Author: admin

ಬೆಂಗಳೂರಿನ 38 ವರ್ಷದ ಮಹಿಳೆಯೊಬ್ಬರು ಆನ್ಲೈನ್ ನಲ್ಲಿ ಕೇವಲ 49 ರೂಪಾಯಿಗೆ ನಾಲ್ಕು ಡಜನ್ ಮೊಟ್ಟೆ ಖರೀದಿಸಲು ಪ್ರಯತ್ನಿಸಿದಾಗ 48,000 ರೂಪಾಯಿಗಳನ್ನು ಕಳೆದುಕೊಂಡು, ಹೈ ಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ವಸಂತನಗರದ ನಿವಾಸಿಯಾದ ಶಿವಾನಿ (ಕೋರಿಕೆಯ ಮೇರೆಗೆ ಹೆಸರು ಬದಲಾಯಿಸಲಾಗಿದೆ) ಫೆಬ್ರವರಿ 17 ರಂದು ಜನಪ್ರಿಯ ಕಂಪನಿಯೊಂದು ಅತಿ ಕಡಿಮೆ ಬೆಲೆಗೆ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳುವ ಇಮೇಲ್ ಜಾಹೀರಾತನ್ನು ನೋಡಿ, “ಜಾಹೀರಾತಿನಲ್ಲಿ ಶಾಪಿಂಗ್ ಲಿಂಕ್ ಅನ್ನು ಉಲ್ಲೇಖಿಸಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಅದು ನನ್ನನ್ನು ಒಂದು ಪುಟಕ್ಕೆ ಕರೆದೊಯ್ಯಿತು, ಅಲ್ಲಿ ಕೋಳಿಗಳನ್ನು ಹೇಗೆ ಬೆಳೆಸಲಾಗುತ್ತದೆ ಮತ್ತು ಮೊಟ್ಟೆಗಳನ್ನು ಸಂಗ್ರಹಿಸಿ ಹೇಗೆ ವಿತರಿಸುತ್ತಾರೆ ಎಂಬುದರ ವಿವರಣೆ ಇತ್ತು “ಎಂದು ಅವರು ಹೇಳಿದರು. ಕೆಳಗೆ ಸ್ಮಾಲ್ ಮಾಡುವಾಗ, ಯಾವುದೇ ಡಿಲವರಿ ಚಾರ್ಜಸ್ ಇಲ್ಲದೆ 99 ರೂಪಾಯಿಗಳಿಗೆ ಎಂಟು ಡಜನ್ ಮೊಟ್ಟೆಗಳನ್ನು ಪೂರೈಸುವುದಾಗಿ ಹೇಳಿಕೊಂಡ ಒಂದು ಕೊಡುಗೆ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡಿದ್ದಾಗಿ ಶಿವಾನಿ ತಿಳಿಸಿದ್ದಾರೆ. “ನಾನು 49 ರೂಪಾಯಿಗೆ ನಾಲ್ಕು…

Read More

ಹೊಸ ಶೈಕ್ಷಣಿಕ ವರ್ಷದಿಂದ ಪ್ರಥಮ ದರ್ಜೆ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ಏರಿಸುವಂತೆ ಕೇಂದ್ರವು ರಾಜ್ಯಗಳಿಗೆ ಪತ್ರ ಕಳುಹಿಸಿದೆ. ಪತ್ರದಲ್ಲಿ ಕರ್ನಾಟಕ ಸೇರಿದಂತೆ ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಪ್ರವೇಶ ಮಾರ್ಗಸೂಚಿಗಳನ್ನು ಮಾರ್ಪಾಡು ಮಾಡಿ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಹಲವು ರಾಜ್ಯಗಳು ಹಿಂದಿನ ವರ್ಷಗಳಲ್ಲಿ ನೀಡಿದ ಸೂಚನೆಗಳನ್ನು ಜಾರಿಗೊಳಿಸದ ಪರಿಸ್ಥಿತಿಯಲ್ಲಿ ಹೊಸ ಪತ್ರ ಬಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ(2020) ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ವಯಸ್ಸಾಗಿರಬೇಕು ಎಂದು ಸೂಚಿಸಿದೆ. 14 ರಾಜ್ಯಗಳು/UTಗಳು ವಯಸ್ಸಿನ ಮಿತಿಯನ್ನು 6 ಕ್ಕೆ ಹೆಚ್ಚಿಸಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ 3–6 ವರ್ಷಗಳು ನರ್ಸರಿ ಮತ್ತು ಎಲ್.ಕೆ.ಜಿ., ಯು.ಕೆ.ಜಿ ಇರಲಿ ಎಂದು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬೇಸಿಗೆ ಆರಂಭದಲ್ಲಿಯೇ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತಿದ್ದು. ಇನ್ನೊಂದೆಡೆ ನದಿಯಲ್ಲಿ ನೀರು ಕಡಿಮೆಯಾದ ತಕ್ಷಣ ಮುಂದಾಲೋಚನೆಯೂ ಇಲ್ಲದೆ ಸಿಡಿ ಮದ್ದು ಸಿಡಿಸಿ ಮೀನು ಹಿಡಿಯುವ ಕೆಲಸಕ್ಕೆ ಕೆಲವರು ಮುಂದಾಗಿರುವುದು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಕಾವೇರಿ ನದಿ ವ್ಯಾಪ್ತಿಯಲ್ಲಿ ಕಂಡು ಬಂದಿದೆ. ಆದರೆ ಇಂತಹ ಪ್ರಕರಣಗಳು ಬೆಳಕಿಗೆ ಬರದೆ ಹಲವು ಕಡೆಗಳಲ್ಲಿ ನಡೆಯುತ್ತಿದೆ. ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ಯಾರೂ ಇಲ್ಲದ ಸಂದರ್ಭ ನೀರು ನಿಲ್ಲುವ ಪ್ರದೇಶಗಳಲ್ಲಿ ಸಿಡಿಮದ್ದು ಸಿಡಿಸಿ ಮೀನುಗಳ ಮಾರಣ ಹೋಮ ಮಾಡುತ್ತಿದ್ದು, ಮದ್ದಿನ ಸ್ಪೋಟಕ್ಕೆ ಸಿಲುಕಿ ಸತ್ತ ಮೀನುಗಳು ನೀರಿನಲ್ಲಿ ತೇಲಿ ಬರುತ್ತಿದ್ದು, ಅಕ್ರಮವಾಗಿ ಸಿಡಿ ಮದ್ದು ಬಳಸಿ ಮೀನು ಹಿಡಿಯುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ವ್ಯಾಪ್ತಿಯ ಜನರು ಒತ್ತಾಯಿಸುತ್ತಿದ್ದಾರೆ. ಕೆಲವು ದುಷ್ಕರ್ಮಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀರಿನಲ್ಲಿ ಸ್ಪೋಟಕ ಸಿಡಿಸಿ ಮೀನುಗಳನ್ನು ಹಿಡಿಯುತ್ತಿರುವುದರಿಂದ ಒಂದು ಕಡೆ ಮೀನುಗಳ ಮಾರಣ ಹೋಮ ನಡೆಯುತ್ತಿದ್ದರೆ, ಮತ್ತೊಂದೆಡೆ ಅಪಾಯದ ಭಯವೂ ಸ್ಥಳೀಯರನ್ನು ಕಾಡುತ್ತಿದೆ. ಈ…

Read More

“ಭಗವಾನ್ ಶ್ರೀ ಕೃಷ್ಣ ನಮ್ಮೆಲ್ಲರನ್ನೂ ಹರಸಲಿ” ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹೇಳಿದ್ದಾರೆ. ಶ್ರೀ ಕೃಷ್ಣನ ಮುಳುಗಿ ಹೋದ ನಗರವನ್ನು ಹುಡುಕುವ ಸಮುದ್ರದಾಳದ ತಮ್ಮ ಪಯಣದ ವೇಳೆ ಸ್ಕೂಬಾ ಸಾಧನಗಳನ್ನು ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಇಂದು ನಾನು ಅನುಭವಿಸಿದ ಆ ಕ್ಷಣಗಳು ನನ್ನ ಜೀವನದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿವೆ. ನಾನು ಸಮುದ್ರದ ಆಳಕ್ಕೆ ತೆರಳಿದ್ದೆ ಮತ್ತು ಪುರಾತನ ದ್ವಾರಕಾ ನಗರದ ದರ್ಶನ ಮಾಡಿದೆ. ನೀರಿನ ಅಡಿಯಲ್ಲಿ ಅಡಗಿರುವ ದ್ವಾರಕಾ ನಗರದ ಬಗ್ಗೆ ಪುರತತ್ವ ಶಾಸ್ತ್ರಜ್ಞರು ಸಾಕಷ್ಟು ಬರೆದಿದ್ದಾರೆ. ನಮ್ಮ ಗ್ರಂಥಗಳಲ್ಲಿ ಕೂಡ ಸುಂದರ ದ್ವಾರಗಳು ಹಾಗೂ ಜಗತ್ತಿನ ತುದಿಯ ಎತ್ತರದಷ್ಟು ಉದ್ದನೆಯ ಕಟ್ಟಡಗಳಿದ್ದ ನಗರ ಎಂಬುದಾಗಿ ದ್ವಾರಕಾವನ್ನು ವರ್ಣಿಸಲಾಗಿದೆ. “ಶ್ರೀ ಕೃಷ್ಣ ಸ್ವತಃ ಈ ನಗರವನ್ನು ನಿರ್ಮಿಸಿದ್ದ” ಎಂದು ದ್ವಾರಕಾ ದರ್ಶನದ ಬಳಿಕ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ತಿಳಿಸಿದ್ದಾರೆ. ದ್ವಾರಕಾದಲ್ಲಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಕೂಡ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದರು. ದೇಶದ…

Read More

ಬೆಳಗಾವಿ ಕಾಕತಿ ಮೇಲೆ ಇರುವ ಗುಡ್ಡಗಾಡು ಪ್ರದೇಶವಾದ ಸೋನಟ್ಟಿಯಲ್ಲಿ ಅಕ್ರಮ ಕಳ್ಳ ಬಟ್ಟಿ ತಾಯಾರಿಕಾ ಪ್ರದೇಶದ ಮೇಲೆ, ಇಂದು ಬೆಳಿಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಪಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ಅವರು, ಸುಮಾರು 200 ಅಧಿಕ ಪೋಲಿಸರ ಮೂರು-ನಾಲ್ಕು ತಂಡಗಳನ್ನು ರಚಿಸಿಕೊಂಡು ಕಳ್ಳ ಬಟ್ಟಿ ಸಾರಾಯಿ ತಯಾರಿಕಾ ಪ್ರದೇಶಗಳ ಮೇಲೆ ದಾಳಿ ಮಾಡಿದ್ದಾರೆ. ಬೆಳಗಾವಿ ನಗರ ಪೋಲೀಸ್ ಅಯುಕ್ತ ಎಸ್. ಎನ್.ಸಿದ್ದರಾಮಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ದಾಳಿ‌ ನಡೆಸಿದ ಸಂದರ್ಭದಲ್ಲಿ ಸಂಗ್ರಹಿಸಿದ ಒಟ್ಟು 5,700 ಲೀಟರ್ ಕಳ್ಳ ಬಟ್ಟಿ ಸಾರಾಯಿ ವಶ ಪಡಿಸಿಕೊಂಡಿದ್ದಾರೆ. ಗ್ರಾಮದ ಮನೆಗಳನ್ನು ಸಹ ಪರಿಶೀಲಿಸಿದಾಗ ಮನೆಯಲ್ಲಿ ಕೂಡಾ ತಾಯಾರಿಸಿರುವ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು. ದಾಳಿ ನಡೆಸಿದ ವೇಳೆ ಪೋಲಿಸರು ಬಂದಿರುವುದನ್ನು ನೋಡಿ‌ ಎಲ್ಲರೂ ಓಡಿ ಹೋಗಿದ್ದಾರೆ. ಆದರೆ ಪೋಲಿಸರು ಒಬ್ಬ ವ್ಯಕ್ತಿ ಮೂತ್ರ ಸೇರೆ ಸಿಕ್ಕಿದ್ದಾನೆ. ಆರೋಪಗಳನ್ನು ಬಂದಿಸಿ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದರು.

Read More

ತುಮಕೂರು: ನಗರ ಸ್ವಚ್ಛವಾಗಿರಲು ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಿರುತ್ತಾರೆ. ಇಂತಹ ಪೌರ ಕಾರ್ಮಿಕರಿಗೆ ನಟ ದರ್ಶನ್ ನಟನೆಯ ಕಾಟೇರ ಚಿತ್ರವನ್ನು  ವೀಕ್ಷಣೆ ಮಾಡುವ ಅವಕಾಶವನ್ನು ಪಾಲಿಕೆ ಆಯುಕ್ತ ಬಿ. ವಿ. ಅಶ್ವಿಜಾ ಕಲ್ಪಿಸಿದರು. ಐನಾಕ್ಸ್ ನಲ್ಲಿ ಮಧ್ಯಾಹ್ನದ ಪ್ರದರ್ಶನದಲ್ಲಿ 196  ಪೌರ ಕಾರ್ಮಿಕರು ಕಾಟೇರ ಚಿತ್ರವನ್ನು ವೀಕ್ಷಿಸಿದರು. ಕಳೆದ ಜನವರಿ 28 ರಂದು ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ತುಮಕೂರು ಎಂಬ ಕನ್ನಡ ಪದದ ಕಲಾಕೃತಿಯನ್ನು ರಚಿಸಿ ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ಪೌರಕಾರ್ಮಿಕರು ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಪೌರ ಕಾರ್ಮಿಕರನ್ನು ಕಾಟೇರಾ ಚಿತ್ರ ವೀಕ್ಷಣೆಗೆ ಕರೆದೊಯ್ಯುವ ಮೂಲಕ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

Read More

ತುಮಕೂರು: ನನಗೂ ಹಾಸನಕ್ಕೂ ಏನ್ ಸಂಬಂಧ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ಹಾಕಿದ್ದಾರೆ. ಕೆಲವರು ನನ್ನ ಅಭಿಮಾನಿಗಳು ಹೆದರಿಕೊಂಡು ಬಿಟ್ಟಿದ್ದರು. ಸಾರ್ ನೀವು ಹಾಸನಕ್ಕೆ ಹೋಗುವುದು ಬೇಡ ಎಂದರು. ಯಾಕಂದ್ರೆ ಅಲ್ಲಿ ವಾಮಾಚಾರ ಮಾಡ್ತಾರೆ ಹೋಗಬೇಡಿ ಅಂದಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ತಿಳಿಸಿದ್ದಾರೆ. ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ,  ಆಗ ನಾನು ಹೇಳಿದೆ, ಯಾರಾದ್ರೂ ವಾಮಾಚಾರ ಮಾಡೋರು ಇದ್ರೆ ಸ್ವತಃ ನಾನೇ ಕೂತ್ಕೊಳ್ತೀನಿ ನನ್ನ ಮೇಲೆ ವಾಮಾಚಾರ ಮಾಡಿ ಎಂದೆ. ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು, ಹಾಗಾಗಿ ನಮಗೆ ಯಾವ ವಾಮಚಾರನೂ ತಾಕೋದಿಲ್ಲ. ಹಾಗಂತ ವಾಮಾಚರ ತಗುಲುವುದಿಲ್ಲ ಅನ್ಕೋಬೇಡಿ. ನಾನು ಹಾಸನಕ್ಕೆ ಕುಣಿಗಲ್ ಮೂಲಕ ಮೊದಲ ದಿನ ಹೋಗುತ್ತಿದ್ದಾಗ  ಕುಣಿಗಲ್ ನಲ್ಲಿ ಪಟಾಕಿ ಸಿಡಿದು,  ಕಣ್ಣಿಗೆ ಏಟಾಗಿತ್ತು ಎಂದರು. ಡಾಕ್ಟರ್ ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದಿದ್ದರು. ಎರಡೂ…

Read More

ಮೇಘಾಲಯದಲ್ಲಿ ಭಾರೀ ಬೆಂಕಿ ಅವಘಡ ನಡೆದಿದ್ದು,  ಶಿಲ್ಲಾಂಗ್ ಬಾರ್ ಅಸೋಸಿಯೇಷನ್ ​​ಕಟ್ಟಡದಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಬೆಂಕಿಗೆ ಕಾರಣ ಸ್ಪಷ್ಟವಾಗಿಲ್ಲ. ನಿನ್ನೆ ರಾತ್ರಿ 10.15ರ ಸುಮಾರಿಗೆ ಈ ಘಟನೆ ನಡೆದಿದೆ. ಹಲವಾರು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಘಟನಾ ಸ್ಥಳಕ್ಕೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಘಟನೆ ದುರದೃಷ್ಟಕರ ಎಂದು ಬಣ್ಣಿಸಿದರು. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಮತ್ತು ದಾಖಲೆಗಳು ಸುಟ್ಟು ಕರಕಲಾಗಿವೆ.

Read More

ತಮಿಳುನಾಡು : ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಆರಂಭವಾಗಿದೆ. ಮುಸ್ಲಿಂ ಲೀಗ್‌ ಗೆ ಒಂದು ಸ್ಥಾನ ನೀಡಲು ಒಪ್ಪಿಗೆ ನೀಡಲಾಯಿತು. ಕೊಂಕುನಾಡು ಮಕ್ಕಳ್ ರಾಷ್ಟ್ರೀಯ ಪಕ್ಷವೂ ಒಂದು ಸ್ಥಾನದಲ್ಲಿ ಸ್ಪರ್ಧಿಸಲಿದ್ದು, ಡಿಎಂಕೆ ವಿಶೇಷ ಸಮಿತಿಯೊಂದಿಗೆ ಇಂದು ನಡೆದ ಚರ್ಚೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ರಾಮನಾಥಪುರ ಕ್ಷೇತ್ರದಿಂದ ಮುಸ್ಲಿಂ ಲೀಗ್ ಸ್ಪರ್ಧಿಸಲಿದೆ. ಮುಸ್ಲಿಂ ಲೀಗ್ ಗೋಣಿ ಚಿಹ್ನೆಯ ಮೇಲೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಹಾಲಿ ಸಂಸದ ನವಾಜ್ ಖೇಣಿ ಅಭ್ಯರ್ಥಿಯಾಗಲಿದ್ದಾರೆ. ನಾಮಕ್ಕಲ್ ಕ್ಷೇತ್ರವನ್ನು ಕೊಂಕುನಾಡ್ ಮಕ್ಕಳ್ ರಾಷ್ಟ್ರೀಯವಾದಿ ಪಕ್ಷಕ್ಕೆ ನೀಡಿದ್ದರು. ಅಭ್ಯರ್ಥಿಯನ್ನು ನಂತರ ನಿರ್ಧರಿಸಲಾಗುವುದು. ಕೊಂಕುನಾಡ್ ಮಕ್ಕಳ್ ರಾಷ್ಟ್ರೀಯ ಪಕ್ಷ ಉದಯ ಸೂರ್ಯನ ಚಿಹ್ನೆಯಡಿ ಸ್ಪರ್ಧಿಸಲಿದೆ. ಕಾಂಗ್ರೆಸ್, ಸಿಪಿಐಎಂ ಮತ್ತು ಸಿಪಿಐ ಪಕ್ಷಗಳೊಂದಿಗೆ ಚರ್ಚೆ ಮುಂದುವರೆದಿದೆ. 2019 ರಲ್ಲಿ ಕಾಂಗ್ರೆಸ್ ಎಂಟು ಸ್ಥಾನಗಳಲ್ಲಿ ಮತ್ತು ಸಿಪಿಐ(ಎಂ) ತಲಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.

Read More

ತಿಪಟೂರು: ಬೇರೆ ಧರ್ಮಕ್ಕೂ ನಮ್ಮ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಬಗ್ಗೆ ಜನರಲ್ಲಿ ನಾವು ಅರಿವು ಮೂಡಿಸಬೇಕು. ನಮ್ಮದು ಬೇಡುವ ಸಮಾಜವಲ್ಲ ನೀಡುವ ಸಮಾಜ. ಮಠಮಾನ್ಯಗಳು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕವಾಗಿ ಅನ್ನ ದಾಸೋಹ,  ಅಕ್ಷರ ದಾಸೋಹದಿಂದಲೇ ಖ್ಯಾತಿ ಪಡೆದಿವೆ ಎಂದು ತಿಪಟೂರು ಶಾಸಕ ಕೆ. ಷಡಕ್ಷರಿ ಹೇಳಿದರು. ತಿಪಟೂರು ನಗರದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ವೀರಶೈವ ಲಿಂಗಾಯತ ಸಂಘಟನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ  ಅವರು ಮಾತನಾಡಿದರು. ವೀರಶೈವ ಸಂಘದ ಅಧ್ಯಕ್ಷ ರೇಣುಕಾರಾಧ್ಯ ಮಾತನಾಡಿ,  ತಾಲೂಕಿನಲ್ಲಿ ಮನೆಮನೆಗೂ ಹೋಗಿ ಸಂಘಟಿಸಲಾಗುವುದು, ಕುಟುಂಬದ ಒಬ್ಬರಾದರೂ ಸದಸ್ಯರಾಗಬೇಕು. ನಮ್ಮ ಸಮಾಜದ ಬಡವರು, ರೈತ, ಕಾರ್ಮಿಕರ ಸಮಸ್ಯೆ ಪರಿಹರಿಸಲು ನಮ್ಮ ಸಮಾಜ ಸಂಘಟಿತರಾಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ಸಮಾಜದ ಮುಖಂಡರಾದ ಅರಸೀಕೆರೆ ಬಸವರಾಜು ಜಿ.ವಿ.ಟಿ, ಚಲನಚಿತ್ರ ನಟರು ಮತ್ತು ನಿರ್ದೇಶಕರಾದ ಮನು, ನಾಕೇನಹಳ್ಳಿ ಸುರೇಶ್,  ಮಾದಿಹಳ್ಳಿ ಪ್ರಕಾಶ್  ಸೇರಿದಂತೆ ಹಲವಾರು ವೀರಶೈವ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು. ವರದಿ: ಆನಂದ್ ತಿಪಟೂರು

Read More