Subscribe to Updates
Get the latest creative news from FooBar about art, design and business.
- ಪಕ್ಷದ ಜವಾಬ್ದಾರಿ ನಿರ್ವಹಿಸದಿದ್ದರೆ ಶಿಸ್ತು ಕ್ರಮ: ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಶಾಸಕ ಕೆ. ಷಡಕ್ಷರಿ ಎಚ್ಚರಿಕೆ
- ಗುಬ್ಬಿ ಶಾಸಕರು, ಪುತ್ರನಿಂದ ಕುತಂತ್ರ ರಾಜಕಾರಣ: ಷಡ್ಯಂತ್ರಗಳಿಗೆ ಜಗ್ಗುವುದಿಲ್ಲ: ಜೆಡಿಎಸ್ ಮುಖಂಡ ನಾಗರಾಜು ಕಿಡಿ
- ತುಮಕೂರು: ಕುಲ್ಲಕ ವಿಷಯಕ್ಕೆ ಜಗಳ: ಕೊಲೆ
- ಡಿಪ್ಲೋಮಾ ಸಿಇಟಿ, ಪಿಜಿಸಿಇಟಿ ಪರೀಕ್ಷೆ: ನಿಷೇಧಾಜ್ಞೆ ಜಾರಿ
- ಒಕ್ಕರಹಳ್ಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ: ಮೂರು ನಾಯಿಗಳನ್ನು ಬಲಿ ಪಡೆದ ಚಿರತೆ
- ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ
- ತುಮಕೂರು: ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ
- ಕುಡಿಯುವ ನೀರಿಲ್ಲದೆ ಹಸು ಸಾವು: ಹನುಮನಾಯಕನ ಪಾಳ್ಯದಲ್ಲಿ ನೀರಿಗೆ ಹಾಹಾಕಾರ
Author: admin
ಕುಡಿದ ಮತ್ತಿನಲ್ಲಿ ಬಾರ್ ನಲ್ಲಿದ್ದ ಲಾಬ್ರಡಾರ್ ನಾಯಿ ಕದ್ದೊಯ್ದನೆಂಬ ಕಾರಣಕ್ಕೆ ವ್ಯಕ್ತಿಯನ್ನು ಹಿಡಿದು ತಂದು ನಾಯಿ ಗೂಡಿನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್ ನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಬಾರ್ ನಲ್ಲಿದ್ದ ಲಾಬ್ರಡಾರ್ ನಾಯಿ ಕದ್ದೊಯ್ದನೆಂಬ ಕಾರಣಕ್ಕೆ ವ್ಯಕ್ತಿಯನ್ನು ಹಿಡಿದು ತಂದು ನಾಯಿ ಗೂಡಿನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್‌ನಲ್ಲಿ ನಡೆದಿದೆ. ಸೋಮು ಎಂಬಾತನನ್ನ ನಾಯಿ ಗೂಡಿನಲ್ಲಿ ಬಂಧಿಸಿಟ್ಟ ಬಾರ್ ಸಿಬ್ಬಂದಿ ಎಂದು ವರದಿ ತಿಳಿಸಿದೆ. ಕುಡಿಯಲು ಬಾರ್ ಗೆ ಬಂದಿದ್ದ ವೇಳೆ ಬಾರ್ ಮುಂದೆ ಲ್ಯಾಬ್ರಡಾರ್ ನಾಯಿಯನ್ನು ನೋಡಿದ್ದ. ಬಳಿಕ ನಾಯಿ ಕದ್ದುಕೊಂಡು ಹೋಗಿದ್ದ. ಈ ವಿಚಾರ ಬಾರ್ ಸಿಬ್ಬಂದಿಗೆ ಗೊತ್ತಾಗಿ. ಕದ್ದವನನ್ನು ಹಿಡಿದು ತಂದಿದ್ದಾರೆ. ಬಳಿಕ ಬಾರ್ ನಲ್ಲಿ ನಾಯಿ ಕಟ್ಟುತ್ತಿದ್ದ ಸ್ಥಳದಲ್ಲೇ ವ್ಯಕ್ತಿಯನ್ನು ಕೆಲ ಕಾಲ ಕಟ್ಟಿಹಾಕಿದ್ದಾರೆ. ನಾಯಿಯನ್ನು ಕಟ್ಟುತ್ತಿದ್ದ ಸ್ಥಳದಲ್ಲೇ ಗೂಡಿನಲ್ಲಿ ಹಾಕಿ ಅಲ್ಲೇ ನಾಯಿಗೆ ಆಹಾರ ನೀಡುವಂತೆ…
ಕಾಟೇರ ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಪ್ರಸನ್ನ ಥಿಯೇಟರ್‌ನಲ್ಲಿ ಸಂಭ್ರಮಾಚರಣೆ ನಡೆದಿದೆ. ಈ ಒಂದು ಇವೆಂಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಉಮಾಪತಿ ಅವರ ಕುರಿತು ಮಾತನಾಡಿ ತಗಡು ಎಂಬ ಪದವನ್ನು ಬಳಿಸಿದರು. ಇದು ಈಗ ಎಲ್ಲೆಡೆ ವೈರಲ್ ಆಗಿದೆ. ದರ್ಶನ್ ಹೇಳಿಕೆಗೆ ಸೈಲೆಂಟ್ ಆಗಿಯೇ ತಿರುಗೇಟು ಕೊಟ್ಟ ಉಮಾಪತಿ ನನಗೆ ತಾಕತ್ ಇರೋದಕ್ಕೆ ನಾನು ಇಲ್ಲಿ ಬೆಳೆದಿದ್ದೀನಿ. ದೇಹ ತೂಕ ಇದ್ದರೆ ಸಾಲದು ಮಾತನಾಡುವ ಮಾತು ತೂಕ ಇರಬೇಕು ಎಂದು ಸೈಲೆಂಟಾಗಿಯೇ ತಿರುಗೇಟು ಕೊಟ್ಟಿದ್ದಾರೆ. ನಾನು ತಗಡೆ ಒಂದು ದಿನ ಚಿನ್ನದ ತಗಡೆ ಆಗುವೆ! ನಾನು ಸಿನಿಮಾ ಮಾಡುವುದಕ್ಕಿಂತ ನನ್ನ ಆಲೋಚನೆ ಬೇರೆ ಇದೆ ಎಂದರು. ದೊಡ್ಡವರು ಮಾತನಾಡಿದ್ದಾರೆ ಮಾತನಾಡಲಿ, ಏನು ಪ್ರಾಬ್ಲಂ ಇಲ್ಲಾ, ಆ ದೇವರು ಗುಮ್ಮಬೇಕು, ಎಲ್ಲಾರು ಗುಮ್ಮಿಸಿಕೊಳ್ಳಬೇಕು. ದೇವರು ಅವರನ್ನು ಚೆನ್ನಾಗಿಟ್ಟಿರಲಿ ಎಂದು ಕೌಂಟರ್ ನೀಡಿದ್ದಾರೆ.
ದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ಮಂಗಳವಾರ ರಾತ್ರಿ(ಫೆ.20) ದೆಹಲಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು 1999-2005ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಾರಿಮನ್ ಜನವರಿ 10, 1929 ರಂದು ಮ್ಯಾನ್ಮಾರ್‌ನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು . ಅವರು ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು. ಪುತ್ರ ರೋಹಿಂಟನ್ ನಾರಿಮನ್ ಕೂಡ ಹಿರಿಯ ವಕೀಲರಾಗಿದ್ದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿದ್ದಾರೆ. ನಾರಿಮನ್ ನವೆಂಬರ್ 1950ರಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಎಎಎಸ್ಜಿ ಹುದ್ದೆಗೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ. 95 ವರ್ಷ ವಯಸ್ಸಾಗಿದ್ದು, 1971 ರಿಂದ ಸುಪ್ರೀಂ ಕೋರ್ಟ್ ವಕೀಲರಾಗಿದ್ದಾರೆ. ಅವರು 1972-75ರ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ದೇಶವು ಅವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮ ವಿಭೂಷಣ ನೀಡಿ ಗೌರವಿಸಿತ್ತು.
ಯುವಕನೊಬ್ಬ ತನ್ನ ಮದುವೆಗೆ ಮುಂಚೆ ತನ್ನ ಹಲ್ಲನ್ನು ಸರಿಮಾಡಲು ಹೊಗಿ ಜೀವ ಕಳೆದುಕೊಂಡ ಘಟನೆ ಫೆಬ್ರವರಿ 16 ರಂದು ಹೈದರಾಬಾದ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್ ನಲ್ಲಿ ನಡೆದಿದೆ.ಮೃತನನ್ನು 28 ವರ್ಷದ ಲಕ್ಷ್ಮಿ ನಾರಾಯಣ ವಿಂಜಮ್ ಎಂದು ಗುರುತಿಸಲಾಗಿದೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಶನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ‘ಸ್ಮೈಲ್ ಡಿಸೈನಿಂಗ್’ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಯುವಕ ಸಾವನ್ನಪ್ಪಿದ್ದಾನೆ. ಲಕ್ಷ್ಮಿ ನಾರಾಯಣ ಅವರ ಸಾವಿಗೆ ಅತಿಯಾದ ಅರಿವಳಿಕೆ ಕಾರಣ ಎಂದು ಅವರ ತಂದೆ ರಾಮುಲು ಆರೋಪಿಸಿದ್ದಾರೆ. ಚಿಕಿತ್ಸೆಯ ವೇಳೆ ಮಗ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಕೂಡಲೇ ಕ್ಲಿನಿಕ್‌ಗೆ ಬರುವಂತೆ ಹೇಳಿದರು ಎಂದು ರಾಮುಲು ವಿವರಿಸಿದರು. ಕೂಡಲೇ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ರಾಮುಲು ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ಬಗ್ಗೆ ಮಗ ತನಗೆ ಏನನ್ನೂ ಹೇಳಿಲ್ಲ ಎಂದು ರಾಮುಲು ಹೇಳಿದ್ದಾರೆ. ಮಗನಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಮಗನ ಸಾವಿಗೆ ವೈದ್ಯರೇ ಕಾರಣ ಎಂದು…
ಹುಬ್ಬಳ್ಳಿ: ದೇಶದಲ್ಲಿ ಬಡತನ ನಿರ್ಮೂಲನೆ ಮಾಡುತ್ತೇವೆ, ನಾವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ ಎಂದು ಸ್ವಲ್ಪ ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಭಾರತದಲ್ಲಿ ಎಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆ? ಎಂದು ಇತ್ತೀಚೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ ದುರಾಡಳಿತದಿಂದ ಭಾರತ ಒಂದು ಚೂರು ಪ್ರಗತಿ ಕಂಡಿಲ್ಲ. ಕಾಂಗ್ರೆಸ್ ಅಧಿಕಾರ ಬಿಟ್ಟು ಕೊಟ್ಟಾಗ ದೇಶದ ಆರ್ಥಿಕ ಸ್ಥಿತಿ 10ನೇ ಸ್ಥಾನದಲ್ಲಿತ್ತು. ಈಗ 4ನೇ ಸ್ಥಾನದಲ್ಲಿದೆ. ಇನ್ನೂ ಎರಡು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಬರುತ್ತದೆ ಎಂದು ಅವರು ಹೇಳಿದರು. ಇನ್ನು ಕಾಂಗ್ರೆಸ್ ಗೆ ಅಯೋಧ್ಯೆಯಲ್ಲಿ ರಾಮಮಂದಿರವನ್ನೂ ಸಹ ನಿರ್ಮಾಣ ಮಾಡೋದಕ್ಕೆ ಆಗಿಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿತ್ತು, ಈಗ ನಿರ್ಮಾಣ ಮಾಡಿದ್ದೇವೆ ಎಂದು ಅವರು ಹೇಳಿದರು.
ಬೆಂಗಳೂರು: 8.65 ಲಕ್ಷ ಹಾಲು ಉತ್ಪಾದಕರಿಗೆ 757 ಕೋಟಿ ರೂ. ಹಾಲಿನ ಪ್ರೋತ್ಸಾಹಧನವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ಕರ್ನಾಟಕ ಸರ್ಕಾರವು ಈ ವಿಚಾರದಲ್ಲಿ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಕಳೆದ ಆರು ತಿಂಗಳಿನಿಂದಲೂ ಯಾವುದೇ ಪ್ರೋತ್ಸಾಹಧನವನ್ನು ನೀಡಿಲ್ಲ. ಸರ್ಕಾರ ರಾಜ್ಯಪಾಲರಿಂದ ಸುಳ್ಳುಗಳನ್ನು ಹೇಳಿಸಿದೆ ಎಂದು ದೂರಿದರು. ಹಿಂದಿನ ಬಿಜೆಪಿ ಆಡಳಿತದಲ್ಲಿ ಹೊಸ ಬಸ್ ಗಳನ್ನು ಖರೀದಿಸಿಲ್ಲ ಎಂದು ರಾಜ್ಯಪಾಲರು ಮತ್ತೆ ಸುಳ್ಳು ಹೇಳುವಂತೆ ಮಾಡಿದ್ದಾರೆ. ನಾಲ್ಕು ನಿಗಮಗಳಿಗೆ ಹೊಸ ಬಸ್ ಗಳನ್ನು ಖರೀದಿಸಲಾಗಿದೆ ಎಂಬುದು ಸತ್ಯ ಎಂದು ಅವರು ಹೇಳಿದರು. 2022-23ರಲ್ಲಿ ನಾಲ್ಕು ನಿಗಮಗಳಿಗೆ 3,526 ಹೊಸ ಬಸ್ ಗಳನ್ನು ಸೇರಿಸಲು ಕ್ರಮ ಕೈಗೊಳ್ಳಲಾಗಿದೆ. ನಾವು ಬಿಎಂಟಿಸಿಗೆ 1,311 ಬಸ್ ಗಳು, ಕೆಎಸ್ ಆರ್ ಟಿಸಿಗೆ 50 ಪವರ್ ಪ್ಲಸ್ ಬಸ್‌ಗಳು ಮತ್ತು 20 ವೋಲ್ವೋ ಬಸ್‌ಗಳನ್ನು ಖರೀದಿಸಿದ್ದೇವೆ. ಅವೆಲ್ಲವೂ ಈಗ ಕಾರ್ಯನಿರ್ವಹಿಸುತ್ತಿವೆ’ ಎಂದು ಹೇಳಿದರು.
ಸಿನಿಮಾ ಜೊತೆಗೆ ತನ್ನ ಲುಕ್ ಗಳಿಂದ ಭಾರಿ ಜನಪ್ರಿಯತೆಗಳಿಸಿರುವ ನಟಿ ಇದೀಗ ಅಪ್ರಾಪ್ತ ಬಾಲಕನ ಸೆಕ್ಸ್‌ಗೆ ಬಳಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಅರೆಸ್ಟ್ ಆಗಿದ್ದ ನಟಿ ಇದೀಗ ಕೋರ್ಟ್‌ಗೆ ಹಾಜರಾಗಿದ್ದಾರೆ. ಹಾರರ್ ಚಿತ್ರಗಳಲ್ಲಿ ಸಿನಿ ರಸಿಕರನ್ನು ಬೆಚ್ಚಿ ಬೀಳಿಸಿದ ಆಸ್ಟ್ರೇಲಿಯಾ ನಟಿ ಮೆಗನ್ ಸ್ಕೈ ಬ್ಲಾಂಕೆಡಾ ಸಾಮಾಜಿಕ ಜಾಲತಾಣದಲ್ಲಿ ತನ್ನ ಬಿಕಿನಿ ಮೂಲಕವೇ ಹೆಚ್ಚು ಸದ್ದು ಮಾಡಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಹಾಲಿವುಡ್ ನಟಿ ಮೆಗನ್ ಸ್ಕೈ ಬಂಧನ ಭಾರಿ ಸಂಚಲನ ಸೃಷ್ಟಿಸಿತ್ತು. ಅಪ್ರಾಪ್ತ ಬಾಲಕರನ್ನು ಲೈಂಗಿಕ ಕ್ರಿಯೆಗೆ ಬಳಿಸಿಕೊಂಡ ಆರೋಪದಡಿ ಮೆಘನ್ ಸ್ಕೈ ಅರೆಸ್ಟ್ ಆಗಿದ್ದರು. 34 ವರ್ಷದ ನಟಿ ಸೆಕ್ಸ್ ಗಾಗಿ 16 ವರ್ಷದ ಬಾಲಕನ ಬಳಸಿಕೊಂಡಿದ್ದಾರೆ ಅನ್ನೋ ಗಂಭೀರ ಆರೋಪ ಈಕೆಯ ಮೇಲಿದೆ. ಕೆಲ ಮಾಹಿತಿಗಳನ್ನು ಸಂಗ್ರಹಿಸಿದ ಪೊಲೀಸರು ನಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಅರೆಸ್ಟ್ ಬಳಿಕ ನಟಿ ಫೋನ್ ವಶಕ್ಕೆ ಪಡೆದ ಪೊಲೀಸರು ತಪಾಸಣೆ ನಡೆಸಿದ್ದರು. ಈ ವೇಳೆ ಅಪ್ರಾಪ್ತ ಬಾಲಕರ ಜೊತೆಗಿನ…
ಬರೋಬ್ಬರಿ 4.1 ಕೆಜಿ ಚಿನ್ನದಿಂದ ವಿಶ್ವದ ಅತ್ಯಂತ ದುಬಾರಿ ಶರ್ಟ್ ವಿನ್ಯಾಸಗೊಳಿಸಲಾದ ಹೊಂದಿರುವ ವ್ಯಕ್ತಿಯೊಬ್ಬ ಇದೀಗ ಭಾರಿ ಸುದ್ದಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್ ಅವರು ವೈರಲ್ ಆಗಿರುವ ವ್ಯಕ್ತಿ. ಈ ದುಬಾರಿ ಶರ್ಟ್ 2016 ರಲ್ಲಿಯೇ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದರು. 4.10 ಕೆಜಿ ತೂಕದ ಗೋಲ್ಡನ್ ಶರ್ಟ್ ಈಗ 1,78,00,000 ಕೋಟಿ ರೂ. ಮೌಲ್ಯದ್ದಾಗಿದೆ ಮತ್ತು ಪರಾಖ್ ಅವರ ಶ್ರೀಮಂತ ಸಂಗ್ರಹದ ಒಂದು ಭಾಗವಾಗಿದೆ. ಇದರಲ್ಲಿ ಚಿನ್ನದ ಗಡಿಯಾರ, ಹಲವಾರು ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳು ಸೇರಿವೆ. 2014 ರಲ್ಲಿ ಪಂಕಜ್ ಪರಾಖ್ ಅವರ 45 ನೇ ಹುಟ್ಟುಹಬ್ಬಕ್ಕೆ ಈ ದುಬಾರಿ ಶರ್ಟ್ ಅನ್ನು ನಾಸಿಕ್‌ನ ಬಫ್ನಾ ಜ್ಯುವೆಲ್ಲರ್ಸ್‌ನಿಂದ ವಿನ್ಯಾಸಗೊಳಿಸಿದ್ದರು. ಇದಕ್ಕೆ ಸುಮಾರು 20 ಆಯ್ದ ಕುಶಲಕರ್ಮಿಗಳ ತಂಡವು ಕೆಲಸ ಮಾಡಿತ್ತು. ಎರಡು ತಿಂಗಳುಗಳಲ್ಲಿ 3,200 ಗಂಟೆಗಳ ಕಾಲ ಶ್ರಮ ವಹಿಸಿ…
ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ಧರಣಿ ಮುಂದುವರಿಸಲಿದ್ದಾರೆ. ರೈತ ಮುಖಂಡರು ಹಾಗೂ ಕೇಂದ್ರ ಸಚಿವರ ನಡುವೆ ಇದು ನಾಲ್ಕನೇ ಸುತ್ತಿನ ಮಾತುಕತೆಯಾಗಿದೆ. ಪ್ರಸ್ತಾವನೆಗಳನ್ನು ಸರ್ಕಾರ ತಿರಸ್ಕರಿಸಿದೆ ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಮಾಹಿತಿ ನೀಡಿದರು. 23 ಬೆಳೆಗಳಿಗೆ ಎಂಎಸ್ ಪಿ ಖಾತ್ರಿಪಡಿಸುವಂತೆ ಕೆಎಂಎಂ ಮುಖಂಡ ಸರ್ವಾನ್ ಸಿಂಗ್ ಪಂದಾರ್ ಒತ್ತಾಯಿಸಿದರು. 21ರವರೆಗೆ ರೈತರು ಶಂಭು ಗಡಿಯಲ್ಲಿಯೇ ಇರುತ್ತಾರೆ. ಸರ್ಕಾರದ ಉತ್ತರಕ್ಕಾಗಿ ಕಾಯುತ್ತೇವೆ. ರೈತರು ಕೂಡ ನಿರ್ಧಾರ ಕೈಗೊಳ್ಳದಿದ್ದರೆ ದೆಹಲಿಗೆ ಹೋಗುವುದಾಗಿ ಹೇಳಿದರು. ರೈತರ ಆಂದೋಲನದ ನಂತರ ಹರಿಯಾಣ ಸರ್ಕಾರ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸಿದೆ. ಫೆಬ್ರವರಿ 19 ರವರೆಗೆ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಅವಲೋಕಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹರಿಯಾಣ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿವಿಎಸ್…
ತಾಂತ್ರಿಕ ದೋಷದಿಂದಾಗಿ ಬೆಂಗಳೂರಿನ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೈಯಪ್ಪನಹಳ್ಳಿಯಿಂದ ಗರುಡಾಚಾರ್ ಪಾಳ್ಯ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಮೆಟ್ರೋ ಪ್ರಯಾಣಿಕರು ಬೆಳ್ಳಂ ಬೆಳಗ್ಗೆ ಪರದಾಡುವ ಸ್ಥಿತಿ ಉಂಟಾಗಿತ್ತು. ಮೆಟ್ರೋ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆಂದ ಬಿಎಂಆರ್ ಸಿಎಲ್ ತಿಳಿಸಿದೆ. ನಮ್ಮ ಮೆಟ್ರೋ ತಾಂತ್ರಿಕ ತೊಂದರೆ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್, ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಇದರಿಂದ ರೈಲು ವೇಳಾಪಟ್ಟಿಯಲ್ಲಿ ಅಡಚಣೆಯಾಗುತ್ತದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದ ಟ್ವೀಟ್ ಮಾಡಿದೆ. ನೇರಳೆ ಮಾರ್ಗದಲ್ಲಿ ಸುಮಾರು 45 ನಿಮಿಷದಿಂದ ಯಾವುದೇ ಮೆಟ್ರೋ ರೈಲುಗಳು ಸಂಚರಿಸುತ್ತಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿಯೇ ಪ್ರಯಾಣಿಕರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.