Subscribe to Updates
Get the latest creative news from FooBar about art, design and business.
- ತಿಪಟೂರು: ರೋಟರಿ ಸಂಸ್ಥೆಯ 67ನೇ ಅಧ್ಯಕ್ಷರಾಗಿ ಪ್ರಕಾಶ್ ಕೆ. ಪದಗ್ರಹಣ
- ತುಮಕೂರು: ಜುಲೈ 17 ರಂದು ಕಾನೂನು ಅರಿವು–ನೆರವು ಕಾರ್ಯಕ್ರಮ
- ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜುಲೈ 17ರಂದು ತುಮಕೂರಿನಲ್ಲಿ ನೇರ ಸಂದರ್ಶನ
- ತುಮಕೂರು: ಜುಲೈ 17ರಂದು ರಾಜ್ಯ ಕಿರಿಯರ ಅಥ್ಲೆಟಿಕ್ ಕೂಟಕ್ಕೆ ಆಯ್ಕೆ ಪ್ರಕ್ರಿಯೆ: ಕ್ರೀಡಾಪಟುಗಳು ಭಾಗವಹಿಸಿ
- ತುಮಕೂರು: ಗಾಂಜಾ, ಕಳ್ಳತನ, ಸುಲಿಗೆ: 5 ಪ್ರಕರಣಗಳಲ್ಲಿ 12 ಆರೋಪಿಗಳ ಬಂಧನ
- ದೇವಾಲಯದಲ್ಲಿ ಅಕ್ಷರಾಭ್ಯಾಸ ಮಕ್ಕಳ ಜೀವನದ ಶ್ರೇಷ್ಠ ಆರಂಭ: ಡಾ.ಹನುಮಂತನಾಥ ಸ್ವಾಮೀಜಿ
- ಸರಗೂರು: ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪೂಜೆ; ಬಸ್ ವ್ಯವಸ್ಥೆಯಿಲ್ಲದೆ ಭಕ್ತರ ಪರದಾಟ
- ಹೊಳವನಹಳ್ಳಿ ಬೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಯೋಗೇಶ್ ಅವರಿಗೆ ಬೀಳ್ಕೊಡುಗೆ
Author: admin
ಅಮೆರಿಕದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದ ಅಮರನಾಥ್ ಸಾವನ್ನಪ್ಪಿದ್ದಾರೆ. ಫೆಬ್ರವರಿ 27 ರಂದು ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಟಿವಿ ನಟಿ ದೇವೋಲೀನಾ ಭಟ್ಟಾಚಾರ್ಜಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಅಮರನಾಥ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಅಮೆರಿಕದಲ್ಲಿರುವ ಅವರ ಸ್ನೇಹಿತರು ಪ್ರಯತ್ನಿಸುತ್ತಿದ್ದಾರೆ ಮತ್ತು ಅಮರನಾಥ್ ಘೋಷ್ ಹತ್ಯೆಯ ಹಿಂದಿನ ಕಾರಣವನ್ನು ತಿಳಿಯಲು ಭಾರತೀಯ ರಾಯಭಾರ ಕಚೇರಿಯ ಸಹಾಯ ಕೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಹಳೆಯ ಸಿನಿಮಾಗಳ ಹಾಸ್ಯ ನಟ ಟೆನ್ನಿಸ್ ಕೃಷ್ಣ ಖಾಸಗಿ ಚಾನಲ್ ನ ಧಾರವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ‘‘ಲಕ್ಷ್ಮಿ ಟಿಫನ್ ರೂಮ್’ ಸೀರಿಯಲ್‌ಗೆ ನಟ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಿದ್ದಾರೆ. ಕನ್ನಡದ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರೇಖಾ ದಾಸ್ ಮತ್ತು ಟೆನ್ನಿಸ್ ಕೃಷ್ಣ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅವರೊಂದಿಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜೊತೆಯಾಗಿ ಟೆನ್ನಿಸ್ ಕೃಷ್ಣ ನಟಿಸಿದ್ದಾರೆ. ಈಗ ಕಿರುತೆರೆಗೆ ಹೊಸ ಧಾರಾವಾಹಿ ‘ಲಕ್ಷ್ಮಿ ಟಿಫನ್ ರೂಮ್’ ಪ್ರಾಜೆಕ್ಟ್ ನಲ್ಲಿ ಬಹುಮುಖ್ಯ ಪಾತ್ರಕ್ಕೆ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ವಾರಣಾಸಿಯ ಕಾಶಿ ವಿಶ್ವನಾಥನ ದರ್ಶನ ಪಡೆದಿದ್ದು, ಶಿವರಾತ್ರಿಗೂ ಮುನ್ನ ಶಿವನ ದರ್ಶನ ಪಡೆದು ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿನಿಮಾ ಶೂಟಿಂಗ್ ಗೆ ಬ್ರೇಕ್ ಹಾಕಿ ತಮನ್ನಾ ಟೆಂಪಲ್ ರನ್ ಮಾಡುತ್ತಿದ್ದು, ಜ್ಯೋತಿರ್ಲಿಂಗಕ್ಕೆ ನಟಿ ಪೂಜೆ ಸಲ್ಲಿಸಿದ್ದಾರೆ. ಸದ್ಯದಲ್ಲೇ ವಿಜಯ್ ವರ್ಮಾ ಜೊತೆ ತಮನ್ನಾ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಶುಭಕಾರ್ಯಕ್ಕೆ ಚಾಲನೆ ನೀಡುವ ಮುನ್ನ ದೇವರ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ. ಕಾಶಿಗೆ ಭೇಟಿ ಕೊಟ್ಟಿರುವ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ತಮನ್ನಾ ಭಾಟಿಯಾ ಎಂಗೇಜ್ ಆಗಿದ್ದಾರೆ. ಇತ್ತೀಚಿನ ಸಂದರ್ಶನಗಳಲ್ಲಿ ಡೇಟಿಂಗ್ ಬಗ್ಗೆ ತಮನ್ನಾ ರಿವೀಲ್ ಮಾಡಿದ್ದರು. ಮದುವೆ ಪ್ಲ್ಯಾನಿಂಗ್ ಬಗ್ಗೆ ಇಬ್ಬರು ಮುಕ್ತವಾಗಿ ಸಂದರ್ಶನಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ:…
ಉತ್ತರ ಪ್ರದೇಶ: ಮಾತುಬಾರದ ಮತ್ತು ಕಿವಿ ಕೇಳದ ಬಾಲಕನಿಗೆ ಹಲ್ಲೆ ನಡೆಸಿ, ಆತನ ಗುದದ್ವಾರಕ್ಕೆ ಪೆನ್ನು ನುಗ್ಗಿಸಿ ಇತರ ಬಾಲಕರು ಹಿಂಸಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಗುದನಾಳದಲ್ಲಿ ಪೆನ್ನು ಚುಚ್ಚಿಕೊಂಡಿರುವ ಬಗ್ಗೆ ತನ್ನ ಪೋಷಕರಿಗೆ ಹೇಳಲು ಸಾಧ್ಯವಾಗದ ಬಾಲಕ ಅಸ್ವಸ್ಥಗೊಂಡ ಬಳಿಕ ಘಟನೆ ಬಳಿಕ ಘಟನೆ ಬೆಳಕಿಗೆ ಬಂದಿದೆ. ಫೆಬ್ರವರಿ 5ರಂದು ಈ ಘಟನೆ ನಡೆದಿದೆ. ಬಾಲಕನ ತಂದೆ ಹಾಗೂ ಸಂಬಂಧಿಕರ ನಡುವೆ ಜಮೀನು ವಿವಾದ ಇತ್ತೆನ್ನಲಾಗಿದೆ. ತಂದೆಯ ಮೇಲಿನ ಕೋಪವನ್ನು 16 ವರ್ಷದ ಬಾಲಕನ ಮೇಲೆ ತೀರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಬಾಲಕನ ತಂದೆಯ ಸಂಬಂಧಿಕರು ಬಾಲಕನಿಗೆ ಹಲ್ಲೆ ನಡೆಸಿ ಗುದದ್ವಾರಕ್ಕೆ ಪೆನ್ನು ನುಗ್ಗಿಸಿ ವಿಕೃತಿ ಮೆರೆದಿದ್ದಾರೆ. ಗುದದ್ವಾರದಲ್ಲಿ ಸಿಲುಕೊಂಡಿದ್ದ ಪೆನ್ನನ್ನು ಹೊರ ತೆಗೆಯಲಾಗದೇ ಬಾಲಕ ನರಳಿದ್ದಾನೆ. ಮಾತು ಬಾರದ ಕಾರಣ ತನ್ನ ಪೋಷಕರಿಗೆ ಈ ವಿಚಾರವನ್ನು ಹೇಳಿಕೊಳ್ಳಲಾಗದೇ ಒದ್ದಾಡಿದ್ದಾನೆ. ಘಟನೆ ನಡೆದ ಒಂದು ವಾರದವರೆಗೂ ಆತ ನರಳಾದಿದ್ದು, ಫೆಬ್ರವರಿ 20ರಂದು ಆತನ ಆರೋಗ್ಯ ಹದಗೆಟ್ಟಾಗ ಪೋಷಕರು ಆತನನ್ನು ಆಸ್ಪತ್ರೆಗೆ…
ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ ಎಂದು ಅಖಿಲೇಶ್ ಹೇಳಿದ್ದಾರೆ. ಬಂಡಾಯದ ಭೀತಿಯಿಂದ ಹಲವು ಹಾಲಿ ಸಂಸದರನ್ನು ಬಿಜೆಪಿ ಉಳಿಸಿಕೊಂಡಿದೆ ಎಂದರು. ಬಿಜೆಪಿ ಬಿಡುಗಡೆ ಮಾಡಿರುವ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 51 ಮಂದಿ ಉತ್ತರ ಪ್ರದೇಶದವರು. ನಿನ್ನೆ, ಕೇರಳದ 12 ಕ್ಷೇತ್ರಗಳು ಸೇರಿದಂತೆ 2024 ರ ಲೋಕಸಭೆ ಚುನಾವಣೆಗೆ 195 ಸದಸ್ಯರ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಮೊದಲ ಹಂತದ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಪ್ರಮುಖರನ್ನು ಸೇರಿಸಲಾಗಿದೆ. ಮೋದಿ ವಾರಣಾಸಿಯಿಂದ ಮತ್ತು ಅಮಿತ್ ಶಾ ಗಾಂಧಿನಗರದಿಂದ ಕ್ಷೇತ್ರ ಬಯಸುತ್ತಿದ್ದಾರೆ.47 ಅಭ್ಯರ್ಥಿಗಳು ಯುವ ಅಭ್ಯರ್ಥಿಗಳು. 28 ಮಹಿಳಾ ಅಭ್ಯರ್ಥಿಗಳು. 34 ಕೇಂದ್ರ ಸಚಿವರು ಕಣದಲ್ಲಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳೂ ಸ್ಪರ್ಧಿಸಲಿದ್ದಾರೆ. ಕಿರಣ್ ರಿಜಿಜು ಅರುಣಾಚಲ ಪ್ರದೇಶದಿಂದ ಸ್ಪರ್ಧಿಸಲಿದ್ದಾರೆ. ಸರ್ಬಾನಂದ್ ಸೋನೆಬಾಲ್ ದಿಬ್ರುಗಢದಲ್ಲಿ ಮತ್ತು ಬಾನ್ಸುರಿ ಸ್ವರಾಜ್ ನವದೆಹಲಿಯಲ್ಲಿ ಸ್ಪರ್ಧಿಸಲಿದ್ದಾರೆ.…
ಭಾರತೀಯ ಜನತಾ ಪಕ್ಷದ ಸಂಸದ ಗೌತಮ್ ಗಂಭೀರ್ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ನಿರ್ಧಾರವನ್ನು ಘೋಷಿಸಿದ್ದಾರೆ. ಪೂರ್ವ ದೆಹಲಿಯನ್ನು ಪ್ರತಿನಿಧಿಸಿದ್ದ ಗಂಭೀರ್ ಅವರು, ಈ ಸುದ್ದಿಯನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ತಮ್ಮ ಆತ್ಮದಂತಿದ್ದ ಕ್ರಿಕೇಟ್ ನತ್ತ ಮತ್ತೆ ಮರಳಬೇಕು ಎಂಬುದಾಗಿ ಉಲ್ಲೇಖಿಸಿ, ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಗಮನ ಕೇಂದ್ರೀಕರಿಸಲು ನನ್ನ ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ನಾನು ಗೌರವಾನ್ವಿತ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾಜಿ ಅವರನ್ನು ವಿನಂತಿಸಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಪ್ರಾಮಾಣಿಕವಾಗಿ ಕೃತಜ್ಞನಾಗಿದ್ದೇನೆ. ಜೈ ಹಿಂದ್ “ಎಂದು ಗಂಭೀರ್ ಬರೆದಿದ್ದಾರೆ. ಮುಂಬರುವ 2024ರ ಚುನಾವಣೆಯಲ್ಲಿ ಗಂಭೀರ್ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವರದಿಗಳ ನಡುವೆಯೇ ಗಂಭೀರ್ ರಾಜಕೀಯ ತೊರೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಶೀಘ್ರದಲ್ಲೇ 100 ಕ್ಕೂ ಹೆಚ್ಚು ಹೆಸರುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ,…
ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಮೊದಲ ಪಟ್ಟಿಯಲ್ಲಿರುವ ಪ್ರಮುಖರು ಇವರು: ವಾರಣಾಸಿ– ನರೇಂದ್ರ ಮೋದಿ ಅರುಣಾಚಲ ವೆಸ್ಟ್– ಕಿರಣ್ ರಿಜಿಜು ಅಸ್ಸಾಂನ ದಿಬ್ರುಗಡ್–ಸೊರ್ಬನಾಂದ್ ಸೋನಾವಾಲ್ ಚಾಂದನಿ ಚೌಕ್– ಪ್ರವೀಣ್ ನವದೆಹಲಿ–ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್ ಗಾಂಧಿನಗರ –ಅಮಿತ್ ಶಾ ರಾಜ್ ಕೋಟ್– ಪುರುಷೋತ್ತಮ್ ರೂಪಾಲ್ ಪೋರ್ ಬಂದರ್– ಮನ್ಸೂಖ್ ಮಾಂಡವೀಯ ಉಧಮಪುರ–ಜಿತೇಂದ್ರ ಸಿಂಗ್ ಗೊಡ್ಡಾ–ನಿಶಿಕಾಂತ್ ದುಬೆ ಕಾಸರಗೊಡು– ಅಶ್ವಿನಿ ಕೊಡರಮಾ–ಅನ್ನಪೂರ್ಣದೇವಿ ತಿರುವನಂತಪುರಂ–ರಾಜೀವ್ ಚಂದ್ರಶೇಖರ್ ಖುಂಟಿ–ಅರ್ಜುನ್ ಮುಂಡಾ ಹಜಾರಿಭಾಗ್–ಮನೀಶ್ ಜೈಸ್ವಾಲ್ ವಿದಿಶಾ–ಶಿವರಾಜ್ ಸಿಂಗ್ ಚೌಹಾಣ್ಭೋ ಪಾಲ್–ಅಲೋಕ್ ಶರ್ಮಾ ಖಜುರಾಹೋ–ವಿ.ಡಿ.ಶರ್ಮಾ ಅಲವರ–ಭೂಪೇಂದ್ರ ಯಾದವ್ ಅಂಡಮಾನ್ ನಿಕೋಬಾರ್– ವಿಷ್ಣು ಪಡರೆ ಅರುಣಾಚಲ ಪೂರ್ವ– ತಾಪಿರ್ ಗಾವೋ ಕರೀಂಗಂಜ್, ಅಸ್ಸಾಂ -– ಕೃಪಾನಾಥ್ ಮಾಲಾ ಸಿಲ್ಚಾರ್ –- ಪರಿಮಳಾ ಶುಕ್ಲವೈದ್ಯ ಜೋಧಪುರ್–ಗಜೇಂದ್ರ ಸಿಂಗ್ ಶೇಖಾವತ್ ಕೋಟಾ–ಓಂ ಬಿರ್ಲಾ ಚಿತ್ತೋಡಗಢ್–ಸಿ.ಪಿ.ಜೋಶಿ…
ಪಾವಗಡ: ಆರೋಗ್ಯ ಭಾಗ್ಯ ಉತ್ತಮವಾಗಿದ್ದರೆ ಮನುಷ್ಯನಿಗೆ ಎಲ್ಲಾ ಭಾಗ್ಯಗಳು ಒದಗಿ ಬಂದಂತೆ ಎಂದು ಆದಾನಿ ಸೊಲಾರ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ರಾಜು ಗೌಡ ತಿಳಿಸಿದರು. ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ಆದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸೋಲಾರ್ ಕಂಪನಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಎಷ್ಟು ಹಣವನ್ನು ಬೇಕಾದರೂ ಸಂಪಾದಿಸಬಹುದು ಆದ್ದರಿಂದ ಸಾರ್ವಜನಿಕರು ಆರೋಗ್ಯ ದ ಕಡೆ ಹೆಚ್ಚು ನಿಗಾ ವಹಿಸಬೇಕು ಎಂದು ತಿಳಿಸಿದರು. ಶಿಬಿರದಲ್ಲಿ ವಿವಿದ ತಜ್ಞ ವೈದ್ಯರು ಪಾಲ್ಗೊಂಡು ಜನತೆಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ತಿರುಮಣಿ ಗ್ರಾಮದ ಸುತ್ತಮುತ್ತಲ ಹಳ್ಳಿಯ ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು ಇದೇ ಸಂದರ್ಭದಲ್ಲಿ ಪೋಲೀಸ್ ಮಹಾಂತೇಶ್, ಸೌತ್ ಕರ್ನಾಟಕ ವನ್ ಕ್ಲಸ್ಟರ್ನ ಮ್ಯಾನೇಜರ್ ಬಿ. ಆರ್ ಚೌದರಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲೋಕೇಶ್, ಊರಿನ ಮುಖಂಡರಾದ ರಾಮಮೂರ್ತಿ ,…
ಪಾವಗಡ: ವಿದ್ಯಾರ್ಥಿಗಳ ಕಲಿಕೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ‘ಸಂತೋಷ ಕೂಟ ಸಮಾರಂಭ’ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಏರ್ಪಡಿಸಲಾಯಿತು, ತಾಲ್ಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಇಲಾಖೆಯ ವತಿಯಿಂದ ಏರ್ಪಡಿಸಿದ್ದ 2023- 24ನೇ ಸಾಲಿನ ಸಿ.ಕೆ.ಪುರ ಕ್ಲಸ್ಟರ್ ಮಟ್ಟದ ‘ಸಂತೋಷಕೂಟ ಸಮಾರಂಭ ಹಾಗೂ ಕಲೋತ್ಸವ’ ಬಹಳ ಅದ್ದೂರಿಯಾಗಿ ನಡೆಯಿತು. ಸಿ.ಕೆ.ಪುರ ಕ್ಲಸ್ಟರ್ ಸಿ.ಆರ್.ಪಿಯಾದ ಮೂರ್ತಿ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಹಿಂದಿನ ಮಕ್ಕಳೇ, ನಾಳಿನ ಪ್ರಜೆಗಳು. ನಿಮ್ಮ ಮುಂದಿನ ಜೀವನವನ್ನು ರೂಪಿಸಲಿಕ್ಕೆ ಪ್ರಾಥಮಿಕ ಶಿಕ್ಷಣ ಒಂದು ಅಡಿಗಲ್ಲು. ಈ ಹಂತದಲ್ಲಿ ಉತ್ತಮ ಶಿಕ್ಷಣ ಪಡೆದರೆ, ಮುಂದಿನ ಹಂತದಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದು ಸ್ಫೂರ್ತಿ ತುಂಬಿದರು. ಇದೇ ವೇಳೆ ಶಾಲೆಯ ಶಿಕ್ಷಕರಾದ ಲಕ್ಷ್ಮೀನಾರಾಯಣ ಹಾಗೂ ಶ್ರೀನಿವಾಸ್ ಅವರನ್ನು ಬೀಳ್ಕೊಟ್ಟು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ವಿಶ್ವೇಶ್ವರಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ…
ಆಂಟೋನಿ ಬೇಗೂರು ಪೋಲಿಯೋವನ್ನು ಭಾರತದಲ್ಲಿ ಪೋಲಿಯೊಮೈಲಿಟಿಸ್ ಅನ್ನು ತೊಡೆದುಹಾಕಲು ಭಾರತ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಪ್ರತಿರಕ್ಷಣಾ ಅಭಿಯಾನವಾಗಿದೆ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ವೈರಸ್ ವಿರುದ್ಧ ಲಸಿಕೆಯನ್ನು ಹಾಕಿಸುವ ಅತ್ಯಂತ ವಿಶಿಷ್ಟ ಕಾರ್ಯಕ್ರಮವಾಗಿದೆ. ಈ ಯೋಜನೆಯು ದೊಡ್ಡ ಪ್ರಮಾಣದ ಲಸಿಕಾ ಕಾರ್ಯಕ್ರಮ ಮತ್ತು ಪೋಲಿಯೊಮೈಲಿಟಿಸ್ ಪ್ರಕರಣಗಳ ಮೇಲ್ವಿಚಾರಣೆಯ ಮೂಲಕ ಪೋಲಿಯೊ ವಿರುದ್ಧ ಹೋರಾಡುತ್ತದೆ. ಭಾರತದ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವುದು ಈ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಅತಿಮುಖ್ಯ ಗುರಿಯಾಗಿದೆ. ಸುಧಾರಿತ ಸಾಮಾಜಿಕ ಯೋಜನೆಗಳ ಮೂಲಕ ಪ್ರತಿ ಹಳ್ಳಿ ಹಳ್ಳಿಯ ಮಕ್ಕಳನ್ನು ತಲುಪಲು ಬಯಸುತ್ತದೆ. ಪ್ರತಿ ಒಬ್ಬ ಮಗು ಸಹ ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು ಹಾಗೂ ಪೋಲಿಯೋ ಬಾರದಂತೆ ತಡೆಗಟ್ಟುವುದು ಬಹುಮುಖ್ಯವಾದ ಗುರಿಯಾಗಿದೆ. ತೀವ್ರವಾದ ಫ್ಲಾಸಿಡ್ ಪಾರ್ಶ್ವವಾಯು ಪ್ರಕರಣಗಳನ್ನು ಸಮಯೋಚಿತವಾಗಿ ವರದಿ ಮಾಡಬೇಕು ಮತ್ತು 14 ದಿನಗಳಲ್ಲಿ ಅವುಗಳ ಮಲ ಮಾದರಿಗಳನ್ನು ಸಂಗ್ರಹಿಸಬೇಕು. ತಕ್ಷಣವಾಗಿ ಪ್ರತಿಕ್ರಿಯೆ ಹಾಗೂ ಪ್ರತಿರಕ್ಷಣೆ ಸಾಧ್ಯವಾದಷ್ಟು ಬೇಗ ನಡೆಸಬೇಕು. ಹಾಗೂ ಪೋಲಿಯೊಮೈಲಿಟಿಸ್ ತಡೆಗಟ್ಟಲು ಉನ್ನತ ಮಟ್ಟದ ನಿಗಾ ವಹಿಸುವುದು ಅತ್ಯಂತ…