Author: admin

ಹೈದರಾಬಾದ್:‌ ತೆಲಂಗಾಣದ ಸಿಕಂದರಾಬಾದ್‌ ನಲ್ಲಿ ಆಸ್ತಿ ವಿವಾದದಿಂದಾಗಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಆರೋಪಿಯು ತನ್ನ ಮನೆಗೆ ಹೋಗುವ ಕಿರಿದಾದ ದಾರಿಯಲ್ಲಿ ತನ್ನ ಒಡಹುಟ್ಟಿದ ಸಹೋದರನಿಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿದೆ. ಆರೋಪಿ ಕೊಂಡಿಕೊಂಡ ವಿನೋದ್ ತನ್ನ ನಿವಾಸದ ಬಳಿ ಮಾರ್ಗವನ್ನು ಪ್ರವೇಶಿಸುವ ಬಗ್ಗೆ ಜಗಳ ಉಂಟಾಗಿ ವಿಕೋಪಕ್ಕೆ ತಿರುಗಿದ ವೇಳೆ ಆರೋಪಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ‌ವಿನೋದ್‌ ತನ್ನ ಸಹೋದರ ಕೊಂಡಿಕೊಂಡ ಶ್ರೀನಿವಾಸ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಕ್ಷಣ ಸಮೀಪದ ನಿವಾಸಿಗಳು ಸದ್ಯ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶ್ರೀನಿವಾಸ್ ತಲೆ ಮತ್ತು ದೇಹಕ್ಕೆ ತೀವ್ರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿಂತೆ ಬೋನಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Read More

ಚಾಮರಾಜನಗರ: ಹದಿನಾರು ಕೆಜಿ ತಿಮಿಂಗಲ ವಾಂತಿ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾಗಿರುವ ಆರೋಪಿಗಳಿಂದ 16 ಕೆ.ಜಿ. ತಿಮಿಂಗಲ ವಾಂತಿ, ಮೊಬೈಲ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಮೂಲದ ಇಮಿಯಾಜ್ ಅಬ್ದುಲ್, ರೆಹಮಾನ್, ಮಂಗಳೂರಿನ ಚಿತ್ರಾಂಜಲಿ ನಗರದ ಚೇತನ್ ಕುಮಾರ್ ಹಾಗೂ ಸುರತ್ಕಲ್‌ನ ವೆಂಕಟೇಶ್ ಅವರನ್ನು ಬಂಧಿತ ಆರೋಪಿಗಳಾಗಿದ್ದಾರೆ. ಅಂಬರ್‌ ಗ್ರಿಸ್  ಎಂಬುವುದು ತಿಮಿಂಗಲದ ವಾಂತಿಯಾಗಿದ್ದು, ಹೊರ ಹಾಕಿದ ಆಹಾರ ದ್ರವ ರೂಪದಲ್ಲಿ ಗಟ್ಟಿಯಾಗಿರುತ್ತದೆ. ಈ ದ್ರವರೂಪದ ಗಟ್ಟಿ ಆಹಾರ ವಸ್ತು ಮೊದಲು ಸಮುದ್ರದ ಆಳದಲ್ಲಿ ಇದ್ದು, ನಂತರ ಕೆಲವು ರಾಸಾಯನಿಕ ಕ್ರಿಯೆಯ ಮೂಲಕ ಸಮುದ್ರದಲ್ಲಿ ತೇಲುತ್ತದೆ. ಇವುಗಳನ್ನು ಹೊರ ದೇಶಗಳಲ್ಲಿ ಸುಗಂಧದ್ರವ್ಯ ತಯಾರಿಸಲು ಬಳಸಲಾಗುತ್ತಿದ್ದು, ಹೀಗೆ ತೇಲಿದ ಆಯಂಬರ್‌ ಗ್ರೀಸ್‌ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಇದೆ.

Read More

ಬೆಂಗಳೂರು: ಸಿಲಿಕಾನ್ ಸಿಟಿಯ ಮಸೀದಿಯಲ್ಲಿ ನಿಯಮಾವಳಿಗಳ ನ್ನು ಮಸೀದಿ ಪಾಲಿಸುತ್ತಿಲ್ಲ ಎಂದು ಯುವಕನೊಬ್ಬ ದೂರು ನೀಡಿರುವ ಘಟನೆ ನಡೆದಿದೆ. ದಿನಕ್ಕೆ ಐದು ಬಾರಿ ಕೂಗುವ ಅಜಾನ್‌ ಸದ್ದಿನಿಂದಾಗಿ ಬಹಳ ಕಿರಿಕಿರಿ ಆಗುತ್ತಿದೆಯೆಂದು,  ಅಭಿಷೇಕ್‌ ಎಂಬ ಯುವಕ ಸಂಜಯ ನಗರ ಮಸೀದಿಯ ವಿರುದ್ದ ಸಾಮಾಜಿಕ ಜಾಲತಾಣದ ಮೂಲಕ ದೂರು ದಾಖಲಿಸಿದ್ದಾರೆ. ಶಬ್ದ ವರ್ಧಕಗಳಿಗೆ ನಿಗದಿತ ಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಆದರೆ ಈ ಮಸೀದಿ ಅದಕ್ಕಿಂತ ಮೂರು ಪಟ್ಟು ಹೆಚ್ಚು ಸದ್ದು ಮಾಡುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಜಯ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಭಿಷೇಕ್‌ ದೂರಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್‌ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Read More

ಪ್ರಸ್ತುತ ಮ್ಯಾರಥಾನ್ ವಿಶ್ವ ದಾಖಲೆ ಹೊಂದಿರುವ ಕೀನ್ಯಾದ ಅಥ್ಲೀಟ್ ಕೆಲ್ವಿನ್ ಕಿಪ್ಟಮ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೀನ್ಯಾದ ಐದನೇ ದೊಡ್ಡ ನಗರವಾದ ಎಲ್ಡೋರೆಟ್‌ನಲ್ಲಿ ಭಾನುವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕೋಚ್ ಕೂಡ ಸಾವನ್ನಪ್ಪಿದ್ದಾರೆ. ಸ್ಥಳೀಯ ಕಾಲಮಾನ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೆಲ್ವಿನ್ ಮತ್ತು ತರಬೇತುದಾರ ಗೆರ್ವೈಸ್ ಹಕಿಸಿಮಾನ ಎಲ್ಡೊರೆಟ್‌ ನಲ್ಲಿರುವ ತರಬೇತಿ ಮೈದಾನಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ದೊಡ್ಡ ಮರಕ್ಕೆ ಡಿಕ್ಕಿ ಹೊಡೆದಿದೆ. 24 ವರ್ಷದ ಕೆಲ್ವಿನ್ ವಾಹನ ಚಲಾಯಿಸುತ್ತಿದ್ದ ಎಂದು ಕೀನ್ಯಾ ಪೊಲೀಸರು ತಿಳಿಸಿದ್ದಾರೆ. ಕೀನ್ಯಾದ ಅಥ್ಲೀಟ್ ಮತ್ತು ಕೋಚ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಲ್ಜಿಯೊ ಮರಕ್ವೆಟ್ ಕೌಂಟಿ ಪೊಲೀಸ್ ಕಮಾಂಡರ್ ಪೀಟರ್ ಮುಲಿಂಗೆ ತಿಳಿಸಿದ್ದಾರೆ. 24 ವರ್ಷದ ಕಿಪ್ಟಮ್ ಎರಡು ಗಂಟೆ ಮತ್ತು ಒಂದು ಸೆಕೆಂಡಿನಲ್ಲಿ ಮ್ಯಾರಥಾನ್ ಪೂರ್ಣಗೊಳಿಸಿದ ಇತಿಹಾಸದಲ್ಲಿ ಮೊದಲ ಅಥ್ಲೀಟ್ ಆಗಿದ್ದಾರೆ. ಕಳೆದ…

Read More

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಿಲಿಕಾನ್‌ ಸಿಟಿಯ ಆಕ್ಟಿವಾ ವೊಂದರ ಮೇಲೆ ಬರೋಬ್ಬರಿ 300 ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ. ಈ ಎಲ್ಲಾ ಪ್ರಕರಣಗಳು ಸೇರಿ ಒಟ್ಟು 3 ಲಕ್ಷ ರೂ. ದಂಡ ಬಿದ್ದಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಲ್ಲಿ ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲಂಘಿಸಿದ ಆಕ್ಟಿವಾ ಇದು ಎಂಬ ಕುಖ್ಯಾತಿಯನ್ನೂ ಪಡೆದಿದೆ ಎನ್ನಲಾಗಿದೆ. ಬೈಕ್ ಬೆಲೆ 30,000 ರೂ., ಆದರೆ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರೋದರಲ್ಲಿ ಬೆಂಗಳೂರಿಗೆ ಮೊದಲನೇಯವರು ಸುಧಾಮ ನಗರದ ವೆಂಕಟರಮನ್ ಎನ್ನಲಾಗಿದೆ. ಇವರ, KA05KF7969 ನಂಬರಿನ ಆಕ್ಟಿವಾ ಹೊಂಡಾ ಬೈಕ್‌ ನ ಮೇಲೆ ಬರೋಬ್ಬರಿ 300 ಕೇಸ್‌ ಗಳು ದಾಖಲಾಗಿದೆ. ಒನ್ ವೇ ಸಂಚಾರ, ಸಿಗ್ನಲ್ ಜಂಪ್, ‌ಮೊಬೈಲ್‌ ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ಫುಟ್‌ಪಾಥ್ ರೈಡಿಂಗ್.. ಪೊಲೀಸ್ ಮ್ಯಾನ್ಯೂವಲ್ ‌ನಲ್ಲಿ ಯಾವ್ಯಾವ ಕಾನೂನುಗಳು ಉಲ್ಲಂಘನೆ ಎಂದು ಎನಿಸಿಕೊಳ್ಳುತ್ತೋ ಅದೆಲ್ಲಾ ಈ ವೆಂಕಟರಾಮನ್ ಮಾಡಿಬಿಟ್ಟಿದ್ದಾರೆ ಎನ್ನಲಾಗಿದೆ. ಬೈಕ್ ಮೇಲಿರುವ ಕೇಸ್ ಪರಿಶೀಲನೆ ಮಾಡಿ, ವಿಲ್ಸನ್…

Read More

ಫೆಬ್ರವರಿ 10 ರಿಂದ ಮಾರ್ಚ್​ 7ರ ವರೆಗೆ ನಡೆಯುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ, ತೆಲುಗು, ತಮಿಳು ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದ ಕರ್ನಾಟಕದ ಅಭ್ಯರ್ಥಿಗಳು ಮೊದಲ ಆದ್ಯತೆಯಾಗಿ ಕನ್ನಡದಲ್ಲಿಯೇ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ತಿಳಿಸಿದೆ. ಕೇಂದ್ರ ಸಶಸ್ತ್ರ ಪಡೆಗಳಾದ ಸಿಆರ್‌ ಪಿಎಫ್, ಬಿಎಸ್‌ ಎಫ್ ಮತ್ತು ಸಿಐಎಸ್‌ ಎಫ್‌, ಐಟಿಬಿಪಿ, ಎಸ್​ ಎಸ್​ಬಿ ಮತ್ತು ಎನ್ ​ಎಸ್​​ ಜಿ ಹುದ್ದೆಗಳ ಕಾನ್ಸ್ ​ಟೇಬಲ್​ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಫೆಬ್ರವರಿ 10 ರಿಂದ ಮಾರ್ಚ್ 7 ರ ವರೆಗೆ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ದೇಶಾದ್ಯಂತ 128 ನಗರಗಳಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಭಾಷಾ ಸಮಸ್ಯೆ ಮತ್ತು ದೇಶದ ಎಲ್ಲ ಭಾಗಗಳಿಂದ…

Read More

ನಮ್ಮ ನಡುವೆ ಇರುವ ಮೌಢ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ವಿಮರ್ಶೆಯ ಪ್ರಜ್ಞೆ ಬೆಳೆಸಿಕೊಳ್ಳಲು ಕುವೆಂಪು ಸಾಹಿತ್ಯ ಪೂರಕವಾಗಿದೆ ಎಂದು ಸಾಹಿತಿ ಡಾ.ಎಚ್.ಟಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ದೇವಂಗಿ ಡಿ.ಆರ್.ರತ್ನಾಕರ ದತ್ತಿ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ವೈಜ್ಞಾನಿಕ ದೃಷ್ಟಿಕೋನ ವಿಷಯದ ಕುರಿತು ಮಾತನಾಡಿದರು. ಕುವೆಂಪು ಮೌಢ್ಯ ವಿರೋಧದ ಪ್ರತೀಕ. ಧರ್ಮ, ದೇವರು, ಪುರೋಹಿತ, ರಾಜಕೀಯ, ಹೆಣ್ಣು, ಗಂಡು ಭಾಷೆ, ಸಾಮಾಜಿಕ, ಜಾತಿ, ಸಾಂಸ್ಕೃತಿಕ ಸೇರಿದಂತೆ ಎಲ್ಲ ವಲಯಗಳಲ್ಲಿ ಮೌಡ್ಯಗಳನ್ನು ವಿರೋಧಿಸಿದವರು. ತಮ್ಮ ನಡೆಯಿಂದ ಎದುರಾಗುವ ಯಾವ ವಿರೋಧವನ್ನೂ ಲೆಕ್ಕಿಸದೆ ಜಗತ್ತಿನ ಉನ್ನತೀಕರಣ ಬಯಸುತ್ತಿದ್ದರು ಎಂದು ಹೇಳಿದರು. ವಿಶ್ವಮಾನ್ಯ ವ್ಯಕ್ತಿತ್ವ ಹೊಂದಿದ್ದ ಕುವೆಂಪು, ವೈಚಾರಿಕ ನೆಲೆಗಳಲ್ಲಿ ಮಾತನಾಡುತ್ತಾ ಮೌಡ್ಯಕ್ಕೆ ಪರಿಹಾರವೇನು ಎನ್ನುವುದನ್ನು ತಿಳಿಸಿಕೊಟ್ಟರು. ಯಾವುದನ್ನೂ ಪ್ರಶ್ನಿಸದೆ ಒಪ್ಪಬೇಡಿ. ವಿಮರ್ಶಕ ಪ್ರಜ್ಞೆ ಕಳೆದುಕೊಳ್ಳಬಾರದು. ಎಷ್ಟು ದೇವರ ಪೂಜಿಸಿದರೇನು ನಿನ್ನ ನೀ ಅರಿಯದೊಡೆ ಏನು ಪ್ರಯೋಜನ. ಪುಸ್ತಕ ಜ್ಞಾನವಲ್ಲ, ಅದರೊಳಗಿನ ವಿಚಾರಗಳನ್ನು ಅರಗಿಸಿಕೊಂಡಾಗ ಜ್ಞಾನದ ಅರಿವಾಗುತ್ತದೆ…

Read More

ಅಶೋಕ ನಗರದ ಶಿಕ್ಷಕ ಕೊಟ್ರಪ್ಪ ಎಂಬುವವರ ಮನೆಯಲ್ಲಿ ರಾತ್ರಿ ಎಲ್ಲರು ಊಟ ಮುಗಿಸಿ 11 ಗಂಟೆಗೆ ಮಲಗಿದ್ದರು. ರಾತ್ರಿ ಒಳಗೆ ನುಗ್ಗಿರುವ ಕಳ್ಳರು ಕೊಟ್ರಪ್ಪ ಅವರ ಕೊಠಡಿಯಲ್ಲಿದ್ದ ಬೀರುವಿನಿಂದ 43,800 ರೂ. ನಗದು, ಮಗನ ಬೆಡ್‌ ರೂಂನಲ್ಲಿರುವ ಬೀರುವಿನಿಂದ 4 ವಾಚ್‌, 2 ಜರ್ಕಿನ್‌, ಶೋಕೇಸ್‌ನಲ್ಲಿದ್ದ 3 ವಾಚ್‌, ಮನೆಯ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ರಾಯಲ್‌ ಎನ್‌ ಫೀಲ್ಡ್‌ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಪಕ್ಕದ ಮನೆಯಲ್ಲಿರುವ ಸಹೋದರ ಬೆಳಗ್ಗೆ ರೈಲಿಗೆ ತೆರಳಲು ಮನೆಯಿಂದ ಹೊರ ಬಂದಾಗ ಕೊಟ್ರಪ್ಪ ಅವರ ಮನೆಯ ಗೇಟ್‌ ತೆಗೆದಿತ್ತು. ಕಾಂಪೌಂಡ್‌ ಒಳಗಿರುವ ಬೈಕ್‌ ನಾಪತ್ತೆಯಾಗಿತ್ತು. ಕೂಡಲೆ ಕಟ್ರಪ್ಪ ಅವರಿಗೆ ಕರೆ ಮಾಡಿದ್ದರು. ಕೊಟ್ರಪ್ಪ ಅವರ ಮನೆಯ ಮುಂಬಾಗಿಲು ಹೊರಗಿನಿಂದ ಚಿಲಕ ಹಾಕಲಾಗಿತ್ತು. ಹಾಗಾಗಿ ಹಿಂಬದಿ ಬಾಗಿಲಿನಿಂದ ಹೊರ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕಳ್ಳರು ಕಿಟಕಿಯಿಂದ ಒಳಗೆ ಕೈ ಹಾಕಿ ಬಾಗಿಲಿನ ಚಿಲಕ ತೆಗೆದು ಕಳ್ಳತನ ಮಾಡಿದ್ದಾರೆ ಎಂದು ಕೊಟ್ರಪ್ಪ ಆರೋಪಿಸಿ ದೂರು…

Read More

ಶಿವಮೊಗ್ಗದ ಹರಿಗೆಯ ಯುವಕನೊಬ್ಬನಿಗೆ(ಹೆಸರು ಗೌಪ್ಯ) ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮೂಲಕ ಒರಿಸಾ ಮೂಲದ ಸೂರ್ಯಂಶ್ ಅಲಿಯಾಸ್‌ ಕಾಲಿರಾತ್‌ ಎಂಬಾತನ ಪರಿಚಯವಾಗಿತ್ತು. ಆತನ ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ರಾಕೇಶ್‌ ಶಿವಮೊಗ್ಗದಲ್ಲಿರುವ ತನ್ನ‌ ಸ್ನೇಹಿತರಿಗೆ ಈ ವಿಚಾರ ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವಕ ತನ್ನ ಹಲವು ಸ್ನೇಹಿತರ ರೆಸ್ಯೂಂಗಳನ್ನು ಸೂರ್ಯಂಶ್‌ ಗೆ ಕಳುಹಿಸಿದ್ದ. ಆದರೆ ಸಾಫ್ಟ್‌ ವೇರ್‌ ಕಂಪನಿಯಲ್ಲಿ ಕೆಲಸ ಕೊಡಿಸಲು ತಲಾ 1.60 ಲಕ್ಷ ರೂ. ಹಣ ನೀಡಬೇಕು. ಇದಕ್ಕೆ ಪ್ರತಿಯಾಗಿ ಐಬಿಎಂ ಕಂಪನಿಯಿಂದ ಲ್ಯಾಪ್‌ ಟಾಪ್‌ ಒದಗಿಸಲಾಗುತ್ತದೆ ಎಂದು ಸೂರ್ಯಂಶ್‌ ನಂಬಿಸಿದ್ದ. ಅಂತೆಯೆ ಯುವಕ ವಿವಿಧ ಬ್ಯಾಂಕ್‌ ಖಾತೆಗಳಿಂದ ಸೂರ್ಯಂಶ್‌ ಸೂಚಿಸಿದ ಬ್ಯಾಂಕ್‌ ಖಾತೆಗೆ ಒಟ್ಟು 89 ಲಕ್ಷ ರೂ. ಹಣ ಕಳುಹಿಸಿದ್ದ. ಈ ತನಕ ಸೂರ್ಯಂಶ್‌  ಕಡೆಯಿಂದ ಉದ್ಯೋಗವು ಸಿಕ್ಕಿಲ್ಲ, ಲ್ಯಾಪ್‌ ಟಾಪ್‌ ಕೂಡ ಕೊಡಿಸಿಲ್ಲ. ಕರೆ ಮಾಡಿದರೆ ಮೊಬೈಲ್‌ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಆರೋಪಿಸಿ ಯುವಕ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದ್ದು…

Read More

ಮೆದುಳು ಜ್ವರಕ್ಕೆ ಬಾಲಕನೊಬ್ಬ ಬಲಿಯಾದ ಹೃದಯ ವಿದ್ರಾವಕ ಘಟನೆ ವಿಜಯಪುರ ನಗರದ ಗೋಳಗುಮ್ಮಟ ಏರಿಯಾದಲ್ಲಿ ನಡೆದಿದ್ದು, ಮೃತ ಬಾಲಕನನ್ನು ರಜಿತ್ ಮಿಥುನ್ ಅಳ್ಳಿಮೋರೆ(10) ಎಂದು ಗುರುತಿಸಲಾಗಿದೆ. ಈತ ಗೋಳಗುಮ್ಮಟ ಬಡವಾಣೆ ನಿವಾಸಿ ಎಂದು ತಿಳಿದು ಬಂದಿದೆ. ಕಳೆದ ವಾರದ ಹಿಂದೆ ರಜಿತ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರಜಿತ್ ನನ್ನು ದಾಖಲಿಸಲಾಗಿತ್ತು. ಜ್ವರ ನೆತ್ತಿಗೆ ಏರಿ ಮೆದುಳಲ್ಲಿ ಬಾವು ಬಂದಿತ್ತು. ಈ ಕಾರಣದಿಂದಾಗಿ ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read More