Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ನಾಗದೇವನಹಳ್ಳಿ ಗ್ರಾಮದಲ್ಲಿ ಹಳೆ ದ್ವೇಷ ಹಾಗೂ ಜಮೀನು ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಬರ್ಬರ ಕೊಲೆಯಾಗಿದೆ. ಸೀನಪ್ಪ(41) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ರಕ್ತ ಸಂಬಂಧಿಗಳ ನಡುವೆಯೇ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ. ನರಸಿಂಹಯ್ಯ ಹಾಗೂ ಅವರ ತಮ್ಮ ಅಬ್ಬಯ್ಯ ನಡುವೆ ಪಿತ್ರಾರ್ಜಿತ ಜಮೀನು ವಿವಾದ ಇತ್ತು. ಇದೇ ಜಮೀನು ವಿವಾದಕ್ಕೆ 2015ರಲ್ಲಿ ನರಸಿಂಹಯ್ಯನ ಮೊದಲ ಮಗ ಕೊಲೆಯಾಗಿದ್ದ. ಈ ಕಾರಣಕ್ಕೆ ನರಸಿಂಹಯ್ಯ ಕುಟುಂಬ ಸಿಟ್ಟಾಗಿತ್ತು. ಹೀಗಾಗಿ ಹಳೇ ವೈಷಮ್ಯ ಹಾಗೂ ಜಮೀನು ಗಲಾಟೆ ಕೋಪಕ್ಕೆ ಅಬ್ಬಯ್ಯನ ಅಳಿಯ ಸೀನಪ್ಪನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹೆಚ್.ಡಿ. ಕೋಟೆ: ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿಗಳಾದ ಟಿ. ರವಿಕುಮಾರ್ ಮತ್ತು ತಂಡದವರು ಹೆಚ್.ಡಿ.ಕೋಟೆ ತಾಲ್ಲೂಕಿನ ಚಿಕ್ಕ ನಂದಿ ಮತ್ತು ಕಂಚ ಮಳ್ಳಿ ,ಯರಹಳ್ಳಿ ಗ್ರಾಮದಲ್ಲಿ ಆಹಾರ ಪರವಾನಿಗೆ ಇಲ್ಲದೆ ಬೆಲ್ಲಗಳನ್ನು ತಯಾರಿಸುವ ಅಲೆ ಮನೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಹಾರ ಸುರಕ್ಷಿತ ಅಧಿಕಾರಿಗಳು ಬೆಲ್ಲವನ್ನು ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟಿಸ್ ನೀಡಿದರು. ಮಾಲೀಕರು ಗ್ರಾಹಕರಿಗೆ ಉತ್ತಮವಾದ ಮತ್ತು ಶುದ್ಧವಾದ ಯಾವುದೇ ಬೇರೆ ಪದಾರ್ಥಗಳನ್ನು ಕಲಬೆರಕೆ ಮಾಡದೆ, ಶುದ್ದವಾಗಿ ಬೆಲ್ಲವನ್ನು ತಯಾರಿಸಿ ಅದರ ಮೇಲೆ ತಯಾರಿಸಿದ ದಿನಾಂಕ ಮತ್ತು ಅವಧಿ ಮೀರುವ ದಿನಾಂಕಗಳನ್ನು ಹಾಗೂ FSSA ಲೈಸನ್ಸ್ ನಂಬರ್ ಹಾಗೂ ಗುಣಮಟ್ಟದ ಚಿಹ್ನೆ ಯನ್ನೂ ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಅವಧಿ ಮೀರಿರುವ ಪದಾರ್ಥಗಳನ್ನು ಹಾಗೂ ಕಳಪೆ ಬೆಲ್ಲವನ್ನು ಯಾವುದೇ ಕಾರಣಕ್ಕೂ ರಪ್ತು ಮಾಡಬಾರದು ಎಂದು ಸೂಚನೆ ನೀಡಿದರು. ಹೆಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕಿನ ಎಲ್ಲಾ ಅಲೆ ಮನೆ ಮಾಲೀಕರು ಕಡ್ಡಾಯವಾಗಿ ಆಹಾರ…
ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ ಸಮೀಪ ವಕೀಲನಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಮಂಜುನಾಥ್(30) ಹಲ್ಲೆಗೊಳಗಾದ ವಕೀಲರಾಗಿದ್ದಾರೆ. ಬೆನ್ನಿಗೆ ಮತ್ತು ಕೈಗೆ ಚಾಕುವಿನಿಂದ ಇರಿಯಲಾಗಿದ್ದು, ನೆರವಿಗೆ ಧಾವಿಸಿದ ಆಟೋ ಡ್ರೈವರ್ ಮೇಲೆಯೂ ಹಲ್ಲೆ ಮಾಡಲಾಗಿದೆ. ಸದ್ಯ ಗಾಯಾಳುವಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ವೇಳೆ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ನಗರದ ಹೊರವಲಯದ ತಾತಗುಣಿ ಬಳಿಯ ಆಗರ ಕೆರೆಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಕೆಂಗೇರಿ ಉಪನಗರ ಸರ್ಕಾರಿ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಪೃಥ್ವಿರಾಜ್, ನವೀನ್ ಮೃತರು. ಸ್ನೇಹಿತರ ಜತೆ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದ್ದು, ಒಟ್ಟು 11 ವಿದ್ಯಾರ್ಥಿಗಳು ಆಗರ ಕೆರೆಯಲ್ಲಿ ಈಜಲು ತೆರಳಿದ್ದಾಗ, ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಆಗಮಿಸಿ ಮೃತದೇಹಗಳನ್ನು ಹೊರತೆಗೆದು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಸರಗೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಸವಾಲಾಗಿದ್ದು, ಈ ಸವಾಲನ್ನು ಸಮರ್ಥವಾಗಿ ಎದುರಿಸಬೇಕು’ ಎಂದು ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು. ಸರಗೂರು ತಾಲ್ಲೂಕಿನ ಬಿ ಮಟಕೆರೆ ಗ್ರಾಪಂ ವ್ಯಾಪ್ತಿಯ ಬಿ ಮಟಕೆರೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವಿ ಎಸ್ ಎಸ್ ಸಮುದಾಯ ಭವನದಲ್ಲಿ ದಸಂಸ (ಅಂಬೇಡ್ಕರ್ ವಾದ) ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಮಕ್ಕಳು ಸಾಧನೆ ಮಾಡಬೇಕಾದರೆ ಅವರ ಗುರಿ ಸ್ಪಷ್ಟವಾಗಿರಬೇಕು, ಆ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು, ಪರೀಕ್ಷೆಗಳು ಅಂದರೆ ಅದು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು, ಭಯ ಮುಕ್ತರಾಗಿ ಪರೀಕ್ಷೆ ಎದುರಿಸಿ, ಆತ್ಮವಿಶ್ವಾಸದಿಂದ ಬರೆಯಿರಿ ಎಂದು ಸಲಹೆ ನೀಡಿದರು. ಪರೀಕ್ಷೆಗಳನ್ನು ಎದುರಿಸುವ ಕುರಿತು ಮಕ್ಕಳಿಗೆ ಒಂದು ದಿನದ ಕಾರ್ಯಾಗಾರವನ್ನು ಎಸ್.ಎಸ್.ಎಲ್.ಸಿ ವಿಜಯೀಭವ ಎನ್ನುವ ಹೆಸರಿನಲ್ಲಿ ಒಂದು ದಿನದ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು. ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಧೈರ್ಯ…
ಪಾವಗಡ: ಪಟ್ಟಣದ ಇತಿಹಾಸ ಪ್ರಸಿದ್ದ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜನಾರ್ಧನ ಸ್ವಾಮಿರವರು ಮಂಗಳವಾರ 1 ಗಂಟೆಯಲ್ಲಿ ವಿಶೇಷ ನವಗ್ರಹ ಹಾಗೂ ಶೀತಲಾಂಭ ದೇವಿಗೆ ಕುಂಕುಮ ಅರ್ಚನೆ ಪೂಜೆಯನ್ನು ನೆರವೇರಿಸಿ. ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷ ಈ ಬಾರಿ ನನಗೆ ಅವಕಾಶ ಕೊಟ್ಟರೆ ಸ್ವರ್ಧೆಗೆ ನಾನು ಸಿದ್ದ, 3ನೇ ಭಾರಿಗೆ ನರೇಂದ್ರ ಮೋದಿಜಿಗೆ ಪ್ರಧಾನ ಮಂತ್ರಿ ಮಾಡುವುದು ನಮಗೆ ನಾವೇ ಒಳ್ಳೇದು ಮಾಡಿಕೊಂಡ ಹಾಗೇ, ಕೇಂದ್ರ ಸರ್ಕಾರ ಜನಪರ ಯೋಜನೆಗಳ ಮೂಲಕ ದೇಶದ ಗ್ರಾಮೀಣ ಜನರ ಮನ್ನಣೆಯನ್ನು ಗಳಿಸಿಕೊಂಡಿದೆ. ಕಳೆದ 10 ವರ್ಷದಲ್ಲಿ ದೇಶದ ಘನತೆ, ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿದ್ದು, ಭಾರತ ದೇಶವು ಅನ್ಯ ರಾಷ್ಟ್ರಗಳ ಜೊತೆಗೆ ಪರಸ್ಪರ ಉತ್ತಮ ಬಾಂಧವ್ಯ ಹೊಂದಿ ಅತ್ಯುತ್ತಮ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಿಕೊಂಡು ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿಯ ಸಾಲಿನಲ್ಲಿ ಅತ್ಯುತ್ತಮ ರಾಷ್ಟ್ರವಾಗಿ ಪರಿಣಮಿಸಿದೆ ಎಂದರೆ ಒಬ್ಬ ನರೇಂದ್ರ ಮೋದಿ…
ಪಾವಗಡ: ತಾಲೂಕಿನ ಬಿಜೆಪಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ರಂಗಪ್ಪ ಆಯ್ಕೆಯಾಗಿದ್ದಾರೆ. ಪಾವಗಡ ಪಟ್ಟಣದ ನವನಿಧಿ ಕನ್ವೆನ್ಷನ್ ಹಾಲ್ ನಲ್ಲಿ ಪಕ್ಷದ ಧ್ವಜವನ್ನು ಜಿಲ್ಲಾಧ್ಯಕ್ಷರಿಂದ ಪಡೆಯುವ ಮೂಲಕ ಅಧ್ಯಕ್ಷರ ಪದವಿಯನ್ನು ಅವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮನ್ನು ಪಾವಗಡ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಮಾಡಿರುವುದಕ್ಕೆ ಎಲ್ಲಾ ನಾಯಕರಿಗೂ ಸಹ ಕೃತಜ್ಞತೆಗಳನ್ನು ಸಲ್ಲಿಸಿದರು. ಪದಗ್ರಹಣ ಸಮಾರಂಭದಲ್ಲಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ, ನಿಕಟ ಪೂರ್ವ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್, ಸಾಕೇಲ್ ಶಿವಕುಮಾರ್, ಕೊತ್ತೂರು ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಬ್ಯಾಡನೂರು ಶಿವು, ಅರುಣ್ K.S.,ಜಿಲ್ಲಾ ವಕ್ತಾರರಾದ ಚೈತನ್ಯ ಪ್ರಭು, ಜಿಲ್ಲಾ ಮೋರ್ಚಾ ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ಪುರುಷೋತ್ತಮ, ಪ್ರಸಾದ್ ಬಾಬು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅಲ್ಕುಂದ್ ರಾಜ್, ನವೀನ್ ಸೀತಾರಾಮ್ ಹಾಗೂ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ…
ಮಾಂಸ ತಿನ್ನುವವರೇ ಎಚ್ಚರ.. ಹೀಗೆ ಮಾಡ್ಲೇಬೇಡಿ..!! ಮಾಂಸಗಳನ್ನು ಹಲವು ದಿನಗಳ ಕಾಲವಿಟ್ಟು ಸೇವಿಸಬೇಡಿ. ಇದರಲ್ಲಿ ಬ್ಯಾಕ್ಟೀರಿಯಾಗಳು ಬಹಳ ಬೇಗನೆ ಬೆಳಯುತ್ತದೆ. ಇದನ್ನು ಸೇವಿಸಿದರೆ ನಿಮ್ಮ ದೇಹ ಅನಾರೋಗ್ಯಕ್ಕೀಡಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ ತಕ್ಷಣ ತಿನ್ನಿ. ಇದನ್ನು ಹೆಚ್ಚು ಕಾಲ ಇಡಬೇಡಿ. ಯಾಕೆಂದರೆ ಇದರಲ್ಲಿ ಸಾಲ್ಮನೆಲ್ಲಾ ಮತ್ತು ಲಿಸ್ಟೇರಿಯಾದಂತಹ ರೋಗಕಾರಕ ಬ್ಯಾಕ್ಟೀರಿಯಾಗಳು ಹರಡುತ್ತದೆ. ಮೊಟ್ಟೆಯ ಸಿಪ್ಪೆ ಅದನ್ನು ಬ್ಯಾಕ್ಟಿರಿಯಾಗಳಿಂದ ರಕ್ಷಿಸುತ್ತದೆ. ಹಾಗಾಗಿ ಸಿಪ್ಪೆ ತೆಗೆದ ಮೊಟ್ಟೆಗಳನ್ನು ಹೆಚ್ಚು ಹೊತ್ತು ಇಟ್ಟು ತಿನ್ನಬೇಡಿ. ಬಿರಿಯಾನಿ ಎಲೆಯಲ್ಲಿದೆ ಆರೋಗ್ಯದ ಗುಟ್ಟು: ಬಿರಿಯಾನಿ ಎಲೆಯು ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನ ಹೊಂದಿರುವ ಸಸ್ಯವಾಗಿದೆ. ಈ ಎಲೆಗಳು ಆಹಾರದ ರುಚಿಯನ್ನ ಹೆಚ್ಚಿಸುವುದಲ್ಲದೆ ಪೋಷಕಾಂಶಗಳನ್ನ ಹೆಚ್ಚಿಸುತ್ತವೆ. ಬಿರಿಯಾನಿ ಎಲೆಯಲ್ಲಿ ಹಲವು ಪ್ರಯೋಜನಗಳಿವೆ. ಇದನ್ನ ತಿಳಿಯದೆ ಅನೇಕರು ಇದನ್ನ ಮಸಾಲೆ ಎಂದು ಪರಿಗಣಿಸುತ್ತಾರೆ. ಈ ಗಿಡದ ಎಲೆಗಳನ್ನ ಎಣ್ಣೆ ಮತ್ತು ಔಷಧ ತಯಾರಿಕೆಗೂ ಬಳಸುತ್ತಾರೆ. ಆಯುರ್ವೇದದ ಪ್ರಕಾರ ಬಿರಿಯಾನಿ ಎಲೆಗಳು ಶಾಖವನ್ನ ಉಂಟು ಮಾಡುತ್ತವೆ. ಆದ್ದರಿಂದ ಇದು ಕಫ ಮತ್ತು ವಾತ ದೋಷಗಳನ್ನ…
ಈ ಘಟನೆ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ನಡೆದಿದೆ. ಕಿರಿಕ್ ಮಾಡಿ ನಾಯಿ ಮಾಲೀಕನಿಗೆ ಬಾರಿಸಿದ್ದಲ್ಲದೇ ಪುಂಡರು, ಮಾಲೀಕನ ಮಗಳನ್ನು ಕೂಡ ಎಳೆದಾಡಿದ ಮನಕಲಕುವ ಘಟನೆ ಬಗ್ಗೆ ವರದಿಯಾಗಿದೆ. ದೂರುದಾರೆ ಶಾಲಿನಿಯವರ ಮನೆಯಲ್ಲಿ ನಾಯಿ ಬೊಗಳಿದ್ದು, ಪಕ್ಕದ ಮನೆಯ ಶಂಕರ್ ರಾತ್ರಿ 10-30ಕ್ಕೆ ಸ್ನೇಹಿತರ ಜೊತೆ ಬಂದಿದ್ದರು. ಅಪರಿಚಿತರು ಬಂದಿದ್ದಕ್ಕೆ ನಾಯಿ ಬೊಗಳಿದೆ. ಇಷ್ಟಕ್ಕೇ ಶಂಕರ್ ಅಂಡ್ ಗ್ಯಾಂಗ್ ನಾಯಿ ಮೇಲೆ ರೇಗಾಡಿದೆ. ನಾಯಿಯ ಮಾಲೀಕರು ಇದ್ಯಾಕಪ್ಪ ಅಂತಾ ಕೇಳೋಕೆ ಬಂದಾಗ ಅವರ ಮೇಲೂ ಬಾರಿಸಲು ಮುಂದಾಗಿದ್ದಾರೆ. ಇತ್ತ ಅಪ್ಪನ ರಕ್ಷಣೆಗೆ ಬಂದ ಕಾಲೇಜು ವಿದ್ಯಾರ್ಥಿನಿ ಶಾಲಿನಿಯನ್ನು ಕೂಡ ಗ್ಯಾಂಗ್ ಎಳೆದಾಡಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರಿಗೆ ಯುವತಿ ಅಳುತ್ತಾ ನಡೆದ ಘಟನೆಯ ಆಡಿಯೊ ಕಳಿಸಿದ್ದಾಳೆ. ನ್ಯಾಯ ಕೊಡಿಸುವಂತೆ ಮಹಿಳಾ ಅಧ್ಯಕ್ಷರಿಗೆ ಅಳುತ್ತಾ ಆಡಿಯೊ ಮೆಸೇಜ್ ಕಳಿಸಿದ್ದಳು. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸ್ರಿಂದ ಆರೋಪಿ ಕಿರಿಕ್ ಪಾರ್ಟಿ ಶಂಕರ್ ಅರೆಸ್ಟ್ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ರಂಜಾನ್ ಉಪವಾಸ ಆರಂಭ ಗೊಂಡಿದೆ. ಈ ಮಧ್ಯೆಯೇ ಉತ್ತರಪ್ರದೇಶದ ಸಹರಾನ್ ಪುರದಲ್ಲೊಂದು ಅಪರೂಪದ ಘಟನೆ ಬಗ್ಗೆ ವರದಿಯಾಗಿದೆ. ಹೌದು, ಮುಸ್ಲಿಂ ಯುವಕರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಪ್ರಕರಣ ನಡೆದಿರುವುದಾಗಿ ವರದಿಯಾಗಿದೆ. ಮೊಹಮ್ಮದ್ ಸಾಜಿದ್ ಎಂಬಾತ ತನ್ನ ಹಿಂದೂ ಧರ್ಮದ ಪತ್ನಿಗೆ ಮುಸ್ಲಿಂ ಯುವಕರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗುತ್ತಿದೆ.ಮೊಹಮ್ಮದ್ ಸಾಜಿದ್ ಇದೀಗ ತನ್ನ ಹೆಸರನ್ನು ಸತ್ಬೀರ್ ರಾಣಾ ಎಂದು ಬದಲಾಯಿಸಿಕೊಂಡಿದ್ದಾನೆ. ಈ ಬೆಳವಣಿಗೆಯ ನಂತರ ಸತ್ಬೀರ್ ಮತ್ತು ಪತ್ನಿ ಅನಿತಾ ಜತೆಯಾಗಿ ಹಿಂದೂ ಧಾರ್ಮಿಕ ವಿಧಿ ವಿಧಾನ ನೆರವೇರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನನ್ನ ಪತ್ನಿ ಹಿಂದೂ ಎಂಬ ಕಾರಣಕ್ಕಾಗಿಯೇ ಕೆಲವು ವರ್ಷಗಳಿಂದ ಸ್ಥಳೀಯ ಜನರು ನಮಗೆ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣದಿಂದಾಗಿಯೇ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾಜಿದ್ ಅಲಿಯಾಸ್ ರಾಣಾ ತಿಳಿಸಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. ಸಹರಾನ್ ಪುರದ ನಕುಲ್ ಪೊಲೀಸ್ ಠಾಣಾ…