Author: admin

ಬೆಂಗಳೂರು: ತನ್ನ ಮಗುವನ್ನು ಮನೆಯಲ್ಲಿ ಕೂಡಿ ಹಾಕಿದ್ದಲ್ಲದೇ ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ್ದಾಳೆ. ಗಂಡನಿಂದ ವಿಚ್ಛೇದನೆ ಪಡೆದುಕೊಂಡಿರುವ ಸ್ಟ್ಯಾಲಿನ್ ಎನ್ನುವ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಎರಡ್ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗುವಿನ ಮೈ ತುಂಬ ಗಾಯಗಳಾಗಿವೆ. ಈ ಅಮಾನುಷ ಕೃತ್ಯ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ. ಮಗುವು ತೊದಲನುಡಿಯಲ್ಲೇ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ತಿಳಿಸಿದ ಘಟನೆ ಎಂಥವರ ಮನಸ್ಸನ್ನು ಕರಗುವಂತೆ ಮಾಡುತ್ತಿದೆ. ಮಗು ನೀಡಿದ ಹೇಳಿಕೆ: ಮನೆಗೆ ಬಂದ ಅಂಕಲ್‌ ವೊಬ್ಬರ್‌ ಕುಕ್ಕರ್‌ ನಿಂದ ತಲೆಗೆ ಹೊಡೆದರಂತೆ. ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರಂತೆ. ಇದೆಲ್ಲವನ್ನೂ ಮಗುವು ಸ್ಥಳೀಯರೊಬ್ಬರ ಬಳಿ ಹೇಳಿಕೊಂಡಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಹೋದರೆ ರಾತ್ರಿ ಬರುವವರೆಗೂ ಬಾಗಿಲು ತೆಗೆಯದೆ ಕೂಡಿಹಾಕುತ್ತಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ. ಇದೀಗ…

Read More

ಇನ್ಮುಂದೆ ಒಬ್ಬ ವ್ಯಕ್ತಿ ಅಪರಿಚಿತ ಮಹಿಳೆಯನ್ನು ಡಾರ್ಲಿಂಗ್ ಎಂದು ಕರೆಯುವಂತಿಲ್ಲ. ಒಂದು ವೇಳೆ ಹಾಗೆಲ್ಲಾದರೂ ಸಂಬೋಧಿಸಿದರೆ ಆತನನ್ನು ಲೈಂಗಿಕ ಕಿರುಕುಳ ಕೊಡುವ ವ್ಯಕ್ತಿ ಎಂದು ಪರಿಗಣಿಸಲಾಗುವುದೆಂದು ಹೇಳಲಾಗಿದೆ. ಇದೀಗ ಕೊಲ್ಕತ್ತಾ ಹೈಕೋರ್ಟ್ ಈ ಹೇಳಿಕೆ ನೀಡಿದ್ದು, ಆ ವ್ಯಕ್ತಿಯನ್ನು ನೇರವಾಗಿ ಜೈಲಿಗೆ ಕಳುಹಿಸಬಹುದು ಎಂದು ಹೇಳಲಾಗಿದೆ. ಆರೋಪಿಯು ಕುಡಿದು ಅಥವಾ ಬೇರೆ ಯಾವುದೇ ರಾಜ್ಯದಲ್ಲಿದ್ದರೂ, ಅಪರಿಚಿತ ಮಹಿಳೆಗೆ ಡಾರ್ಲಿಂಗ್ ಎಂದು ಕರೆದರೆ ಲೈಂಗಿಕ ಕಿರುಕುಳ ಆರೋಪಿ ಎಂದು ಪರಿಗಣಿಸಲಾಗುವುದು ಎಂದು ಹೈಕೋರ್ಟ್‌ನ ಪೋರ್ಟ್ ಬ್ಲೇರ್ ಪೀಠದ ನ್ಯಾಯಮೂರ್ತಿ ಜೈ ಸೇನ್​​​ಗುಪ್ತಾ ಹೇಳಿದ್ದಾರೆ. ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗೆ ಡಾರ್ಲಿಂಗ್ ಎಂದು ಕರೆದಿದ್ದ. ಈ ಬಗ್ಗೆ ಮಹಿಳಾ ಅಧಿಕಾರಿ ದೂರು ದಾಖಲಿಸಿದ್ದಾರೆ. ನ್ಯಾಯಮೂರ್ತಿ ಸೇನ್​​​ಗುಪ್ತಾ ಅವರು ಮೇಲ್ಮನವಿ ಆರೋಪಿ ಜನಕ್ ರಾಮ್ ಅವರ ಶಿಕ್ಷೆಯನ್ನು ಎತ್ತಿಹಿಡಿದಿದ್ದಾರೆ. ಅಮಲೇರಿದ ಸ್ಥಿತಿಯಲ್ಲಿ ಆತ ಮಹಿಳಾ ಪೊಲೀಸ್ ಅಧಿಕಾರಿಗೆ ‘ಡಾರ್ಲಿಂಗ್, ಚಲನ್ ಮಾಡಲು ಬಂದಿದ್ದೀಯಾ?’ಎಂದಿದ್ದ. ನ್ಯಾಯಮೂರ್ತಿ ಸೇನ್‌ಗುಪ್ತಾ ಅವರು ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ…

Read More

ಮಕ್ಕಳನ್ನು ನೋಡಿಕೊಳ್ಳಲು ಹೆಂಡತಿಯ ಉಪನ್ಯಾಸಕ ಹುದ್ದೆಯನ್ನು ತೊರೆಯುವಂತೆ ಮಾಡಿದ ಪತಿಯ ವಾದವನ್ನು ತಳ್ಳಿಹಾಕಿದ ಕರ್ನಾಟಕ ಹೈಕೋರ್ಟ್, ಜೀವನಾಂಶವಾಗಿ ಪತ್ನಿಗೆ ತಿಂಗಳಿಗೆ 36,000 ರೂ. ನೀಡಬೇಕು ಎಂದಿದೆ.ಮಹಿಳೆ ಹೆಂಡತಿ, ಗೃಹಿಣಿ ಮತ್ತು ತಾಯಿಯಾಗಿ ಬಿಡುವಿಲ್ಲದಂತೆ ಕೆಲಸ ಮಾಡುತ್ತಾಳೆ. ವಿಶೇಷವಾಗಿ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಆಕೆಯ ಜವಾಬ್ದಾರಿಗಳು ದಿನದ 24 ಗಂಟೆಯೂ ಇರುತ್ತವೆ ಎಂದು ನ್ಯಾಯಾಲಯ ಹೇಳಿದೆ. ಕೆನರಾ ಬ್ಯಾಂಕ್‌ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪತಿ ತನ್ನ ಪತ್ನಿಗೆ ಮಾಸಿಕ 36,000 ರೂ. ಪಾವತಿಸುವಂತೆ ಸೂಚಿಸಿದ್ದಾರೆ. 2023ರ ಜೂನ್‌ ನಲ್ಲಿ ಆನೇಕಲ್‌ ನ ಸೆಷನ್ಸ್ ನ್ಯಾಯಾಲಯವು ಪತ್ನಿಗೆ 18,000 ರೂ. ಪಾವತಿಸುವಂತೆ ಹೇಳಿತ್ತು. ಬಳಿಕ 41 ವರ್ಷದ ಮಹಿಳೆ ತನಗೆ ಮತ್ತು ತನ್ನಿಬ್ಬರು ಮಕ್ಕಳಿಗೆ ತಿಂಗಳಿಗೆ 36,000 ರೂ. ನೀಡುವಂತೆ ಕೇಳಿದ್ದರು. ಜೀವನ ವೆಚ್ಚಕ್ಕೆ ಅನುಗುಣವಾಗಿ ಅಥವಾ ಅವರು ಪತಿಯೊಂದಿಗೆ ಉಳಿದುಕೊಂಡರೂ ಜೀವನಾಂಶವನ್ನು ಹೆಂಡತಿ ಮತ್ತು ಮಕ್ಕಳಿಗೆ ಒದಗಿಸಬೇಕು. ಪತ್ನಿ ಕೆಲಸ ಮಾಡಲು ಅರ್ಹಳಾಗಿದ್ದಾಳೆ ಎಂಬ ಪತಿಯ ವಾದದ ಆಧಾರದ ಮೇಲೆ ತಿಂಗಳಿಗೆ…

Read More

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಾರಿಯರು ಸೀರೆಯುಟ್ಟು ರಸ್ತೆಗಿಳಿದ ದೃಶ್ಯ ಕಂಡು ಬಂತು.ಮಾತ್ರವಲ್ಲ ಬರೋಬ್ಬರಿ ಎರಡು ಕಿಮೀ ರನ್ನಿಂಗ್ ನ್ನು ಮಾಡಿದ್ದು ವಿಶೇಷವಾಗಿತ್ತು. ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಾವಿರಾರು ನಾರಿಯರು ರಸ್ತೆಗಿಳಿದರು. ರಸ್ತೆಯುದ್ದಕ್ಕೂ ‘ನಾರಿ ಶಕ್ತಿ ಮಹಾಶಕ್ತಿ’ ಎಂದು ಘೋಷಣೆ ಕೂಗುತ್ತಲೇ ರನ್ನಿಂಗ್ ಮಾಡಿದ ಮಹಿಳೆಯರು, ನಗರದ ವೆಗಾ ಸಿಟಿ ಮಾಲ್‌ನಿಂದ ಸುಮಾರು ಎರಡು ಕಿಮೀವರೆಗೆ ಹೋಗಿ ಪುನಃ ವೆಗಾ ಸಿಟಿ ಮಾಲ್‌ಗೆ ತಲುಪಿದ್ದಾರೆ. ಬಣ್ಣ ಬಣ್ಣದ ಸೀರೆಯುಟ್ಟು ಕಪ್ಪು ಕನ್ನಡಕ ಧರಿಸಿ ನಾರಿಯರು ಸಕತ್ ಸ್ಟೆಪ್ ಹಾಕಿದ್ರು. ಪತ್ನಿಯರ ಡ್ಯಾನ್ಸ್ ಕಂಡು ಪತಿಯರು ಕೂಡ ಸಖತ್ ಎಂಜಾಯ್ ಮಾಡಿದರು. ನಾರಿಯರನ್ನ ನೋಡುವುದಕ್ಕೆಂದೇ ರಸ್ತೆಯುದ್ಧಕ್ಕೂ ಪುರುಷರು ನಿಂತಿರುವುದು ಕಂಡುಬಂತು. ಸಾಗರ್ ಆಸ್ಪತ್ರೆಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮ ಕೊನೆಗೂ ಯಶಸ್ವಿಯಾಗಿ ಮೂಡಿ ಬಂತು. ಈ ಕಾರ್ಯಕ್ರಮದಲ್ಲಿ 18ನೇ ವಯಸ್ಸಿನಿಂದ  80ರ ಇಳಿವಯಸ್ಸಿನ ಮಹಿಳೆಯರು ಕೂಡ ಉತ್ಸಾಹದಿಂದ ಭಾಗಿಯಾಗಿದ್ದು ವಿಶೇಷ. ಹೆಂಡತಿಯರು ಓಡುವುದು ನೋಡಲು ಗಂಡಂದಿರು ಪಂಚೆಯುಟ್ಟು ಹಿಂದೆಯೇ ಬಂದಿದ್ದರು. ನಮ್ಮತುಮಕೂರಿನ…

Read More

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿ ಮಧುಸೂದನ್ (57) ಹೃದಯಾಘಾತಗೊಂಡು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ. 12 ಮಂದಿ ಸ್ನೇಹಿತರೊಂದಿಗೆ ಮಧುಸೂದನ್ ಟಿಟಿ ವಾಹನದಲ್ಲಿ ಧರ್ಮಸ್ಥಳದತ್ತ ಸಾಗುತ್ತಿದ್ದರು. ಕೊಟ್ಟಿಗೆಹಾರದಲ್ಲಿ ವಾಹನವನ್ನು ನಿಲ್ಲಿಸಲಾಗಿತ್ತು. ಈ ವೇಳೆ ಶೌಚಾಲಯಕ್ಕೆ ತೆರಳಿದ್ದ ಮಧುಸೂದನ್‌ ಕುಸಿದು ಬಿದ್ದಿದ್ದರು. ಸ್ನೇಹಿತರು ಮತ್ತು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಮಧುಸೂದನ್ ಮೃತಪಟ್ಟಿದ್ದರು ಎಂದು ಬಣಕಲ್ ಪೊಲೀಸರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತಿಪಟೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವುದರಿಂದ ಪದವೀಧರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಆಗ್ನೇಯಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಹೇಳಿದರು. ತಿಪಟೂರು ನಗರದ ಕಲ್ಪತರು ಗ್ರಾಂಡ್ ಸಭಾಂಗಣದಲ್ಲಿ ಪದವೀಧರರನ್ನು ಉದ್ದೇಶಿಸಿ ಮಾತನಾಡಿ,   ಪಕ್ಷದ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡಿದರೆ ನಿಮ್ಮ ಸಮಸ್ಯೆಗಳುಸುಲಭವಾಗಿ ಕೆಲಸಗಳು ಆಗುತ್ತವೆ. ನಾನು ಎಲ್ಲ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇನೆ ಸರ್ಕಾರದಿಂದ ಪರಿಹಾರ ಪಡೆಯಲು ಸಾಧ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ತಿಳಿಸಿದರು. ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಕಾಶ್,  ಸದಸ್ಯರಾದ ಮಹೇಶ್, ಮುಖಂಡರಾದ ಮಾದಿಹಳ್ಳಿ ಪ್ರಕಾಶ್,  ಆದಿತ್ಯ, ಜಯಣ್ಣ, ತರಕಾರಿ ಕಿಟ್ಟಿ ಲೋಕನಾಥ್ ಸಿಂಗ್,  ನಂದಿನಿ ಹಲವಾರು ಪದವೀಧರರು ಭಾಗವಹಿಸಿದ್ದರು. ವರದಿ: ಆನಂದ್,  ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೀದರ: ಜಿಲ್ಲಾ ಇಂದು ಸಂತಪುರ್  ಗ್ರಾಮದಲ್ಲಿ ಪಲ್ಸ್ ಪೋಲಿಯೋ  ಲಸಿಕೆ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳಾದ ಡಾ.ಪ್ರವೀಣ್ ಕುಮಾರ್  ನೈಮ ಮತ್ತು ಅತಿಕ್ ಪಟೇಲ್, ಆಶಾ ಕಾರ್ಯಕರ್ತೆಯಾದ ಶ್ರೀದೇವಿ ತುಕಾರಾಮ, ಗಣಪತಿ ದೇಶಪಾಂಡೆ, ಅನುಭವ ಮಂಟಪ ಸದಸ್ಯರು ಸಂತಪುರ್ ತುಕಾರಾಮ ಹಸನ್ಮುಖಿ, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ವರದಿ: ಅರವಿಂದ ಮಲ್ಲಿಗೆ,  ಬೀದರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೀದರ್:  2024ನೇ ಸಾಲಿನ ಮೊದಲ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ  ಭಾಲ್ಕಿ ತಾಲ್ಲೂಕು ಆಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಪೋಲಿಯೋ ವಿರುದ್ಧ ಭಾರತ ಸಾಧಿಸಿರುವ ಗೆಲುವನ್ನು ಮುಂದುವರೆಸಲು ನಮ್ಮ ಜೊತೆ ಕೈಜೋಡಿಸಿ ಬನ್ನಿ 5 ವರ್ಷದ ಒಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕುವ ಮೂಲಕ ಪೋಲಿಯೋವನ್ನು ದೇಶದಿಂದ ದೂರಿಡಲು ಸಹಕರಿಸಿ ಎಂದು ಇದೇ ವೇಳೆ ಮನವಿ ಮಾಡಲಾಯಿತು. ವರದಿ: ಅರವಿಂದ, ಮಲ್ಲಿಗೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ತುಮಕೂರು: ಪಲ್ಸ್ ಪೋಲಿಯೋ ದಿನದ ಅಂಗವಾಗಿ ಇಂದು ಶಿರಾ ನಗರದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಾಸಕರಾದ ಟಿ.ಬಿ.ಜಯಚಂದ್ರ ಅವರು ಹಾಗೂ ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ.ಗೌಡರವರು ಪಲ್ಸ್ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮ ಕುರಿತು ಮಾತನಾಡಿದ ವಿಧಾನ ಪರಿಷತ್ ಶಾಸಕರಾದ ಚಿದಾನಂದ ಗೌಡ,  ಪೋಲಿಯೋ ಲಸಿಕೆಯನ್ನು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಹಾಕಿಸುವುದರ ಮೂಲಕ ದೇಶಾದ್ಯಂತ ಅಂಗವಿಕಲತೆಯನ್ನು ದೂರ ಬಿಡಬೇಕು ಎಂದು ಕರೆ ಕೊಟ್ಟರು. ನಮ್ಮ ಭಾರತ ಸರ್ಕಾರವು ಸುಭಿಕ್ಷವಾಗಿ, ಸುಭದ್ರವಾಗಿದೆ ಎಂಬುದಕ್ಕೆ ಇಂತಹ  ಪೋಲಿಯೋ ಲಸಿಕೆ ಕಾರ್ಯಕ್ರಮ ವಾಗಿರಬಹುದು ಹಾಗೂ ಕೋವಿಡ್ ಸಂದರ್ಭದಲ್ಲಿ ನೀಡಿದ ಲಸಿಕೆಯಾಗಿರಬಹುದು. ದೇಶದ ಎಲ್ಲಾ ಜನರಿಗೂ ಕೂಡ ಸಂಪೂರ್ಣ ಎರಡು ಡೋಸ್ ನೀಡುವುದರ ಮೂಲಕ ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ರೋಗರು ಜನಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಮಾಸ್ ಲಸಿಕಾ ಕಾರ್ಯಕ್ರಮಗಳನ್ನ ಕೈಗೊಳ್ಳುತ್ತಿರುವುದು ನಮ್ಮ ದೇಶದ ಹೆಮ್ಮೆಯಾಗಿದೆ ಎಂದರು.…

Read More

ತುಮಕೂರು: ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಜಾತ್ರಾ ಮಹೋತ್ಸವ ಆಯೋಜಿಸಲಾಗಿದ್ದು ಇದರ ಭಾಗವಾಗಿ ಜಾನುವಾರು ಜಾತ್ರೆಗೂ ಕೂಡ ಚಾಲನೆ ನೀಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಜಾನುವಾರುಗಳನ್ನು ಜಾತ್ರೆಗೆ ತಂದು ಮಾರಾಟ ಮಾಡುತ್ತಿದ್ದು ಅಲ್ಲದೆ ಖರೀದಿ ಮಾಡುತ್ತಿರುವ ರೈತರ ಸಂಖ್ಯೆಯೂ ಕೂಡ ದ್ವಿಗುಣಗೊಂಡಿದೆ. ಸಿದ್ದಗಂಗಾ ಮಠದ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಬಹುತೇಕ ಹಳ್ಳಿಕಾರ್ ತಳಿ ಜಾನುವಾರು ಗಳನ್ನೇ ರೈತರು ತಂದಿದ್ದಾರೆ. ತುಮಕೂರು , ಹಾಸನ, ಚಿಕ್ಕಬಳ್ಳಾಪುರ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ತಮ್ಮ ಜಾನುವಾರುಗಳೊಂದಿಗೆ ಆಗಮಿಸಿರುವ ರೈತರು ಬಿರು ಬಿಸಿಲಿನಲ್ಲಿಯೂ ಕೂಡ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಜಾತ್ರೆಗೆ ಆಗಮಿಸಿರುವ ರೈತರು ಹಾಗೂ ಜಾನುವಾರುಗಳಿಗೆ ಪೂರಕವಾದ ಆಹಾರ ವ್ಯವಸ್ಥೆಯನ್ನು ಹಾಗೂ ನೀರಿನ ವ್ಯವಸ್ಥೆಯನ್ನು ಸಿದ್ಧಗಂಗಾ ಮಠದಿಂದ ವ್ಯವಸ್ಥೆ ಮಾಡಲಾಗಿದೆ. ಸುಮಾರು 20 ಸಾವಿರ ರಾಸುಗಳನ್ನು ಜಾನುವಾರು ಜಾತ್ರೆಯಲ್ಲಿ ಕಾಣಬಹುದಾಗಿದೆ. ಈ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಉತ್ತಮ ಗುಣಮಟ್ಟದ ಜಾನುವಾರುಗಳು 8 ಲಕ್ಷದವವರೆಗೂ…

Read More