Author: admin

ತುರುವೇಕೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ನನ್ನದೇ ಪುಟ್ಟಣ್ಣನವರ ಗೆಲುವಿನಿಂದ ಶಿಕ್ಷಕರೆಲ್ಲ ಸರ್ಕಾರದ ಪರವಾಗಿದ್ದಾರೆ ಸಾಬೀತಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಅಭಿಪ್ರಾಯಪಟ್ಟರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೊಷ್ಟಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ತುಮಕೂರು ಜಿಲ್ಲೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸಹಕಾರ ಕೊಟ್ಟಂತಹ ತಾಲ್ಲೂಕು ತುರುವೇಕೆರೆ ಆದ್ದರಿಂದ ಈ ತಾಲ್ಲೂಕಿನಮೇಲೆ ನನಗೆ ವಿಶೇಷ ಪ್ರೀತಿ ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲುವು ನನ್ನದೇ ಪುಟ್ಟಣ್ಣನವರ ಗೆಲುವಿನಿಂದ ನಮಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದರು. ಕಳೆದ ಬಾರಿ 18 ಸಾವಿರ ಮತಗಳನ್ನು ಗಳಿಸಿ ಎರಡನೆಯ ಸ್ಥಾನಪಡೆದಿದ್ದೆ ನಾನು ಶಿಕ್ಷಕ ಸ್ನೇಹಿಯಾಗಿ ಕೆಲಸಮಾಡಿದ್ದೇನೆ. ಶಿಕ್ಷಕರಲ್ಲಿ ಅವರದೇಆದ ಸಮಸ್ಯೆಗಳಿವೆ. ಅದರಲ್ಲಿ ಆರೋಗ್ಯ, ಶಿಕ್ಷಣ, ಕನಿಷ್ಟ ವೇತನ 2015ರಿಂದ ಶಿಕ್ಷಕರು ಅತಂತ್ರವಾಗಿದ್ದಾರೆ .ಜ್ಯೋತಿ ಸಂಜೀವಿನಿ 1,29ಲಕ್ಷ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಯಿಂದ ಸಹಾಯವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದ್ದರಿಂದ ಬರುವಂತಹ ಸಂಸತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ನಮ್ಮ ಪಕ್ಷ ಗಳಿಸಲಿದೆ…

Read More

ಬೀದರ್: ಕೇಂದ್ರ ಸರ್ಕಾರದ ಎಲ್ಲಾ ಇಲಾಖೆ ಕೈಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಾರೆ, ರಾಹುಲ್ ಗಾಂಧಿಯವರಿಗೆ ಸಿಐಡಿ ನೋಟಿಸ್ ನೀಡಿದ್ದಾರೆ, ಕೆಂದ್ರ ಸರಕಾರ ಸಿಐಡಿ, ಸಿಬಿಐ, ಇನ್ ಕಮ್ ಟ್ಯಾಕ್ಸ್ ಇಲಾಖೆ ದುರುಪಯೋಗ ಮಾಡಿಕೊಂಡು ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರದವರು ಮಾನನಷ್ಟ ಮೊಕದ್ದಮೆ ಹಾಕುತ್ತಾರೆ, ನೋಟಿಸ್ ಕೊಡುತ್ತಾರೆ. ಎಲ್ಲವನ್ನ ಎದುರಿಸಲಿಕೆ ನಾವು ತಯಾರಿದ್ದೆವೆ, ಇಂತಹ ಧಮ್ಕಿಯಿಂದ ನಾವು ಹೆದರಲ್ಲ ಎಂದು ಅವರು ಹೇಳಿದರು. ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ಸಿಎಂ ಬಿಜೆಪಿ ಸೇರ್ಪಡೆಗೆ ಸಿದ್ದತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನೂ ಹೆದರಿಸಿ ಎಲ್ಲರಿಗೂ ಇಡಿ ಧಮ್ಕಿ ಕೊಟ್ಟು, ಐಟಿ, ಸಿಬಿಸಿ ಸೇರಿದಂತೆ ಎಲ್ಲ ಏಜೆನ್ಸಿಗಳಿಗೆ ದುರುಪಯೋಗ ಮಾಡಿಕೊಂಡು ಬಿಜೆಪಿಯವರು ಮುಖಂಡರನ್ನು ಸೆಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಯಾರಿಲ್ಲಿ ಕರಪ್ಟ್ ಇದ್ರೊ, ಅವರು ಅಲ್ಲಿ ಹೋದ ಬಳಿಕ ಒಳ್ಳೆಯವರು ಆಗುತ್ತಾರಾ? ಅವರು ಕರಪ್ಟ್ ಇದಾರಂತ ನೀವು…

Read More

ಕನ್ನಡ ಮತ್ತು ಸಂಸೃತಿ ಇಲಾಖೆ ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಯ ಬಗ್ಗೆ ವಿವಾದಿತ ಆದೇಶ ಹೊರಡಿಸಿದೆ.ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎನ್ನಲಾಗಿದೆ. ಖಾಸಗಿ ಶಾಲೆಗಳಿಗೆ ನಾಡಗೀತೆ ಹಾಡುವುದಕ್ಕೆ ವಿನಾಯಿತಿ ನೀಡಿದ ಸರ್ಕಾರ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಾದಿತ ಆದೇಶವನ್ನು ಹೊರಡಿಸಿದೆ. ಈ ಹಿಂದೆ ಎಲ್ಲಾ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ನಾಡಗೀತೆಯನ್ನು ಹಾಡಬೇಕಿತ್ತು. ಇದಲ್ಲದೆ ಸರ್ಕಾರಿ ಇಲಾಖೆ, ಕಚೇರಿ, ಪ್ರಾಧಿಕಾರಗಳು, ಸರ್ಕಾರದ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುನ್ನ ನಾಡಗೀತೆ ಹಾಡಬೇಕು ಎಂದು ಆದೇಶಿಸಲಾಗಿತ್ತು. ಹಿಂದಿನ ಆದೇಶವನ್ನು ಬದಲಾವಣೆ ಮಾಡಿದ ರಾಜ್ಯ ಸರ್ಕಾರ ಈಗ ಎಲ್ಲಾ ಶಾಲೆಗಳು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ.

Read More

ಸರಗೂರು: ಜಾನುವಾರುಗಳನ್ನು ತೊಳೆಯಲು ಹೋಗಿದ್ದ ವೇಳೆ ರೈತರೊಬ್ಬರು ಕಪಿಲ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣದ 5 ವಾರ್ಡಿನ ಸೋಮವಾರ ನಡೆದಿದೆ. ತಾಲ್ಲೂಕಿನ ಹಂಚೀಪುರ ಗ್ರಾ.ಪಂ. ವ್ಯಾಪ್ತಿಯ ಹಳಿಯೂರು ಗ್ರಾಮದ ನಿಲಯ್ಯ (55) ಮೃತ ಪಟ್ಟವರು ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಉಳುಮೆ ಮಾಡಿ ನಂತರ ಜಾನುವಾರುಗಳಿಗೆ ನೀರು ಕುಡಿಸಿ, ಜಾನುವಾರಗಳ ಮೈ ತೊಳೆದುಕೊಂಡು ಬರಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕೆಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ನೀರಿನಿಂದ ಮೃತದೇಹವನ್ನು ಮೇಲೆತ್ತಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತಹದೇವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಚಂದ್ರ ಹಾದನೂರು

Read More

ನೀರಿನ ದಾಹ ನೀಗಿಸಲು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಗಣೇಶ ನಗರ ನಿವಾಸಿ 55 ವರ್ಷದ ಅಜ್ಜಿ ಗೌರಿ ನಾಯ್ಕ್ ಎಂಬುವವರು ಬಾವಿ ತೋಡಿ ಇನ್ನೇನು ನೀರು ಸಿಕ್ಕೇಬೀಡ್ತು ಎನ್ನುವಷ್ಟರಲ್ಲಿ ಅದೇ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ ಎನ್ನುವ ಸುದ್ದಿ ಇದೀಗ ಹರಿದಾಡುತ್ತಿದೆ. ಅಜ್ಜಿ ಬರೋಬ್ಬರಿ 20 ದಿನಗಳ ಸತತ ಪ್ರಯತ್ನದಿಮದ ಬಾವಿ ತೋಡುತ್ತಿದ್ರು. ಇವರ ನಿಸ್ವಾರ್ಥ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು.ಇದರಿಂದ ಊರವರು ಭಾರಿ ಸಂತಸ ವ್ಯಕ್ತ ಪಡಿಸಿದ್ದರು. ಆದ್ರೆ, ಅಜ್ಜಿ ತೋಡಿದ್ದ 30 ಅಡಿ ಆಳದ ಬಾವಿಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಹೀಗಾಗಿ ಅಜ್ಜಿ ಗೌರಿ ನಾಯ್ಕ ಕುಟುಂಬದವರು ಹಾಗೂ ಗ್ರಾಮಸ್ಥರು ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ತನಗೆ ಬಾವಿ ತೋಡಲು ಅವಕಾಶ ನೀಡಿ. ಇಲ್ಲವಾದ್ರೆ ಬಾವಿಯಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾರೆ. 55 ವರ್ಷದ ಗೌರಿನಾಯ್ಕ್ ಅವರು ಕಳೆದ 20 ದಿನದಿಂದ ಬಾವಿ ತೋಡುತ್ತಿದ್ದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶಾಶ್ವತ ಕುಡಿಯುವ…

Read More

ಸರಗೂರು: ತಾಲ್ಲೂಕಿನ ಪಟ್ಟಣದ 9 ವಾರ್ಡಿನ ವ್ಯಾಪ್ತಿಯ ಮಹಾವೀರ ಸರ್ಕಲ್ ಬಳಿ ಇರುವ ವಿನಾಯಕ ಮೆಡಿಕಲ್ ಸ್ಟೋರ್ ನಲ್ಲಿ ಶನಿವಾರ ರಾತ್ರಿ ನಡೆದ ಕಳ್ಳತನ ಪ್ರಕರಣವನ್ನು ಸರಗೂರು ಠಾಣೆಯ ಪೋಲೀಸರು 24 ಗಂಟೆಯಲ್ಲಿ ಭೇದಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್.ಎಸ್ ಮಹೇಶ್ ಬಂಧಿತ ಆರೋಪಿಯಾಗಿದ್ದು, ಮೆಡಿಕಲ್ ಸ್ಟೋರ್ ಗೆ ನುಗ್ಗಿ ಗಲ್ಲದಲ್ಲಿದ್ದ ಎರಡು ಸಾವಿರ ರೂ ಹಾಗೂ 8 ಸಾವಿರ ರೂ ಚಿಲ್ಲರೆ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದನು. ಈ ಸಂಬಂಧ ಪಟ್ಟ ಮಾಲಿಕ ಯಾದವ್ ಅವರು ಭಾನುವಾರ ಸಂಜೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀಕಾಂತ್ ಇವರ ನಿರ್ದೇಶನದಂತೆ ಉಪನಿರೀಕ್ಷಕರು ಮಧು ಅವರು ತಂಡವನ್ನು ರಚಿಸಿ ಸೋಮವಾರ ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳು ಜಗದೀಶ್, ಕೃಷ್ಣಯ್ಯ, ಹಾಗೂ ಇಮ್ರಾನ್, ಚಂದ್ರ ಇದ್ದರು . ವರದಿ: ಹಾದನೂರು ಚಂದ್ರ

Read More

ವಿಚಿತ್ರ ವರ್ತನೆಗಳಿಂದ, ಭಾಷೆ, ಲುಕ್‌ ನಿಂದಲೇ ಸುದ್ದಿಯಾಗಿದ್ದ ಹುಚ್ಚ ವೆಂಕಟ್. ಸಿನಿಮಾ ರಂಗದಲ್ಲಿ ಕೆಲ ವರ್ಷಗಳು ಸುದ್ದಿಯಾಗಿ ಮತ್ತೆ ವಿವಾದಗಳಿಂದಾಗಿ ಮರೆಯಾದರು. ಈಗ ಮತ್ತೆ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಹುಚ್ಚ ವೆಂಕಟ್ ಹೆಸರು ಕೇಳಿದ ತಕ್ಷಣ ಕಣ್ಣ ಮುಂದೆ ಬರುವುದು ಅವರ ಕಣ್ಣುಗಳು ಮತ್ತು ಕೆದರಿದ ಕೂದಲಿನ ಮುಖ. ಮತ್ತೆ ಏನು ಅವಾಂತರ ಮಾಡಿಕೊಂಡರೋ, ಯಾವ ಬೀದಿಯಲ್ಲಿ ಮತ್ತೆ ಜಗಳ ಮಾಡಿಕೊಂಡರೇ ಎಂದು ಒಂದು ಕ್ಷಣ ಅನಿಸುವುದು ನಿಜ. ಸಿನಿಮಾಗಳಲ್ಲಿ ಹೆಣ್ಣು ಮಕ್ಕಳನ್ನು ಹೀಗೆಯೇ ತೋರಿಸಬೇಕು. ಹೆಣ್ಣು ಮಕ್ಕಳು ಬಟ್ಟೆ ಬಿಚ್ಚಿ ಕುಣಿಯೋ ಸಿನಿಮಾಗಳನ್ನ ಬ್ಯಾನ್ ಮಾಡಬೇಕು ಎಂದು ಸಾಕಷ್ಟು ಹೋರಾಟ ಮಾಡಿದ್ದರು ವೆಂಕಟರಾಮ್ ಲಕ್ಷ್ಮಣ್ ಅಂದರೆ ಹುಚ್ಚ ವೆಂಕಟ್. ಹುಚ್ಚ ವೆಂಕಟ್ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟು ತುಂಬಾ ವರ್ಷಗಳಾಗಿವೆ. ಅವರ ನಟನೆಯ ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದಿವೆ. ಈಗ ಮತ್ತೆ ಕಿರು ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ನಟ, ನಿರ್ಮಾಪಕ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್…

Read More

ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್ ಶುರುವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಲಿಂಕ್ ಹರಿದಾಡುತ್ತಿದೆ. ದೇಗುಲಕ್ಕೆ ದೇಣಿಗೆ ಹರಕೆ ಸಲ್ಲಿಸುವ ಭಕ್ತರು ಇದರಲ್ಲಿ ದುಡ್ಡನ್ನು ಕಳಿಸಿದ್ದಾರಂತೆ. ಭಕ್ತರೊಬ್ಬರು ಹಣ ಕಳಿಸಿರುವ ಬಗ್ಗೆ ದೇಗುಲಕ್ಕೆ ಇ-ಮೇಲ್ ಮಾಡಿದಾಗ ಈ ಅಕೌಂಟ್‍ ಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಅಂತ ಸ್ಪಷ್ಟನೆ ಬಂದಿದೆ. ಹೀಗಾಗಿ ಭಕ್ತರಾಗಿರುವ ರಾಘವೇಂದ್ರ ಹಾಗೂ ಧನಂಜಯ್ ಈ ಟ್ರಸ್ಟ್ ವಿರುದ್ಧ ಈಗ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೇರಳ  ಮೂಲದಲ್ಲಿ ಈ ಟ್ರಸ್ಟ್ ನೋಂದಣಿಯಾಗಿರೋದು ಗೊತ್ತಾಗಿದೆ. ದೇಗುಲದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಇದ್ದಿದ್ದು ಅಚ್ಚರಿ ಅನ್ನೋದು ಭಕ್ತರ ಅಸಮಾಧಾನ. ಹೀಗಾಗಿ ಇದರ ಬಗ್ಗೆ ತನಿಖೆ ಮಾಡುವಂತೆಯೂ ಆಗ್ರಹಿಸಲಾಗಿದೆ. 2022ರಿಂದ ಈ ಟ್ರಸ್ಟ್ ಹೆಸರಿನಲ್ಲಿ ಭಕ್ತರಿಗೆ ಟೋಪಿ ಹಾಕುತ್ತಿರೋದು ಗಮನಕ್ಕೆ ಬಂದಿದೆ. ಕೋಟಿ ಕೋಟಿ ದುಡ್ಡನ್ನು ಈ ಟ್ರಸ್ಟ್ ಲಪಟಾಯಿಸಿರುವ ಬಗ್ಗೆಯೂ…

Read More

ಪೊಲೀಸ್‌ ವಾಹನವನ್ನು ಬಳಸಿಕೊಂಡು ಇನ್ಸ್ಟಾಗ್ರಾಮ್‌ ರೀಲ್ಸ್‌ ಮಾಡಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದಿದೆ. ಇಂದಿರಾಪುರಂ ಪ್ರದೇಶದಲ್ಲಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಎಂಬಾತ ಖಾಲಿಯಿದ್ದ ಪೊಲೀಸ್‌ ವಾಹನವನ್ನು ಬಳಸಿಕೊಂಡು ರೀಲ್ಸ್‌ ಮಾಡಿದ್ದಾನೆ. ಪೊಲೀಸ್‌ ವಾಹನದ ಸೀಟಿನಿಂದ ಕೆಳಗಿಳಿದು, ಕೋಲ್ಡ್‌ ಡ್ರಿಂಕ್‌ ಕುಡಿಯುತ್ತಾ ಬರುವ ದೃಶ್ಯಕ್ಕೆ ಮ್ಯೂಸಿಕ್‌ ವೊಂದನ್ನು ಹಾಕಿ ರೀಲ್ಸ್‌ ಮಾಡಿ ಫೆ.15 ರಂದು ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ವಿಪರೀತ ವೈರಲ್ ಆಗಿದೆ. ಇಂದಿರಾಪುರಂನ ಕಣವಾಣಿ ಸೇತುವೆಯ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಖಾಲಿ ಪೊಲೀಸ್ ವಾಹನವನ್ನು ಗಮನಿಸಿದ ಯುವಕ ಅದನ್ನು ಬಳಸಿ ರೀಲ್ ಮಾಡಿದ್ದಾರೆ. ವಿಡಿಯೋ ವೈರಲ್‌ ಆಗಿ ನಮ್ಮ ಗಮನಕ್ಕೆ ಬಂದ ಬಳಿಕ ಯುವಕನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More

ಡಿಸಿಎಂ ಡಿ.ಕೆ.ಶಿವಕುಮಾರ ಮುದ್ದಿನ ಮಗಳು ಐಶ್ವರ್ಯ ಶಿವಕುಮಾರ್ ಸೌಂದರ್ಯದಲ್ಲಿ ಯಾವುದೇ ಹಿರೋಯಿನ್ ಗೆ ಕಡಿಮೆ ಇಲ್ಲ.ಇವರು ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಸೊಸೆ, ಮೋಟಿವೇಶನಲ್ ಸ್ಪೀಕರ್ ಕೂಡ ಹೌದು. ಸೋಶಿಯಲ್‌ ಮೀಡಿಯಾದಲ್ಲಿ ಸಕತ್‌ ಆ್ಯಕ್ಟೀವ್ ಆಗಿರುವ ಇವರು ಅನೇಕ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಐಶ್ವರ್ಯ ‍ಒಬ್ಬ ಎಜುಕೇಶನ್ ಸ್ಪೀಕರ್ ಆಗಿ ಸದಾ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಇವರು ತಮ್ಮ ಕೆಲಸದ ಬಗ್ಗೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಶೇರ್ ಮಾಡುತ್ತಾ ಇರುತ್ತಾರೆ. ಇವರು ಶೇರ್‌ ಮಾಡಿಕೊಂಡ ಫೋಟೋದಲ್ಲಿ ಅಪ್ಪಟ ಸುಂದರಿಯಾಗಿರುವ ಐಶ್ಚರ್ಯ ಯಾವುದೇ ಹಿರೋಯಿನ್ ಗೂ ಕಮ್ಮಿ ಇಲ್ಲ ಎನ್ನುವಂತೆ ಕಾಣಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಪುತ್ರ ಅಮರ್ಥ್ಯ ಅವರನ್ನು ಮದುವೆಯಾಗಿರುವ ಐಶ್ವರ್ಯ ಇತ್ತೀಚೆಗೆ ತಮ್ಮ ಸಹೋದರ ಸಂಬಂಧಿ ಮದುವೆಯ ಕ್ಷಣದಲ್ಲಿ ತೆಗೆದಂತಹ ಫೋಟೋ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ತಿಳಿ ಗುಲಾಬಿ ಬಣ್ಣದ ಫ್ಲೋರಲ್ ಡಿಸೈನ್ ಸೀರೆ ಧರಿಸಿರುವ…

Read More