Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ಮಧ್ಯಾಹ್ನ 1 ಲೋಟ ಮಜ್ಜಿಗೆ ಕುಡಿಯಿರಿ, ಹಲವು ಪ್ರಯೋಜನಗಳನ್ನ ಪಡೆಯಿರಿ: ಮಜ್ಜಿಗೆ ಆರೋಗ್ಯಕ್ಕೆ ಉತ್ತಮವಾಗಿರುವ ಪಾನೀಯ. ಮುಖ್ಯವಾಗಿ ಮಧ್ಯಾಹ್ನ ಊಟದ ನಂತರ ಒಂದು ಲೋಟ ಮಜ್ಜಿಗೆ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮಧ್ಯಾಹ್ನ ಮಜ್ಜಿಗೆ ಕುಡಿಯುವುದರಿಂದ ನಿಮ್ಮ ಪೌಷ್ಠಿಕ ಶಕ್ತಿ ಹೆಚ್ಚುತ್ತದೆ. ನೀವು ಫ್ರೆಶ್ ಮತ್ತು ಎನರ್ಜಿಟಿಕ್ ಆಗಿರುತ್ತೀರಿ. ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡುತ್ತದೆ. ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಇದು ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಕರಿಬೇವಿನ ಎಲೆಗಳಿಂದ ದೇಹಕ್ಕಾಗುವ ಪ್ರಯೋಜನ ಇಂತಿವೆ: ಕರಿಬೇವಿನ ಎಲೆಗಳು ಎ, ಬಿ, ಸಿ & ಬಿ 2 ವಿಟಮಿನ್ ಗಳನ್ನು ಹೊಂದಿದ್ದು, ಇವು ತೂಕ ಇಳಿಕೆಗೆ ಸಹಾಯಕಾರಿಯಾಗಿದೆ. ಕೂದಲು ಬೆಳೆವಣಿಗೆಗೆ ಪೂರಕವಾಗಿರುವ ಕರಿಬೇವಿನಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕರಿಬೇವಿನ ಎಲೆಗಳು ಅತ್ಯುತ್ತಮ ನೈಸರ್ಗಿಕ ಮೂಲಿಕೆಯಾಗಿದ್ದು, ಪಿತ್ತಜನಕಾಂಗವನ್ನು ಸಹ ರಕ್ಷಿಸಲಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಇದು ಸೋಂಕುಗಳನ್ನು ದೂರವಿಡುತ್ತದೆ.…
ಬೆಂಗಳೂರು: ಕರ್ನಾಟಕದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಜಲಕ್ಷಾಮ ಉಂಟಾಗಿದೆ. ನೀರಿನ ಸಮಸ್ಯೆಯಿಂದಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಆದರೆ, ಲೋಕಸಭೆ ಚುನಾವಣೆಗೆ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಸರ್ಕಾರ ಅಲ್ಲಲ್ಲಿ ಸಮಾವೇಶಗಳನ್ನು ನಡೆಸುತ್ತಿದೆ. ನಡುವೆ ಸಮಾವೇಶಗಳನ್ನು ಆಯೋಜಿಸುತ್ತಿರುವ ರಾಜ್ಯ ಸರ್ಕಾರವನ್ನು ವಿಪಕ್ಷ ನಾಯಕ ಆರ್.ಅಶೋಕ ಅವರು ಟೀಕಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅಶೋಕ, ‘ರಾಜ್ಯದಲ್ಲಿ ಜಲಕ್ಷಾಮದ ಸೂತಕ, ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಉತ್ಸವ’ ಎಂದು ಜರಿದಿದ್ದಾರೆ. ಅಲ್ಲದೆ, ‘ ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆ ಎಂಬಂತೆ ಇಲ್ಲಿ ಜನ ಜಲಕ್ಷಾಮದಿಂದ ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದರೆ, ಅತ್ತ ಸಿಎಂ ಸಿದ್ದರಾಮಯ್ಯ ಅವರು ಗ್ಯಾರೆಂಟಿ ಸಮಾವೇಶದ ಹೆಸರಿನಲ್ಲಿ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ’ ಎಂದರು. ‘ರಾಜ್ಯದಲ್ಲಿ 900 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಲಕ್ಷಾಂತರ ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಊರು ಬಿಟ್ಟು ಗುಳೇ ಹೋಗಿದ್ದಾರೆ, 40ಕ್ಕೂ ಹೆಚ್ಚು ನೇಕಾರರು ದಿಕ್ಕು ಕಾಣದೆ…
ಯಾದಗಿರಿ: ಯಾದಗಿರಿ ತಾಲೂಕಿನ ಮಲ್ಹಾರ್ ತಾಂಡದಲ್ಲಿ ಪತ್ನಿಯನ್ನು, ಪತಿಯು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಸೋನಾಬಾಯಿ(40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಗ ಅರ್ಜುನ(17) ಗಂಭೀರ ಗಾಯಗೊಂಡಿದ್ದಾನೆ. ರಾತ್ರಿ ತಾಯಿ ಸೋನುಬಾಯಿ ಹಾಗೂ ಮಗ ಅರ್ಜುನ ಮಲಗಿರುವಾಗ ಕುಡಿದ ನಶೆಯಲ್ಲಿ ಬಂದ ಆರೋಪಿ ಮಲ್ಲಪ್ಪ(45) ಕೊಡಲಿಯನ್ನು ತೆಗೆದುಕೊಂಡು ಪತ್ನಿಯ ಮೇಲೆ ಬೀಸಿದ್ದಾನೆ. ಈ ವೇಳೆ ತಾಯಿಯನ್ನು ಕಾಪಾಡಲು ಮಗ ಅಡ್ಡ ಬಂದಿದ್ದಾನೆ. ಕೊಡಲಿಯ ಹೊಡೆತಕ್ಕೆ ಗಂಭೀರ ಗಾಯಗೊಂಡಿದ್ದ ಸೋನುಬಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ. ಗಲಾಟೆಯನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಗಂಭಿರ ಗಾಯಗೊಂಡ ಅರ್ಜುನ್ ನನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…
ಸ್ಯಾಂಡಲ್ ವುಡ್ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ವಂಚಕ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಎಚ್ ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮಕ್ಕೆ ಕುಮಾರಸ್ವಾಮಿ ಭೇಟಿ ಕೊಟ್ಟಿದ್ದರು. ಈ ವೇಳೆ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ವಿಚಾರವಾಗಿ ಮಾಧ್ಯಮದವರು ಎಚ್ ಡಿಕೆಗೆ ಅಭಿಪ್ರಾಯ ಕೇಳಿದ್ದಾರೆ. ಇದಕ್ಕೆ ಕುಮಾರಸ್ವಾಮಿ, ಯಾರಪ್ಪ ಅದು.. ಅವರು ಯಾರು ಅಂತ ಗೊತ್ತಿಲ್ಲ.. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎನ್ನುತ್ತ ಅಲ್ಲಿಂದ ಮುಂದೆ ಹೆಜ್ಜೆ ಇಟ್ಟರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೋನ್ ಗಳಲ್ಲಿ ಅಪ್ಲಿಕೇಶನ್ ಗಳು ಡೌನ್ ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ ತುಂಬಾ ಅಗತ್ಯ. ಯಾವುದೇ ಆ್ಯಪ್ ಬೇಕಾದರೂ ನಾವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗ್ತೀವಿ. ಇಲ್ಲಿ ಬಳಕೆದಾರರಿಗೆ ಬೇಕಾದ ಹೊಸ ಅಪ್ಲಿಕೇಶನ್ ಗಳು ಇದ್ದು ಇದನ್ನು ಡೌನ್ ಲೋಡ್ ಮಾಡಬಹುದು. ಆದರೆ, ಅತಿ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೂ (Wi-Fi ಅಥವಾ 5G), ಇದುವರೆಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಒಂದು ಬಾರಿಗೆ ಒಂದೇ ಒಂದು ಅಪ್ಲಿಕೇಶನ್ ಅನ್ನು ಮಾತ್ರ ಡೌನ್ ಲೋಡ್ ಮಾಡಲು ಮಾತ್ರ ಸಾಧ್ಯವಾಗುತ್ತಿತ್ತು. ಆದರೆ, ಶೀಘ್ರದಲ್ಲೇ ಈ ಸಮಸ್ಯೆ ನಿವಾರಣೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಲ್ಲಿ ಏಕಕಾಲದಲ್ಲಿ ಹಲವು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಲು ಅನುಕೂಲವನ್ನು ಕಲ್ಪಿಸುವ ಉದ್ದೇಶದಿಂದ ಗೂಗಲ್ ಪ್ರಸ್ತುತ ಹೊಸ ಮಾರ್ಗವನ್ನು ಪರೀಕ್ಷಿಸುತ್ತಿದೆ. ಗೂಗಲ್ ಪ್ಲೇ ಸ್ಟೋರ್ ನ ಹೊಸ ಅಪ್ ಡೇಟ್ (ಆವೃತ್ತಿ 40.0.13) ವಿಶೇಷ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಈ ವೈಶಿಷ್ಟ್ಯದ ಸಹಾಯದಿಂದ…
ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಇದೀಗ ಎರಡನೆ ಪಟ್ಟಿ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಕರ್ನಾಟಕದ ಅಭ್ಯರ್ಥಿಗಳು ಯಾರಾಗಬಹುದೆಂದು ಕುತೂಹಲ ಕೆರಳಿಸಿದೆ. ಈ ನಡುವೆ ಕೆಲವು ಕ್ಷೇತ್ರಗಳಿಗೆ ಕುತೂಹಲದ ರೀತಿ ಕೆಲವು ಅಭ್ಯರ್ಥಿಗಳ ಹೆಸರು ಕೇಳಿಬರುತ್ತಿದೆ. ಅಂತೆಯೇ ಹಿಂದುತ್ವವಾದಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಗೂ ಈ ಸಲ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಅವರಷ್ಟೇ ಹಿಂದುತ್ವದ ಪ್ರಖರವಾದಿಯಾದಿಯಾಗಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಅಂದಹಾಗೆ ಈ ಹಿಂದೆಯೂ ಚುನಾವಣೆ ವೇಳೆ ಚಕ್ರವರ್ತಿ ಸೂಲಿಬೆಲೆ ಅವರ ಹೆಸರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕೇಳಿಬಂದಿತ್ತು. ಆದರೆ ಸೂಲಿಬೆಲೆ ಅವರು ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ನಿರಾಸಕ್ತಿ ತೋರಿದ್ದರು. ಮೋದಿ…
ಆನ್ ಲೈನ್ ಫುಡ್ ಡೆಲಿವರಿ ತಾಣ ಝೊಮಾಟೋ (Zomato) ಹಲವು ಬಾರಿ ಡೆಲಿವರಿ ವಿಷಯಕ್ಕೆ ಮತ್ತು ಅದರ ನೌಕರರ ವಿಷಯದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ ಗಳ ಪೈಕಿ ಇದೂ ಒಂದು. ಈ ಕಂಪೆನಿಯಲ್ಲಿ ಪುರುಷರ ಜತೆಗೆ ಮಹಿಳೆಯರೂ ಫುಡ್ ಡೆಲಿವರಿ ಮಾಡಿ ಯಾವ ಉದ್ಯೋಗ ಮಾಡುತ್ತಿದ್ದಾರೆ. ಇದೀಗ ಕಂಪೆನಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಮಹಿಳಾ ಉದ್ಯೋಗಿಗಳಿಗೆ ಟೀ ಶರ್ಟ್ ಬದಲು ಕುರ್ತಾ ವಿತರಿಸಿದೆ. ಸದ್ಯ ಝೊಮಾಟೋದ ಕುರ್ತಾ ಸಮವಸ್ತ್ರದ ವೀಡಿಯೊ ವೈರಲ್ ಆಗಿದೆ. ಝೊಮಾಟೋದ ಮಹಿಳಾ ಉದ್ಯೋಗಿಗಳು ಸಮವಸ್ತ್ರದ ಭಾಗವಾಗಿ ಟೀ ಶರ್ಟ್ ಬದಲು ಕುರ್ತಾಗಳನ್ನು ಧರಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಕಂಪೆನಿ ಘೋಷಿಸಿದೆ. ಪಾಶ್ಚಿಮಾತ್ಯ ಶೈಲಿಯ ಟೀ ಶರ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಲವು ಮಹಿಳಾ ಉದ್ಯೋಗಿಗಳ ಪರ್ಯಾಯ ಮಾರ್ಗ ಹುಡುಕುವಂತೆ ಮನವಿ ಮಾಡಿದ್ದರು. ಅದರ ಭಾಗವಾಗಿ ಕುರ್ತಾ ಪರಿಚಯಿಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ. ಮಾತ್ರವಲ್ಲ ಹೊಸ ಸಮವಸ್ತ್ರದ ವಿಡಿಯೊವನ್ನು ಸೋಷಿಯಲ್…
ತಿಪಟೂರು: ತಿಪಟೂರು ಕಾಂಗ್ರೆಸ್ ಮುಖಂಡ, ನಿವೃತ್ತ ಎಸಿಪಿ ಲೋಕೇಶ್ವರ ಸಹಸ್ರಾರು ಸಂಖ್ಯೆಯಲ್ಲಿ ಬೆಂಬಲಿಗರ ಸಭೆಯನ್ನು ಭಾನುವಾರ ತಮ್ಮ ತೋಟದ ಮನೆಯಲ್ಲಿ ನಡೆಸಿ, ತಾಲ್ಲೂಕಿನ ಶಾಸಕರು, ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಭೆಯಲ್ಲಿ ಲೋಕೇಶ್ವರರ ಮುಂದಿನ ನಡೆಯ ಬಗ್ಗೆ ತೀವ್ರ ಚರ್ಚೆಗಳು ಆಗಿದ್ದು, ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಸಭೆಯೂ ಮಹತ್ವ ಪಡೆದಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತಯಾಚನೆ ಮಾಡಿ ಕೆ.ಷಡಕ್ಷರಿರನ್ನು ಬೆಂಬಲಿಸಿದ್ದರು. ಚುನಾವಣೆಯ ನಂತರದಲ್ಲಿ ಶಾಸಕ ಕೆ.ಷಡಕ್ಷರಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣದಿಂದ ದೂರ ಉಳಿದಿದ್ದ ಲೋಕೇಶ್ವರ, ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ದೊರಕುತ್ತಿಲ್ಲ ಎಂದು ಅತೃಪ್ತರ ಸಭೆಯನ್ನು ನಡೆಸಿದ್ದರು. ಸಭೆಯ ಮೂಲಕ ಜಿಲ್ಲೆ ಮತ್ತು ರಾಜ್ಯ ಮುಖಂಡರುಗಳ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಕಾಂಗ್ರೆಸ್ ಮುಖಂಡರು ಇತ್ತ ಗಮನ ನೀಡದಿರುವುದು ಬೇಸರ ಮೂಡಿಸಿದೆ. ಅಲ್ಲದೇ ವಿವಿಧ ಬೋರ್ಡ್ಗಳಿಗೆ ನಾಮ ನಿರ್ದೇಶನ ಮಾಡಿದಾಗಲೂ ಲೋಕೇಶ್ವರ ಹೆಸರು…
ಗುಬ್ಬಿ: ಅಣ್ಣಪ್ಪ ಎಂಬ 38 ವರ್ಷ ವಯಸ್ಸಿನ ಯುವಕರೊಬ್ಬರು ನಾಪತ್ತೆಯಾಗಿದ್ದು, ಇವರು ಪತ್ತೆಯಾದರೆ ತಕ್ಷಣವೇ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಸಿ ಹರಿವೇಸಂದ್ರ ಚೇಳೂರು ಹೋಬಳಿ ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ ಯ ನಿವಾಸಿಯಾಗಿರುವ ಅಣ್ಣಪ್ಪ, ನರಸಿಂಹಯ್ಯ ಎಂಬವರ ಪುತ್ರರಾಗಿದ್ದಾರೆ. ಸಾಧಾರಣ ಮೈ ಬಣ್ಣ ಹೊಂದಿರುವ ಇವರು ಸುಮಾರು 65 ಕೆ.ಜಿ. ದಪ್ಪ, 5 ಅಡಿ ಎತ್ತರ ಹೊಂದಿದ್ದಾರೆ. ಯುವಕ ಮಾನಸಿಕ ಅಸ್ವಸ್ಥರಾಗಿದ್ದಾರೆ. ಇವರನ್ನು ಯಾರಾದರೂ ಕಂಡಲ್ಲಿ ಕೂಡಲೇ ಕೆಳಗಿನ ಸಂಖ್ಯೆಗೆ ಕರೆ ಮಾಡಿ ತಿಳಿಸಲು 9108972205, /9743928209 / 9900304746 / 7022993080 ಕೋರಲಾಗಿದೆ. ವರದಿ: ಸುರೇಶ್ ಬಾಬು ಎಂ. ತುರುವೇಕೆರೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಮಣ್ಣಿನ ಮಡಿಕೆಗಳು ಅಂದ್ರೆ ಮಾರುದ್ದ ದೂರ ಹೋಗುವವರೇ ಹೆಚ್ಚು. ಯಾಕೆಂದರೆ ಮಣ್ಣಿನ ಮಡಕೆಗಳನ್ನು ನಿಯಂತ್ರಣ ಮಾಡೋದೇ ಕಷ್ಟ. ಎಲ್ಲಾದ್ರೂ ಕೈಯಿಂದ ಜಾರಿ ಬಿದ್ರೆ ಎರಡು ತುಂಡಾಗೋದ್ರಲ್ಲಿ ಡೌಟೇ ಇಲ್ಲ. ಆದರೆ ಇದಕ್ಕೆ ಈಗ ಡಿಮ್ಯಾಂಡ್ ಬಂದಿದೆ. ಇಲ್ಲೊಂದು ಕಡೆ ಮಣ್ಣಿನ ಮಡಿಕೆಗಾಗಿ ಜನ ಕ್ಯೂ ನಿಂತುಕೊಂಡಿದ್ದಾರೆ.. ಅಷ್ಟಕ್ಕೂ ಈ ಕ್ಯೂ ಕಂಡು ಬಂದಿರೋದು ಬಿಸಿಲಿನ ನಗರವೆಂದೇ ಕರೆಯಲ್ಪಡುವ ಗಡಿ ಜಿಲ್ಲೆ ಬೀದರ್‌ನಲ್ಲಿ. ಇಲ್ಲಿ ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್ ಗೆ ಬಾರಿ ಡಿಮ್ಯಾಂಡ್ ಬಂದಿದೆ. ಎರಡು ವರ್ಷದಿಂದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದ ಕುಂಬಾರರಿಗೆ (Potter) ಭರ್ಜರಿ ವ್ಯಾಪಾರವಾಗಿದೆ. ಎರಡು ವರ್ಷದಿಂದ ಆಗದ ವ್ಯಾಪಾರ ಬೇಸಿಗೆಯಲ್ಲಿ ಆಗಿದ್ದು ಕುಂಬಾರರು ಖಷಿಯಲ್ಲಿದ್ದಾರೆ. ಕೊರೊನಾ (Covid) ಸಂಕಷ್ಟ ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ವ್ಯಾಪಾರವಿಲ್ಲದೆ ನಷ್ಟದಲ್ಲಿದ್ದವರಿಗೆ ಈ ವರ್ಷ ಬಂಪರ್ ವ್ಯಾಪಾರವಾಗಿದೆ. ಮಡಿಕೆಯಲ್ಲಿನ (Pot) ನೀರು ಆರೋಗ್ಯಕ್ಕೆ ಒಳ್ಳೆಯದೆಂದು ಜನ ಮಡಿಕೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬೀದರ್ ನಲ್ಲಿ ಕಳೆದೆರಡು ವಾರ 36…