Subscribe to Updates
Get the latest creative news from FooBar about art, design and business.
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
- ತುಮಕೂರು: ಗಾಂಜಾ, ಕಳ್ಳತನ, ಸುಲಿಗೆ: 5 ಪ್ರಕರಣಗಳಲ್ಲಿ 12 ಆರೋಪಿಗಳ ಬಂಧನ
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
Author: admin
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಬ್ ಇನ್ ಸ್ಪೆಕ್ಟರ್ ಸುಮನ್ ಕುಮಾರಿ ಅವರು ಗಡಿ ಭದ್ರತಾ ಪಡೆ ಬಿಎಸ್ ಎಫ್ ನ ಮೊದಲ ಮಹಿಳಾ ಸ್ನೈಪರ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಂದೋರ್ ನಲ್ಲಿರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ ಆ್ಯಂಡ್ ಟ್ಯಾಕ್ಟಿಕ್ಸ್ ನಲ್ಲಿ 8 ವಾರಗಳ ಕಾಲ ಸೈಪರ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಇವರು 56 ಪುರುಷ ಸಹವರ್ತಿಗಳ ಜತೆಗಿದ್ದ ಏಕೈಕ ಮಹಿಳೆಯಾಗಿದ್ದಾರೆ. ಪಂಜಾಬ್ ನಲ್ಲಿ ಕಮಾಂಡರ್ ಪ್ಲಟೂನ್ ಆಗಿದ್ದ ಸಂದರ್ಭದಲ್ಲಿ ಸೈಪರ್ ದಾಳಿಯ ಬೆದರಿಕೆಯ ಅನುಭವದಿಂದ ಹೆಚ್ಚು ಪ್ರೇರಿತರಾದ ಸುಮನ್ ಅವರು ಸ್ನೈಪರ್ ಆಗಲು ನಿರ್ಧರಿಸಿದರು. ಇಂದಿನ ದಿನಮಾನದಲ್ಲಿ ಮಹಿಳೆಯರು ಎಲ್ಲೆಡೆ ಕ್ಷಿಪ್ರ ಪ್ರಗತಿ ಸಾಧಿಸುತ್ತಿದ್ದಾರೆ. ಈ ಪ್ರಯುಕ್ತ ಒಂದು ಹೆಜ್ಜೆಯಾಗಿ ಕಠಿಣ ತರಬೇತಿ ನಂತರ ಮೊದಲ ಮಹಿಳಾ ಸೈಪರ್ ಆಗಿರುವುದಾಗಿ ಬಿಎಸ್ ಎಫ್ ತನ್ನ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…
ಜಾರ್ಖಂಡ್ ನಲ್ಲಿ ಸ್ಪ್ಯಾನಿಷ್ ವ್ಲಾಗರ್ ನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಗ್ಯಾಂಗ್ ನ ಎಲ್ಲ ಸದಸ್ಯರನ್ನು ಗುರುತಿಸಲಾಗಿದ್ದು, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹತ್ತು ಜನರ ಗುಂಪು ವಿದೇಶಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದೆ. ಜಾರ್ಖಂಡ್ ನ ದುಮ್ಕಾದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮಹಿಳೆ ತನ್ನ ಪತಿಯೊಂದಿಗೆ ರಜಾದಿನವನ್ನು ಆಚರಿಸಲು ಭಾರತಕ್ಕೆ ಬಂದಿದ್ದಳು. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಇಬ್ಬರೂ ಹಂಸ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ದುಮ್ಕಾದ ಕುಂಜಿ ಗ್ರಾಮದಲ್ಲಿ ಟೆಂಟ್ ನಲ್ಲಿ ತಂಗಿದ್ದರು. ಶುಕ್ರವಾರದಂದು ದಂಪತಿ ಬಿಹಾರದ ಭಾಗಲ್ಪುರಕ್ಕೆ ತೆರಳುತ್ತಿದ್ದಾಗ ಮಹಿಳೆಗೆ ಕಿರುಕುಳ ನೀಡಲಾಗಿತ್ತು. ಅಮಾನುಷವಾಗಿ ಚಿತ್ರಹಿಂಸೆಗೆ ಒಳಗಾದ ಯುವತಿ ಇದೀಗ ಸರಯಾಹತ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪತಿ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೀದರ್: ಬೇಸಿಗೆ ಕಾಲ ಹತ್ತಿರ ಬಂದಿರುವುದರಿಂದ ಬೀದರ ಜಿಲ್ಲೆಯಲ್ಲಿನ ಕುಡಿಯುವ ನೀರು ಸರಬರಾಜು ಮತ್ತು ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈಶ್ವರ ಖಂಡ್ರೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು. ಈ ವರ್ಷ ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬೇಸಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇರುವ ಪ್ರದೇಶಗಳಿಗೆ ನೀರು ಒದಗಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು. ಜನಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಲು ನೀರು ಲಭ್ಯವಿರುವ ಖಾಸಗಿಯವರ ಬಾವಿ, ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಂಡು ಅಗತ್ಯ ಕಂಡುಬಂದಲ್ಲಿ, ಟ್ಯಾಂಕರ್ ಮುಖಾಂತರ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್, ದಿಲೀಪ್ ಬಡೋಲೆ, ಪೊಲೀಸ್ ಅಧೀಕ್ಷಕರಾದ ಚನ್ನಬಸವಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಾ ಎಂ.ಎಂ ಉಪಸ್ಥಿತರಿದ್ದರು. ವರದಿ: ಅರವಿಂದ, ಮಲ್ಲಿಗೆ ಬೀದರ್ ನಮ್ಮತುಮಕೂರಿನ ಕ್ಷಣ…
ಸದ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಬಾತ್ ರೂಂ ಒಳಗೆ ತೆಗೆದ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹೌದು, ಸಮಂತಾ ಬಾತ್ ರೂಮ್ ನಲ್ಲಿ ತೆಗೆದು ಪೋಸ್ಟ್ ಮಾಡಿದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಇದರಲ್ಲಿ ವೈಟ್ ಶರ್ಟ್, ಡೆನಿಮ್ ಪ್ಯಾಟ್ ತೊಟ್ಟು ಬಗೆ ಬಗೆಯ ಪೋಸ್ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ‘ಚಿಂತೆಯಿಲ್ಲದೇ..’ ಎಂದು ಅವರು ಈ ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಗಳಿಗೀಗ ನೆಟ್ಟಿಗರು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ, ಕೆಲ ಕಾಲ ಸಿನಿಮಾ ಕೆಲಸದಿಂದ ಬ್ರೇಕ್ ತೆಗೆದುಕೊಂಡಿದ್ರು. ಇದೀಗ ಸಮಂತಾ ಮತ್ತೆ ಸಿನಿಮಾಗೆ ರೀ ಎಂಟ್ರಿ ಕೊಡಲು ಭರ್ಜರಿ ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…
ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ಪ್ರಕ್ರಿಯೆ ಮೇಲೆ ಒತ್ತಡ ಹೇರಲು ಮರಾಠಾ ಬಣಗಳು, ಪ್ರತಿ ಗ್ರಾಮದಿಂದ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅದನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆಯೂ ಚುನಾವಣಾ ಆಯೋಗ ಅನಧಿಕೃತ ಚರ್ಚೆ ಆರಂಭಿಸಿದೆ ಎಂದು ವರದಿಯಾಗಿದೆ. ಮರಾಠ ಸಮುದಾಯಕ್ಕೆ ಮೀಸಲಾತಿ ನೀಡದಿರುವುದನ್ನು ವಿರೋಧಿಸಿ ವಿಭಿನ್ನ ಶೈಲಿಯ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ, ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ ಆರು ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಇರುತ್ತವೆ. ಪ್ರತಿ ಮತ ಯಂತ್ರದಲ್ಲಿ 14 ಅಭ್ಯರ್ಥಿಗಳ ಹೆಸರು ಮಾತ್ರ ಇರಲಿದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದಂತೆ ಯಂತ್ರಗಳ ಸಂಖ್ಯೆಯೂ ಹೆಚ್ಚಾಗಬೇಕು. ಈ ಸಂದರ್ಭದಲ್ಲಿ, ಚುನಾವಣೆಯನ್ನು ರದ್ದುಗೊಳಿಸಬೇಕು ಅಥವಾ ಮತಪತ್ರದ ಮೂಲಕ ನಡೆಸಬೇಕಾಗುತ್ತದೆ. ಮರಾಠಾ ಬಣಗಳು ಚುನಾವಣಾ ಪ್ರಕ್ರಿಯೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ. ಮರಾಠಿಗರಿಗೆ ಕಿರುಕುಳ ನೀಡುವ ದೊರೆಗಳು ಬಿಜೆಪಿಯಲ್ಲಿ ಇರುವವರೆಗೂ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂಬುದು ಕೊಂಡಿ ಗ್ರಾಮಸ್ಥರ ನಿಲುವು. ಮೀಸಲಾತಿ ಬೇಡಿಕೆ ಅಂಗೀಕಾರವಾಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಮರಾಠಾ…
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ. ರಾಷ್ಟ್ರ ವಿರೋಧಿ ಧೋರಣೆಯ ರಾಜ್ಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಬಿಜೆಪಿ ಆಗ್ರಹಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(NIA) ಪ್ರಕರಣ ದಾಖಲಿಸಿಕೊಂಡಿದೆ. ಘಟನೆ ಸಂಬಂಧ UAPA ಅಡಿ ಹೆಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದ ಗಂಭೀರತೆ ಅರಿತು ಎನ್ ಐಎ ಪ್ರಕರಣ ದಾಖಲಿಸಿಕೊಂಡಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಂಬ್ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಗೆ ನಿನ್ನೆ ಸಿಸಿಬಿ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದರು. ಸಿಸಿಬಿ ತನಿಖಾಧಿಕಾರಿ ನವೀನ್ ಕುಲಕರ್ಣಿ ಮತ್ತು ಟೀಂ, ರಾಮೇಶ್ವರಂ ಕೆಫೆ ಮ್ಯಾನೇಜರ್, ಸಿಬ್ಬಂದಿ ಸಮ್ಮುಖದಲ್ಲಿ ಮಹಜರು ನಡೆಸಿದ್ದರು. ಬಾಂಬರ್ ಎಂಟ್ರಿಯಾದ ಸ್ಥಳ, ಓಡಾಡಿದ್ದ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದರು. ಜೊತೆಗೆ ಶಂಕಿತರನ್ನ ಆಡುಗೋಡಿ ಟೆಕ್ನಿಕಲ್ ಸೆಲ್ ಗೆ ಕರೆತಂದು ವಿಚಾರಣೆ ನಡೆಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ತೆಲಂಗಾಣ: ಮಾರ್ಚ್ 15ರ ನಂತರ ತೆಲಂಗಾಣ ರಾಜ್ಯದ ಶಾಲೆಗಳಿಗೆ ರಾಜ್ಯದ ಶಿಕ್ಷಣ ಇಲಾಖೆಯು ಮಧ್ಯಾಹ್ನದ ಬಳಿಕ ರಜೆಯನ್ನು ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದ ಶಾಲೆಗಳು ಮಧ್ಯಾಹ್ನದ ತನಕ ಮಾತ್ರ ಕಾರ್ಯನಿರ್ವಹಿಸಲಿವೆ. ಹೌದು, ರಾಜ್ಯದಲ್ಲಿ ಹಗಲು ಬಿಸಿಲಿನ ತಾಪಕ್ಕೆ ಜನರು ಪರದಾಡುತ್ತಿದ್ದಾರೆ. ಆದರೆ ರಾತ್ರಿ ಮಾತ್ರ ತಡೆಯಲಾರದಷ್ಟು ಶೀತ ಉಂಟಾಗುತ್ತಿದೆ. ಈ ರೀತಿ ಸಡನ್ ಆಗಿ ಬಲಾಗುತ್ತಿರುವ ವಾತಾವರಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತೆಲಂಗಾಣ ರಾಜ್ಯ ಶಿಕ್ಷಣ ಇಲಾಖೆ ಮಾರ್ಚ್ 15ರಿಂದ ಅರ್ಧ ದಿನ ಮಾತ್ರ ಶಾಲೆಯನ್ನು ನಡೆಸಲು ನಿರ್ಧರಿಸಿದ್ದು, ಮಧ್ಯಾಹ್ನದ ಬಳಿಕ ರಜೆ ನೀಡಲು ನಿರ್ಧರಿಸಲಾಗಿದೆ. ಅಂದಹಾಗೆ ಬಿಸಿಲ ಬೇಗೆಯಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು ಎಂದು ಮುಂದಾಲೋಚಿಸಿ, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ. ಇನ್ನು ಈ ವೇಳಾಪಟ್ಟಿ ಹೊಂದಾಣಿಕೆಯು ಮಾರ್ಚ್ 15ರಿಂದ ಏಪ್ರಿಲ್ 23 ರವರೆಗೆ ಜಾರಿಯಲ್ಲಿರುತ್ತದೆ. ತರಗತಿಗಳು ಬೆಳಿಗ್ಗೆ 8ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ನಡೆಯುತ್ತವೆ…
ಆಂಧ್ರಪ್ರದೇಶ: ತಾಯಿಯನ್ನು ಮಗ ಆಸ್ತಿಗಾಗಿ ಮನಬಂದಂತೆ ಥಳಿಸಿರುವ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗನ ವರ್ತನೆ ಯಾವುದೇ ಒಂದು ಮೃಗಕ್ಕಿಂತ ಕಮ್ಮಿಯಿರಲಿಲ್ಲ. ತಾಯಿಯನ್ನು ನೆಲಕ್ಕೆ ತಳ್ಳಿ, ಬೀಳಿಸಿ, ನಂತರ ತಂದೆಗೂ ಕಪಾಳಕ್ಕೆ ಬಾರಿಸಿದ್ದು, ಯಾರೇ ಮುಂದೆ ಬಂದು ಈ ಘಟನೆಯನ್ನು ತಡೆಯೋ ಪ್ರಯತ್ನ ಮಾಡಲಿಲ್ಲ. ಶ್ರೀನಿವಾಸುಲು ರೆಡ್ಡಿ ಎಂಬಾತನೇ ತನ್ನ ತಂದೆ ತಾಯಿಗೆ ಮನಬಂದಂತೆ ಥಳಿಸಿದವನು. ಇದೀಗ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ತನ್ನ ಹೆತ್ತವರು ತನ್ನ ಅಣ್ಣನಿಗೆ ಭೂಮಿಯನ್ನು ನೀಡಿದ್ದರಿಂದ ಈತ ಕೋಪಗೊಂಡಿದ್ದು, ನಿರ್ಧಾರವನ್ನು ಬದಲಾಯಿಸಲು ಪದೇ ಪದೇ ಒತ್ತಾಯ ಮಾಡುತ್ತಿದ್ದ. ತಂದೆ ತಾಯಿ ಜೊತೆ ಅನುಚಿತ ವರ್ತನೆ ಮಾಡಿದವರಿಗೆ ಶಿಕ್ಷೆಯಾಗಲಿದೆ. ಇಂತಹ ದೌರ್ಜನ್ಯದ ಕುರಿತು ಪೋಷಕರು ದೂರು ದಾಖಲಿಸಬೇಕು ಎಂದು ಪೊಲೀಸರು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಪ್ರತಿಯೊಂದು ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿಗಳು ಪ್ರತಿ ತಿಂಗಳು ದೊರೆಯುತ್ತಿದೆ. ಈ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ 4 ಹೊಸ ರೂಲ್ಸ್ ಜಾರಿಗೆ ತಂದಿದೆ. NPCI ಖಡ್ಡಾಯ: ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯವಾಗಿದೆ. ಅಂದರೆ ಇನ್ನು ಮುಂದೆ ಪ್ರತಿಯೊಬ್ಬರೂ NPCI ಮಾಡಬೇಕು. ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ NPCI ಅನ್ನು ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ. ಆಧಾರ್ E-KYC ಕಡ್ಡಾಯ: ಇನ್ನು ಗೃಹ ಲಕ್ಷ್ಮಿ ಯೋಜನೆಯ ಮಾಸಿಕ 2000 ರೂ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ನೀವು ಮುಖ್ಯವಾಗಿ Aadhaar E -KYC ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ DBT ಮೂಲಕ…