Author: admin

ತುಮಕೂರು: ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾಗಿ ಈಗಾಗಲೇ ತೆರೆಮರೆಯಲ್ಲಿ ಬಹುತೇಕ ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ಅಂತಿಮ ಪ್ರಕ್ರಿಯೆ ನಡೆದಿದೆ. ಈ ವಿಷಯ ತುಮಕೂರು ಜಿಲ್ಲೆಯ ಬಿಜೆಪಿ ವಲಯದಲ್ಲಿ ಒಂದು ರೀತಿ ಮಿಂಚಿನ ಸಂಚಾರ ಉಂಟು ಮಾಡಿದ್ದು ಅಲ್ಲಲ್ಲಿ ಗೋ ಬ್ಯಾಕ್ ಸೋಮಣ್ಣ ಎಂಬ ಘೋಷಣೆಗಳೊಂದಿಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಒಂದೆಡೆ ಸೇರಿ ಗೋ ಬ್ಯಾಕ್ ಸೋಮಣ್ಣ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಬಾರದು ಎಂದು ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಇನ್ನೊಂದೆಡೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿಯೂ ಕೂಡ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗುವ ಮೂಲಕ ಬೃಹತ್ ಪ್ರತಿಭಟನೆ ಒಂದನ್ನು ಮಾಡಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ…

Read More

ಲೋಕಸಭಾ ಚುನಾವಣೆ ಹೊತ್ತಲ್ಲೇ ಹರಿಯಾಣದ ಹಿಸಾರ್‌ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್‌  ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿ, ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದಾರೆ. ತಮ್ಮ ರಾಜೀನಾಮೆ ಕುರಿತು ಬಹಿರಂಗಪಡಿಸಿದ ಬಳಿಕ ಬ್ರಿಜೇಂದ್ರ ಅವರು ನವದೆಹಲಿಯಲ್ಲಿರುವ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗಿ ಕಾಂಗ್ರೆಸ್‌ ಸೇರಿದರು. ಈ ವೇಳೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅಜಯ್‌ ಮಾಕನ್‌, ಮುಕುಲ್‌ ವಾಸ್ನಿಕ್‌, ದೀಪಕ್‌ ಬಬಾರಿಯಾ ಉಪಸ್ಥಿತರಿದ್ದರು. ಅಂದಹಾಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪಕ್ಷಕ್ಕೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೇಂದ್ರ ಸಿಂಗ್ ಅವರು ಜೆಜೆಪಿಯ ದುಷ್ಯಂತ್ ಚೌಟಾಲಾ ಮತ್ತು ಆಗ ಕಾಂಗ್ರೆಸ್‌ನಲ್ಲಿದ್ದ ಭವ್ಯಾ ಬಿಷ್ಣೋಯ್ ಅವರನ್ನು ಸೋಲಿಸಿ ಹಿಸ್ಸಾರ್ ಲೋಕಸಭಾ…

Read More

ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮಹಿಳೆಯ ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ಆರೋಪವಿದೆ. ಭಾರತೀಯ ಮೂಲದ ಚೈತನ್ಯ ಮದಗಣಿ(36) ಅವರ ಶವ ಶನಿವಾರ ಬಕ್ಲಿಯಲ್ಲಿ ರಸ್ತೆ ಬದಿಯ ವೀಲಿ ಬಿನ್ ‌ನಲ್ಲಿ ಪತ್ತೆಯಾಗಿದೆ. ಮಹಿಳೆ ತನ್ನ ಪತಿ ಮತ್ತು ಮಗನೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರು. ಚೈತನ್ಯ ಅವರು ತಮ್ಮ ಪತಿ ಅಶೋಕ್‌ ಅವರೊಂದಿಗೆ ಆಸ್ಟ್ರೇಲಿಯಾದ ಪಾಯಿಂಟ್‌ ಕುಕ್ಕ್‌ ಎಂಬಲ್ಲಿ ವಾಸವಾಗಿದ್ದರು. ಈ ದಂಪತಿಗಳಿಗೆ ಒಂದು ಗಂಡು ಮಗು ಕೂಡಾ ಇದೆ. ಪೋಷಕರ ಪ್ರಕಾರ ಪತಿಯೇ ಮಗಳನ್ನು ಹತ್ಯೆಗೈದು ಕಸದ ತೊಟ್ಟಿಗೆ ಎಸೆದು ಭಾರತಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೈದರಾಬಾದ್‌ನ ಉಪ್ಪಲ್ ಶಾಸಕ ಬಂಡಾರಿ ಲಕ್ಷ್ಮ ರೆಡ್ಡಿ ಅವರು ಮಾಹಿತಿ ಪಡೆದಿದ್ದು, ತಕ್ಷಣ ಮಹಿಳೆಯ ಪೋಷಕರನ್ನು ಭೇಟಿ ಮಾಡಿದ್ದಾರೆ. ಪೋಷಕರ ಕೋರಿಕೆಯ ಮೇರೆಗೆ ಮಹಿಳೆಯ ಶವವನ್ನು ಹೈದರಾಬಾದ್‌ ಗೆ ತರಲು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ಮಹಿಳೆಯ ಪೋಷಕರ ಪ್ರಕಾರ, ಅವರ ಅಳಿಯ ತಮ್ಮ ಮಗಳನ್ನು ಕೊಂದಿರುವುದಾಗಿ…

Read More

ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಸುಳಿವುಗಳನ್ನು ಪಡೆದುಕೊಂಡಿದೆ. ಪ್ರಕರಣದ ಶಂಕಿತನ ಮುಖ ಬೆಳಕಿಗೆ ಬಂದಿದ್ದು, ಆತನ ಪತ್ತೆಗಾಗಿ ತಂಡ ವಿವಿಧೆಡೆ ದಾಳಿ ನಡೆಸುತ್ತಿದೆ. ಇದಲ್ಲದೆ, ಈ ಶಂಕಿತನ ಕೆಲವು ಸಹಚರರನ್ನು ಸಹ ಗುರುತಿಸಲಾಗಿದೆ. ಶುಕ್ರವಾರ ಮತ್ತು ಶನಿವಾರದಂದು NIA ಬಿಡುಗಡೆ ಮಾಡಿದ ಹೊಸ ಸಿಸಿಟಿವಿ ಸ್ಟಿಲ್ ಚಿತ್ರಗಳಲ್ಲಿ, ಶಂಕಿತ ವ್ಯಕ್ತಿ ಟೋಪಿ ಇಲ್ಲದೆ ಕಾಣಿಸಿಕೊಂಡಿದ್ದಾನೆ. ತನಿಖೆಯ ವೇಳೆ, ಶಂಕಿತ ಆರೋಪಿಯು ಬಳ್ಳಾರಿ ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸ್ಫೋಟಗೊಂಡ ದಿನದ ಸಂಜೆಯ ದೃಶ್ಯವಾಗಿತ್ತು ಎಂದು ಹೇಳಲಾಗಿದೆ. ಅಲ್ಲಿಂದ ಆತ ಒಂದು ಆಟೋ ಬಾಡಿಗೆ ಪಡೆದು ಹೋಗಿದ್ದು, ನಂತರ ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡುತ್ತಿರುವುದು ಕೂಡಾ ಸಿಸಿಟಿಯಲ್ಲಿ ಕಂಡಿದೆ ಎಂದು ಹೇಳಲಾಗಿದೆ. ಈ ಇಬ್ಬರು ಕಲಬುರಗಿ (ಗುಲ್ಬರ್ಗಾ) ಮೂಲದವರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಕೆಎ 32 ಎಫ್ 1885 ನಂಬರ್ ಬಸ್ ನಲ್ಲಿ ಬಳ್ಳಾರಿಯಿಂದ ಕಲಬುರಗಿಗೆ…

Read More

ಹರಿಯಾಣದ ಹಿಸಾರ್ ಲುವಾಸ್‌ ನ ಶಸ್ತ್ರಚಿಕಿತ್ಸಾ ವಿಭಾಗದ ವಿಜ್ಞಾನಿ ಡಾ. ಸಂದೀಪ್ ಗೋಯಲ್ ಅವರು ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ತಮ್ಮ 8 ವರ್ಷದ ಮಗಳು ಸನಾಯಾಳನ್ನು ತಮ್ಮ ಕಚೇರಿಯಲ್ಲಿ ಸರ್ಜಿಕಲ್ ಬ್ಲೇಡ್‌ನಿಂದ ಬರ್ಬರವಾಗಿ ಹತ್ಯೆ ಮಾಡಿದ್ದು, ನಂತರ ಅವರು ತಮ್ಮ ರಕ್ತನಾಳವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವಗಳು ಕಚೇರಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಹಂಡಾ, ಎಎಸ್ಪಿ ರಾಜೇಶ್ ಮೋಹನ್, ಸಿವಿಲ್ ಲೈನ್ ಪೊಲೀಸ್ ಠಾಣೆ ಪ್ರಭಾರಿ ರಾಜೀಂದ್ರ ಅವರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಇಬ್ಬರ ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತ ದೇಹಗಳ ಮರಣೋತ್ತರ ಪರೀಕ್ಷೆ ಸೋಮವಾರ (ಇಂದು) ನಡೆಯಲಿದೆ. ಪೊಲೀಸರು ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಖಿನ್ನತೆಯಿಂದ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರ ಪ್ರಕಾರ, ಡಾ. ಸಂದೀಪ್ ಗೋಯಲ್ ಮೂಲತಃ ನರ್ವಾನಾ ನಿವಾಸಿಯಾಗಿದ್ದು, ಲುವಾಸ್‌ನಲ್ಲಿ ಶಸ್ತ್ರಚಿಕಿತ್ಸಾ…

Read More

ಲೋಕಸಭೆ ಚುನಾವಣೆಗೆ ಇದೇ ಮಾರ್ಚ್ 14 ಅಥವಾ 15 ರಂದು ಘೋಷಣೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನೊಳಗೆ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಅಲ್ಲದೆ ಕೇಂದ್ರಾಡಳಿತ ಪ್ರದೇಶದಲ್ಲಿ  ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆಸಬಹುದೇ ಎಂದು ನಿರ್ಣಯಿಸಲು ಕೇಂದ್ರ ಸಮಿತಿ ಕೇಳಿತ್ತು. ಈ ಬೆನ್ನಲ್ಲೇ ಸಮಿತಿ ಸೋಮವಾರದಿಂದ ಬುಧವಾರದವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಅದರ ನಂತರ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ತಕ್ಷಣವೇ ಬಹಿರಂಗಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಲೋಕಸಭೆ ಮಹಾ ಚುನಾವಣೆಗೆ ದಿನಾಂಕ ನಿಗದಿ ಜೊತೆಜೊತೆಗೆ ಈ ಸಲನೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೂ ಮುಹೂರ್ತ ನಿಗದಿ ಆಗಲಿದೆ. ಅಷ್ಟೇ ಅಲ್ಲ 10 ವರ್ಷಗಳ ಬಳಿಕ ಜಮ್ಮು ಕಾಶ್ಮೀರ ವಿಧಾನಸಭೆಗೂ ಚುನಾವಣೆಗೆ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ. ಏಕೆಂದರೆ ಸೆಪ್ಟೆಂಬರ್‌ 2024ರೊಳಗೆ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಬೇಕು ಅಂತ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಹೀಗಾಗಿ ಸೋಮವಾರದಿಂದ 3 ದಿನ ಜಮ್ಮು ಕಾಶ್ಮೀರಕ್ಕೆ ಮುಖ್ಯ ಚುನಾವಣಾ ಆಯುಕ್ತ…

Read More

ನೀಲಿ ತಾರೆ ಸೋಫಿಯಾ ಲಿಯೋನ್ ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿದ್ದು ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ನಟಿ ಸೋಫಿಯಾ ತನ್ನ 26ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಸೋಫಿಯಾ ಶವ ಆಕೆಯ ಅಪಾರ್ಟ್‌ಮೆಂಟ್‌ ನಲ್ಲಿ ಪತ್ತೆಯಾಗಿದ್ದು, ನಟಿಯ ಸಾವಿನ ಸುದ್ದಿಯನ್ನು ಆಕೆಯ ಮಲತಂದೆ ಮೈಕ್ ರೊಮೆರೊ ಖಚಿತಪಡಿಸಿದ್ದಾರೆ. ಸೋಫಿಯಾ ಹಠಾತ್ ಸಾವು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಸೋಫಿಯಾ ಲಿಯೋನ್ ಸಾವಿನಿಂದ ಇಡೀ ಕುಟುಂಬ ಆಘಾತಕ್ಕೊಳಗಾಗಿದೆ. ಅವಳ ತಾಯಿ ಮತ್ತು ಕುಟುಂಬದ ಪರವಾಗಿ, ನಮ್ಮ ಪ್ರೀತಿಯ ಸೋಫಿಯಾ ನಿಧನದ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇನೆ ಎಂದು ಸೋಫಿಯಾ ಮಲತಂದೆ ಮೈಕ್ ರೊಮೆರೊ ಹೇಳಿದ್ದಾರೆ. ಮಾರ್ಚ್‌ 1ರಂದು ಸೋಫಿಯಾ ಮೃತಪಟ್ಟಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ತನಿಖೆ ನಡೆಯುತ್ತಿದ್ದ ಕಾರಣ ವಿಷಯ ತಡವಾಗಿ ಸೋಫಿಯಾ 1997ರ ಜೂನ್ 10ರಂದು ಅಮೆರಿಕಾದ ಮಿಯಾಮಿಯಲ್ಲಿ ಜನಿಸಿದ್ದರು. ಸೋಫಿಯಾ 18ನೇ ವಯಸ್ಸಿನಲ್ಲಿಯೇ ನೀಲಿ ಚಿತ್ರಗಳನ್ನು ಕಾಣಿಸಿಕೊಳ್ಳಲು ಆರಂಭಿಸಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…

Read More

ಪಾವಗಡ: ತಾಲ್ಲೂಕಿನ ಹರಿಹರಾಪುರದ ಮಲ್ಲಪ್ಪ ಸ್ವಾಮಿಗಳ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯಿತು. ಶ್ರೀ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಭಕ್ತರು ಆಗಮಿಸುವ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂತು. ಭಕ್ತರು ಕೊಂಡದಲ್ಲಿ ಧೂಪ ಹಾಕುವ ಮೂಲಕ ತಮ್ಮ ಹರಕೆ ತೀರಿಸಿಕೊಂಡಿದ್ದು ಕಂಡು ಬಂತು.. ವರದಿ: ನಂದೀಶ್ ನಾಯ್ಕ ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯನೊಬ್ಬ ಆಸ್ಪತ್ರೆಯ ಆವರಣದಲ್ಲಿ ಬೆತ್ತಲೆಯಾಗಿ ಮಲಗಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ವರದಿಯಾಗಿದೆ. ಆಘಾತಕಾರಿ ಸಂಗತಿಯೆಂದರೆ ವೈದ್ಯ ದೇಹದ ಮೇಲೆ ಪರಿವೇ ಇಲ್ಲದೆ ಆಸ್ಪತ್ರೆಯ ಆವರಣದಲ್ಲಿ ತಿರುಗಾಡುತ್ತಿದ್ದ ವೀಡಿಯೊ ಕೂಡ ಪೊಲೀಸರ ಕೈಗೆ ಸಿಕ್ಕಿದೆ. ಸ್ಥಳೀಯರ ಪ್ರಕಾರ ವೈದ್ಯ ಮಾದಕ ವ್ಯಸನಿಯಾಗಿದ್ದು ಅದರ ಪ್ರಭಾವದಲ್ಲಿದ್ದ. ಜತೆಗೆ ಕುಡಿದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕಳೆದ ಎರಡು-ಮೂರು ದಿನಗಳಿಂದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಪೈಥಾನ್ ತಾಲೂಕಿನ ಬಿಡ್ಕಿನ್​ ನ ಗ್ರಾಮೀಣ ಆಸ್ಪತ್ರೆಯ ವೈದ್ಯರದ್ದು ಎಂದು ಹೇಳಲಾಗಿದೆ. ಇದರಲ್ಲಿ ಸರ್ಕಾರಿ ವೈದ್ಯನೊಬ್ಬ ತಮ್ಮ ದೇಹದ ಮೇಲೆ ಒಂದೇ ಬಟ್ಟೆಯಿಲ್ಲದೆ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ಕುತೂಹಲಕಾರಿ ಸಂಗತಿಯೆಂದರೆ, ಈ ವೀಡಿಯೊ ಬಿಡ್ಕಿನ್ ಗ್ರಾಮೀಣ ಆಸ್ಪತ್ರೆಯ ಐಸಿಯು ಒಳಗಿನ ಸಿಸಿ ಟಿವಿ ಕ್ಯಾಮೆರಾದ್ದು ಎನ್ನಲಾಗಿದೆ. ಈ ವೈದ್ಯ ಮಾದಕವಸ್ತುಗಳಿಗೆ ವ್ಯಸನಿ ಎಂದು ಹೇಳಲಾಗುತ್ತಿದೆ.…

Read More

ಸ್ಟಾರ್‌ ನಟಿ ಮೀನಾ ಈಗಲೂ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಿರುವ ನಟಿ. ಇವರು ಕಾರ್ಯಕ್ರಮಕ್ಕೆ ಬಂದಾಗ ಈಗಿನ ಯುವ ನಟಿಯರನ್ನೇ ಮೀರಿಸುವಂತಿದೆ ಇವರ ಸೌಂದರ್ಯ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಇವರು ನಟಿಸಿದ್ದು, ಜನಮನಗೆದ್ದಿದ್ದಾರೆ. ಇದೀಗ ತನ್ನ 15ನೇ ವಯಸ್ಸಿನಲ್ಲಿ ನಟಿ ಮೀನಾ ಗರ್ಭಿಣಿಯಾಗಿದ್ರಂತೆ. ಹೌದು, 1991ರಲ್ಲಿ ಕಾಲಿವುಡ್‌ನಲ್ಲಿ ಕಸ್ತೂರಿ ರಾಜ ನಿರ್ದೇಶನದಲ್ಲಿ ಎನ್‌ ರಾಸವಿನ್‌ ಮನಸಿಲೇ ಸಿನಿಮಾದಲ್ಲಿ 15 ವರ್ಷ ವಯಸ್ಸಿಗೆ ಗರ್ಭಿಣಿ ಪಾತ್ರದಲ್ಲಿ ನಟಿ ಮೀನಾ ನಟಿಸಿದ್ದರು. ಮೀನಾ ಅವರ 40ನೇ ಹುಟ್ಟುಹಬ್ಬದ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಹಿರಿಯ ನಟ ರವಿ ಕಿರಣ್‌, ಮೀನಾ ಅವರ ಕುರಿತು ಈ ವಿಚಾರ ಬಹಿರಂಗಪಡಿಸಿದ್ದಾರೆ. ಆದರೆ ನಟಿ ಮೀನಾ ಈ ವಿಚಾರವನ್ನು ಅಲ್ಲಗಳೆದಿದ್ದರು. ಪತಿ ಅಗಲಿಕೆಯ ನೋವಿನಿಂದ ನಾನಿನ್ನೂ ಹೊರಬಂದಿರಲಿಲ್ಲ. ಅದರ ಮಧ್ಯೆ ಈ ವದಂತಿ ನೋವಿನ ಸಂಗತಿ ಎಂದಿದ್ದರು. ವಿವಿಧ ಭಾಷೆಗಳಲ್ಲಿ ನಟಿಸಿರುವ ನಟಿ ಮೀನಾ ಇತ್ತೀಚೆಗೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ಪತಿ ವಿದ್ಯಾಸಾಗರ್​…

Read More