Subscribe to Updates
Get the latest creative news from FooBar about art, design and business.
- ಬಿಡದಿ ಟೌನ್ಶಿಪ್ ವಿಚಾರ: ಮುಖ್ಯಮಂತ್ರಿಗಳು ನಾಟಕದ ಸಂಭಾಷಣೆಗಳಂತೆ ಮಾತನಾಡುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
- ಬೀದಿ ನಾಯಿಗಳ ದಾಳಿ: ಒಂದೂವರೆ ವರ್ಷದ ಕಂದಮ್ಮ ಬಲಿ!
- ‘ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’: ಪ್ರಧಾನಿ ಮೋದಿಗೆ ಡಿಸಿಎಂ ಪರಮೇಶ್ವರ್ ಪತ್ರ, ಕೇಂದ್ರದಿಂದ ವಿಶೇಷ ನೆರವಿಗೆ ಮನವಿ
- ಬೀದರ್: ಅಕ್ರಮ ಶಸ್ತ್ರಾಸ್ತ್ರ ಜಾಲ ಭೇದಿಸಿದ ಪೊಲೀಸರು; 5 ನಾಡ ಪಿಸ್ತೂಲ್, 26 ಜೀವಂತ ಗುಂಡು ಜಪ್ತಿ, ಇಬ್ಬರ ಬಂಧನ
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
Author: admin
ಬೆಂಗಳೂರು: ರಾಜಕೀಯ ಉದ್ದೇಶದಿಂದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಸೋಮವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಗೆ ಬಹಳಷ್ಟು ಜನರು ವಿರೋಧ ವ್ಯಕ್ತಪಡಿಸಿರುವುದನ್ನು ನಾವೆಲ್ಲ ನೋಡಿದ್ದೇವೆ. ಇದರ ನಡುವೆಯೂ ಕೇಂದ್ರ ಸರ್ಕಾರ ಇಂತಹ ನಿರ್ಧಾರಕ್ಕೆ ಬಂದಿದೆ. ಇದರಲ್ಲಿ ರಾಜಕೀಯ ಉದ್ದೇಶವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಹೇಳಿದರು. ಬಿಜೆಪಿಯವರಿಗೆ ಎಲ್ಲೋ ಒಂದು ಕಡೇ ಸೋಲಿನ ಆತಂಕ ಕಾಡುತ್ತಿದೆ. ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತರಾದರೂ ಸೋಲಿನ ಭಯವಿದೆ. ಬಿಜೆಪಿಯವರಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ಕಡಿಮೆಯಾದಂತಿದೆ. ಅದಕ್ಕಾಗಿ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತುಮಕೂರು: ಪದವಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಕೌಶಲದ ಕುರಿತು ಸಮಗ್ರ ಮಾಹಿತಿ ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ರಾಮಕೃಷ್ಣರೆಡ್ಡಿ ಕರೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ವಾದ್ವಾನಿ ಫೌಂಡೇಶನ್ ಸಹಭಾಗಿತ್ವದಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರ ಹಾಗೂ ಭೋದಕರಿಗೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಬರುವಂತ ಸರ್ಕಾರಗಳು ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾ ಬಂದಿವೆ. ವಿಶೇಷವಾಗಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆಯುವುದನ್ನು ತಪ್ಪಿಸಲು ಉದ್ಯೋಗ ಕೌಶಲ್ಯ ತರಬೇತಿ ನೀಡುವುದು ಅಗತ್ಯವಿದೆ. ಹಾಗಾಗಿ ಕಾಲೇಜು ಶಿಕ್ಷಣ ಇಲಾಖೆಯು ವಾದ್ವಾನಿ ಫೌಂಡೇಶನ್ ಜೊತೆ ಸೇರಿಕೊಂಡು ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿಯೂ ಉದ್ಯೋಗ ಕೌಶಲ್ಯದ ಕುರಿತು ಬೋಧಕರಿಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಕಲಿಯುವಂತ ಪದವಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉದ್ಯೋಗ ಕೌಶಲ್ಯದ ಮಹತ್ವವನ್ನು ತಿಳಿಸುವ…
ರಥೋತ್ಸವದಲ್ಲಿ ಭಕ್ತರು ಬಾಳೆ ಹಣ್ಣು ಜವನವನ್ನು ರಥಾರೂಢನಾಗಿ ಬರುವ ಕೆಗ್ಗೆರೆ ಲಿಂಗೇಶ್ವರನಿಗೆ ಎಸೆದು ತಮ್ಮ ಇಷ್ಟಾರ್ಥ ಈಡೇರಿಸು ಎಂದು ಪ್ರಾರ್ಥಿಸುವುದು ವಾಡಿಕೆ. ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಕಳೆದ 5 ವರ್ಷಗಳ ಹಿಂದೆ ಕೆಗ್ಗೆರೆ ಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದ ಪ್ರತಿ ಶಿವರಾತ್ರಿಯಂದು ಕೆಗ್ಗೆರೆಲಿಂಗೇಶ್ವರನ ರಥೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೀಗೆ ಬಾಳೆ ಹಣ್ಣು ಎಸೆಯುವರು ತಮ್ಮ ಕೋರಿಕೆಯನ್ನು ಬರೆದು ರಥಕ್ಕೆ ಎಸೆಯುತ್ತಾರೆ. ಭಕ್ತರು ತಮ್ಮ ಬೇಡಿಕೆ ಯನ್ನು ಬರೆದು ಎಸೆದಿರುವ ಬಾಳೆಹಣ್ಣುಗಳ ಮೇಲೆ ಭಕ್ತರು ಬರೆದಿರುವ ವಿಶಿಷ್ಟ ಕೋರಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಳೆಹಣ್ಣಿಗೆ ಜವನ ಸಿಗಿಸಿ ಬಾಳೆಹಣ್ಣಿನ ಮೇಲೆ ತಮ್ಮ ಕೋರಿಕೆಯನ್ನು ಬರೆದು ಎಸೆದಿರುವ ಭಕ್ತರು ಬೇಡಿಕೆಗಳನ್ನು ಕೆಗ್ಗೆರೆ ಲಿಂಗೇಶ್ವರ ನೋಡಿದ್ದಾನೋ ಇಲ್ಲವೋ, ಇವರು ಬರೆದಿರುವ ಬಾಳೆಹಣ್ಣುಗಳನ್ನು ಸ್ಥಳೀಯರು ನೋಡಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ದೇವರೆ ನನಗೆ ಒಳ್ಳೆಯ ಹುಡುಗ…
ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿದೆ ಎನ್ನಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವ ಒತ್ತಾಯಗಳು ಕೇಳಿ ಬಂದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಈ ಭಾಗದಲ್ಲಿ ಇರುವುದರಿಂದ ಸಾಧು ಕೋಕಿಲಾ ಅವರಿಗೆ ಟಿಕೆಟ್ ನೀಡುವಂತೆ ಮನವಿ ಕೂಡ ಮಾಡಿದೆ. ಈ ಕುರಿತಂತೆ ಮಾತನಾಡಿರುವ ಸಾಧು ಕೋಕಿಲಾ, ನಾನು ಒಂದು ಧರ್ಮಕ್ಕೆ ಸೀಮಿತ ಆಗಿಲ್ಲ. ಬೆಂಗಳೂರಿನಲ್ಲಿ ನನ್ನನ್ನ ಎಲ್ಲಾ ಜಾತಿ ಧರ್ಮದವರು ಗುರುತಿಸುತ್ತಾರೆ. ನನ್ನ ಹಿನ್ನಲೆ ಜನರಿಗೆ ಗೊತ್ತಿದೆ. ನನ್ನನ್ನು ಯಾವ ಜಾತಿಗೂ ಸೇರಿಸಬೇಡಿ. ನಾನು ಎಲ್ಲರಿಗೂ ಸೇರಿದವನು. ಬೆಂಗಳೂರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಕ್ರಿಶ್ಚಿಯನ್ ಸಮುದಾಯದಿಂದ ಸಾಧು ಕೋಕಿಲಗೆ ಟಿಕೆಟ್ ಕೊಡಿ ಅಂತ ಕೇಳಿದ್ದಾರೆ. ನನಗೆ ಗೊತ್ತಿಲ್ಲ ಪಕ್ಷ ಏನ್ ಮಾಡುತ್ತೋ. ಯಾರಿಗೆ ಟಿಕೆಟ್ ಕೊಡ್ತಾರೆ ಗೊತ್ತಿಲ್ಲ’ ಎಂದಿದ್ದಾರೆ. ಅಲ್ಲದೇ, ಪಕ್ಷದ…
ರಾಮನಗರ: ತೋಟದ ಮನೆಯೊಂದರಲ್ಲಿ 30ಕ್ಕೂ ಅಧಿಕ ಮಾನವ ತಲೆಬುರುಡೆಗಳು ಪತ್ತೆಯಾಗಿವೆ. ರಾಮನಗರ ಜಿಲ್ಲೆ ಬಿಡದಿಯಲ್ಲಿ ಹಿರಿಯರಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳ ವರೆಗಿನ ನಾನಾ ಬಗೆಯ ತಲೆಬುರುಡೆಗಳು ಪತ್ತೆಯಾಗಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಇದನ್ನು ಒಬ್ಬನೇ ವ್ಯಕ್ತಿ ತೆಗೆದಿಟ್ಟುಕೊಂಡಿದ್ದಾನೆ. ಹೀಗಿದೆ ಬುರುಡೆ ರಹಸ್ಯ: ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಲೆಬುರುಡೆಗಳು ಪತ್ತೆಯಾಗಿವೆ. ಬಲರಾಮ್ ಎಂಬಾತನಿಗೆ ಸೇರಿದ ಈ ತೋಟದ ಮನೆಯಲ್ಲಿ ಪತ್ತೆಯಾಗಿರುವ ತಲೆಬುರುಡೆಗಳನ್ನು ಒಂದೇ ಕೋಣೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದು, ಇದರ ಹಿನ್ನೆಲೆ ಬೆಚ್ಚಿ ಬೀಳಿಸುವಂತಿದೆ. ತೋಟದ ಮನೆಯಲ್ಲಿರುವ ಈ ತಲೆ ಬುರುಡೆಗಳಿಗೆ ನಿತ್ಯ ಪೂಜೆ ಮಾಡಲಾಗುತ್ತದೆ. ಈ ಮೂಲಕ ಬಲರಾಮ ಕಂಡ ಕಂಡವರ ಮೇಲೆ ಮಾಟ ಮಂತ್ರ ಮಾಡುತ್ತಾನೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂಧಿಸಿದ್ದಾರೆ. ಬಲರಾಮ ಈ ತಲೆಬುರುಡೆಗಳನ್ನು ಎಲ್ಲಿಂದ ತರುತ್ತಾನೆ? ಆತನೇ ಕೊಲೆ ಮಾಡಿ ತಲೆಬುರುಡೆ ಸಂಗ್ರಹ ಮಾಡಿದ್ದಾನೆ ಎಂಬ ಸಂಶಯಗಳು ಸಾರ್ವಜನಿಕರಿಗೆ ಇದೆ.…
ಬೆಂಗಳೂರು: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆಯನ್ನು ತಕ್ಷಣವೇ ಬಿಜೆಪಿ ಪಕ್ಷದಿಂದ ಕಿತ್ತೊಗೆಯಲಿ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ. ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಬೆನ್ನಲ್ಲೇ ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು” ಎಂದು ಸಂಸದ ಅನಂತ್‌ಕುಮಾರ್ ಹೆಗಡೆ ಕರೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ ಅಲ್ಲ ಅದು ಬಿಜೆಪಿ ಪಕ್ಷದ ಗುಪ್ತ ಅಜೆಂಡಾದ ಭಾಗವೇ ಆಗಿದೆ. ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ನೀಡಿದೆ. ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಅವರು ಯಾವ ಹಿಂದೂಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಹೆಗಡೆಯವರ ಹೇಳಿಕೆಯನ್ನು ಗಮನಿಸಿದರೆಬಾಬಾಸಾಹೇಬ್ ಅಂಬೇಡ್ಕರ್ ರಚಿಸಿ ಕೊಟ್ಟ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಹೆಗಡೆ ಮತ್ತು ಬಿಜೆಪಿ…
ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆಯನ್ನು ಡಿಕೆಶಿ ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಸಂಸದ ಅನಂತ ಕುಮಾರ ಹೆಗಡೆ ಅವರ ಹೇಳಿಕೆ ನೋಡಿದರೆ, ಬಿಜೆಪಿ ಅಜೆಂಡಾದಲ್ಲಿ ಅದ್ಯಾವ ಪರಿ ವಿಷ ತುಂಬಿಕೊಂಡಿದೆ ಎಂಬುದರ ಸ್ಯಾಂಪಲ್ ಸಿಕ್ಕಂತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಬೀಳಿಸಲು ಬಿಜೆಪಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಇತ್ತೀಚೆಗೆ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿಯ ಆಮಿಷ ನೀಡಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹರ್ಯಾಣ: ಹರ್ಯಾಣದಲ್ಲಿ ಮಹತ್ವದ ದ್ವಾರಕಾ ಎಕ್ಸ್ ಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈಗ ದ್ವಾರಕಾ ಎಕ್ಸ್ ಪ್ರೆಸ್ ವೇ ಎಲ್ಲಿ ನಿರ್ಮಾಣವಾಗಿದೆಯೋ ಆ ಜಾಗವನ್ನು ಕೆಲ ವರ್ಷಗಳ ಹಿಂದೆ ಅಸುರಕ್ಷಿತ ಸ್ಥಳ ಎಂದು ಹೇಳಲಾಗುತ್ತಿತ್ತು. ಜನ ಇಲ್ಲಿಗೆ ಬರಲು ಹೆದರುತ್ತಿದ್ದರು. ಆದರೆ ಅಂತಹ ಜಾಗದಲ್ಲಿ ಸುರಕ್ಷಿತವಾದ, ಉತ್ತಮ ಗುಣಮಟ್ಟದ ಎಕ್ಸ್ ಪ್ರೆಸ್ ವೇ ನಿರ್ಮಾಣ ಮಾಡಲಾಗಿದೆ. ಇದು ಈಗ ಎನ್ ಸಿಆರ್ ನ ತ್ವರಿತ ಅಭಿವೃದ್ಧಿ ಕಾಣುತ್ತಿರುವ ಪ್ರದೇಶವಾಗಿದೆ ಎಂದು ಪ್ರಧಾನಿ ಹೇಳಿದರು. ಹಿಂದಿನ ಸರ್ಕಾರ ಸಣ್ಣ ಸಣ್ಣ ಯೋಜನೆಗಳನ್ನು ಜಾರಿಗೆ ತಂದು 5 ವರ್ಷಗಳ ಕಾಲ ಅದನ್ನೇ ಹೇಳುತ್ತಾ ಸಮಯ ಕಳೆದಿದೆ. ಆದರೆ ಬಿಜೆಪಿ ಹಾಗಲ್ಲ. 2024 ಆರಂಭವಾಗಿ 10 ಲಕ್ಷ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ , ಉದ್ಘಾಟಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ದೇಶದ ಕೋಟ್ಯಾಂತರ ಜನರನ್ನು ಒಗ್ಗೂಡಿಸಿಲಾಗುತ್ತಿದೆ, ಮೊದಲು ದೆಹಲಿಯಲ್ಲಿ ಮಾತ್ರ…
ಕೀಲು ನೋವನ್ನು ಕಡಿಮೆ ಮಾಡಲು ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ!: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಕಾಲು ನೋವಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ವರದಿಗಳ ಪ್ರಕಾರ, ಸಂಧಿವಾತವು ಪುರುಷರಿಗಿಂತ ಮಹಿಳೆಯರಲ್ಲಿ ಕಂಡುಬರುತ್ತದೆ. ಅಧಿಕ ತೂಕದ ಜನರಲ್ಲಿ ಕೂಡಾ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ. ಕೀಲು ನೋವನ್ನು ತಡೆಯಲು ತರಕಾರಿಗಳು, ಹಣ್ಣುಗಳು, ಮೊಸರು, ಬೀನ್ಸ್, ಮೀನು ಮತ್ತು ಆಲಿವ್ ಎಣ್ಣೆಯನ್ನು ತಿನ್ನಲು ತಜ್ಞರು ಹೇಳುತ್ತಾರೆ. ಕಪ್ಪು ಗೋಧಿ ಹಿಟ್ಟಿನಿಂದ ಹೃದಯ ಸಮಸ್ಯೆಗಳಿಗೆ ಸಿಗುತ್ತೆ ಚಿಕಿತ್ಸೆ!: ಹೃದಯದ ಸಮಸ್ಯೆ ಇರುವವರು ಕಪ್ಪು ಗೋಧಿ ಹಿಟ್ಟನ್ನು ಬಳಸುವುದರಿಂದ ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ಕೊಬ್ಬಿನಾಮ್ಲಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಸಹ ತಡೆಯುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಫೈಬರ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಇದಲ್ಲದೆ, ಹೃದಯದ ಕಾರ್ಯವು ಸುಧಾರಿಸುತ್ತದೆ. ಹೃದಯಾಘಾತದ ಸಾಧ್ಯತೆಯೂ ಬಹಳ ಕಡಿಮೆಯಾಗುತ್ತದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು…
ನೀವು ಮನೆಯಲ್ಲಿ ನಾಯಿಯನ್ನು ಸಾಕಿದವರಾಗಿದ್ದರೆ ನಿಮ್ಗೆ ಗೊತ್ತಿರಬಹುದು. ರಾತ್ರಿಯಲ್ಲಿ ನಾಯಿಗಳು ಕೂಗುವ ಶಬ್ದವನ್ನು ಪ್ರತಿನಿತ್ಯ ನೀವೆಲ್ಲ ಕೇಳಿರಬಹುದು. ರಾತ್ರಿ ಹೊತ್ತಲ್ಲಿ ನಾಯಿಗಳು ಅತಿ ಹೆಚ್ಚು ಬೊಗಳುವುದು ಮತ್ತು ಜೋರಾಗಿ ಕೂಗುವುದನ್ನ ನೋಡಬಹುದು. ನಾಯಿಗಳು ಕೂಗುವುದು ಕೆಟ್ಟ ಶಕುನ ಎಂಬ ನಂಬಿಕೆಯೂ ಇದೆ. ಹಾಗಾದರೆ ಇದಕ್ಕೆ ಕಾರಣವೇನು? ರಾತ್ರಿ ಹೊತ್ತಲ್ಲಿ ನಾಯಿ ಕೂಗುವುದು ಅನೇಕ ಕೆಟ್ಟ ಘಟನೆಗಳ ಸಂಕೇತವಾಗಿದೆ ಎಂದು ಹೇಳಲಾಗಿದೆ. ಹಾಗೆಯೇ ಮನೆಯ ಹೊರಗೆ ನಾಯಿ ಕೂಗಿದರೆ ಅಶುಭ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಮನೆ ಮುಂದೆ ನಾಯಿ ಅತ್ತರೆ ಅದನ್ನು ಅಲ್ಲಿಂದ ಓಡಿಸುತ್ತಾರೆ. ನಾಯಿಯು ರಾತ್ರಿ ಹೊತ್ತು ಬೊಗಳಿದಾಗಲೆಲ್ಲಾ ಅದರ ಸುತ್ತಲೂ ಕೆಲವು ರೀತಿಯ ನಕಾರಾತ್ಮಕ ಶಕ್ತಿ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಆ ನೆಗೆಟಿವ್ ಎನರ್ಜಿ ನೋಡಿದ ನಾಯಿಗಳು ಜೋರಾಗಿ ಬೊಗಳುತ್ತವೆ ಎನ್ನುತ್ತಾರೆ. ನಾಯಿಗಳು ಕತ್ತಲೆಯಲ್ಲಿ ದುಷ್ಟಶಕ್ತಿಗಳನ್ನು ನೋಡಬಹುದು ಎಂದು ಕೆಲವರು ನಂಬುತ್ತಾರೆ. ನಾಯಿ ಜೋರಾಗಿ ಬೊಗಳಿದರೆ ಇದು ಕೆಟ್ಟ ಶಕುನ ಎಂದು ಪರಿಗಣಿಸುತ್ತಾರೆ. ಮನುಷ್ಯರನ್ನು ಆಕರ್ಷಿಸಲು ನಾಯಿಗಳು…