕಲೇಟರ್ ಹತ್ತುತ್ತಿದ್ದಾಗ ಎರಡನೇ ಮಗುವನ್ನು ಎಸ್ಕಲೇಟರ್ ಮೇಲೆ ಕರೆದುಕೊಂಡು ಹೋಗಲು ಕೈ ಚಾಚಿದಾಗ ಮಡಿಲಲ್ಲಿದ್ದ ಮಗು ಎತ್ತರದಿಂದ ಕೈಯಿಂದ ಜಾರಿ ಕೆಳಗೆ ಬಿದ್ದಿದೆ ಎನ್ನಲಾಗಿದೆ. ಈ ವ್ಯಕ್ತಿ ಮಾಲ್ ನಲ್ಲಿ ಮಕ್ಕಳ ಜೊತೆ ತಿರುಗಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಮಡಿಲಲ್ಲೊಂದು ಮಗುವಿದೆ. ಇನ್ನೊಂದು ಮಗು ಎಸ್ಕಲೇಟರ್ ಹತ್ತಲು ಸಹಾಯ ಮಾಡಲು ಆ ವ್ಯಕ್ತಿ ಕೈ ಚಾಚಿದ್ದಾರೆ. ಈ ವೇಳೆ…
‘ರಾಜ್ಯದ ಹಲವು ಭಾಗಗಳಲ್ಲಿ ಚರ್ಚುಗಳು, ಮಠಗಳು, ಮದರಸಗಳು ಮತ್ತು ಎನ್ ಜಿಒಗಳು ಸರಿಯಾಗಿ ನೊಂದಣಿಯಾಗದೆಯೇ ಕಾರ್ಯನಿರ್ವಹಿಸುತ್ತಿವೆ’ ಎಂಬ ದೂರುಗಳು ಆಯಾಯ ಜಿಲ್ಲಾಡಳಿತಗಳಿಗೆ ಬರುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಖಡಕ್ ಈ ಬಗ್ಗೆ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ದಕ್ಷಿಣ (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ, ನೊಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್, ಮಠ, ಎನ್ ಜಿಓಗಳಿಗೂ ನೋಂದಣಿಗೆ ಗಡುವು ನೀಡಲಾಗಿದೆ. ನೋಂದಣಿ ಆಗದಿದ್ದರೇ ಇವುಗಳಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನೋಂದಣಿಯಾಗದೇ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್ ಮಠ, ಎನ್ ಜಿಓಗಳು ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಡ್ಡಾಯವಾಗಿ ಮುಂದಿನ ತಿಂಗಳ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ದಕ್ಷಿಣ (ಕೆಂಗೇರಿ) ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಸ್ವಯಂ ಸೇವಾ ಸಂಸ್ಥೆಗಳು (NGO )…
ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಕಾಮುಕನೊಬ್ಬ, ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶೃತಿ ಸಿಂಗ್ ಎಂಬಾಕೆ ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೃತಿ ತಮ್ಮ ಸ್ನೇಹಿತನ ಜತೆ ಡ್ರಾಪ್ ಪಡೆದು ಮನೆ ಬಳಿ ಬರುತ್ತಿದ್ದರು. ಆಕೆ ಒಬ್ಬಂಟಿಯಾಗಿದ್ದನ್ನು ಗಮನಿಸಿದ ಕಾಮುಕ ಹಿಂಬಾಲಿಕೊಂಡು ಬಂದಿದ್ದ. ನಂತರ ಆಕೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬೈಕ್ ನಿಂದ ಇಳಿದು, ಓಡಿ ಬಂದವನೇ ಹಿಂಭಾಗದಿಂದ ತಬ್ಬಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಯುವತಿ ಗಾಬರಿಯಾಗಿ ಕಿರುಚಾಡಿದ್ದಾಳೆ. ಕೂಡಲೇ ಜನರು ಸೇರಿದ್ದಾರೆ. ಯುವತಿ ಅಲ್ಲಿದ್ದ ಸ್ಥಳೀಯರ ಸಹಕಾರದಿಂದ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ ಎನ್ನಲಾಗಿದೆ. ಅಷ್ಟಲ್ಲದೆ ಆತನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಮಹಿಳೆಯರಿಗೆ ನಗರದಲ್ಲಿ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆ ಬಗ್ಗೆ ನಾನು ಯಾವುದೇ ರೀತಿಯ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೆ ಕೋರ್ಟ್, ಕಛೇರಿ ಎಂದು ಅಲೆಯಬೇಕಾಗುತ್ತದೆ. ಇದರಿಂದ…
ಮುಂಬೈನ ವಿವಾದಿತ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಪ್ರದೀಪ್ ಶರ್ಮಾಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವರದಿ ತಿಳಿಸಿದೆ. 2006ರಲ್ಲಿ ಮುಂಬೈನಲ್ಲಿ ಗ್ಯಾಂಗ್ ಸ್ಟರ್ ಛೋಟಾ ರಾಜನ್ ನ ಆಪ್ತ ಸಹಾಯಕ ರಾಮನಾರಾಯಣ ಗುಪ್ತಾ ನಕಲಿ ಎನ್ ಕೌಂಟರ್ ಸಾವಿನ ಪ್ರಕರಣದಲ್ಲಿ ನ್ಯಾಯಾಲಯವು ಪ್ರದೀಪ್ ಶರ್ಮಾರನ್ನು ದೋಷಿ ಎಂದು ಘೋಷಿಸಿತ್ತು, ಆದರೆ ಆ ಕೇಸ್ ಗೆ ಸಂಬಂಧಿಸಿದ ಇತರ 13 ಆರೋಪಿಗಳ ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿದಿತ್ತು. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ಪೀಠ, ‘ಪೊಲೀಸರು ಗುಪ್ತಾ ಅವರನ್ನು ಕೊಂದಿದ್ದಾರೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಮತ್ತು ಅದನ್ನು ನಿಜವಾದ ಎನ್ ಕೌಂಟರ್ ನಂತೆ ಬಿಂಬಿಸಿದೆ’ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ 12 ಮಾಜಿ ಪೊಲೀಸರು ಮತ್ತು ನಾಗರಿಕ ಸೇರಿದಂತೆ 13 ಇತರ ಆರೋಪಿಗಳ ಅಪರಾಧ ಮತ್ತು ಜೀವಾವಧಿ ಶಿಕ್ಷೆ ನೀಡಲು ಹೈಕೋರ್ಟ್ ಆದೇಶಿಸಿದೆ. ಕಾನೂನಿನ ರಕ್ಷಕರು ಸಮವಸ್ತ್ರದಲ್ಲಿ ಅಪರಾಧಿಗಳಂತೆ ವರ್ತಿಸಲು ಅನುಮತಿಸಲಾಗುವುದಿಲ್ಲ ಮತ್ತು ಇದಕ್ಕೆ ಅವಕಾಶ ನೀಡಿದರೆ ಅದು…
2013 ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಹತ್ಯೆಗೀಡಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್’ ವಿ ರಮೇಶ್ ಅವರನ್ನು ಸ್ಮರಿಸುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ಸೇಲಂನಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡುವಾಗ ನಡೆದಿದೆ. “ಇಂದು ನಮ್ಮೊಂದಿಗೆ ಇಲ್ಲ. ರಮೇಶ್ ಪಕ್ಷಕ್ಕಾಗಿ ಹಗಲಿರುಳು ದುಡಿದರು. ಅವರು ನಮ್ಮ ಪಕ್ಷದ ಸಮರ್ಪಿತ ನಾಯಕರಾಗಿದ್ದರು. ಅವರು ಉತ್ತಮ ವಾಗ್ಮಿ ಮತ್ತು ತುಂಬಾ ಕಠಿಣ ಪರಿಶ್ರಮಿ ಮನುಷ್ಯ. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ” ಎಂದು ಹೇಳಿ ನರೇಂದ್ರ ಮೋದಿ ಗದ್ಗದಿತರಾದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್’ ವಿ. ರಮೇಶ್ (54)ರನ್ನು ಸೇಲಂನ ಅವರ ಮನೆಯಲ್ಲೇ 2013 ರಲ್ಲಿ ಅಪರಿಚಿತ ಗ್ಯಾಂಗ್ ಹತ್ಯೆ ಮಾಡಿತ್ತು ಇದನ್ನು ಭಾಷಣದ ವೇಳೆ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ. ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ.ಎನ್. ಲಕ್ಷ್ಮಣನ್ ಅವರನ್ನೂ ಕುಡ ಸ್ಮರಿಸಿದ ಪ್ರಧಾನಿ, ತುರ್ತುಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ, ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಅವರು ರಾಜ್ಯದಲ್ಲಿ…